ಅಹಮದಾಬಾದ್ (ಗುಜರಾತ್):ಅಹಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಗುರುವಾರ ನಡೆದ 2024ರ ಐಪಿಎಲ್ ಪಂದ್ಯದಲ್ಲಿ ಗುಜರಾತ್ ಟೈಟಾನ್ಸ್ ವಿರುದ್ಧ ಪಂಜಾಬ್ ಕಿಂಗ್ಸ್ ಗೆಲುವು ಸಾಧಿಸಿದೆ. ಗುಜರಾತ್ ಟೈಟಾನ್ಸ್ ಅನ್ನು ಪಂಜಾಬ್ ಕಿಂಗ್ಸ್ 3 ವಿಕೆಟ್‌ಗಳಿಂದ ಮಣಿಸಿತು. ಶಶಾಂಕ್ ಸಿಂಗ್ (61*) ಹಾಗೂ ಅಶುತೋಷ್ ಶರ್ಮಾ (31) ಅವರ ಉತ್ತಮ ಬ್ಯಾಟಿಂಗ್ ನೆರವಿನಿಂದ ಪಂಜಾಬ್ ತಂಡವು ಗೆಲುವು ತನ್ನದಾಗಿಸಿಕೊಂಡಿದೆ.
ಮೊದಲು ಬ್ಯಾಟಿಂಗ್ ಮಾಡಿದ ಗುಜರಾತ್ ತಂಡವು 199 ರನ್ ಗಳಿಸಿತ್ತು. ಶುಭಮನ್ ಗಿಲ್ 89 ರನ್‌ಗಳ ಅಜೇಯ ಇನ್ನಿಂಗ್ಸ್ ಆಡಿದರೆ, ರಾಹುಲ್ ತೆವಾಟಿಯಾ ಕೂಡ 23 ರನ್‌ಗಳ ಬಿರುಸಿನ ಇನ್ನಿಂಗ್ಸ್ ಆಡಿದರು. 200 ರನ್‌ಗಳ ಟಾರ್ಗೆಟ್ ಅನ್ನು ತಲುಪಲು ಪಂಜಾಬ್ ತಂಡವು ನಿರಂತರವಾಗಿ ವಿಕೆಟ್ ಕಳೆದುಕೊಳ್ಳುತ್ತಲೇ ಸಾಗಿತು. ಆರಂಭದಲ್ಲಿ ಯಾವುದೇ ದೊಡ್ಡ ಜೊತೆಯಾಟ ತಂಡಕ್ಕೆ ಬರಲಿಲ್ಲ. ಬಳಿಕ ಉತ್ತಮ ಬ್ಯಾಟಿಂಗ್ ಮಾಡಿದ ಶಶಾಂಕ್ ಸಿಂಗ್ ಪಂಜಾಬ್ಗೆ ಬಲ ತುಂಬಿದರು. ಇವರಲ್ಲದೇ ಕೊನೆಯ ಓವರ್‌ಗಳಲ್ಲಿ ಪ್ರಭಾವಿ ಆಟಗಾರರಾಗಿ ಬಂದ ಅಶುತೋಷ್ ಶರ್ಮಾ ಬಿರುಸಿನ ಇನಿಂಗ್ಸ್ ಆಡಿ ಪಂಜಾಬ್ ಕಿಂಗ್ಸ್‌ಗೆ 3 ವಿಕೆಟ್‌ಗಳ ಜಯ ತಂದುಕೊಟ್ಟರು.
ಪಂಜಾಬ್ 70 ರನ್‌ಗಳಿಗೆ 4 ವಿಕೆಟ್ ಕಳೆದುಕೊಂಡಿತ್ತು. ಇಲ್ಲಿಂದ ಶಶಾಂಕ್ ಸಿಂಗ್ ಜವಾಬ್ದಾರಿ ವಹಿಸಿಕೊಂಡರು. ಅಶುತೋಷ್ ಅವರ 31 ರನ್‌ಗಳ ಬಿರುಸಿನ ಇನ್ನಿಂಗ್ಸ್‌ನಿಂದಾಗಿ ಪಂದ್ಯವು ಪಂಜಾಬ್ ಪರವಾಲಿತು.
ಗುಜರಾತ್ ಟೈಟಾನ್ಸ್ ಪ್ರದರ್ಶನ: ಇದಕ್ಕೂ ಮೊದಲು ಕೇವಲ 11 ರನ್ ಗಳಿಸಿದ್ದ ಗುಜರಾತ್ ಟೈಟಾನ್ಸ್ ಆರಂಭದಲ್ಲಿ ವೃದ್ಧಿಮಾನ್ ಸಹಾ ವಿಕೆಟ್ ಕಳೆದುಕೊಂಡಿತು. ಕೇನ್ ವಿಲಿಯಮ್ಸನ್ 22 ಎಸೆತಗಳಲ್ಲಿ 26 ರನ್ ಗಳಿಸಿ ಪೆವಿಲಿಯನ್‌ಗೆ ಮರಳಿದರು. ಸಾಯಿ ಸುದರ್ಶನ್ ಮತ್ತೊಮ್ಮೆ 19 ಎಸೆತಗಳಲ್ಲಿ 33 ರನ್‌ಗಳ ಉತ್ತಮ ಇನ್ನಿಂಗ್ಸ್ ಆಡಿದರು. ಮತ್ತೊಂದೆಡೆ ನಾಯಕ ಶುಭಮನ್ ಗಿಲ್ 48 ಎಸೆತಗಳಲ್ಲಿ 6 ಬೌಂಡರಿ ಹಾಗೂ 4 ಸಿಕ್ಸರ್‌ಗಳ ನೆರವಿನಿಂದ 89 ರನ್‌ಗಳ ಅಜೇಯ ಇನ್ನಿಂಗ್ಸ್ ಆಡುವ ಮೂಲಕ ಬೌಲರ್‌ಗಳನ್ನು ನಿರಂತರವಾಗಿ ಬಗ್ಗುಬಡಿದರು. ಕೊನೆಯ ಓವರ್‌ಗಳಲ್ಲಿ ರಾಹುಲ್ ತೆವಾಟಿಯಾ 8 ಎಸೆತಗಳಲ್ಲಿ 23 ರನ್‌ಗಳ ಬಿರುಸಿನ ಇನ್ನಿಂಗ್ಸ್‌ಗಳನ್ನು ಆಡಿ ಗುಜರಾತ್ ಅನ್ನು 199 ರನ್‌ಗಳ ಗುರಿ ಮುಟ್ಟಿಸಲು ನೆರವಾದರು.
ಪಂಜಾಬ್ ಕಿಂಗ್ಸ್ ಆಟ:ನಂತರ, ಪಂಜಾಬ್ ಕಿಂಗ್ಸ್ ಪರ ಶಿಖರ್ ಧವನ್ ಮತ್ತು ಜಾನಿ ಬೈರ್‌ಸ್ಟೋವ್ ಇನ್ನಿಂಗ್ಸ್ ಆರಂಭಿಸಿದರು. ಧವನ್ ಕೇವಲ 1 ರನ್ ಗಳಿಸಿ ಪೆವಿಲಿಯನ್‌ಗೆ ಮರಳಿದರು. ಜಾನಿ ಬೈರ್‌ಸ್ಟೋವ್ ಉತ್ತಮ ಬ್ಯಾಟಿಂಗ್ ಮಾಡಿದರು. ಆದರೆ, ನೂರ್ ಅಹ್ಮದ್ ಅವರ ಮಾಂತ್ರಿಕ ಎಸೆತದಲ್ಲಿ ಬೌಲ್ಡ್ ಆದರು. ಜಾನಿ 13 ಎಸೆತಗಳಲ್ಲಿ 22 ರನ್ ಗಳಿಸಿದರು. ಪ್ರಭಾಸಿಮ್ರಾನ್ ಸಿಂಗ್ 35 ರನ್ ಪೇರಿಸಿ, ನೂರ್ ಅಹ್ಮದ್ಗೆ ವಿಕೆಟ್ ಒಪ್ಪಿಸಿದರು.
ಬಳಿಕ ತಂಡ ನಿರಂತರವಾಗಿ ವಿಕೆಟ್ ಕಳೆದುಕೊಳ್ಳುತ್ತಿದ್ದರೂ ಶಶಾಂಕ್ ಸಿಂಗ್ ಮಾತ್ರ ಮತ್ತೊದೆಡೆ ಗಟ್ಟಿಯಾಗಿ ನಿಂತರು. ಅವರು 29 ಎಸೆತಗಳಲ್ಲಿ 61 ರನ್‌ಗಳ ಇನ್ನಿಂಗ್ಸ್ ಆಡುವ ಮೂಲಕ ಪಂಜಾಬ್ ಗೆಲುವಿಗೆ ಪ್ರಮುಖ ಕೊಡುಗೆ ನೀಡಿದರು. ಜೊತೆಗೆ ಪ್ರಭಾವಿ ಆಟಗಾರರಾಗಿ ಬಂದ ಅಶುತೋಷ್ ಶರ್ಮಾ 17 ಎಸೆತಗಳಲ್ಲಿ 31 ರನ್ ಗಳಿಸಿ ಬಿರುಸಿನ ಇನ್ನಿಂಗ್ಸ್ ಆಡಿದರು.
ಇದನ್ನೂ ಓದಿ:ಐಪಿಎಲ್ನಲ್ಲಿ 2ನೇ ಅತ್ಯಧಿಕ ರನ್ ದಾಖಲೆ ಬರೆದ ಕೆಕೆಆರ್: ಡೆಲ್ಲಿ ವಿರುದ್ಧ 106 ರನ್‌ಗಳ ಅಮೋಘ ಜಯ - KKR BIG WIN