Rinku Singh Virat Kohli Bat Incident:ಟೀಂ ಇಂಡಿಯಾದ ಯುವ ಬ್ಯಾಟರ್ ರಿಂಕು ಸಿಂಗ್ ತಮ್ಮ ಸ್ಪೋಟಕ ಬ್ಯಾಟಿಂಗ್ನಿಂದಲೇ ಎದುರಾಳಿಗಳಿಗೆ ನಡುಕ ಹುಟ್ಟಿಸುತ್ತಾರೆ. ಇತ್ತೀಚೆಗೆ ಬಾಂಗ್ಲಾದೇಶ ವಿರುದ್ಧದ ಎರಡನೇ ಟಿ20ಯಲ್ಲಿ ಇದು ಸಾಬೀತಾಗಿದೆ. ಈ ಪಂದ್ಯದಲ್ಲಿ ರಿಂಕು 29 ಎಸೆತಗಳಲ್ಲಿ ತಮ್ಮ ಸ್ಪೋಟಕ ಬ್ಯಾಟಿಂಗ್ನಿಂದ 53ರನ್ ಚಚ್ಚಿದ್ದರು. ಇದರಲ್ಲಿ 5 ಬೌಂಡರಿ ಹಾಗೂ 3 ಸಿಕ್ಸರ್‌ಗಳು ಸೇರಿದ್ದವು. ಆದರೇ ಈ ಪಂದ್ಯದ ಬಳಿಕ ನಡೆದ ಸಂದರ್ಶನವೊಂದರಲ್ಲಿ ಭಾಗವಹಿಸಿದ್ದ ರಿಂಕು ಕುತೂಹಲಕಾರಿ ವಿಷಯವೊಂದನ್ನು ಹಂಚಿಕೊಂಡಿದ್ದಾರೆ.
'ನನ್ನ ಇಮೇಜ್ ಹಾಳಾಗಿದೆ':ಸಂದರ್ಶನ ವೇಳೆ ಪ್ರತ್ರಕರ್ತರೊಬ್ಬರು, ಹಿಂದೊಮ್ಮೆ ನೀವು ವಿರಾಟ್ ಕೊಹ್ಲಿ ಅವರಿಗೆ ಬ್ಯಾಟ್ ಕೇಳಿದ್ದೀರಿ, ಅಲ್ಲವೇ ಅದೇ ರೀತಿ ಯಾರದಾರು ನಿಮಗೆ ಬ್ಯಾಟ್ಕೊಡುವಂತೆ ಕೇಳಿದ್ದಾರೆಯೇ? ಎಂದು ಪ್ರಶ್ನಿಸಿದ್ದರು. ಅದಕ್ಕೆ ರಿಂಕು ಆಸಕ್ತಿಕರವಾಗಿ ಪ್ರತಿಕ್ರಿಯೆ ನೀಡಿದ್ದು, "ಬ್ಯಾಟ್ ಕೇಳುವುದರಿಂದಾಗಿ ನನ್ನ ಇಮೇಜ್ ಹಾಳಾಗಿದೆ! ಅಲ್ಲದೇ ಈತ ಯಾವಗಲೂ ಪ್ರತಿಯೊಬ್ಬರ ಬಳಿ ಬ್ಯಾಟ್ ಕೇಳುತ್ತಿರುತ್ತಾನೆ ಎಂದು ಎಲ್ಲರೂ ಮಾಡನಾಡಿಕೊಳ್ಳುತ್ತಿದ್ದಾರೆ. ಅದಕ್ಕಾಗಿ ನಾನು ಇನ್ನು ಮುಂದೆ ಯಾರ ಬಳಿಯೂ ಬ್ಯಾಟ್ ಕೇಳಲ್ಲ. ಬ್ಯಾಟ್ ಕೇಳುವುದರಿಂದಾಗಿ ನನ್ನ ಇಮೇಜ್ ಹಾಳಾಗಿದೆ." ಎಂದು ರಿಂಕು ಹೇಳಿದರು. ಏತನ್ಮಧ್ಯೆ, ಈ ಹಿಂದೆ ರಿಂಕು ಸಿಂಗ್, ಕೊಹ್ಲಿ ಮತ್ತು ನಿತೀಶ್ ರಾಣಾ ಅವರ ಬ್ಯಾಟ್‌ನೊಂದಿಗೆ ಪಂದ್ಯವನ್ನು ಆಡಿದ್ದರು.
ಆ ವಿಷಯ ಸೂರ್ಯಕುಮಾರ್ಗೆ ಗೊತ್ತು:ಬಳಿಕ ಟಿ20 ನಾಯಕ ಸೂರ್ಯ ಕುಮಾರ್ ನಿಮ್ಮನ್ನು ಬೌಲರ್ ಆಗಿಯೂ ಬಳಸಿಕೊಳ್ಳಬಹುದು ಅಲ್ಲವೇ? ಎಂದು ಕೇಳಿದ ಮತ್ತೊಂದು ಪ್ರಶ್ನೆಗೆ, "ಹೌದು. ನಾನು ಏಳು ಪಂದ್ಯಗಳಲ್ಲಿ ಮೂರು ವಿಕೆಟ್ ಪಡೆದಿದ್ದೇನೆ ಮತ್ತು ಶ್ರೀಲಂಕಾ ಸರಣಿಯಲ್ಲೂ ಬೌಲಿಂಗ್ ಮಾಡಿದ್ದೇನೆ. ಇದು ಸೂರ್ಯ ಅವರಿಗೆ ತಿಳಿದಿದೆ. ವಿಕೆಟ್ ಪಡೆಯುವ ಪರಿಸ್ಥಿತಿ ಮತ್ತು ಸಂದರ್ಭ ಎದುರಾದರೇ ನನಗೆ ಖಂಡಿತವಾಗಿ ಬಾಲಿಂಗ್ ನೀಡುತ್ತಾರೆ." ಎಂದು ರಿಂಕು ಉತ್ತರಿಸಿದರು.
ನಂತರ ಒತ್ತಡವನ್ನು ಹೇಗೆ ನಿಭಾಯಿಸುತ್ತೀರಿ ಎಂದು ಕೇಳಿದ ಪ್ರಶ್ನೆಗೆ, "ನಾನು ಯಾವಾಗಲು ಮಧ್ಯಮ ಕ್ರಮಾಂಕದಲ್ಲಿ ಬ್ಯಾಟಿಂಗ್ಗೆ ಬರುತ್ತೇನೆ. ಈ ವೇಳೆ ಯಾವುದೇ ಬ್ಯಾಟರ್ ಆಗಿದ್ದರು ಅವರ ಮೇಲೆ ಸಹಜವಾಗಿ ಒತ್ತಡ ಇದ್ದೇ ಇರುತ್ತದೆ. ಸಮಯ ಮತ್ತು ಸಂದರ್ಭ ನೋಡಿ ಸಮಯಕ್ಕೆ ಅನುಗುಣವಾಗಿ ನಾನು ಬ್ಯಾಟಿಂಗ್ ಮಾಡುತ್ತೇನೆ. ಬಾಂಗ್ಲಾ ವಿರುದ್ಧದ 2ನೇ ಟಿ20 ಪಂದ್ಯದಲ್ಲೂ ದೊಡ್ಡ ಮೊತ್ತವನ್ನು ಕಲೆ ಹಾಕಬೇಕೆಂದು ಯೋಚಿಸಿರಲಿಲ್ಲ. ಸಿಂಗಲ್ಸ್, ಡಬಲ್ಸ್ ಮೂಲಕ ತಂಡದ ಸ್ಕೋರ್ ಹೆಚ್ಚಿಸಬೇಕೆಂದು ಕಣಕ್ಕಿಳಿದಿದ್ದೆ. ಅಲ್ಲದೇ ನಾವು ಕೋಚ್ ಗಂಭೀರ್ ಅವರ ಬಳಿಯೂ ಹೇಗೆ ಬ್ಯಾಟಿಂಗ್ ಮಾಡಬೇಕೆಂದು ಚರ್ಚೆ ಮಾಡಲ್ಲ. ಅವರು ನನ್ನ ಶೈಲಿಯಲ್ಲಿ ಆಡುವಂತೆ ಸ್ವತಂತ್ರ್ಯ ನೀಡಿದ್ದಾರೆ" ಎಂದು ರಿಂಕು ತಿಳಿಸಿದರು.
ಇದನ್ನೂ ಓದಿ:ನ್ಯೂಜಿಲೆಂಡ್ - ಭಾರತ ಟೆಸ್ಟ್ ಸರಣಿ ತಂಡ ಪ್ರಕಟ: ವೇಗಿ ಜಸ್ಪ್ರೀತ್ ಬುಮ್ರಾ ಹೆಗಲಿಗೆ ದೊಡ್ಡ ಜವಾಬ್ದಾರಿ!