Rishabh Pant: ನ್ಯೂಜಿಲೆಂಡ್ ವಿರುದ್ಧ ನಡೆಯುತ್ತಿರುವ ಮೊದಲ ಟೆಸ್ಟ್ನ ನಾಲ್ಕನೇ ದಿನದಾಟದಲ್ಲಿ ವಿಕೆಟ್ ಕೀಪರ್ ಕಮ್ ಬ್ಯಾಟರ್ ರಿಷಭ್ ಪಂತ್ 99 ರನ್‌ಗಳಿಗೆ ಔಟಾಗಿ ಕೇವಲ ಒಂದು ರನ್ನಿಂದ ಶತಕ ವಂಚಿತರಾಗಿದ್ದಾರೆ. ತೀವ್ರ ಮಂಡಿನೋವಿನ ನಡುವೆಯೂ ಎರಡನೇ ಇನ್ನಿಂಗ್ಸ್‌ನಲ್ಲಿ ಬ್ಯಾಟಿಂಗ್ಗೆ ಬಂದ ಪಂತ್ ಭರ್ಜರಿ ಪ್ರದರ್ಶನ ತೋರಿದರು.
2ನೇ ಇನ್ನಿಂಗ್ಸ್‌ನಲ್ಲಿ 105 ಎಸೆತಗಳನ್ನು ಎದುರಿಸಿದ ಪಂತ್ 9 ಬೌಂಡರಿ ಹಾಗೂ 5 ಸಿಕ್ಸರ್‌ಗಳ ನೆರವಿನಿಂದ 99 ರನ್ ಸಿಡಿಸಿದ್ದರು. ಶತಕಕ್ಕೆ ಇನ್ನು ಒಂದು ರನ್ ಬಾಕಿ ಇರುವಾಗ ಓ'ರೂರ್ಕ್ ಎಸೆತದಲ್ಲಿ ಡಿಫೆನ್ಸ್ ಮಾಡುವ ಭರದಲ್ಲಿ ಬೌಲ್ಡ್ ಆಗಿ ಪೆವಿಲಿಯನ್ ಸೇರಿದರು. 99ಕ್ಕೆ ಔಟ್ ಆದರೂ ಪಂತ್ ಈ ಪಂದ್ಯದಲ್ಲಿ ದಾಖಲೆಯನ್ನು ಬರೆದಿದ್ದಾರೆ. ಟೆಸ್ಟ್ನಲ್ಲಿ ವೇಗವಾಗಿ 2500 ರನ್ಗಳಿಸಿದ ವಿಕೆಟ್ ಕೀಪರ್ ಆಗಿ ದಾಖಲೆ ಬರೆದಿದ್ದಾರೆ. ಪಂತ್ 36 ಪಂದ್ಯಗಳ 62 ಇನ್ನಿಂಗ್ಸ್‌ಗಳಲ್ಲಿ ಈ ಸಾಧನೆ ಮಾಡಿದ್ದಾರೆ. ಇದಕ್ಕೂ ಮೊದಲು ಎಂಎಸ್ ಧೋನಿ 69 ಇನ್ನಿಂಗ್ಸ್‌ಗಳಲ್ಲಿ ವಿಕೆಟ್ ಕೀಪರ್ ಆಗಿ ಈ ದಾಖಲೆಯನ್ನು ಹೊಂದಿದ್ದರು.