ಢಾಕಾ(ಬಾಂಗ್ಲಾದೇಶ): ರಾವಲ್ಪಿಂಡಿಯಲ್ಲಿ ಪಾಕಿಸ್ತಾನ ವಿರುದ್ಧ ಟೆಸ್ಟ್ ಪಂದ್ಯವನ್ನಾಡುತ್ತಿರುವ ಬಾಂಗ್ಲಾದೇಶದ ಸ್ಟಾರ್ ಆಲ್ರೌಂಡರ್ ಶಕೀಬ್ ಅಲ್ಹಸನ್ಗೆ ಸಂಕಷ್ಟ ಎದುರಾಗಿದೆ.
ಢಾಕಾ ಟ್ರಿಬ್ಯೂನ್ ಪ್ರಕಟಿಸಿದ ವರದಿಯ ಪ್ರಕಾರ, ಬಟ್ಟೆ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದ ವ್ಯಕ್ತಿಯನ್ನು ಶಕೀಬ್ ಅಲ್ ಹಸನ್ ಕೊಲೆಗೈದ ಆರೋಪ ಕೇಳಿ ಬಂದಿದೆ. ಈ ಸಂಬಂಧ ಅವರ ವಿರುದ್ಧ ಢಾಕಾ ಮೆಟ್ರೋಪಾಲಿಟನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ಕೂಡ ದಾಖಲಾಗಿದೆ.
ಜವಳಿ ಕೆಲಸಗಾರ ರುಬೆಲ್ ಇಸ್ಲಾಂ ಹತ್ಯೆ ಪ್ರಕರಣದಲ್ಲಿ ಶಕೀಬ್ ಸೇರಿದಂತೆ 500ಕ್ಕೂ ಹೆಚ್ಚಿನ ಜನರು ಭಾಗಿಯಾಗಿರುವುದಾಗಿ ಮೃತನ ತಂದೆ ರಫೀಕುಲ್ ಪ್ರಕರಣ ದಾಖಲಿಸಿದ್ದಾರೆ. ಈ ಪ್ರಕರಣದಲ್ಲಿ ಶಕಿಬ್ ಅವರನ್ನು 28ನೇ ಆರೋಪಿಯನ್ನಾಗಿ ಮಾಡಲಾಗಿದ್ದು, ಬಾಂಗ್ಲಾ ನಟ ಫಿರ್ದೌಸ್ ಅಹ್ಮದ್ 55ನೇ ಆರೋಪಿಯಾಗಿದ್ದಾರೆ. ಈ ಇಬ್ಬರೂ ಮಾಜಿ ಪ್ರಧಾನಿ ಶೇಖ್ ಹಸೀನಾ ಅವರ ಪಕ್ಷವಾಗಿದ್ದ ಬಾಂಗ್ಲಾದೇಶ ಅವಾಮಿ ಲೀಗ್ನ ಸದಸ್ಯರು. ಹಸೀನಾ ಅವರ ಹೆಸರನ್ನೂ ಕೂಡಾ ಪ್ರಕರಣದಲ್ಲಿ ಸೇರಿಸಲಾಗಿದೆ.
ವಿಶ್ವಸಂಸ್ಥೆಯ ಮಾನವ ಹಕ್ಕುಗಳ ಹೈಕಮಿಷನ್ ವರದಿ ಪ್ರಕಾರ, ಜುಲೈ 16ರಿಂದ ಆಗಸ್ಟ್ 4ರವರೆಗೆ ನಡೆದ ಗಲಭೆಯಲ್ಲಿ 400ಕ್ಕೂ ಹೆಚ್ಚು ಸಾವು ಸಂಭವಿಸಿವೆ.
ಇದನ್ನೂ ಓದಿ:ದ್ವಿಶತಕಕ್ಕೂ ಮುನ್ನ ಡಿಕ್ಲೇರ್: ಬಾಬರ್ ಮೇಲೆ ಬ್ಯಾಟ್ ಎಸೆದ ರಿಜ್ವಾನ್- ವಿಡಿಯೋ ವೈರಲ್ - Mohammed Rizwan