ಕರ್ನಾಟಕ

karnataka

ETV Bharat / sports

6 ವರ್ಷಗಳ ಹಿಂದೆಯೇ ಮಾಂಸಾಹಾರ ನಿಲ್ಲಿಸಿದ್ದ ಕೊಹ್ಲಿ: ಆ ಒಂದು ಕಾರಣಕ್ಕೆ ಸಸ್ಯಾಹಾರಿಯಾದ ವಿರಾಟ್​​! - VIRAT KOHLI

ವಿರಾಟ್​ ಕೊಹ್ಲಿ ಕಳೆದ 6 ವರ್ಷಗಳಿಂದ ಮಾಂಸಾಹಾರ ಸೇವನೆ ಮಾಡುವುದನ್ನು ನಿಲ್ಲಿಸಿದ್ದಾರೆ. ಇದಕ್ಕೆ ಕಾರಣವನ್ನು ತಿಳಿಸಿದ್ದಾರೆ.

ವಿರಾಟ್​ ಕೊಹ್ಲಿ
ವಿರಾಟ್​ ಕೊಹ್ಲಿ (virat instagram)

By ETV Bharat Sports Team

Published : Oct 29, 2024, 12:01 PM IST

Updated : Oct 29, 2024, 12:08 PM IST

Kohli Diet food: ವಿಶ್ವದ ಅಗ್ರ ಕ್ರಿಕೆಟರ್​ಗಳಲ್ಲಿ ವಿರಾಟ್​ ಕೊಹ್ಲಿ ಕೂಡ ಒಬ್ಬರು. ಇವರು ಮೈದಾನದಿಂದ ಹಿಡಿದು ಹೊರಗಿನ ತಮ್ಮ ಜೀವನಶೈಲಿವರೆಗೆ ಸದಾ ಸುದ್ದಿಯಲ್ಲಿರುತ್ತಾರೆ. ಅದರಲ್ಲೂ ಫಿಟ್​ನೆಸ್​ ವಿಷಯವಾಗಿ ಕೊಹ್ಲಿ ಚರ್ಚೆಯಲ್ಲಿರುತ್ತಾರೆ. ಮೈದಾನದಲ್ಲಿ ಜಿಂಕೆಯಂತೆ ಶರವೇಗದಲ್ಲಿ ಓಡುವ ಕೊಹ್ಲಿ ಕ್ರಿಕೆಟ್​ಗೆ ಕೊಡುವಷ್ಟೇ ಆದ್ಯತೆಯನ್ನು ತಮ್ಮ ಫಿಟ್​ನೆಸ್​ಗೆ ಕೊಡುತ್ತಾರೆ. ಹಾಗಾಗಿ ಉತ್ತಮ ಆಹಾರ ಸೇವನೆ ಜೊತೆಗೆ ದಿನವೂ ಗಂಟೆಗಟ್ಟಲೇ ವ್ಯಾಯಾಮ ಮಾಡುತ್ತಾರೆ.

ಆದರೆ ನಿಮಗೆ ಗೊತ್ತಾ ಒಂದೊಮ್ಮೆ ಯಥೇಚ್ಛವಾಗಿ ಮಾಂಸಹಾರ ಸೇವನೆ ಮಾಡುತ್ತಿದ್ದ ಕೊಹ್ಲಿ 6 ವರ್ಷಗಳ ಹಿಂದೆ ಇದ್ದಕ್ಕಿದ್ದಂತೆ ಅದನ್ನು ತಿನ್ನುವುದನ್ನೇ ನಿಲ್ಲಿಸಿದ್ದರು. ಆ ಒಂದು ಘಟನೆಯಿಂದಾಗಿ ಅವರು ಸಸ್ಯಾಹಾರಿಯಾಗಿ ಬದಲಾದರು.

ವಿರಾಟ್​ ಕೊಹ್ಲಿ (virat instagram)

ಕೊಹ್ಲಿ ಮಾಂಸಾಹಾರ ಸೇವನೆ ನಿಲ್ಲಿಸಿದ್ದು ಏಕೆ?2018ರಲ್ಲಿ ದಕ್ಷಿಣ ಆಫ್ರಿಕಾದಲ್ಲಿ ನಡೆದ ಟೆಸ್ಟ್ ಪಂದ್ಯದ ವೇಳೆ ವಿರಾಟ್ ಕೊಹ್ಲಿ ತೀವ್ರ ಬೆನ್ನುನೋವಿನಿಂದ ಬಳಲುತ್ತಿದ್ದರು. ಅವರ ಬೆನ್ನುಮೂಳೆಯಲ್ಲಿನ ಸರ್ವೇಕಲ್​ ಡಿಸ್ಕ್​ ಊದಿಕೊಂಡಿತ್ತು. ಇದರಿಂದಾಗಿ ಕೊಹ್ಲಿ ತೀವ್ರವಾದ ನೋವನ್ನು ಅನಿಭವಿಸಿದ್ದರು. ಹೀಗಾಗಿ ಕೊಹ್ಲಿ ವೈದ್ಯಕೀಯ ಪರೀಕ್ಷೆಗೂ ಒಳಗಾಗಿದ್ದರು.

ಇದನ್ನೂ ಓದಿ:ವಿರಾಟ್​ ಕೊಹ್ಲಿ, ಧೋನಿ ಅಲ್ಲವೇ ಅಲ್ಲ: ಈ ಕ್ರಿಕೆಟರ್​ ಬಳಿ ಇದೆ ಅತ್ಯಂತ ದುಬಾರಿ ಕಾರು!

ಬಳಿಕ ಬಂದ ಮೆಡಿಕಲ್​ ರಿಪೋರ್ಟ್​ ನೋಡಿ ಕೊಹ್ಲಿ ಬೆಚ್ಚಿಬಿದ್ದಿದ್ದರು. ಅದರಲ್ಲಿ, ದೇಹದಲ್ಲಿ ಯೂರಿಕ್ ಆಸಿಡ್ ಹೆಚ್ಚಾದ ಕಾರಣ ಕ್ಯಾಲ್ಸಿಯಂ ಕೊರತೆ ಉಂಟಾಗಿತ್ತು. ಕ್ಯಾಲ್ಸಿಯಂ ಕೊರತೆಯಿಂದಾಗಿ ಮೂಳೆಗಳು ದುರ್ಬಲಗೊಂಡಿರುವುದು ತಿಳಿದು ಬಂದಿತ್ತು. ಬಳಿಕ ವೈದ್ಯರು ಕೊಹ್ಲಿಗೆ ಮಾಂಸಾಹಾರ ಸೇವನೆ ತ್ಯಜಿಸುವುದರ ಜೊತೆಗೆ ಆಹಾರ ಪದ್ಧತಿಯನ್ನು ಬದಲಿಸುವಂತೆ ಸಲಹೆ ನೀಡಿದ್ದರು. ಅದರಂತೆ ಕೊಹ್ಲಿ 2018 ರಿಂದ ಮಾಂಸಾಹಾರ ಸೇವನೆ ನಿಲ್ಲಿಸಿ ಸಸ್ಯಾಹಾರದ ಕಡೆ ಹೆಚ್ಚಿನ ಗಮನ ಹರಿಸತೊಡಗಿದರು.

ಸಸ್ಯಹಾರಿ ಆದಾಗಿನಿಂದಲೂ ತಮ್ಮ ಆರೋಗ್ಯದಲ್ಲೂ ಹೆಚ್ಚಿನ ಬದಲಾವಣೆಗಳು ಕಂಡು ಬಂದಿವೆ ಎಂದು ಸ್ವತಃ ಕೊಹ್ಲಿ ಹೇಳಿಕೊಂಡಿದ್ದಾರೆ. ಕೆವಿನ್ ಪೀಟರ್ಸನ್ ಅವರೊಂದಿಗೆ ಇನ್‌ಸ್ಟಾಗ್ರಾಮ್ ಲೈವ್ ಸಂದರ್ಶನದಲ್ಲಿ ಕೊಹ್ಲಿ ಈ ಕುರಿತು ಹೇಳಿಕೊಂಡಿದ್ದಾರೆ. ಆ ಒಂದು ಘಟನೆಯಿಂದಾಗಿ ಆಹಾರ ಪದ್ಧತಿಯಲ್ಲಿ ಹೆಚ್ಚಿನ ಜಾಗ್ರತೆ ವಹಿಸುತ್ತಿರುವುದಾಗಿಯೂ ಹೇಳಿಕೊಂಡಿದ್ದಾರೆ.

2 ಗಂಟೆ ವ್ಯಾಯಾಮ:ವಿರಾಟ್​ವ್ಯಾಯಾಮಕ್ಕಾಗಿಯೇ ಹೆಚ್ಚಿನ ಸಮಯ ಮೀಸಲಿಡುತ್ತಾರೆ. ಇವರು ಪ್ರತಿನಿತ್ಯ 2 ಗಂಟೆ ಕಾಲ ದೇಹವನ್ನು ದಂಡಿಸುತ್ತಾರೆ. ವಾರದಲ್ಲಿ ಒಂದು ದಿನ ಮಾತ್ರ ವ್ಯಾಯಾಮಕ್ಕೆ ಬ್ರೇಕ್​ ಹಾಕುತ್ತಾರೆ. ವ್ಯಾಯಾಮದ ಜೊತೆಗೆ ಸ್ವಿಮ್ಮಿಂಗ್​ ಕೂಡ ಮಾಡುತ್ತಾರೆ. ತಮ್ಮ ದಿನಚರಿಯನ್ನು ಆಸಕ್ತಿದಾಯಕವಾಗಿರಿಸಲು ದಿನವೂ ಒಂದಲ್ಲ ಒಂದು ಹೊಸತನ್ನು ಕೌಶಲ್ಯಗಳನ್ನು ಕಲೆಯುತ್ತಾರೆ ಎಂದು ವಿರಾಟ್​ ಹೇಳಿಕೊಂಡಿದ್ದಾರೆ.

ಇದನ್ನೂ ಓದಿ:ಬಾರ್ಡರ್​ ಗಾವಸ್ಕರ್​ ಟ್ರೋಫಿಗೂ ಮೊದಲೇ ಆಸ್ಟ್ರೇಲಿಯಾಗೆ ದೊಡ್ಡ ಆಘಾತ: ದಿಢೀರ್​ ನಿವೃತ್ತಿ ಘೋಷಿಸಿದ ಸ್ಟಾರ್​ ಆಟಗಾರ!

Last Updated : Oct 29, 2024, 12:08 PM IST

ABOUT THE AUTHOR

...view details