India vs England 2nd ODI: ಚಾಂಪಿಯನ್ಸ್ ಟ್ರೋಫಿಗೂ ಮೊದಲು ಭಾರತ ಮತ್ತು ಇಂಗ್ಲೆಂಡ್ ತಂಡಗಳು ಮೂರು ಪಂದ್ಯಗಳ ಏಕದಿನ ಸರಣಿ ಆಡುತ್ತಿವೆ. ಗುರುವಾರ ನಡೆದಿದ್ದ ಮೊದಲ ಪಂದ್ಯದಲ್ಲಿ ರೋಹಿತ್ ಸೇನೆ ಆಂಗ್ಲರನ್ನು ಮಣಿಸಿ 1-0 ಅಂತರದಿಂದ ಸರಣಿಯಲ್ಲಿ ಮುನ್ನಡೆ ಸಾಧಿಸಿದೆ. ಇದೀಗ ಎರಡನೇ ಪಂದ್ಯಕ್ಕಾಗಿ ತಂಡಗಳು ಸಜ್ಜಾಗಿವೆ.
ಈ ಪಂದ್ಯಕ್ಕೆ ಒಡಿಶಾದ ಬಾರಾಬತಿ ಮೈದಾನ ಆತಿಥ್ಯ ವಹಿಸಿಕೊಂಡಿದೆ. 6 ವರ್ಷಗಳ ನಂತರ ಮೊದಲ ಬಾರಿಗೆ ಇಲ್ಲಿ ಏಕದಿನ ಪಂದ್ಯ ನಡೆಯುತ್ತಿದೆ. ಟೀಂ ಇಂಡಿಯಾ ಇಲ್ಲಿ ಆಡಿರುವ ಹೆಚ್ಚಿನ ಪಂದ್ಯಗಳಲ್ಲಿ ಗೆಲುವು ಸಾಧಿಸಿ ಪ್ರಾಬಲ್ಯ ಮೆರೆದಿದೆ.
ಕಟಕ್ನಲ್ಲಿ ಟೀಂ ಇಂಡಿಯಾದ ದಾಖಲೆ:ಬಾರಾಬತಿ ಮೈದಾನದಲ್ಲಿ ಭಾರತ ಒಟ್ಟು 17 ಪಂದ್ಯಗಳನ್ನು ಆಡಿದೆ. ಇದರಲ್ಲಿ 13 ಬಾರಿ ಜಯಭೇರಿ ಬಾರಿಸಿದೆ. 4 ಪಂದ್ಯಗಳಲ್ಲಿ ಮಾತ್ರ ಹಿನ್ನಡೆ ಸಾಧಿಸಿದೆ. ಆದರೆ 2007ರಿಂದ 2019ರವರೆಗೆ ಭಾರತ ಈ ಮೈದಾನದಲ್ಲಿ ಆಡಿರುವ ಏಳು ಏಕದಿನ ಪಂದ್ಯದಲ್ಲಿ ಒಮ್ಮೆಯೂ ಸೋಲನುಭವಿಸಿಲ್ಲ.
ಹೆಡ್ ಟು ಹೆಡ್:ಭಾರತ ಮತ್ತು ಇಂಗ್ಲೆಂಡ್ ತಂಡಗಳು ಈವರೆಗೆ ಒಟ್ಟು 108 ಏಕದಿನ ಪಂದ್ಯಗಳಲ್ಲಿ ಮುಖಾಮುಖಿಯಾಗಿವೆ. ಇವುಗಳಲ್ಲಿ ಇಂಗ್ಲೆಂಡ್ 44 ಬಾರಿ ಗೆಲುವು ಸಾಧಿಸಿದ್ದರೆ, ಭಾರತ 58 ಪಂದ್ಯಗಳನ್ನು ಗೆದ್ದುಕೊಂಡು ಆಂಗ್ಲರ ವಿರುದ್ಧ ಪ್ರಾಬಲ್ಯ ಮೆರೆದಿದೆ. ಉಳಿದಂತೆ ಈ ಎರಡೂ ತಂಡಗಳ ನಡುವಿನ 3 ಪಂದ್ಯಗಳು ಡ್ರಾದಲ್ಲಿ ಕೊನೆಗೊಂಡರೆ, 2 ಪಂದ್ಯಗಳು ರದ್ದಾಗಿವೆ.
IND vs ENG ODI ನೇರಪ್ರಸಾರ, ಲೈವ್ ಸ್ಟ್ರೀಮಿಂಗ್ ವಿವರ: