ಪ್ಯಾರಿಸ್ (ಫ್ರಾನ್ಸ್): ಪ್ಯಾರಿಸ್ ಒಲಿಂಪಿಕ್ 2024ರ ಮೂರನೇ ದಿನದಂದು ಭಾರತ ಬ್ಯಾಡ್ಮಿಂಟನ್‌ನಲ್ಲಿ ನಿರಾಸೆ ಅನುಭವಿಸಿದೆ. ಸೋಮವಾರ ಲಾ ಚಾಪೆಲ್ಲೆ ಅರೆನಾದಲ್ಲಿ ನಡೆದ ಬ್ಯಾಡ್ಮಿಂಟನ್ ಮಹಿಳೆಯರ ಡಬಲ್ಸ್‌ನ ಎರಡನೇ ಗುಂಪು ಹಂತದ ಪಂದ್ಯದಲ್ಲಿ ಭಾರತದ ಸ್ಟಾರ್ ಷಟ್ಲರ್ ಜೋಡಿ ತನಿಶಾ ಕ್ರಾಸ್ಟೊ ಮತ್ತು ಅಶ್ವಿನಿ ಪೊನ್ನಪ್ಪ ಅವರು ಜಪಾನ್ ವಿರುದ್ಧ ಸೋಲನುಭವಿಸಿದ್ದಾರೆ.
ಪಂದ್ಯದಲ್ಲಿ ಉತ್ತಮ ಪ್ರದರ್ಶನ ತೋರಿದ ನಾಲ್ಕನೇ ಶ್ರೇಯಾಂಕದ ಜಪಾನಿನ ಜೋಡಿ ನಮಿ ಮತ್ಸುಯಾಮಾ ಮತ್ತು ಚಿಹಾರು 21-11, 21-12 ನೇರ ಸೆಟ್‌ಗಳಿಂದ ಭಾರತದ ತನಿಶಾ ಕ್ರಾಸ್ಟೊ ಮತ್ತು ಅಶ್ವಿನಿ ಪೊನ್ನಪ್ಪ ಅವರ ವಿರುದ್ಧ ಗೆಲವು ಸಾಧಿಸಿದರು. 48 ನಿಮಿಷಗಳ ಕಾಲ ನಡೆದ ಈ ಪಂದ್ಯದಲ್ಲಿ ಭಾರತd ಜೋಡಿ ಸೋಲನುಭವಿಸಿತು. ಇದಕ್ಕೂ ಮೊದಲು ವಿಶ್ವ 19ನೇ ಶ್ರೇಯಾಂಕದ ಭಾರತದ ಈ ಜೋಡಿ ರಿಪಬ್ಲಿಕ್ ಆಫ್ ಕೊರಿಯಾದ ಕಿಮ್ ಸೋ ಯೊಂಗ್ ಮತ್ತು ಕಾಂಗ್ ಹೀ ಯೋಂಗ್ ವಿರುದ್ಧ ಸೋಲನುಭವಿಸಿತ್ತು. ಈ ಪಂದ್ಯದಲ್ಲೂ ಕ್ರಾಸ್ಟೊ-ಪೊನ್ನಪ್ಪ ಜೋಡಿ 18-21, 10-21 ನೇರ ಸೆಟ್‌ಗಳಿಂದ ಸೋಲನ್ನು ಕಂಡಿದ್ದರು.
ಪಂದ್ಯ ಆರಂಭದಿಂದಲೂ ಭಾರತದ ಶಟ್ಲರ್‌ಗಳು ತಮ್ಮ ಎದುರಾಳಿಗಳ ಮೇಲೆ ಯಾವುದೇ ಒತ್ತಡ ಹೇರಲು ಸಾಧ್ಯವಾಗಲಿಲ್ಲ. ಮತ್ತೊಂದೆಡೆ, ಜಪಾನ್ ಜೋಡಿಯು ಆರಂಭದಿಂದಲೇ ಪಂದ್ಯದಲ್ಲಿ ಹಿಡಿತ ಸಾಧಿಸುತ್ತ ಸಾಗಿತ್ತು.