SMAT 2024: ಟೀಂ ಇಂಡಿಯಾದ ಯುವ ಸ್ಪೋಟಕ ಹಿಟ್ಟರ್ ಅಭಿಷೇಕ್ ಶರ್ಮಾ ಫಾರ್ಮ್ಗೆ ಮರಳಿದ್ದಾರೆ. ಇತ್ತೀಚೆಗೆ ದಕ್ಷಿಣ ಆಫ್ರಿಕಾ ವಿರುದ್ಧ ನಡೆದಿದ್ದ ಟಿ20ಯಲ್ಲಿ ಫಾರ್ಮ್ ಕಳೆದುಕೊಂಡಿದ್ದ ಅಭಿಷೇಕ್ ಇದೀಗ ಸೈಯದ್ ಮುಷ್ತಾಕ್ ಅಲಿ ಟ್ರೋಫಿಯಲ್ಲಿ ಶರವೇಗದ ಶತಕ ಸಿಡಿಸಿ ಘರ್ಜಿಸಿದ್ದಾರೆ.
ಕೇವಲ 28 ಎಸೆತಗಳಲ್ಲಿ ಶತಕ ಸಿಡಿಸಿದ ವೀರ:ಇಂದು ನಡೆದ ಪಂಜಾಬ್ ಮತ್ತು ಮೇಘಾಲಯ ತಂಡದ ನಡುವಿನ ಟಿ20 ಪಂದ್ಯದಲ್ಲಿ, ಪಂಜಾಬ್ ಪರ ಬ್ಯಾಟಿಂಗ್ ಮಾಡಿದ್ದ ಅಭಿಷೇಕ್ ಶರ್ಮಾ ಕೇವಲ 28 ಎಸೆತಗಳಲ್ಲಿ ಶತಕ ಸಿಡಿಸಿ ಪಂತ್ ಅವರ ದಾಖಲೆ ಮುರಿದಿದ್ದಾರೆ. ಇದರೊಂದಿಗೆ ಕೇವಲ ಒಂದು ವಾರದಲ್ಲೆ ಪಂತ್ ದಾಖಲೆ ಮುರಿದ ಎರಡನೇ ಬ್ಯಾಟರ್ ಎನಿಸಿಕೊಂಡಿದ್ದಾರೆ. ಇದಕ್ಕೂ ಮೊದಲು ಉರ್ವೀಲ್ ಪಾಟೇಲ್ ಈ ಸಾಧನೆ ಮಾಡಿದ್ದರು.
ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಮೇಘಾಲಯ ತಂಡ 20 ಓವರ್‌ಗಳಲ್ಲಿ 7 ವಿಕೆಟ್ ನಷ್ಟಕ್ಕೆ 142 ರನ್ ಗಳಿಸಿತು. ಇದಕ್ಕುತ್ತರವಾಗಿ ಪಂಜಾಬ್, ಅಭಿಷೇಕ್ ಶರ್ಮಾ ಅವರ ಬಿರುಸಿನ ಶತಕದಿಂದಾಗಿ ಕೇವಲ 9.3 ಓವರ್‌ಗಳಲ್ಲಿ ಗುರಿಯನ್ನು ತಲುಪಿ ಗೆಲುವಿನ ನಗೆ ಬೀರಿತು. ಅಭಿಷೇಕ್ ಶರ್ಮಾ ಒಟ್ಟು 29 ಎಸೆತಗಳನ್ನು ಎದುರಿಸಿ 106 ರನ್ ಗಳಿಸಿದರು. ಅವರ ಇನ್ನಿಂಗ್ಸ್‌ನಲ್ಲಿ 11 ಸಿಕ್ಸರ್ ಮತ್ತು 8 ಬೌಂಡರಿಗಳನ್ನು ಬಾರಿಸಿದ್ದಾರೆ. ಪಂದ್ಯದ ಕೊನೆಯಲ್ಲಿ, ಅವರ ಸ್ಟ್ರೈಕ್ ರೇಟ್ 365 ಕ್ಕಿಂತ ಹೆಚ್ಚಿತ್ತು.