ಕರ್ನಾಟಕ

karnataka

ETV Bharat / sports

ಐಸಿಸಿ ನೂತನ ಅಧ್ಯಕ್ಷ ಜಯ್​ ಶಾ ಸಂಭಾವನೆ ಎಷ್ಟು?: ಅವರಿಗೆ ಏನೇನೆಲ್ಲಾ ಸವಲತ್ತುಗಳಿವೆ ಗೊತ್ತಾ? - JAY SHAH ICC SALARY

ಜಯ್ ಶಾ ಮಂಗಳವಾರ ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ. ಕ್ರಿಕೆಟ್‌ನ ಅತ್ಯುನ್ನತ ಮಂಡಳಿಯ ಅಧ್ಯಕ್ಷರಾಗಿ ಆಯ್ಕೆಯಾದ ಜೈ ಶಾ ಸಂಭಾವನೆ ಎಷ್ಟು ಗೊತ್ತಾ? ಈ ಬಗ್ಗೆ ತಿಳಿದುಕೊಳ್ಳಬೇಕು ಎಂಬ ಆಸಕ್ತಿ ನಿಮಗಿದೆಯೇ ಹಾಗಾದರೆ ಈ ಸ್ಟೋರಿ ಓದಿ

ಐಸಿಸಿ ನೂತನ ಅಧ್ಯಕ್ಷ ಜಯ್​ ಶಾ ಸಂಭಾವನೆ ಎಷ್ಟು?: ಅವರಿಗೆ ಏನೇನೆಲ್ಲಾ ಸವಲತ್ತುಗಳಿವೆ ಗೊತ್ತಾ?
ಐಸಿಸಿ ನೂತನ ಅಧ್ಯಕ್ಷ ಜಯ್​ ಶಾ ಸಂಭಾವನೆ ಎಷ್ಟು?: ಅವರಿಗೆ ಏನೇನೆಲ್ಲಾ ಸವಲತ್ತುಗಳಿವೆ ಗೊತ್ತಾ? (Source: Getty Images)

By ETV Bharat Sports Team

Published : Aug 29, 2024, 7:14 AM IST

ಹೈದರಾಬಾದ್: ಬಿಸಿಸಿಐ ಕಾರ್ಯದರ್ಶಿ ಜಯ್ ಶಾ ಅವರು ಮಂಗಳವಾರ ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿ ಐಸಿಸಿ ಅಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಜಯ್​ ಶಾ ಕ್ರಿಕೆಟ್‌ನ ಅತ್ಯುನ್ನತ ಮಂಡಳಿಯ ಅಧ್ಯಕ್ಷರಾಗಿ ಆಯ್ಕೆಯಾದ ಐದನೇ ಭಾರತೀಯಗಿದ್ದಾರೆ ಎಂಬುದು ಗಮನಿಸಬೇಕಾದ ಅಂಶವಾಗಿದೆ. ಐಸಿಸಿಯ ನೂತನ ಅಧ್ಯಕ್ಷರಾಗಿ ಆಯ್ಕೆ ಆದ ಜಯ್​ ಶಾ ಅವರಿಗೆ ಸಾಮಾಜಿಕ ಜಾಲತಾಣಗಳಲ್ಲಿ ಶುಭಾಶಯಗಳ ಮಹಾಪೂರವೇ ಹರಿದು ಬರುತ್ತಿದೆ.
ಇನ್ನು ಐಸಿಸಿಯ ಹೊಸ ಅಧ್ಯಕ್ಷರಾಗಿ ಆಯ್ಕೆ ಆಗಿರುವ ಶಾಗೆ ಐಸಿಸಿ ಎಷ್ಟು ಸಂಬಳ ನೀಡಲಿದೆ? ಇಷ್ಟು ದಿನ ಬಿಸಿಸಿಐ ಕಾರ್ಯದರ್ಶಿಯಾಗಿದ್ದ ಜಯ್​ ಶಾಗೆ ಭಾರತೀಯ ಕ್ರಿಕೆಟ್ ಮಂಡಳಿ ನೀಡಿದ ಸಂಭಾವನೆ ಎಷ್ಟು? ಎಂಬ ತಿಳಿದುಕೊಳ್ಳಲು ಅವರ ಅಭಿಮಾನಿಗಳು ನೆಟ್​​​​​​ನಲ್ಲಿ ಹುಡುಕಾಟ ನಡೆಸಿದ್ದಾರೆ. ಬಿಸಿಸಿಐ ಕಾರ್ಯದರ್ಶಿಯಾಗಿ ಜಯ್ ಶಾ ಎಷ್ಟು ಸಂಬಳ ಪಡೆಯುತ್ತಿದ್ದರು. ಈಗ ಐಸಿಸಿ ಅಧ್ಯಕ್ಷರಾಗಿ ಎಷ್ಟು ಸ್ವೀಕರಿಸುತ್ತಾರೆ ಎಂದು ನೋಡುವುದಾದರೆ,

2019 ರಲ್ಲಿ ಬಿಸಿಸಿಐ ಕೊಟ್ಟ ಸಂಭಾವನೆ ಎಷ್ಟು?: ಅಧ್ಯಕ್ಷ, ಉಪಾಧ್ಯಕ್ಷ, ಖಜಾಂಚಿ ಮತ್ತು ಕಾರ್ಯದರ್ಶಿ ಹುದ್ದೆಗಳು ಬಿಸಿಸಿಐನಲ್ಲಿ ಅತ್ಯಂತ ಪ್ರತಿಷ್ಠಿತ ಹುದ್ದೆಗಳಾಗಿವೆ. ಈ ಸ್ಥಾನದಲ್ಲಿರುವವರು ಮಂಡಳಿಯ ಉನ್ನತ ಕಾರ್ಯನಿರ್ವಾಹಕರಾಗಿದ್ದಾರೆ. ಬಿಸಿಸಿಐ, ಅಂತಹ ಹಿರಿಯ ಹುದ್ದೆಗಳಿಗೆ ಯಾವುದೇ ನಿಗದಿತ ವೇತನ ನಿಗದಿ ಪಡಿಸಿಲ್ಲ. ಅವರು ಯಾವುದೇ ಮಾಸಿಕ ಅಥವಾ ವಾರ್ಷಿಕ ವೇತನವನ್ನು ಪಡೆಯುವುದಿಲ್ಲ ಎಂಬುದು ಗಮನಾರ್ಹ.

ಆದರೆ, ಬಿಸಿಸಿಐ ಅವರಿಗೆ ಭತ್ಯೆ, ಪರಿಹಾರ ಮತ್ತು ಮರುಪಾವತಿ ರೂಪದಲ್ಲಿ ಸ್ವಲ್ಪ ಮೊತ್ತವನ್ನು ಪಾವತಿಸುತ್ತದೆ. ಟೀಮ್ ಇಂಡಿಯಾಗೆ ಸಂಬಂಧಿಸಿದ ಅಂತಾರಾಷ್ಟ್ರೀಯ ಸಭೆಗಳು ಮತ್ತು ವಿದೇಶಿ ಪ್ರವಾಸಗಳಲ್ಲಿ ಭಾಗವಹಿಸಲು ಜಯ್​ ಶಾ ಅವರಿಗೆ ದಿನಕ್ಕೆ 1000 ಡಾಲರ್ ಅಂದರೆ ಭಾರತೀಯ ಲೆಕ್ಕದಲ್ಲಿ ಸುಮಾರು ರೂ. 82 ಸಾವಿರ ರೂಗಳನ್ನು ಪಾವತಿಸುತ್ತದೆ. ದೇಶೀಯ ಸಭೆಗಳಲ್ಲಿ ಭಾಗವಹಿಸಿದರೆ 40 ಸಾವಿರ ರೂ. ಸಭೆಗಳನ್ನು ಲೆಕ್ಕಿಸದೇ ಟೀಂ ಇಂಡಿಯಾ ಜೊತೆ ಭಾರತದಲ್ಲಿ ಪ್ರವಾಸ ಮಾಡಿದರೆ ದಿನಕ್ಕೆ 30 ಸಾವಿರ ರೂ. ನೀಡಲಾಗುತ್ತದೆ. ಅಷ್ಟೇ ಅಲ್ಲ, ಭಾರತ ಮತ್ತು ವಿದೇಶಗಳಲ್ಲಿ ಪ್ರಯಾಣಿಸುವಾಗ ಮಂಡಳಿಯು ಐಷಾರಾಮಿ ಹೋಟೆಲ್‌ಗಳಲ್ಲಿ ವಸತಿ ವ್ಯವಸ್ಥೆ ಮಾಡುತ್ತದೆ.

ಬಿಸಿಸಿಐ ಮಂಡಳಿಯಲ್ಲಿರುವಂತೆಯೇ ಐಸಿಸಿಯಲ್ಲಿ ಉನ್ನತ ಹುದ್ದೆಯಲ್ಲಿರುವವರಿಗೆ ವಿಶೇಷ ವೇತನವೇನೂ ಇರುವುದಿಲ್ಲ. ಆದರೆ, ಮಂಡಳಿಯು ಅವರ ಕರ್ತವ್ಯಗಳಿಗೆ ಅನುಗುಣವಾಗಿ ವಿಶೇಷ ಭತ್ಯೆ ಮತ್ತು ಸೌಲಭ್ಯಗಳನ್ನು ಒದಗಿಸುತ್ತದೆ. ICC ಗೆ ಸಂಬಂಧಿಸಿದ ಸಭೆಗಳು ಮತ್ತು ಪ್ರವಾಸಗಳಿಗೆ ಹಾಜರಾಗುವಾಗ ದೈನಂದಿನ ಭತ್ಯೆ, ಪ್ರಯಾಣ ಮತ್ತು ಹೋಟೆಲ್ ವಸತಿಗಳನ್ನು ಒದಗಿಸಲಾಗುತ್ತದೆ. ಆದರೆ, ಐಸಿಸಿ ಇದುವರೆಗೆ ಈ ಮೊತ್ತದ ಬಗ್ಗೆ ಏನನ್ನೂ ಬಹಿರಂಗಪಡಿಸಿಲ್ಲ. ಆದರೆ, ಐಸಿಸಿ ಭತ್ಯೆಗಳು ಬಹುತೇಕ ಬಿಸಿಸಿಐನಂತೆಯೇ ಇರುತ್ತವೆ ಎಂಬ ಸುದ್ದಿ ಹೊರ ಬಿದ್ದಿದೆ.

ಇದನ್ನು ಓದಿ:ರಾಷ್ಟ್ರೀಯ ಕ್ರೀಡಾ ದಿನ: ಕ್ರಿಕೆಟ್​ ಹೊರತುಪಡಿಸಿ ದೇಶದಲ್ಲಿ ಇತರೆ ಹೇಗಿದೆ ಆಟಗಳ ಸ್ಥಿತಿಗತಿ? - National Sports Day

ABOUT THE AUTHOR

...view details