ಕರ್ನಾಟಕ

karnataka

ETV Bharat / sports

ಟಿ20 ವಿಶ್ವಕಪ್​: ಕೆನಡಾ ವಿರುದ್ಧ ಯುಎಸ್​ ತಂಡಕ್ಕೆ 7 ವಿಕೆಟ್​ಗಳ​ ಗೆಲುವು ​ - T20 WORLD CUP - T20 WORLD CUP

ಟಿ20 ವಿಶ್ವಕಪ್​ನ ಮೊದಲ ಪಂದ್ಯದಲ್ಲಿ ಕೆನಡಾ ವಿರುದ್ಧ ಯುಎಸ್​ ತಂಡ ಜಯಭೇರಿ ಬಾರಿಸಿದೆ.

ಇಂದಿನಿಂದ ಟಿ20 ವಿಶ್ವಕಪ್​ ಅಧಿಕೃತ ಪ್ರಾರಂಭ
ಇಂದಿನಿಂದ ಟಿ20 ವಿಶ್ವಕಪ್​ ಅಧಿಕೃತ ಪ್ರಾರಂಭ (ETV Bharat)

By ETV Bharat Karnataka Team

Published : Jun 2, 2024, 7:25 AM IST

Updated : Jun 2, 2024, 11:48 AM IST

ಡಲ್ಲಾಸ್​ (ಅಮೆರಿಕ):ಟಿ20 ವಿಶ್ವಕಪ್​ನ ಮೊದಲ ಪಂದ್ಯದಲ್ಲಿ ​ಕೆನಡಾ ವಿರುದ್ದ ಯುನೈಟೆಡ್​ ಸ್ಟೇಟ್ಸ್​ 7 ವಿಕೆಟ್​ಗಳ ಗೆಲುವು ಸಾಧಿಸಿದೆ.

ಇಲ್ಲಿಯ ಗ್ರ್ಯಾಂಡ್ ಪ್ರೈರೀ ಸ್ಟೇಡಿಯಂನಲ್ಲಿ ನಡೆದ ಪಂದ್ಯದಲ್ಲಿ ಕೆನಡಾ ನೀಡದ್ದ 195 ರನ್‌ಗಳ ಗುರಿಯನ್ನು ಬೆನ್ನಟ್ಟಿದ ಅಮೆರಿಕ ಪರ ಆರೋನ್ ಜೋನ್ಸ್ ಮತ್ತು ಆಂಡ್ರಿಯಾಸ್ ಗೌಸ್ ಬಿರುಸಿನ ಬ್ಯಾಟಿಂಗ್​ ಪ್ರದರ್ಶಿಸಿ ತಂಡದ ಗೆಲುವಿಗೆ ಕಾರಣರಾದರು​. ನಾಲ್ಕನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಿದ ಜೋನ್ಸ್ 40 ಎಸೆತಗಳಲ್ಲಿ 4 ಬೌಂಡರಿ ಹಾಗೂ 10 ಸಿಕ್ಸರ್‌ ಮೂಲಕ ಅಜೇಯವಾಗಿ 94 ರನ್‌ ಸಿಡಿಸಿದರೇ, ಮೂರನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಿದ ಗೌಸ್ 46 ಎಸೆತಗಳಲ್ಲಿ 7 ಬೌಂಡರಿ ಹಾಗೂ 3 ಸಿಕ್ಸರ್‌ ನೆರವಿನಿಂದ 65 ರನ್ ಚಚ್ಚಿದರು.

ಉಳಿದಂತೆ ಕ್ಯಾಪ್ಟನ್ ಮಾಂಕ್ ಪಟೇಲ್ (16), ಆಂಡರ್ಸನ್ (3*) ರನ್ ಗಳಿಸಿ ರನ್​ ಕೊಡುಗೆ ನೀಡಿದರು. ಇನ್ನಿಂಗ್ಸ್ ಆರಂಭಿಸಿದ ಸ್ಟೀವನ್ ಟೇಲರ್ ಖಾತೆ ತೆರೆಯದೆ ನಿರ್ಗಮಿಸಿದರು. ಕೆನಡಾ ಪರ ಕೆನಡಾ ಪರ ಕಲೀಂ ಸನಾ, ದಿಲ್ಲನ್ ಹೆಲ್ಲಿಗರ್ ಮತ್ತು ನಿಖಿಲ್ ದತ್ತಾ ತಲಾ ಒಂದು ವಿಕೆಟ್​ ಪಡೆದು ಮಿಂಚಿದರು.

ಇದಕ್ಕೂ ಮುನ್ನ ಟಾಸ್​ ಸೋತು ಮೊದಲು ಬ್ಯಾಟ್​ ಮಾಡಿದ್ದ ಕೆನಡಾ ನಿಗದಿತ 20 ಓವರ್‌ಗಳಲ್ಲಿ ಆ್ಯರನ್​ ಜಾನ್ಸನ್​ (23), ನವನೀತ್​ (61), ಪರ್ಗತ್​ ಸಿಂಗ್​ (5), ಕಿರ್ಟೊನ್​ (51), ಶ್ರೇಯಸ್​ ಮೊವ್ವ (32*), ದಿಲ್​ ಪ್ರೀತ್​ಸಿಂಗ್ (11)​, ಹೈಲಿಗೆರ್​ (1*) ಬ್ಯಾಟಿಂಗ್​ ನೆರವಿನಿಂದ ಬೃಹತ್​ ರನ್​ ಕಲೆಹಾಕಿತು. ಅಮೆರಿಕ ಪರ ಅಲಿ ಖಾನ್, ಹರ್ಮೀತ್ ಸಿಂಗ್ ಮತ್ತು ಕೋರಿ ಆಂಡರ್ಸನ್ ತಲಾ 1 ವಿಕೆಟ್ ಪಡೆದರು.

ತಂಡಗಳು - ಕೆನಡಾ : ಆ್ಯರನ್ ಜಾನ್ಸನ್, ನವನೀತ್ ಧಲಿವಾಲ್, ಪರ್ಗತ್ ಸಿಂಗ್, ನಿಕೋಲಸ್ ಕಿರ್ಟನ್, ಶ್ರೇಯಸ್ ಮೊವ್ವಾ (ವಿ.ಕೀ), ದಿಲ್‌ಪ್ರೀತ್ ಸಿಂಗ್, ಸಾದ್ ಬಿನ್ ಜಾಫರ್ (ನಾ), ನಿಖಿಲ್ ದತ್ತಾ, ದಿಲ್ಲನ್ ಹೇಲಿಗರ್, ಕಲೀಮ್ ಸನಾ, ಜೆರೆಮಿ ಗಾರ್ಡನ್.

ಯುನೈಟೆಡ್ ಸ್ಟೇಟ್ಸ್: ಸ್ಟೀವನ್ ಟೇಲರ್, ಮೊನಾಂಕ್ ಪಟೇಲ್ (ವಿ.ಕೀ/ನಾ ), ಆಂಡ್ರೀಸ್ ಗೌಸ್, ಆರನ್ ಜೋನ್ಸ್, ನಿತೀಶ್ ಕುಮಾರ್, ಕೋರಿ ಆಂಡರ್ಸನ್, ಹರ್ಮೀತ್ ಸಿಂಗ್, ಶಾಡ್ಲಿ ವ್ಯಾನ್ ಶಾಲ್ಕ್‌ವಿಕ್, ಜಸ್ದೀಪ್ ಸಿಂಗ್, ಅಲಿ ಖಾನ್, ಸೌರಭ್ ನೇತ್ರವಲ್ಕರ್.

ಇದನ್ನೂ ಓದಿ:ಕೆನಡಾ ಕ್ರಿಕೆಟ್​ ತಂಡದಲ್ಲಿ ದಾವಣಗೆರೆಯ ಹುಡುಗ: ವಿಶ್ವಕಪ್​ನಲ್ಲಿ ಸಿಗುತ್ತಾ 'ಶ್ರೇಯಸ್​' - Shreyas Moa

Last Updated : Jun 2, 2024, 11:48 AM IST

ABOUT THE AUTHOR

...view details