ಪ್ಯಾರಿಸ್: ಭಾರತದ ಸ್ಟಾರ್ ಷಟ್ಲರ್ ಪಿ.ವಿ.ಸಿಂಧು ಗೆಲುವಿನೊಂದಿಗೆ ಪ್ಯಾರಿಸ್ ಒಲಿಂಪಿಕ್ಸ್ ಅಭಿಯಾನ ಆರಂಭಿಸಿದ್ದಾರೆ. ಇಂದು ನಡೆದ ಮಹಿಳೆಯರ ಸಿಂಗಲ್ಸ್ ಬ್ಯಾಡ್ಮಿಂಟನ್ ಪಂದ್ಯದಲ್ಲಿ ಸಿಂಧು, ಮಾಲ್ಡೀವ್ಸ್ ಆಟಗಾರ್ತಿ ಫಾತಿಮತ್ ನಬಾಹ್ ಅಬ್ದುಲ್ ರಜಾಕ್ ಅವರನ್ನು 21-9, 21-6 ನೇರ ಸೆಟ್ಗಳಿಂದ ಮಣಿಸಿದರು.
ಮೊದಲ ಸೆಟ್ನಲ್ಲಿ 13ನೇ ಶ್ರೇಯಾಂಕಿತ ಆಟಗಾರ್ತಿ ಪಿ.ವಿ.ಸಿಂಧು ಎದುರಾಳಿ ಆಟಗಾರ್ತಿಗೆ ಹಲವು ಅವಕಾಶಗಳನ್ನು ನೀಡಿದರು. ಸೆಟ್ನ ಆರಂಭದಲ್ಲಿ 3-3ರಲ್ಲಿ ಸಮಬಲಗೊಂಡಿತ್ತು. ಇದಾದ ಬಳಿಕ ಮಾಲ್ಡೀವ್ಸ್ ಆಟಗಾರ್ತಿಗೆ ಯಾವುದೇ ಅವಕಾಶ ನೀಡದ ಸಿಂಧು, ಮಧ್ಯ ವಿರಾಮದವರೆಗೂ 11-4 ಅಂಕಗಳೊಂದಿಗೆ 7 ಅಂಕಗಳ ಮುನ್ನಡೆ ಸಾಧಿಸಿದರು. ವಿರಾಮದ ನಂತರವೂ ಅದ್ಭುತ ಪ್ರದರ್ಶನ ಮುಂದುವರಿಸಿ ಮೊದಲ ಸೆಟ್ ಅನ್ನು 21-9 ಅಂತರದಿಂದ ಗೆದ್ದುಕೊಂಡರು.