ಹೈದರಾಬಾದ್:ಆಸ್ಟ್ರೇಲಿಯಾದಲ್ಲಿ ನಡೆಯುತ್ತಿರುವ ಬಿಗ್ ಬ್ಯಾಷ್ ಲೀಗ್ನಲ್ಲಿ RCB ದಾಂಡಿಗ ಸಿಡಿಲಬ್ಬರದ ಪ್ರದರ್ಶನ ತೋರಿ ಗಮನ ಸೆಳೆದಿದ್ದಾರೆ.
ಶುಕ್ರವಾರ (ನಿನ್ನೆ) ಸಿಡ್ನಿ ಥಂಡರ್ಸ್ ಮತ್ತು ಹೋಬರ್ಟ್ ಹರಿಕೇನ್ಸ್ ನಡುವೆ 29ನೇ ಪಂದ್ಯ ನಡೆದಿತ್ತು. ಇದರಲ್ಲಿ ಟಾಸ್ ಸೋತು ಮೊದಲು ಬ್ಯಾಟ್ ಮಾಡಿದ್ದ ಸಿಡ್ನಿ ಥಂಡರ್ಸ್ ಡೆವಿಡ್ ವಾರ್ನರ್ (88) ಬ್ಯಾಟಿಂಗ್ ನೆರವಿನಿಂದ 6 ವಿಕೆಟ್ ನಷ್ಟಕ್ಕೆ 164 ರನ್ಗಳನ್ನು ಕಲೆಹಾಕಿತು. ಹೋಬರ್ಟ್ಸ್ ಹರಿಕೇನ್ಸ್ ತಂಡಕ್ಕೆ 165ರನ್ಗಳ ಗುರಿಯನ್ನು ನೀಡಿತು. ಇದನ್ನು ಬೆನ್ನತ್ತಿದ್ದ ಹರಿಕೇನ್ಸ್ 59 ರನ್ಗಳಿಗೆ ಮೂರು ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತ್ತು. ಈ ವೇಳೆ ಬ್ಯಾಟಿಂಗ್ಗೆ ಆಗಮಿಸಿದ ಟಿಮ್ ಡೇವಿಡ್ ಬಿರುಸಿಬ ಪ್ರದರ್ಶನ ತೋರಿದರು.
ಸಿಡ್ನಿ ಥಂಡರ್ ವಿರುದ್ಧ ಕೇವಲ 38 ಎಸೆತಗಳಲ್ಲಿ ಅಜೇಯವಾಗಿ 68 ರನ್ ಚಚ್ಚಿದರು. ಡೇವಿಡ್ ಅವರ ಈ ಸ್ಪೋಟಕ ಇನ್ನಿಂಗ್ಸ್‌ನಲ್ಲಿ 6 ಸಿಕ್ಸರ್ ಮತ್ತು 4 ಬೌಂಡರಿಗಳು ದಾಖಲಾದವು. ಇದರೊಂದಿಗೆ ತಂಡವನ್ನು ಗೆಲುವಿನ ದಡಕ್ಕೆ ಕೊಂಡೊಯ್ಯುವಲ್ಲಿ ಯಶಸ್ವಿಯಾದರು. ಸಧ್ಯ ನಡೆಯುತ್ತಿರುವ ಬಿಗ್ ಬ್ಯಾಷ್ ಲೀಗ್ನಲ್ಲಿ ಟಿಮ್ ಡೇವಿಡ್ ಅವರ ಫಾರ್ಮ್ ಅದ್ಭುತವಾಗಿದೆ. ಪ್ರಸಕ್ತ ಋತುವಿನಲ್ಲಿ ಈವರೆಗೂ ಆಡಿರುವ ಪಂದ್ಯಗಳಲ್ಲಿ 55 ಸರಾಸರಿಯಲ್ಲಿ 167 ರನ್ ಗಳಿಸಿದ್ದಾರೆ. ಡೇವಿಡ್ ತಮ್ಮ ಬ್ಯಾಟ್‌ನಿಂದ ಒಟ್ಟು 14 ಸಿಕ್ಸರ್‌ಗಳನ್ನು ಸಿಡಿಸಿದ್ದು 11 ಬೌಂಡರಿಗಳನ್ನು ಸಹ ಬಾರಿಸಿದ್ದಾರೆ.