ಕರ್ನಾಟಕ

karnataka

ETV Bharat / sports

30 ಬೌಂಡರಿ, 27 ಸಿಕ್ಸರ್​, 344 ರನ್​: ಟಿ-20ಯಲ್ಲಿ ವಿಶ್ವದಾಖಲೆ ಬರೆದ ಜಿಂಬಾಬ್ವೆ; ಎರಡು ದಾಖಲೆಗಳು ​ಉಡೀಸ್​​!

ಜಿಂಬಾಬ್ವೆ ತಂಡ ಟಿ20 ಕ್ರಿಕೆಟ್​ನಲ್ಲಿ ವಿಶ್ವದಾಖಲೆ ನಿರ್ಮಿಸಿದೆ. ಒಂದೇ ಪಂದ್ಯದಲ್ಲಿ ಎರಡು ತಂಡಗಳ ರೆಕಾರ್ಡ್​ ಮುರಿದು ಹಾಕಿದೆ.

ಜಿಂಬಾಬ್ವೆ
ಜಿಂಬಾಬ್ವೆ (IANS)

By ETV Bharat Sports Team

Published : 9 hours ago

Highest T20 Score: ಜಿಂಬಾಬ್ವೆ ಕ್ರಿಕೆಟ್ ತಂಡ ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್​ನಲ್ಲಿ ಯಾರೂ ಮಾಡದ ಸಾಧನೆ ಮಾಡಿದೆ. ಟಿ20 ವಿಶ್ವಕಪ್ ಉಪ-ಪ್ರಾದೇಶಿಕ ಆಫ್ರಿಕಾ ಅರ್ಹತಾ ಪಂದ್ಯಾವಳಿಯಲ್ಲಿ ಬುಧವಾರ ಗ್ಯಾಂಬಿಯಾ ವಿರುದ್ಧ ನಡೆದ ಪಂದ್ಯದಲ್ಲಿ ಜಿಂಬಾಬ್ವೆ ಬರೋಬ್ಬರಿ 344 ರನ್‌ಗಳನ್ನು ಸಿಡಿಸಿದೆ. ಇದರೊಂದಿಗೆ ಟಿ-20 ಸ್ವರೂಪದಲ್ಲಿ ಅತಿ ಹೆಚ್ಚು ರನ್​ ಗಳಿಸಿದ ತಂಡವಾಗಿ ವಿಶ್ವ ದಾಖಲೆ ಬರೆದಿದೆ. ಈ ಅನುಕ್ರಮದಲ್ಲಿ ನೇಪಾಳ (ಮಂಗೋಲಿಯಾ ವಿರುದ್ಧ 314ರನ್​) ದ ದಾಖಲೆಯನ್ನು ಮುರಿದಿದೆ.

ಸಿಕಂದರ್​ ರಜಾ ಶತಕ: ಜಿಂಬಾಬ್ವೆ ಪರ ಸಿಕಂದರ್ ರಜಾ ಕೇವಲ 43 ಎಸೆತಗಳಲ್ಲಿ 133 ರನ್ ಸಿಡಿಸಿದರು. ಇದರಲ್ಲಿ 15 ಸಿಕ್ಸರ್‌ಗಳು ಸೇರಿವೆ. ಬ್ರಿಯಾನ್ ಬಿನೆಟ್ (50 ರನ್, 26 ಎಸೆತ 7x4; 1x6), ತಡಿವಾನಾಸೆ ಮರುಮಣಿ (62 ರನ್, 19 ಎಸೆತ 9x4; 4x6), ಕ್ಲೈವ್ ಮಂಡಡೆ (53* ರನ್, 17 ಎಸೆತ 3x4; 5x6) ತಂಡಕ್ಕೆ ಉತ್ತಮ ಆರಂಭ ನೀಡಿದರು. ಗ್ಯಾಂಬಿಯನ್ ಪರ ಬೌಲಿಂಗ್​ನಲ್ಲಿ ಮೂಸಾ ಜೊಬರೆತ್ ನಾಲ್ಕು ಓವರ್‌ಗಳಲ್ಲಿ 93 ರನ್​ ಬಿಟ್ಟುಕೊಟ್ಟರು. ಆಂಡ್ರಿ 2, ಅರ್ಜುನ್ ಸಿಂಗ್ ಮತ್ತು ಬುಬಾಕರ್ ತಲಾ 1 ವಿಕೆಟ್ ಪಡೆದರು.

ಈ ಬೃಹತ್ ಗುರಿ ಬೆನ್ನಟ್ಟಿದ ಗ್ಯಾಂಬಿಯಾ 14.4 ಓವರ್‌ಗಳಲ್ಲಿ 54 ರನ್‌ಗಳಿಗೆ ಸರ್ವಪತನ ಕಂಡಿತು. ಗ್ಯಾಂಬಿಯಾ ಪರ ಆಂಡ್ರೆ (12) ಹೊರತು ಪಡಿಸಿ ಯಾವೊಬ್ಬ ಬ್ಯಾಟರ್​ ಎರಡಂಕಿ ದಾಟಲು ಸಾಧ್ಯವಾಗಲಿಲ್ಲ. ಇದರೊಂದಿಗೆ ಜಿಂಬಾಬ್ವೆ 290 ರನ್‌ಗಳ ಜಯ ಸಾಧಿಸಿತು. ಇದು ಟಿ20ಯಲ್ಲಿ ದೊಡ್ಡ ಅಂತರದ ಗೆಲುವು ಸಾಧಿಸಿದೆ. ಇದಕ್ಕೂ ಮುನ್ನ ಈ ದಾಖಲೆ ನೇಪಾಳದ ಹೆಸರಿನಲ್ಲಿತ್ತು ( ನೇಪಾಳ vs ಮಂಗೋಲಿಯಾ 2023). ಜಿಂಬಾಬ್ವೆ ಬೌಲರ್‌ಗಳ ಪೈಕಿ ರಿಚರ್ಡ್ ನಗರವ 3, ಬ್ರ್ಯಾಂಡನ್ ಮಾವ್ಟಾ 3, ವೆಸ್ಲಿ ಮದ್ವೀರ 2, ರಿಯಾನ್ ಬರ್ಲ್ ಒಂದು ವಿಕೆಟ್ ಪಡೆದರು.

T20 ಅಂತರಾಷ್ಟ್ರೀಯ ಪಂದ್ಯಗಳಲ್ಲಿ ಅತ್ಯಧಿಕ ಸ್ಕೋರ್

  • ಜಿಂಬಾಬ್ವೆ - 344/4 ವಿರುದ್ಧ ಗ್ಯಾಂಬಿಯಾ, 2024
  • ನೇಪಾಳ- 314/3 ವಿರುದ್ಧ ಮಂಗೋಲಿಯಾ, 2023
  • ಭಾರತ- 297/6 ವಿರುದ್ಧ ಬಾಂಗ್ಲಾದೇಶ, 2024
  • ಜಿಂಬಾಬ್ವೆ- 286/5 ವಿರುದ್ಧ ಸೆಶೆಲ್ಸ್ 2024
  • ಅಫ್ಘಾನಿಸ್ತಾನ- 278/3 ವಿರುದ್ಧ ಐರ್ಲೆಂಡ್, 2019
  • ಜೆಕ್ ರಿಪಬ್ಲಿಕ್- 278/4 vs ಟರ್ಕಿ, 2019

ಇದನ್ನೂ ಓದಿ:'ಆ ದಿನ ಹೋಟೆಲ್​ ಕೋಣೆಗೆ ಕರೆದು ನನ್ನ ಮೇಲೆ'!: ಬ್ರಿಜ್​ ಭೂಷಣ್​ ವಿರುದ್ದ ಸಾಕ್ಷಿ ಗಂಭೀರ ಆರೋಪ

ABOUT THE AUTHOR

...view details