ಹೈದರಾಬಾದ್:ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಎರಡನೇ ವೇಳಾಪಟ್ಟಿಯನ್ನು ಸೋಮವಾರ ಬಿಡುಗಡೆ ಮಾಡಲಾಗಿದೆ. ಉಳಿದ ಪಂದ್ಯಗಳು, ಸೆಮಿಫೈನಲ್, ಫೈನಲ್ ಪಂದ್ಯವನ್ನು ಘೋಷಿಸಲಾಗಿದೆ. ಫೈನಲ್ ಪಂದ್ಯವು ಮೇ 26 ರಂದು ಚೆನ್ನೈನ ಎಂಎ ಚಿದಂಬರಂ ಕ್ರೀಡಾಂಗಣದಲ್ಲಿ ನಡೆಯಲಿದೆ.
ಐಪಿಎಲ್‌ನ 17ನೇ ಆವೃತ್ತಿ ಸೇರಿದಂತೆ ಮೂರನೇ ಬಾರಿಗೆ ಚೆನ್ನೈ ಕ್ರೀಡಾಂಗಣದಲ್ಲಿ ಫೈನಲ್ ನಡೆಸಲಾಗುತ್ತಿದೆ. 2012 ರಲ್ಲಿ ನಡೆದ ಫೈನಲ್‌ನಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ಮತ್ತು ಚೆನ್ನೈ ಸೂಪರ್ ಕಿಂಗ್ಸ್ ನಡುವೆ ನಡೆದಿತ್ತು. ಗೌತಮ್ ಗಂಭೀರ್ ನೇತೃತ್ವದ ಕೆಕೆಆರ್ ಗೆಲುವು ಸಾಧಿಸಿತ್ತು. 12 ವರ್ಷಗಳ ಬಳಿಕ ಮತ್ತೆ ಚೆನ್ನೈಗೆ ಫೈನಲ್ ಪಂದ್ಯ ಆಯೋಜಿಸುವ ಅವಕಾಶ ಸಿಕ್ಕಿದೆ.
ಪಂದ್ಯಾವಳಿಯ ನಾಕೌಟ್ ಹಂತವು ಮೇ 21 ರಂದು ಪ್ರಾರಂಭವಾಗುತ್ತದೆ. ಪಾಯಿಂಟ್ ಪಟ್ಟಿಯಲ್ಲಿ ಅಗ್ರ 2 ತಂಡಗಳು ಕ್ವಾಲಿಫೈಯರ್ 1 ನಲ್ಲಿ ತಮ್ಮ ಸ್ಥಾನವನ್ನು ಫೈನಲ್‌ನಲ್ಲಿ ಕಾಯ್ದಿರಿಸಲು ಪರಸ್ಪರ ಸೆಣಸಲಿವೆ. ಎಲಿಮಿನೇಟರ್ ಪಂದ್ಯ ಮೇ 22 ರಂದು ಅಹಮದಾಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆಯಲಿದ್ದು, ಕ್ವಾಲಿಫೈಯರ್ 2 ಪಂದ್ಯ ಮೇ 24 ರಂದು ಚೆನ್ನೈನ ಚೆಪಾಕ್ ಕ್ರೀಡಾಂಗಣದಲ್ಲಿ ನಡೆಯಲಿದೆ.
ಪ್ಲೇಆಫ್ ಸೇರಿದಂತೆ ಉಳಿದ 52 ಪಂದ್ಯಗಳು ಏಪ್ರಿಲ್ 8 ರಿಂದ ಪ್ರಾರಂಭವಾಗಲಿವೆ. ಎರಡನೇ ಹಂತದ ಮೊದಲ ಪಂದ್ಯವು ಸಿಎಸ್ಕೆ ಮತ್ತು ಕೋಲ್ಕತ್ತಾ ನೈಟ್ ರೈಡರ್ಸ್ ನಡುವೆ ಚೆನ್ನೈನಲ್ಲಿ ಪಂದ್ಯ ನಡೆಯಲಿದೆ. 17ನೇ ಆವೃತ್ತಿಯಲ್ಲಿ ಲೀಗ್ ಹಂತದ 11 ಪಂದ್ಯಗಳು ಒಂದು ದಿನದಲ್ಲಿ ಎರಡು ಪಂದ್ಯಗಳು ನಡೆಯಲಿವೆ.