ಹೈದರಾಬಾದ್: ಭಾರತ ಕ್ರಿಕೆಟ್ನ ಯಶಸ್ವಿ ನಾಯಕರಲ್ಲಿ ಎಮ್ ಎಸ್ ಧೋನಿ ಕೂಡ ಒಬ್ಬರು. ಕ್ಯಾಪ್ಟನ್ ಕೂಲ್ ಹೆಸರಿನಿಂದಲೇ ಖ್ಯಾತಿ ಪಡೆದಿರುವ ಧೋನಿ ಮೂರು ಐಸಿಸಿ ಟ್ರೋಫಿಗಳನ್ನು ಗೆದ್ದ ವಿಶ್ವದ ಏಕೈಕ ನಾಯಕರಾಗಿ ದಾಖಲೆಯನ್ನು ಬರೆದಿದ್ದಿದ್ದಾರೆ. ಇದಷ್ಟೇ ಅಲ್ಲದೆ ಕ್ರಿಕೆಟ್ನಲ್ಲಿ ಬ್ಯಾಟಿಂಗ್ ಮತ್ತು ವಿಕೇಟ್ ಕೀಪಿಂಗ್ ಮೂಲಕ ಹಲವಾರು ದಾಖಲೆಗಳನ್ನು ಬರೆದಿದ್ದಾರೆ.
2020ರಲ್ಲಿ ಕ್ರಿಕೆಟ್ಗೆ ನಿವೃತ್ತಿ ಪಡೆದಿರುವ ಧೋನಿ ಸಧ್ಯ ಐಪಿಎಲ್ನಲ್ಲಿ ಸಕ್ರಿಯರಾಗಿದ್ದಾರೆ. ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು ಪ್ರತಿನಿಧಿಸುತ್ತಿದ್ದಾರೆ. ಅಂತರರಾಷ್ಟ್ರೀಯ ಕ್ರಿಕೆಟ್ನಿಂದ ದೂರ ಸರಿದು 4 ವರ್ಷಗಳು ಕಳೆದರು ಅವರ ಮಾರುಕಟ್ಟೆ ಮೌಲ್ಯದ ಮೇಲೆ ಮಾತ್ರ ಯಾವುದೇ ಪ್ರಭಾವ ಬೀರಿಲ್ಲ.
ಹೌದು, ಧೋನಿ ಈಗ ಬ್ರ್ಯಾಂಡ್ ಎಂಡಾರ್ಸ್‌ಮೆಂಟ್‌ಗಳ ಮೂಲಕ ಗಮನ ಸೆಳೆದಿದ್ದಾರೆ. ಬ್ರಾಂಡ್ ಒಪ್ಪಂದಗಳಿಗೆ ಸಹಿ ಹಾಕುವಲ್ಲಿ ಧೋನಿ, ಜನಪ್ರಿಯ ಬಾಲಿವುಡ್ ತಾರೆಗಳಾದ ಶಾರುಖ್ ಖಾನ್ ಮತ್ತು ಅಮಿತಾಬ್ ಬಚ್ಚನ್ ಅವರನ್ನು ಹಿಂದಿಕ್ಕಿದ್ದಾರೆ.
ಬ್ರಾಂಡ್ ಎಂಡಾರ್ಸ್ಮೆಂಟ್ನಲ್ಲಿ ಧೋನಿ ಟಾಪ್
ಮಾಧ್ಯಮ ವರದಿಗಳ ಪ್ರಕಾರ, ಕ್ಯಾಪ್ಟನ್ ಕೂಲ್ 2024ರ ಮೊದಲ ಆರು ತಿಂಗಳಲ್ಲಿ 42 ಬ್ರಾಂಡ್‌ಗಳೊಂದಿಗಿನ ಒಪ್ಪಂದಗಳಿಗೆ ಸಹಿ ಹಾಕಿದ್ದಾರೆ. ಇದಲ್ಲದೆ, ಬ್ರಾಂಡ್‌ಗಳನ್ನು ಅನುಮೋದಿಸುವಲ್ಲಿ ಅವರು ಶಾರುಖ್ ಖಾನ್ ಮತ್ತು ಅಮಿತಾಬ್ ಬಚ್ಚನ್‌ಗಿಂತ ಮುಂದಿದ್ದಾರೆ. ಬಾಲಿವುಡ್ ಸೂಪರ್‌ಸ್ಟಾರ್ ಅಮಿತಾಬ್ ಬಚ್ಚನ್ ಈ ವರ್ಷದ ಮೊದಲ ಆರು ತಿಂಗಳಲ್ಲಿ 41 ಬ್ರಾಂಡ್‌ಗಳೊಂದಿಗಿನ ಒಪ್ಪಂದಗಳಿಗೆ ಸಹಿ ಹಾಕಿದ್ದರೇ, ಇದೇ ವೇಳೆ ಶಾರುಖ್ ಖಾನ್ 34 ಒಪ್ಪಂದಗಳಿಗೆ ಸಹಿ ಹಾಕಿದ್ದಾರೆ. ಆದರೇ ಈ ಇಬ್ಬರು ದಿಗ್ಗಜ ನಟರು ಎಂಎಸ್ ಧೋನಿಯನ್ನು ಹಿಂದಿಕ್ಕುವಲ್ಲಿ ವಿಫಲರಾಗಿದ್ದಾರೆ.