ಕರ್ನಾಟಕ

karnataka

ETV Bharat / sports

ಟಿ20 ವಿಶ್ವಕಪ್​: ಅತ್ಯುತ್ತಮ ಬ್ಯಾಟರ್​, ಕೀಪರ್​ ಯಾರು?; 2007ರಿಂದ 22ರವರೆಗಿನ ದಾಖಲೆಗಳ ನೋಟ - T20 World Cup Records

ಪ್ರಸ್ತುತ ಕ್ರಿಕೆಟ್​​ನಲ್ಲಿ ಟಿ20 ಮಾದರಿಯು ಅತ್ಯಂತ ಜನಪ್ರಿಯತೆ ಹೊಂದಿರುವುದಲ್ಲಿ ಯಾವುದೇ ಸಂದೇಹವಿಲ್ಲ. ಇದೀಗ ಕ್ರಿಕೆಟ್‌ಪ್ರಿಯರ ನೆಚ್ಚಿನ ಟಿ20 ವಿಶ್ವಕಪ್ ಟೂರ್ನಿಯ​ ಸನಿಹದಲ್ಲಿ ನಾವಿದ್ದೇವೆ. 2024ರ ಚುಟುಕು ವಿಶ್ವಕಪ್ ಸಮರವು ಜೂನ್ 2ರಂದು ಶುರುವಾಗಲಿದ್ದು, ಪಂದ್ಯಾವಳಿಯ ಇತಿಹಾಸದಲ್ಲಿ ಇದುವರೆಗೆ ಮೂಡಿಬಂದ ಪ್ರಮುಖ ದಾಖಲೆಗಳ ಮಾಹಿತಿ ಇಲ್ಲಿದೆ.

ETV Bharat
ಸಂಗ್ರಹ ಚಿತ್ರ (ETV Bharat)

By ETV Bharat Karnataka Team

Published : May 31, 2024, 10:00 AM IST

ಇಂಡಿಯನ್​ ಪ್ರೀಮಿಯರ್ ಲೀಗ್ (ಐಪಿಎಲ್‌)​ ಬಳಿಕ ಕ್ರಿಕೆಟ್​ ಜಗತ್ತು ಒಂಬತ್ತನೇ ಆವೃತ್ತಿಯ ಟಿ20 ವಿಶ್ವಕಪ್‌ಗೆ ಸಜ್ಜುಗೊಂಡಿದ್ದು, ಅಭಿಮಾನಿಗಳ ನಿರೀಕ್ಷೆ ಹೆಚ್ಚಿಸಿದೆ. ಜೂನ್ 2ರಂದು ಟೆಕ್ಸಾಸ್‌ನ ಗ್ರ್ಯಾಂಡ್ ಪ್ರೈರೀ ಮೈದಾನದಲ್ಲಿ ಆತಿಥೇಯ ಯುಎಸ್​ಎ ಹಾಗೂ ನೆರೆಯ ಕೆನಡಾ ನಡುವಿನ ಪಂದ್ಯದೊಂದಿಗೆ ಪಂದ್ಯಾವಳಿ ಪ್ರಾರಂಭವಾಗಲಿದೆ. ಪ್ರತಿಷ್ಠಿತ ಐಸಿಸಿ ಟೂರ್ನಿಯು ಕೆರಿಬಿಯನ್ ದ್ವೀಪಗಳು ಮತ್ತು ಯುನೈಟೆಡ್ ಸ್ಟೇಟ್ಸ್ ಆಫ್ ಅಮೆರಿಕದಲ್ಲಿ ಆಯೋಜನೆಗೊಂಡಿದೆ.

ಆರಂಭದಿಂದಲೂ ಜಾಗತಿಕ ಮಟ್ಟದಲ್ಲಿ ಅಭಿಮಾನಿಗಳ ಮನಸೆಳೆದಿರುವ ಚುಟುಕು ಕ್ರಿಕೆಟ್​ ಟೂರ್ನಮೆಂಟ್​ನಲ್ಲಿ ಇದುವರೆಗೆ ಹತ್ತು ಹಲವು ದಾಖಲೆಗಳು ಮೂಡಿಬಂದಿವೆ. ಹಲವಾರು ಕ್ರಿಕೆಟ್​ ದಂತಕಥೆಗಳು ಮೈದಾನದಲ್ಲಿ ಮಿಂಚಿದ್ದಾರೆ. ಟಿ20 ವಿಶ್ವಕಪ್‌ಗಳ ಇತಿಹಾಸವನ್ನೊಮ್ಮೆ ಹಿಂತಿರುಗಿ ವಿಶ್ಲೇಷಿಸಿದಾಗ ಅವು ನಮ್ಮ ಗಮನ ಸೆಳೆಯುತ್ತವೆ. ಹೆಚ್ಚು ಟ್ರೋಫಿ ಜಯಿಸಿದ ತಂಡಗಳು, ಯಶಸ್ವಿ ನಾಯಕರು, ಅತಿ ಹೆಚ್ಚು ರನ್ ಗಳಿಸಿದವರು, ವಿಕೆಟ್​​ ಕಬಳಿಸಿದವರು ಮತ್ತು ಅತ್ಯುತ್ತಮ ಫೀಲ್ಡಿಂಗ್ ಪ್ರದರ್ಶನ ಸೇರಿದಂತೆ ದಾಖಲೆಗಳ ಮಾಹಿತಿ ಈ ಕೆಳಗಿನಂತಿದೆ.

ತಂಡಗಳ ದಾಖಲೆಗಳು:

ಹೆಚ್ಚು ಸಲ ವಿಜೇತರು

ಇಂಗ್ಲೆಂಡ್ (2) - 2010 ಮತ್ತು 2022

ವೆಸ್ಟ್ ಇಂಡೀಸ್ (2) - 2012 ಮತ್ತು 2016

ಹೆಚ್ಚು ಪಂದ್ಯ ಜಯಿಸಿದವರು

ಶ್ರೀಲಂಕಾ - 31 (51 ಪಂದ್ಯಗಳು)

ಪಾಕಿಸ್ತಾನ - 28 (47 ಪಂದ್ಯಗಳು)

ಭಾರತ - 27 (44 ಪಂದ್ಯಗಳು)

ಶೇಕಡಾವಾರು ಅಧಿಕ ಗೆಲುವು

ಭಾರತ - 63.95 %

ಆಸ್ಟ್ರೇಲಿಯಾ - 62.5 %

ಶ್ರೀಲಂಕಾ - 61.76 %

ತಂಡದ ಅತ್ಯಧಿಕ ಮೊತ್ತ

ಶ್ರೀಲಂಕಾ - 260/6 vs ಕೀನ್ಯಾ (2007)

ಇಂಗ್ಲೆಂಡ್ - 230/8 vs ದಕ್ಷಿಣ ಆಫ್ರಿಕಾ (2016)

ದಕ್ಷಿಣ ಆಫ್ರಿಕಾ - 229/4 vs ಇಂಗ್ಲೆಂಡ್ (2016)

ಕಡಿಮೆ ಮೊತ್ತ ಗಳಿಕೆ

ನೆದರ್ಲ್ಯಾಂಡ್ಸ್ - 39 ರನ್​ vs ಶ್ರೀಲಂಕಾ (2014)

ನೆದರ್ಲ್ಯಾಂಡ್ಸ್ - 44 ರನ್ vs ಶ್ರೀಲಂಕಾ (2021)

ವೆಸ್ಟ್ ಇಂಡೀಸ್ - 55 ರನ್ vs ಇಂಗ್ಲೆಂಡ್ (2021)

ಅತಿ ದೊಡ್ಡ ಗೆಲುವು (ರನ್‌ಗಳ ಪ್ರಕಾರ)

ಶ್ರೀಲಂಕಾ - 172 ರನ್‌ vs ಕೀನ್ಯಾ (2007)

ದಕ್ಷಿಣ ಆಫ್ರಿಕಾ - 130 ರನ್‌ vs ಸ್ಕಾಟ್ಲೆಂಡ್ (2009)

ಅಫ್ಘಾನಿಸ್ತಾನ - 130 ರನ್ vs ಸ್ಕಾಟ್ಲೆಂಡ್ (2021)

ಅತಿ ದೊಡ್ಡ ಗೆಲುವು (ವಿಕೆಟ್‌ಗಳ ಪ್ರಕಾರ)

ದಕ್ಷಿಣ ಆಫ್ರಿಕಾ - 10 ವಿಕೆಟ್‌ ಜಯ vs ಪಾಕಿಸ್ತಾನ (11.3 ಓವರ್‌ಗಳಲ್ಲಿ 130 ರನ್ ಬೆನ್ನಟ್ಟಿರುವುದು)

ಆಸ್ಟ್ರೇಲಿಯಾ - 10 ವಿಕೆಟ್‌ ಗೆಲುವು vs ಶ್ರೀಲಂಕಾ (10.2 ಓವರ್‌ಗಳಲ್ಲಿ 102 ರನ್ ಗುರಿ ತಲುಪಿರುವುದು)

ಕೀನ್ಯಾ - 10 ವಿಕೆಟ್ ಜಯ vs ಸ್ಕಾಟ್ಲೆಂಡ್ (12.3 ಓವರ್​ಗಳಲ್ಲಿ 110 ರನ್ ಚೇಸ್)

ಆಟಗಾರರ ಸಾಧನೆಗಳು:

ಹೆಚ್ಚು ಪಂದ್ಯಗಳು

ರೋಹಿತ್ ಶರ್ಮಾ - 39

ಶಕೀಬ್ ಅಲ್ ಹಸನ್ - 36

ತಿಲಕರತ್ನೆ ದಿಲ್ಶಾನ್ - 35

ಅತಿ ಹೆಚ್ಚು ರನ್

ವಿರಾಟ್ ಕೊಹ್ಲಿ - 1141 (25 ಇನ್ನಿಂಗ್ಸ್)

ಮಹೇಲಾ ಜಯವರ್ಧನೆ -1016 (31 ಇನ್ನಿಂಗ್ಸ್)

ಕ್ರಿಸ್ ಗೇಲ್ - 965 (31 ಇನ್ನಿಂಗ್ಸ್)

ಅಧಿಕ ಬೌಂಡರಿಗಳು

ಮಹೇಲಾ ಜಯವರ್ಧನೆ - 111

ವಿರಾಟ್ ಕೊಹ್ಲಿ - 103

ತಿಲಕರತ್ನೆ ದಿಲ್ಶಾನ್ - 101

ಹೆಚ್ಚು ಸಿಕ್ಸರ್

ಕ್ರಿಸ್ ಗೇಲ್ - 63

ರೋಹಿತ್ ಶರ್ಮಾ - 35

ಜೋಸ್ ಬಟ್ಲರ್ - 33

ಹೆಚ್ಚು ಶೂನ್ಯ ರನ್​

ಶಾಹಿದ್ ಅಫ್ರಿದಿ - 5

ತಿಲಕರತ್ನೆ ದಿಲ್ಶಾನ್ - 5

ಜಾರ್ಜ್ ಡಾಕ್ರೆಲ್ - 4

ಅತಿ ಹೆಚ್ಚು ಅರ್ಧಶತಕಗಳು

ವಿರಾಟ್ ಕೊಹ್ಲಿ - 14

ಕ್ರಿಸ್ ಗೇಲ್ - 9

ರೋಹಿತ್ ಶರ್ಮಾ - 9

ಅಧಿಕ ಶತಕ ಗಳಿಕೆ

ಕ್ರಿಸ್ ಗೇಲ್ - 2

ಒಂದೇ ಆವೃತ್ತಿಯಲ್ಲಿ ಅತಿ ಹೆಚ್ಚು ರನ್‌

ವಿರಾಟ್ ಕೊಹ್ಲಿ - 319 (2014)

ತಿಲಕರತ್ನೆ ದಿಲ್ಶಾನ್ - 317 (2009)

ಬಾಬರ್ ಅಜಮ್ - 303 (2021)

ಅತ್ಯುತ್ತಮ ಜೊತೆಯಾಟ

ಅಲೆಕ್ಸ್ ಹೇಲ್ಸ್-ಜೋಸ್ ಬಟ್ಲರ್ - 170* ರನ್​ vs ಭಾರತ (2022)

ರಿಲೀ ರೊಸ್ಸೊ-ಕ್ವಿಂಟನ್ ಡಿ ಕಾಕ್ - 168 ರನ್ vs ಬಾಂಗ್ಲಾದೇಶ (2022)

ಕುಮಾರ ಸಂಗಕ್ಕಾರ-ಮಹೇಲಾ ಜಯವರ್ಧನೆ - 166 ರನ್ vs ವೆಸ್ಟ್​ ಇಂಡೀಸ್​ (2010)

ಗರಿಷ್ಠ ಸ್ಕೋರ್

ಬ್ರೆಂಡನ್ ಮೆಕಲಮ್ - 58 ಎಸೆತಗಳಲ್ಲಿ 123 vs ಬಾಂಗ್ಲಾದೇಶ (2012)

ಕ್ರಿಸ್ ಗೇಲ್ - 57 ಬಾಲ್​ಗಳಲ್ಲಿ 117 vs ದಕ್ಷಿಣ ಆಫ್ರಿಕಾ (2007)

ಅಲೆಕ್ಸ್ ಹೇಲ್ಸ್ - 64 ಚೆಂಡುಗಳಲ್ಲಿ 116* vs ಶ್ರೀಲಂಕಾ (2014)

ಗರಿಷ್ಠ ಸರಾಸರಿ (ಕನಿಷ್ಠ 10 ಪಂದ್ಯಗಳು)

ವಿರಾಟ್ ಕೊಹ್ಲಿ - 81.50

ಸೂರ್ಯಕುಮಾರ್ ಯಾದವ್ - 56.20

ಮೈಕೆಲ್ ಹಸ್ಸಿ - 54.62

ಅತ್ಯಧಿಕ ಸ್ಟ್ರೈಕ್ ರೇಟ್ (ಕನಿಷ್ಠ 10 ಪಂದ್ಯಗಳು)

ಸೂರ್ಯಕುಮಾರ್ ಯಾದವ್ - 181.29

ಡರೆನ್ ಸಮಿ - 164.12

ಶಾಹಿದ್ ಅಫ್ರಿದಿ - 154.23

ಹೆಚ್ಚು ವಿಕೆಟ್

ಶಕೀಬ್ ಅಲ್ ಹಸನ್ - 47 (35 ಇನ್ನಿಂಗ್ಸ್)

ಶಾಹಿದ್ ಅಫ್ರಿದಿ - 39 (34 ಇನ್ನಿಂಗ್ಸ್)

ಲಸಿತ್ ಮಾಲಿಂಗ - 38 (31 ಇನ್ನಿಂಗ್ಸ್)

ಅತ್ಯುತ್ತಮ ಎಕಾನಮಿ ದರ (ಕನಿಷ್ಠ 10 ಪಂದ್ಯಗಳು)

ಸುನಿಲ್ ನರೈನ್ - 5.17

ಸ್ಯಾಮ್ಯುಯೆಲ್ ಬದ್ರಿ - 5.52

ವನಿಂದು ಹಸರಂಗ - 5.81

ಅತ್ಯುತ್ತಮ ಬೌಲಿಂಗ್ ಅಂಕಿ-ಅಂಶಗಳು

ಅಜಂತಾ ಮೆಂಡಿಸ್ - 4 ಓವರ್‌ | 8 ರನ್​ | 6 ವಿಕೆಟ್‌ಗಳು vs ಜಿಂಬಾಬ್ವೆ (2012)

ರಂಗನಾ ಹೆರಾತ್ - 3.3 ಓವರ್‌ | 3 ರನ್ | 5 ವಿಕೆಟ್‌ಗಳು vs ನ್ಯೂಜಿಲೆಂಡ್ (2014)

ಉಮರ್ ಗುಲ್ - 3 ಓವರ್‌ | 6 ರನ್ | 5 ವಿಕೆಟ್ vs ನ್ಯೂಜಿಲೆಂಡ್ (2009)

ಏಕ ಆವೃತ್ತಿಯಲ್ಲಿ ಅತಿ ಹೆಚ್ಚು ವಿಕೆಟ್‌

ವನಿಂದು ಹಸರಂಗ - 16 ವಿಕೆಟ್​ (2021)

ಅಜಂತಾ ಮೆಂಡಿಸ್ - 15 ವಿಕೆಟ್ (2012)

ವನಿಂದು ಹಸರಂಗ - 15 ವಿಕೆಟ್ (2022)

ಕ್ಷೇತ್ರರಕ್ಷಣೆಯಲ್ಲಿನ ದಾಖಲೆಗಳು:

ಅತಿ ಹೆಚ್ಚು ಔಟ್​ (ವಿಕೆಟ್ ಕೀಪರ್)

ಮಹೇಂದ್ರ ಸಿಂಗ್ ಧೋನಿ - 32

ಕಮ್ರಾನ್ ಅಕ್ಮಲ್ - 30

ದಿನೇಶ್ ರಾಮ್ದಿನ್ - 27

ಅಧಿಕ ಕ್ಯಾಚ್‌ಗಳು

ಎಬಿ ಡಿವಿಲಿಯರ್ಸ್ - 23

ಡೇವಿಡ್ ವಾರ್ನರ್ - 21

ಮಾರ್ಟಿನ್ ಗಪ್ಟಿಲ್ - 19

ಹೆಚ್ಚು ರನೌಟ್​

ಡ್ವೇನ್ ಬ್ರಾವೋ - 6

ಬ್ರೆಂಡನ್ ಮೆಕಲಮ್ - 4

ಉಮರ್ ಗುಲ್ - 3

ನಾಯಕತ್ವ ದಾಖಲೆ:

ನಾಯಕನಾಗಿ ಹೆಚ್ಚು ಗೆಲುವು - ಮಹೇಂದ್ರ ಸಿಂಗ್ ಧೋನಿ (21)

ಅತ್ಯಂತ ಯಶಸ್ವಿ ನಾಯಕ - ಡರೆನ್ ಸಮಿ (ನಾಯಕನಾಗಿ 2 ಪ್ರಶಸ್ತಿ ಗೆದ್ದಿರುವುದು)

ಇದನ್ನೂ ಓದಿ:2007 ರಿಂದ 2022 ರವರೆಗಿನ ಟಿ20 ವಿಶ್ವಕಪ್​ ಆವೃತ್ತಿಗಳಲ್ಲಿ ಭಾಗವಹಿಸಿದ ಆಟಗಾರರು ಎಷ್ಟು? - T20 world cup

ABOUT THE AUTHOR

...view details