ಮುಂಬೈ (ಮಹಾರಾಷ್ಟ್ರ) :ಸಿಡಿಲ ಮರಿ ಅಭಿಷೇಕ್ ಶರ್ಮಾರ ಅಬ್ಬರದ ಬ್ಯಾಟಿಂಗ್ನಿಂದಾಗಿ ಇಂಗ್ಲೆಂಡ್ ವಿರುದ್ಧದ ಐದನೇ ಮತ್ತು ಕೊನೆಯ ಟಿ20 ಪಂದ್ಯದಲ್ಲಿ ಭಾರತ ತಂಡ 150 ರನ್ಗಳಿಂದ ಗೆಲುವು ಸಾಧಿಸಿತು. ಇದರಿಂದ ಸರಣಿಯನ್ನು 4-1 ರಲ್ಲಿ ತನ್ನದಾಗಿಸಿಕೊಂಡಿತು.
ಮೊದಲು ಬ್ಯಾಟ್ ಮಾಡಿದ ಭಾರತ ತಂಡ ಅಭಿಷೇಕ್ ಶರ್ಮಾರ ಶತಕದ ನೆರವಿನಿಂದ 9 ವಿಕೆಟ್ಗೆ 247 ರನ್ ಬೃಹತ್ ಮೊತ್ತ ದಾಖಲಿಸಿತು. ಇದಕ್ಕುತ್ತರವಾಗಿ ಆಂಗ್ಲ ಪಡೆಯು ಬ್ಯಾಟಿಂಗ್ ವೈಫಲ್ಯದಿಂದ 10.3 ಓವರ್ಗಳಲ್ಲಿ 97 ರನ್ಗೆ ಸರ್ವಪತನ ಕಂಡು ಹೀನಾಯ ಸೋಲೊಪ್ಪಿಕೊಂಡಿತು.
ಅಭಿಷೇಕ್ ಆಟಕ್ಕೆ ಇಂಗ್ಲೆಂಡ್ ತತ್ತರ :ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ನೆರೆದಿದ್ದ ಕ್ರಿಕೆಟ್ ಅಭಿಮಾನಿಗಳಿಗೆ ಅಭಿಷೇಕ್ ಶರ್ಮಾ ರಸದೌತಣ ಉಣಬಡಿಸಿದರು. ಕ್ರೀಡಾಂಗಣದ ಮೂಲೆಮೂಲೆಗೂ ಚೆಂಡನ್ನು ಬಡಿದಟ್ಟಿದ ಎಡಗೈ ಬ್ಯಾಟರ್ ದಾಖಲೆಯ ಶತಕ ಬಾರಿಸಿದರು. 54 ಎಸೆತಗಳಲ್ಲಿ 135 ರನ್ ಗಳಿಸಿದರು. ಇದರಲ್ಲಿ 13 ಭರ್ಜರಿ ಸಿಕ್ಸರ್, 7 ಬೌಂಡರಿಗಳಿದ್ದವು.
ಅಭಿಷೇಕ್ ಆಟಕ್ಕೆ ಇಂಗ್ಲೆಂಡ್ ತಂಡದ ಆರೂ ಬೌಲರ್ಗಳು ದಂಡಿಸಿಕೊಂಡರು. ಅದರಲ್ಲೂ ಜೋಫ್ರಾ ಆರ್ಚರ್ 4 ಓವರ್ಗಳಲ್ಲಿ 55 ರನ್ ಚಚ್ಚಿಸಿಕೊಂಡು ದುಬಾರಿಯಾದರು. ಪ್ರತಿ ಬೌಲರ್ನ ಓವರ್ನಲ್ಲಿ ಕನಿಷ್ಠ ಒಂದು ಬೌಂಡರಿ, ಸಿಕ್ಸರ್ ಬಾರಿಸಿದರು. ಬೌಲಿಂಗ್ನಲ್ಲೂ ಮಿಂಚಿದ ಯುವ ಕ್ರಿಕೆಟಿಗ 2 ವಿಕೆಟ್ ಕಿತ್ತು ತಾನೊಬ್ಬ ಆಲ್ರೌಂಡರ್ ಎಂಬುದನ್ನು ಸಾಬೀತುಪಡಿಸಿದರು.