ಹೈದರಾಬಾದ್:ವಾರಾಂತ್ಯವಾದ ಇಂದುಎರಡೆರಡು ಐಪಿಎಲ್ ಪಂದ್ಯಗಳು ನಡೆಯಲಿವೆ. ಮೊದಲ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ ಮತ್ತು ಚೆನ್ನೈ ಸೂಪರ್ ಕಿಂಗ್ಸ್ ತಂಡಗಳು ಮುಖಾಮುಖಿಯಾಗಲಿವೆ. ಎರಡನೇ ಪಂದ್ಯದಲ್ಲಿ ಲಕ್ನೋ ಸೂಪರ್ ಜೈಂಟ್ಸ್ ಮತ್ತು ಕೋಲ್ಕತ್ತಾ ನೈಟ್ ರೈಡರ್ಸ್ ಸೆಣಸಲಿವೆ.
ಮೊದಲ ಪಂದ್ಯ ಧರ್ಮಶಾಲಾದಲ್ಲಿ ನಡೆಯಲಿದೆ. ಕಳೆದ ಬುಧವಾರ ಚೆಪಾಕ್ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಸಿಎಸ್ಕೆ ಮತ್ತು ಪಂಜಾಬ್ ತಂಡಗಳು ಪರಸ್ಪರ ಮುಖಾಮುಖಿಯಾಗಿದ್ದವು. ಈ ಪಂದ್ಯದಲ್ಲಿ ಪಂಜಾಬ್ 7 ವಿಕೆಟ್‌ಗಳಿಂದ ಗೆಲ್ಲುವ ಮೂಲಕ ಪ್ಲೇ ಆಫ್‌ಗೆ ತಲುಪುವ ಆಸೆ ಜೀವಂತವಾಗಿರಿಸಿಕೊಂಡಿದೆ. ಇಂದು ಮತ್ತೊಮ್ಮೆ ಗೆದ್ದರೆ 10 ಅಂಕಗಳೊಂದಿಗೆ ಪಾಯಿಂಟ್ಸ್ ಪಟ್ಟಿಯಲ್ಲಿ ಚೆನ್ನೈ ಮತ್ತು ಡೆಲ್ಲಿಗೆ ಸಮನಾಗಲಿದೆ. ಮತ್ತೊಂದೆಡೆ ಸಿಎಸ್ಕೆ ಈ ಪಂದ್ಯವನ್ನು ಗೆದ್ದು ಅಂಕಪಟ್ಟಿಯಲ್ಲಿ 4ನೇ ಸ್ಥಾನಕ್ಕೇರಲು ಯೋಜನೆಗಳನ್ನು ರೂಪಿಸಿ ಕಣಕ್ಕಿಳಿಯಲಿದೆ. ಎರಡೂ ತಂಡಗಳಿಗೂ ಈ ಪಂದ್ಯ ಮಹತ್ವದ್ದಾಗಿದೆ.
ಹೆಡ್ ಟು ಹೆಡ್:ಉಭಯ ತಂಡಗಳು ಇದುವರೆಗೂ 29 ಪಂದ್ಯಗಳಲ್ಲಿ ಮುಖಾಮುಖಿಯಾಗಿವೆ. ಇದರಲ್ಲಿ ಸಿಎಸ್ಕೆ 15 ಪಂದ್ಯಗಳಲ್ಲಿ ಗೆಲುವು ಸಾಧಿಸಿದ್ದರೆ, ಪಂಜಾಬ್ ಕಿಂಗ್ಸ್ 14ರಲ್ಲಿ ಗೆದ್ದಿದೆ. ಕಳೆದ 5 ಪಂದ್ಯಗಳಲ್ಲಿ ಪಂಜಾಬ್ 4 ಬಾರಿ ಚೆನ್ನೈ ತಂಡವನ್ನು ಸೋಲಿಸಿರುವುದು ವಿಶೇಷ.
ಪಿಚ್ ವರದಿ:ಧರ್ಮಶಾಲಾದ ಪಿಚ್ ವೇಗದ ಬೌಲರ್ಗಳಿಗೆ ಹೆಚ್ಚು ಸಹಾಯಕವಾಗಿರಲಿದ್ದು ಸ್ವಿಂಗ್ ಮಾಡಲು ಸಲುಭವಾಗಲಿದೆ. ಆದಾಗ್ಯೂ ಬ್ಯಾಟರ್ಗಳು ಇಲ್ಲಿ ಉತ್ತಮ ಸ್ಕೋರ್ಗಳಿಸಬಹುದಾಗಿದೆ. ಇದುವರೆಗೂ ಈ ಮೈದಾನದಲ್ಲಿ 11 ಟಿ20 ಪಂದ್ಯಗಳು ನಡೆದಿವೆ. 200 ಈ ಮೈದಾನದಲ್ಲಿ ದಾಖಲಾದ ಹೈಸ್ಕೋರ್. ಮೊದಲ ಇನ್ನಿಂಗ್ಸ್ ಸರಾಸರಿ ಸ್ಕೋರ್ 137 ಆಗಿದ್ದು, ಎರಡನೇ ಇನ್ನಿಂಗ್ಸ್ ಸರಾಸರಿ ಸ್ಕೋರ್ 128 ಆಗಿದೆ.
ಸಂಭಾವ್ಯ ತಂಡಗಳು-ಪಂಜಾಬ್ ಕಿಂಗ್ಸ್:ಜಾನಿ ಬೈರ್‌ಸ್ಟೋವ್, ಪ್ರಭ್‌ಸಿಮ್ರಾನ್ ಸಿಂಗ್, ರಿಲೀ ರೊಸೊವ್, ಸ್ಯಾಮ್ ಕರ್ರಾನ್ (ನಾ), ಜಿತೇಶ್ ಶರ್ಮಾ (ವಿ.ಕೀ), ಶಶಾಂಕ್ ಸಿಂಗ್, ಅಶುತೋಷ್ ಶರ್ಮಾ, ಹರ್‌ಪ್ರೀತ್ ಬ್ರಾರ್, ಕಗಿಸೊ ರಬಾಡ, ಹರ್ಷಲ್ ಪಟೇಲ್, ರಾಹುಲ್ ಚಾಹರ್. (ಇಂಪ್ಯಾಕ್ಟ್ ಪ್ಲೇಯರ್: ಅರ್ಷದೀಪ್ ಸಿಂಗ್)
ಚೆನ್ನೈ ಸೂಪರ್ ಕಿಂಗ್ಸ್:ಅಜಿಂಕ್ಯ ರಹಾನೆ, ರುತುರಾಜ್ ಗಾಯಕ್ವಾಡ್ (ನಾ), ಡೆರಿಲ್ ಮಿಚೆಲ್, ಮೊಯಿನ್ ಅಲಿ, ಶಿವಂ ದುಬೆ, ರವೀಂದ್ರ ಜಡೇಜಾ, ಎಂಎಸ್ ಧೋನಿ (ವಿ.ಕೀ), ಸಮೀರ್ ರಿಜ್ವಿ, ಶಾರ್ದೂಲ್ ಠಾಕೂರ್, ರಿಚರ್ಡ್ ಗ್ಲೀಸನ್, ತುಷಾರ್ ದೇಶಪಾಂಡೆ/ಮುಖೇಶ್ ಚೌಧರಿ. (ಇಂಪ್ಯಾಕ್ಟ್ ಪ್ಲೇಯರ್: ಮತೀಶ ಪತಿರಣ)