ಹೈದರಾಬಾದ್: ಫೆಬ್ರವರಿ 19ರಿಂದ ಪ್ರತಿಷ್ಠಿ ಐಸಿಸಿ ಚಾಂಪಿಯನ್ಸ್ ಟ್ರೋಫಿ ಪ್ರಾರಂಭವಾಗಲಿದೆ. ಒಟ್ಟು 15 ದಿನಗಳ ಕಾಲ ನಡೆಯಲಿರುವ ಈ ಸರಣಿಯಲ್ಲಿ ಭಾರತ ಸೇರಿ 8 ತಂಡಗಳು ಭಾಗವಹಿಸುತ್ತಿವೆ. ಪಾಕಿಸ್ತಾನ ಇದರ ಆತಿಥ್ಯ ವಹಿಸಿಕೊಂಡಿದೆ. ಭಾರತ ಹೊರತು ಪಡಿಸಿ ಎಲ್ಲಾ ತಂಡಗಳು ಪಾಕಿಸ್ತಾನದಲ್ಲಿ ಪಂದ್ಯಗಳನ್ನು ಆಡಲಿದೆ.
ಆದ್ರೆ ಭದ್ರತಾ ದೃಷ್ಟಿಯಿಂದಾಗಿ ಭಾರತ ಪಾಕಿಸ್ತಾನಕ್ಕೆ ತೆರಳಲು ಹಿಂದೇಟು ಹಾಕಿದ್ದು ಹೈಬ್ರಿಡ್ ಮಾದರಿಯಲ್ಲಿ ಪಂದ್ಯಗಳು ನಡೆಯಲಿವೆ. ಅಂದರ ಭಾರತ ಆಡುವ ಎಲ್ಲಾ ಪಂದ್ಯಗಳು ಪಾಕಿಸ್ತಾನದ ಬದಲಿಗೆ ದುಬೈನಲ್ಲಿ ನಡೆಯಲಿವೆ. ಒಂದು ವೇಳೆ ಭಾರತ ಫೈನಲ್ ತಲುಪುವಲ್ಲಿ ವಿಫಲವಾದ್ರೆ ಅಂತಿಮ ಪಂದ್ಯವನ್ನು ಪಾಕಿಸ್ತಾನದಲ್ಲೇ ಆಡಲಾಗುತ್ತದೆ.
ಈ ಸರಣಿಯಲ್ಲಿ ಭಾರತ ತನ್ನ ಮೊದಲ ಪಂದ್ಯವನ್ನು ಬಾಂಗ್ಲಾದೇಶ ವಿರುದ್ಧ ಫೆ.20 ರಂದು ಆಡಲಿದೆ. ನಂತರ ಫೆ.23ಕ್ಕೆ ಪಾಕಿಸ್ತಾನ, ಮಾರ್ಚ್ 2ಕ್ಕೆ ನ್ಯೂಜಿಲೆಂಡ್ ವಿರುದ್ಧ ಆಡಲಿದೆ. ಆದ್ರೆ ಚಾಂಪಿಯನ್ಸ್ ಟ್ರೋಫಿ ಆರಂಭಕ್ಕೂ ಮುನ್ನವೇ ಭಾರತಕ್ಕೆ ಸಂಕಷ್ಟ ಎದುರಾಗಿದೆ. ಭಾರತದ ಸ್ಟಾರ್ ಬೌಲರ್ ಆಗಿರುವ ಜಸ್ಪ್ರೀತ್ ಬುಮ್ರಾ ಈ ಸರಣಿಯಿಂದಲೂ ಹೊರಗುಳಿಯಲಿದ್ದಾರೆ ಎಂದು ವರದಿಯಾಗಿದೆ.
ಹೌದು, ಬಾರ್ಡರ್ ಗವಾಸ್ಕರ್ ಟ್ರೋಫಿಯಲ್ಲಿ ಭರ್ಜರಿ ಪ್ರದರ್ಶನ ತೋರಿದ್ದ ಬುಮ್ರಾ ಕೊನೆಯ ಪಂದ್ಯದಲ್ಲಿ ಬೆನ್ನಿನ ಸ್ನಾಯು ಸೆಳೆತಕ್ಕೆ ತುತ್ತಾಗಿ ಪಂದ್ಯದ ಅರ್ಧದಲ್ಲೇ ಮೈದಾನವನ್ನು ತೊರೆದಿದ್ದರು. ಇದೇ ಕಾರಣಕ್ಕಾಗಿ ಇಂಗ್ಲೆಂಡ್ ವಿರುದ್ಧ ನಡೆಯಲಿರುವ ಏಕದಿನ ಮತ್ತು ಟಿ20 ಸರಣಿಯಿಂದಲೂ ಬುಮ್ರಾಗೆ ವಿಶ್ರಾಂತಿ ನೀಡಲಾಗಿದೆ. ಸಧ್ಯ ಅವರ ಬೆನ್ನು ನೋವಿನ ಸಮಸ್ಯೆ ಗ್ರೇಡ್1 ಹಂತದಲ್ಲಿದೆ. ಸಧ್ಯ ಅವರು ಇದರಿಂದ ಚೇತರಿಸಿಕೊಳ್ಳಲು 3 ವಾರಗಳ ಸಮಯ ಬೇಕಾಗುತ್ತದೆ ಎಂದು ವರದಿ ಆಗಿದೆ.