Babar Azam Trolled:ಫೆ.19ರಿಂದ ಐಸಿಸಿ ಚಾಂಪಿಯನ್ಸ್ ಟ್ರೋಫಿ ಪ್ರಾರಂಭವಾಗಲಿದೆ. ಈ ಬಾರಿಯ ಟೂರ್ನಿಗೆ ಪಾಕಿಸ್ತಾನದ ಆತಿಥ್ಯವಿದೆ. ಎಲ್ಲಾ ತಂಡಗಳು ಭರ್ಜರಿ ತಯಾರಿ ನಡೆಸುತ್ತಿವೆ. ಆತಿಥೇಯ ಪಾಕಿಸ್ತಾನ ಕೂಡ ಅಭ್ಯಾಸದಲ್ಲಿ ನಿರತವಾಗಿದೆ.
ಇದರ ನಡುವೆ ಪಾಕಿಸ್ತಾನದ ಬ್ಯಾಟರ್ ಮತ್ತು ಮಾಜಿ ನಾಯಕ ಬಾಬರ್ ಅಜಮ್ ಎಕ್ಸ್ ಖಾತೆಯಲ್ಲಿ ಪೋಸ್ಟ್ವೊಂದನ್ನು ಶೇರ್ ಮಾಡಿದ್ದಾರೆ. ಇದು ಭಾರೀ ವೈರಲ್ ಆಗಿದ್ದು ಹಿಗ್ಗಾಮುಗ್ಗಾ ಟ್ರೋಲ್ ದಾಳಿಗೂ ಗುರಿಯಾಗಿದೆ.
ಬಾಬರ್ ಅಜಾಮ್ ತಮ್ಮ ಮೊಬೈಲ್ ಫೋನ್ ಕಳೆದುಕೊಂಡಿದ್ದಾರೆ. ಈ ವಿಷಯವನ್ನು ತಿಳಿಸಲು 'X'ನಲ್ಲಿ ಪೋಸ್ಟ್ ಶೇರ್ ಮಾಡಿದ್ದಾರೆ. "ನನ್ನ ಮೊಬೈಲ್ ಫೋನ್ ಕಳೆದು ಹೋಗಿದೆ. ಮೊಬೈಲ್ ಜೊತೆ ಅದರಲ್ಲಿ ಕಾಂಟ್ಯಾಕ್ಟ್ ಲೀಸ್ಟ್ ಕೂಡ ಮಿಸ್ ಆಗಿವೆ. ಆದಷ್ಟು ಬೇಗ ನಿಮ್ಮ ಸಂಪರ್ಕಕ್ಕೆ ಸಿಗುವೆ" ಎಂದು ಬರೆದಿದ್ದಾರೆ.
ಇದರ ಬೆನ್ನಲ್ಲೇ ಬಾಬರ್ ಅವರನ್ನು ಭಾರೀ ಟ್ರೋಲ್ ಮಾಡಲಾಗುತ್ತಿದೆ. ಇದಕ್ಕೆ ರೀ ಪೋಸ್ಟ್ ಮಾಡಿರುವ ಕೆಲವರು, ಟೆಸ್ಟ್ ಕ್ರಿಕೆಟ್ನಲ್ಲಿ 4ನೇ ಸ್ಥಾನವನ್ನು ಕಳೆದುಕೊಂಡಿದ್ದೀರಿ, ಏಕದಿನದಲ್ಲಿ 3ನೇ ಸ್ಥಾನ ಕಳೆದುಕೊಂಡಿದ್ದೀರಿ, ಟಿ20ಯಲ್ಲಿ ಓಪನರ್ ಸ್ಥಾನ ಕಳೆದುಕೊಂಡಿರುವಿರಿ. ಇದೀಗ ಮೊಬೈಲ್ ಫೋನ್ ಸಹ ಕಳೆದುಕೊಂಡಿದ್ದೀರಿ. ಸ್ಟೇ ಸ್ಟ್ರಾಂಗ್ ಬಾಬರ್ ಎಂದು ಕಾಲೆಳೆದಿದ್ದಾರೆ.