ಕರ್ನಾಟಕ

karnataka

ETV Bharat / sports

ರಾಜ್​ಕೋಟ್​ ಟೆಸ್ಟ್​: ಟಾಸ್ ಸೋತ​ ಇಂಗ್ಲೆಂಡ್, ಬ್ಯಾಟಿಂಗ್​ ಆರಂಭಿಸಿದ ಭಾರತ - ರಾಜ್​ಕೋಟ್​ ಟೆಸ್ಟ್

ಮೂರನೇ ಟೆಸ್ಟ್​ ಪಂದ್ಯದಲ್ಲಿ ಇಂಗ್ಲೆಂಡ್​ ವಿರುದ್ಧ ಟಾಸ್ ಗೆದ್ದು ಭಾರತ ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿದೆ. ಭಾರತ ಪರ ಟೆಸ್ಟ್​ ಕ್ರಿಕೆಟ್​ಗೆ ಧ್ರುವ್​ ಜುರಲ್ ಮತ್ತು ಸರ್ಫರಾಜ್ ಖಾನ್​ ಪದಾರ್ಪಣೆ ಮಾಡಿದ್ದಾರೆ.

ಟಾಸ್ ಗೆದ್ದ ಭಾರತ
ಟಾಸ್ ಗೆದ್ದ ಭಾರತ

By ETV Bharat Karnataka Team

Published : Feb 15, 2024, 9:23 AM IST

ರಾಜ್​ಕೋಟ್​ (ಗುಜರಾತ್​) :ಭಾರತ ಮತ್ತು ಇಂಗ್ಲೆಂಡ್​ ನಡುವಿನ ಮೂರನೇ ಟೆಸ್ಟ್​ ಪಂದ್ಯ ರಾಜ್​ಕೋಟ್​ನ ನಿರಂಜನ್​ ಶಾ ಸ್ಟೇಡಿಯಂನಲ್ಲಿ ನಡೆಯುತ್ತಿದೆ. ಟಾಸ್​ ಗೆದ್ದಿರುವ ಭಾರತ ತಂಡದ ನಾಯಕ ರೋಹಿತ್​ ಶರ್ಮಾ ಬ್ಯಾಟಿಂಗ್​ ಆಯ್ಕೆ ಮಾಡಿಕೊಂಡಿದ್ದಾರೆ. ಇಂಗ್ಲೆಂಡ್​ ಬೌಲಿಂಗ್​ ಮಾಡಲಿದೆ.

ಪ್ರಸ್ತುತ ಭಾರತ ಮತ್ತು ಇಂಗ್ಲೆಂಡ್​ ನಡುವಿನ ಐದು ಟೆಸ್ಟ್‌ಗಳ ಸರಣಿಯಲ್ಲಿ ಎರಡೂ ತಂಡಗಳು ಸಮಬಲ ಸಾಧಿಸಿವೆ. ಹೈದರಾಬಾದ್ ಟೆಸ್ಟ್‌ನಲ್ಲಿ ಇಂಗ್ಲೆಂಡ್ 28 ರನ್‌ಗಳಿಂದ ಭಾರತವನ್ನು ಸೋಲಿಸಿದರೆ, ವಿಶಾಖಪಟ್ಟಣದಲ್ಲಿ ನಡೆದ ಎರಡನೇ ಟೆಸ್ಟ್‌ನಲ್ಲಿ ಭಾರತ 106 ರನ್‌ಗಳಿಂದ ಗೆಲುವು ಸಾಧಿಸಿದೆ. ಮೂರನೇ ಟೆಸ್ಟ್​ ಪಂದ್ಯದ ಗೆಲುವಿಗಾಗಿ ಎರಡು ತಂಡಗಳು ಪ್ರಬಲ ಪೈಪೋಟಿ ನಡೆಸಲಿವೆ. ಅಲ್ಲದೇ ಎರಡು ತಂಡಗಳಲ್ಲಿ ಕೆಲ ಆಟಗಾರರ ಬದಲಾವಣೆ ಮಾಡಲಾಗಿದೆ.

ಟೀಮ್​ ಇಂಡಿಯಾ ಪರ ಯುವ ಆಟಗಾರ ಧ್ರುವ್​ ಜುರಲ್ ಮತ್ತು ಸರ್ಫರಾಜ್ ಖಾನ್​ ​ಟೆಸ್ಟ್​ ಕ್ರಿಕೆಟ್​ಗೆ ಪದಾರ್ಪಣೆ ಪಂದ್ಯವಾಡುತ್ತಿದ್ದು, ಜುರಲ್​ ವಿಕೆಟ್​ ಕೀಪರ್​ ಜವಾಬ್ದಾರಿ ಹೊತ್ತಿಕೊಂಡಿದ್ದಾರೆ. ಹೀಗಾಗಿ ಕೆ.ಎಸ್​ ಭರತ್​ ಅವರು ಹೊರಗುಳಿದಿದ್ದಾರೆ. ತಂಡಕ್ಕೆ ಸ್ಟಾರ್​ ಆಲ್ ರೌಂಡರ್​ ರವೀಂದ್ರ ಜಡೇಜಾ ಗಾಯದಿಂದ ಗುಣಮುಖರಾಗಿ ಮರಳಿದ್ದಾರೆ. ಇಂಗ್ಲೆಂಡ್​ ಪರ ವೇಗದ ಬೌಲರ್​ ಮಾರ್ಕ್ ವುಡ್ ಇಂದಿನ ಪಂದ್ಯದಲ್ಲಿ ಆಡುತ್ತಿದ್ದಾರೆ.

ಇಂಗ್ಲೆಂಡ್​ ತಂಡದ ನಾಯಕ ಬೆನ್​​ ಸ್ಟೋಕ್​ ಅವರು ಇಂದು 100ನೇ ಟೆಸ್ಟ್​ ಪಂದ್ಯವನ್ನು ಆಡುತ್ತಿದ್ದಾರೆ. 100ನೇ ಟೆಸ್ಟ್​ ಆಡುತ್ತಿರುವ ಆಟಗಾರರಲ್ಲಿ ಬೆನ್​ ಸ್ಟೋಕ್​​ 76ನೇ ಆಟಗಾರರಾಗಿದ್ದಾರೆ. ಇಂಗ್ಲೆಂಡ್​ ತಂಡ ಭಾರತೀಯರಿಗೆ ಪ್ರಬಲ ಪೈಪೋಟಿ ನೀಡುತ್ತಿದ್ದು, ಈ ಟೆಸ್ಟ್​ ಗೆದ್ದು ಮುನ್ನಡೆ ಸಾಧಿಸುವ ಹಂಬಲದಲ್ಲಿದ್ದಾರೆ. ಅತ್ತ ರೋಹಿತ್​ ಪಡೆ ಕೂಡಾ ಈ ಪಂದ್ಯವನ್ನು ಗೆದ್ದು ಮುನ್ನಡೆ ಸಾಧಿಸಲು ಎಲ್ಲ ರೀತಿಯ ತಯಾರಿ ಮಾಡಿಕೊಂಡಿದೆ.

ತಂಡಗಳು : ಭಾರತ : ಯಶಸ್ವಿ ಜೈಸ್ವಾಲ್, ರೋಹಿತ್ ಶರ್ಮಾ(ನಾಯಕ), ಶುಭಮನ್ ಗಿಲ್, ರಜತ್ ಪಾಟಿದಾರ್, ಸರ್ಫರಾಜ್ ಖಾನ್, ರವೀಂದ್ರ ಜಡೇಜಾ, ಧ್ರುವ್ ಜುರೆಲ್(ವಿಕೆಟ್​ ಕೀಪರ್​), ರವಿಚಂದ್ರನ್ ಅಶ್ವಿನ್, ಕುಲದೀಪ್ ಯಾದವ್, ಜಸ್ಪ್ರೀತ್ ಬುಮ್ರಾ, ಮೊಹಮ್ಮದ್ ಸಿರಾಜ್

ಇಂಗ್ಲೆಂಡ್ : ಝಾಕ್ ಕ್ರಾಲಿ, ಬೆನ್ ಡಕೆಟ್, ಒಲ್ಲಿ ಪೋಪ್, ಜೋ ರೂಟ್, ಜಾನಿ ಬೈರ್‌ಸ್ಟೋ, ಬೆನ್ ಸ್ಟೋಕ್ಸ್(ನಾಯಕ), ಬೆನ್ ಫೋಕ್ಸ್(ವಿಕೆಟ್​ ಕೀಪರ್​), ರೆಹಾನ್ ಅಹ್ಮದ್, ಟಾಮ್ ಹಾರ್ಟ್ಲಿ, ಮಾರ್ಕ್ ವುಡ್, ಜೇಮ್ಸ್ ಆಂಡರ್ಸನ್

ಇದನ್ನೂ ಓದಿ :500 ವಿಕೆಟ್​: ರಾಜ್​ಕೋಟ್​ನಲ್ಲಿ ಇತಿಹಾಸ ಬರೆಯಲಿರುವ ಸ್ಪಿನ್​ ಜಾದೂಗಾರ ಅಶ್ವಿನ್​

ABOUT THE AUTHOR

...view details