ನವದೆಹಲಿ: 2024ರ ಟಿ-20 ವಿಶ್ವಕಪ್ ಟ್ರೋಫಿ ಗೆಲುವಿನ ನಂತರ ಟೀಂ ಇಂಡಿಯಾದ ಸ್ಟಾರ್ ಬ್ಯಾಟ್ಸ್‌ಮನ್ ವಿರಾಟ್ ಕೊಹ್ಲಿ ಟಿ20 ಅಂತಾರಾಷ್ಟ್ರೀಯ ಕ್ರಿಕೆಟ್ಗೆ ಗುಡ್ಬಾಯ್ ಹೇಳಿದ್ದರು. ಇದರ ನಡುವೆ ವಿರಾಟ್‌ಗಾಗಿ ಅಭಿಮಾನಿಗಳು ರಥಯಾತ್ರೆ ನಡೆಸಿ ತಮ್ಮ ಅಭಿಮಾನ ಮೆರೆದಿದ್ದಾರೆ.
ಸದ್ಯ ಈ ಕುರಿತ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಈ ವಿಡಿಯೋದಲ್ಲಿ, ವಾಹನವೊಂದರಲ್ಲಿ ಕಿಂಗ್ ಕೊಹ್ಲಿಯ ಭಾವಚಿತ್ರಗಳು ಮತ್ತು ಬ್ಯಾನರ್ಗಳನ್ನು ಅಳವಡಿಸಿ ಅಭಿಮಾನಿಗಳು ಯಾತ್ರೆ ನಡೆಸಿದ್ದಾರೆ. ಜೊತೆಗೆ ಇಡೀ ವಾಹನಕ್ಕೆ ತ್ರಿವರ್ಣ ಧ್ವಜವನ್ನು ಹೊದಿಸಿರುವ ಅಭಿಮಾನಿಗಳು ಟೀಂ ಇಂಡಿಯಾ ಜೆರ್ಸಿಯಲ್ಲಿ ಕಾಣಿಸಿಕೊಂಡಿದ್ದಾರೆ. ಈ ವಿಡಿಯೋ ಎಲ್ಲಿಂದ ಬಂದಿದೆ ಮತ್ತು ವಿರಾಟ್ ಅಭಿಮಾನಿಗಳು ಅವರಿಗಾಗಿ ರಥಯಾತ್ರೆಯನ್ನು ಎಲ್ಲಿ ನಡೆಸಿದ್ದಾರೆ ಎಂಬುದು ನಿಖರವಾಗಿ ತಿಳಿದು ಬಂದಿಲ್ಲ.