ಕರ್ನಾಟಕ

karnataka

ETV Bharat / sports

w,w,w,w,w,w,w ; ವಾರೆವ್ಹಾ! 7 ವಿಕೆಟ್​ ಪಡೆದ ವಾಷಿಂಗ್ಟನ್​ ಸುಂದರ್​: 259ಕ್ಕೆ ಕಿವೀಸ್​ ಆಲೌಟ್!!

ಕಿವೀಸ್​ ವಿರುದ್ಧದ 2ನೇ ಟೆಸ್ಟ್​ ಪಂದ್ಯದಲ್ಲಿ ವಾಷ್ಂಗ್ಟನ್​ ಸುಂದರ್​ 7 ವಿಕೆಟ್​ ಪಡೆಯುವ ಮೂಲಕ ಅದ್ಭುತ ಬೌಲಿಂಗ್​ ಮೋಡಿ ಮಾಡಿದ್ದಾರೆ.

ವಾಷಿಂಗ್ಟ್​ನ್ ಸುಂದರ್​
ವಾಷಿಂಗ್ಟ್​ನ್ ಸುಂದರ್​ (IANS)

By ETV Bharat Sports Team

Published : 4 hours ago

IND vs NZ 2nd Test: ಪುಣೆಯಲ್ಲಿ ನಡೆಯುತ್ತಿರುವ ಭಾರತ ವಿರುದ್ಧದ ಎರಡನೇ ಟೆಸ್ಟ್ ಪಂದ್ಯದ ಮೊದಲ ಇನ್ನಿಂಗ್ಸ್​ನಲ್ಲಿ ಪ್ರವಾಸಿ ನ್ಯೂಜಿಲೆಂಡ್ ತಂಡ 259 ರನ್ ಗಳಿಗೆ ಆಲೌಟಾಗಿದೆ. ಭಾರತದ ಸ್ಪಿನ್​ ದಾಳಿಗೆ ಸಿಲುಕಿದ ಕಿವೀಸ್​ ಪಡೆ ಅಲ್ಪಮೊತ್ತಕ್ಕೆ ಕುಸಿದಿದೆ. ಅದರಲ್ಲೂ ಸ್ಪಿನ್ನರ್​ ವಾಷಿಂಗ್ಟನ್​ ಸುಂದರ್​ ತಮ್ಮ ಮಾರಕ ಬೌಲಿಂಗ್​ನಿಂದ ಏಳು ವಿಕೆಟ್​ಗಳನ್ನು ಉರುಳಿಸಿದರೆ, ರವಿಚಂದ್ರನ್ ಅಶ್ವಿನ್ 3 ವಿಕೆಟ್ ಪಡೆದರು.

ಈ ಪಂದ್ಯದಲ್ಲಿ ಟಾಸ್ ಗೆದ್ದ ನ್ಯೂಜಿಲೆಂಡ್ ನಾಯಕ ಟಾಮ್ ಲ್ಯಾಥಮ್ ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡರು. ಪಿಚ್ ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ಹೇಳಿದ್ದರು.

ಭಾರತ ಕೂಡ ಮೂರು ಬದಲಾವಣೆಗಳೊಂದಿಗೆ ಕಣಕ್ಕೆ ಇಳಿದಿದೆ. ಕೆಎಲ್ ರಾಹುಲ್, ಕುಲದೀಪ್ ಯಾದವ್ ಮತ್ತು ಮೊಹಮ್ಮದ್ ಸಿರಾಜ್ ಬದಲಿಗೆ ಶುಭಮನ್ ಗಿಲ್, ವಾಷಿಂಗ್ಟನ್ ಸುಂದರ್ ಮತ್ತು ಆಕಾಶದೀಪ್​ರನ್ನು ತಂಡಕ್ಕೆ ಸೇರಿಕೊಂಡಿದೆ.

ಆರಂಭದಲ್ಲಿ ಕಿವೀಸ್​ ಪಡೆಗೆ ಅಶ್ವಿನ್​ ಶಾಕ್​ ನೀಡಿದ್ದರು. 32 ರನ್​ಗಳಿಸಿದ್ದ ಲ್ಯಾಥಮ್​ ಅವರನ್ನು ಅಶ್ವಿನ್​ ತಮ್ಮ ಸ್ಪಿನ್​ ಬಲೆಗೆ ಬೀಳಿಸಿದ್ದರು. ಬಳಿಕ ತಂಡ 76 ರನ್​ಗಳಿಸಿದ್ದ ವೇಳೆ ಅಶ್ವಿನ್​ ವಿಲ್​ ಯಂಗ್​ (18) ಅವರ ವಿಕೆಟ್​ ಉರುಳಿಸಿದರು. ನಂತರ ಚೇತರಿಸಿಕೊಂಡ ಕಿವೀಸ್​ ಬ್ಯಾಟರ್​ಗಳು​, ರನ್​ಗಳಿಸಲಾರಂಭಿಸಿದರು ತಂಡದ ಸ್ಕೋರ್​ 138 ಆಗುವವರೆಗೂ ವಿಕೆಟ್​ ಕಾಯ್ದುಕೊಂಡಿದ್ದರು. 76 ರನ್​ಗಳಿಸಿ ಶತಕದ ಸಮೀಪಿಸುತ್ತಿದ್ದ ಕಾನ್ವೆಗೆ ಅಶ್ವಿನ್ ಶಾಕ್​ ನೀಡಿದರು. ಅವರ ​ವಿಕೆಟ್​ ಪಡೆಯುವ ಮೂಲಕ ಶತಕದಾಟಕ್ಕೆ ಬ್ರೇಕ್​ ಹಾಕಿದರು. ಆರಂಭಿಕ 3 ವಿಕೆಟ್​ ಪಡೆದ ಅಶ್ವಿನ್​ ಕಿವೀಸ್​ ರನ್​ ಓಟಕ್ಕೆ ಬ್ರೇಕ್​ ಹಾಕಿದರು.

​ಆ ಬಳಿಕ ವಾಷಿಂಗ್ಟನ್ ಸುಂದರ್ ಹವಾ ಶುರುವಾಯಿತು. ಬಿಗಿಯಾದ ಬೌಲಿಂಗ್​ನಿಂದ ಎದುರಾಳಿ ಬ್ಯಾಟರ್​ಗಳನ್ನು ಸದೆಬಡಿದ ಸುಂದರ್​ ಉಳಿದ ಏಳು ವಿಕೆಟ್​ಗಳನ್ನು ತಮ್ಮ ಖಾತೆಗೆ ಸೇರಿಸಿಕೊಂಡರು. ಹಿಂದಿನ ಪಂದ್ಯದಲ್ಲಿ ಶತಕ ಸಿಡಿಸಿದ್ದ ರಚಿನ್ ಈ ಪಂದ್ಯದಲ್ಲೂ ಅರ್ಧಶತಕ ಸಿಡಿಸಿದರೆ, ಡೆವೊನ್ ಕಾನ್ವೆ (76) ಅಗ್ರ ಸ್ಕೋರರ್ ಎನಿಸಿಕೊಂಡರು. ಕಿವೀಸ್ 62 ರನ್‌ಗಳಲ್ಲಿ ತನ್ನ ಕೊನೆಯ ಏಳು ವಿಕೆಟ್‌ಗಳನ್ನು ಕಳೆದುಕೊಂಡಿತು. ಈ ಎಲ್ಲಾ ವಿಕೆಟ್​ಗಳು ಸುಂದರ್ ಹೆಸರಿಗೆ ಸೇರಿದವು.

7 ವಿಕೆಟ್​: ಆರಂಭದಲ್ಲಿ ವಾಷಿಂಗ್ಟನ್​ ಕಿವೀಸ್​ ವಿರುದ್ಧದ ಸರಣಿಗೆ ಆಯ್ಕೆಯಾಗಿರಲಿಲ್ಲ. ಆದರೆ ಅನಿರೀಕ್ಷಿತವಾಗಿ ಮೊದಲ ಟೆಸ್ಟ್‌ನಲ್ಲಿ ಭಾರತ ಸೋಲಿನ ನಂತರ ಬಿಸಿಸಿಐ ಸುಂದರ್ ಅವರನ್ನು ಎರಡನೇ ಮತ್ತು ಮೂರನೇ ಟೆಸ್ಟ್‌ಗೆ ಆಯ್ಕೆ ಮಾಡಿತು. ಎರಡನೇ ಟೆಸ್ಟ್‌ನಲ್ಲಿ ಅಂತಿಮ ತಂಡದಲ್ಲಿ ಸುಂದರ್​ಗೆ ಸ್ಥಾನ ನೀಡಲಾಯಿತು. ಅದಕ್ಕೆ ತಕ್ಕಂತೆ ವಾಷಿಂಗ್ಟನ್ ಸುಂದರ್ ಏಳು ವಿಕೆಟ್ ಪಡೆದು ಮ್ಯಾನೇಜ್‌ಮೆಂಟ್‌ನ ನಂಬಿಕೆಯನ್ನು ಉಳಿಸಿಕೊಂಡಿದ್ದಾರೆ.

ಭಾರತ ಸ್ಕೋರ್​: ಮೊದಲದಿನ ಮುಕ್ತಾಯಕ್ಕೆ ಭಾರತ ತನ್ನ ಮೊದಲ ಇನ್ನಿಂಗ್ಸ್​ನಲ್ಲಿ 1 ವಿಕೆಟ್​ ಕಳೆದುಕೊಂಡು 16 ರನ್​ ಕಲೆಹಾಕಿದೆ. ಆರಂಭಿಕ ಬ್ಯಾಟರ್​ ರೋಹಿತ್​ ಶರ್ಮಾ ಶೂನ್ಯಕ್ಕೆ ಪೆವಿಲಿಯನ್​ ಸೇರಿದ್ದಾರೆ. ಶುಭಮನ್​ ಗಿಲ್​ (10) ಮತ್ತು ಜೈಸ್ವಾಲ್​ (6) ಎರಡನೇ ದಿನದಾಟಕ್ಕೆ ಕ್ರೀಸ್​ ಕಾಯ್ದುಕೊಂಡಿದ್ದಾರೆ.

ಇದನ್ನೂ ಓದಿ:ಮೊಟ್ಟ ಮೊದಲ IPL ವಿಕೆಟ್​ ಪಡೆದ ಬೌಲರ್ ಯಾರು?: ಆರ್​ಸಿಬಿ ಹೆಸರಲ್ಲಿದೆ ಈ ದಾಖಲೆ

ABOUT THE AUTHOR

...view details