ಕರ್ನಾಟಕ

karnataka

5 ಒಲಿಂಪಿಕ್​​ಗಳಲ್ಲಿ 10 ಪದಕ: ವಿಶ್ವದ ಮೊದಲ ಮಹಿಳಾ ಸಾಧಕಿ ರಷ್ಯಾದ ರೈಸಾ ಸ್ಮೆಟಾನಿನಾ - Raisa Smetanina

By ETV Bharat Karnataka Team

Published : Jul 11, 2024, 7:51 PM IST

ಐದು ಒಲಿಂಪಿಕ್​​ಗಳಲ್ಲಿ 10 ಪದಕಗಳನ್ನು ರಷ್ಯಾದ ರೈಸಾ ಸ್ಮೆಟಾನಿನಾ ಸಂಪಾದಿಸಿದ್ದಾರೆ. 1992 ರ ಕ್ರೀಡಾಕೂಟದ ಬಳಿಕ ಹಿಂದೆ ಸರಿದಿದ್ದಾರೆ.

ವಿಶ್ವದ ಮೊದಲ ಮಹಿಳಾ ಸಾಧಕಿ ರಷ್ಯಾದ ರೈಸಾ ಸ್ಮೆಟಾನಿನಾ
ವಿಶ್ವದ ಮೊದಲ ಮಹಿಳಾ ಸಾಧಕಿ ರಷ್ಯಾದ ರೈಸಾ ಸ್ಮೆಟಾನಿನಾ (ETV Bharat)

ಹೈದರಾಬಾದ್​​:ಜುಲೈ 26 ರಿಂದ ಪ್ಯಾರಿಸ್​​ ಒಲಿಂಪಿಕ್ಸ್​​ ಆರಂಭವಾಗಲಿದೆ. ಭಾರತ ಈ ಬಾರಿ ಹೆಚ್ಚಿನ ಪದಕ ಸಾಧನೆ ಮಾಡುವ ಗುರಿ ಹೊಂದಿದೆ. ಶೂಟಿಂಗ್​, ಬ್ಯಾಡ್ಮಿಂಟನ್​, ಕುಸ್ತಿಪಟುಗಳ ಮೇಲೆ ಹೆಚ್ಚಿನ ನಿರೀಕ್ಷೆ ಹೊಂದಲಾಗಿದೆ. ಆದರೆ, ಈವರೆಗೂ ಯಾವುದೇ ಭಾರತೀಯ ಡಬಲ್​ ಒಲಿಂಪಿಕ್​​ ಪದಕ ಸಂಪಾದಿಸಿಲ್ಲ. ಇಂಥದ್ದೊಂದು ವಿಶೇಷ ಸಾಧನೆಯನ್ನು ಮಾಡಿದ್ದು, ರಷ್ಯಾದ ರೈಸಾ ಸ್ಮೆಟಾನಿನಾ.

ರೈಸಾ ಸ್ಮೆಟಾನಿನಾ ಅವರು ಈವರೆಗೂ 10 ಪದಕಗಳನ್ನು ಸಂಪಾದಿಸಿದ್ದಾರೆ. ಈ ಸಾಧನೆ ಮಾಡಿದ ವಿಶ್ವದ ಮೊದಲ ಮಹಿಳಾ ಸಾಧಕಿ. ಕ್ರಾಸ್​ ಕಂಟ್ರಿ ರನ್ನರ್​ ಆಗಿರುವ ರೈಸಾ ಸ್ಮೆಟಾನಿನಾ ಅವರು ಐದು ಒಲಿಂಪಿಕ್ಸ್​ಗಳಲ್ಲಿ ಭಾಗವಹಿಸಿದ್ದಾರೆ. ಇದರಲ್ಲಿ 4 ಚಿನ್ನ, 5 ಬೆಳ್ಳಿ, 1 ಕಂಚಿಗೆ ಕೊರಳೊಡ್ಡಿದ್ದಾರೆ.

1976 ರಿಂದ 1992 ರ ನಡುವೆ 5 ಒಲಿಂಪಿಕ್ಸ್​ಗಳಲ್ಲಿ ರೈಸಾ ಸ್ಮೆಟಾನಿನಾ ಅವರು ಭಾಗವಹಿಸಿದ್ದಾರೆ. 1976 ರ ಚಳಿಗಾಲದ ಒಲಿಂಪಿಕ್ಸ್​ನಲ್ಲಿ ಎರಡು ಚಿನ್ನ, 1 ಬೆಳ್ಳಿ ಪದಕವನ್ನು ಗಳಿಸಿದರು. ಇದು ಅವರ ಮೊದಲ ಒಲಿಂಲಿಯಾಡ್​ ಗೇಮ್​​ ಆಗಿತ್ತು. ಐದು ಒಲಿಂಪಿಕ್ಸ್​ನಲ್ಲಿ ಐದು ಬಾರಿಯೂ ಬೆಳ್ಳಿ ಪದಕಗಳನ್ನು ಗೆದ್ದ ಮೂವರು ಒಲಿಂಪಿಯನ್‌ಗಳಲ್ಲಿ ಇವರೂ ಒಬ್ಬರು.

16 ವರ್ಷ 10 ಪದಕ ಸಾಧನೆ:ಸ್ಮೆಟಾನಿನಾ ಅವರು, 1976 ರಲ್ಲಿ 5 ಕಿಮೀ ಓಟದಲ್ಲಿ ಬೆಳ್ಳಿ ಪದಕವನ್ನು ಪಡೆಯುವ ಮೂಲಕ ತಮ್ಮ ಒಲಿಂಪಿಕ್ ಪದಕ ಬೇಟೆಯನ್ನು ಆರಂಭಿಸಿದರು. ಕೇವಲ ಒಂದು ಸೆಕೆಂಡಿನ ಅಂತರದಲ್ಲಿ ಚಿನ್ನದ ಪದಕ ಕಳೆದುಕೊಂಡಿದ್ದರು. ಮರುದಿನ ನಡೆದ 10 ಕಿಮೀ ಓಟ, 4x5 ಕಿಮೀ ರಿಲೇ ಓಟದಲ್ಲಿ ಎರಡು ಚಿನ್ನದ ಬೆಳೆ ಬೆಳೆದಿದ್ದರು.

1980 ರ ಒಲಿಂಪಿಕ್​ನಲ್ಲಿ ಸ್ಮೆಟಾನಿನಾ 5 ಕಿಮೀ ಓಟದಲ್ಲಿ ಗೆದ್ದರು. 4x5 ರಿಲೇಯಲ್ಲಿ ಬೆಳ್ಳಿಯನ್ನು ಪಡೆದರು. 1984 ರ ಒಲಿಂಪಿಕ್​​ನಲ್ಲಿ ಅವರು ಎರಡು ಬೆಳ್ಳಿ ಪದಕಗಳನ್ನು ಮತ್ತು 1988 ರ ಒಲಿಂಪಿಕ್​​ ಕೂಟದಲ್ಲಿ ಬೆಳ್ಳಿ ಮತ್ತು ಕಂಚಿನ ಪದಕಗಳನ್ನು ಗಳಿಸಿದರು. 1992 ರ ಚಳಿಗಾಲದ ಕ್ರೀಡಾಕೂಟದಲ್ಲಿ ರಿಲೇಯಲ್ಲಿ ಸ್ಮೆಟಾನಿನಾ ಅಂತಿಮ ಚಿನ್ನದ ಪದಕ ಸಾಧನೆ ಮಾಡಿದ್ದರು. ಇದು ಅವರ ಕೊನೆಯ ಒಲಿಂಪಿಕ್​​ ಕ್ರೀಡಾಕೂಟವಾಗಿತ್ತು.

ತಮ್ಮ 40ನೇ ಹುಟ್ಟುಹಬ್ಬಕ್ಕೆ ಎರಡು ವಾರಗಳಿಕ್ಕೂ ಮೊದಲು 1992 ಒಲಿಂಪಿಕ್​​ ನಡೆದಿತ್ತು. ಚಳಿಗಾಲದ ಕ್ರೀಡಾಕೂಟದ ಇತಿಹಾಸದಲ್ಲಿ ಪದಕ ಸಾಧನೆ ಮಾಡುವ ಅತ್ಯಂತ ಹಿರಿಯ ಮಹಿಳಾ ಪದಕ ವಿಜೇತೆ ಎಂಬ ದಾಖಲೆಗೆ ಪಾತ್ರರಾದರು.

ಇದನ್ನೂ ಓದಿ:ಪಾಕಿಸ್ತಾನ ಕ್ರಿಕೆಟ್​ ಆಯ್ಕೆ ಸಮಿತಿ ವಜಾ: ಟಿ20 ವಿಶ್ವಕಪ್​ನಲ್ಲಿ ಕೋಚ್​ಗಳ ಜೊತೆ ಕಿತ್ತಾಡಿದ್ದ ವೇಗಿ ಶಾಹೀನ್​ ಆಫ್ರಿದಿ - shaheen shah afridi

ABOUT THE AUTHOR

...view details