ರಾಜ್‌ಕೋಟ್, ಗುಜರಾತ್:ಭಾರತ ಮತ್ತು ಇಂಗ್ಲೆಂಡ್ ನಡುವಿನ ರಾಜ್‌ಕೋಟ್‌ನಲ್ಲಿ ನಡೆಯುತ್ತಿರುವ ಮೂರನೇ ಟೆಸ್ಟ್ ಪಂದ್ಯದಲ್ಲಿ ಭಾರತ ತಂಡ ಅದ್ಭುತ ಪುನರಾಗಮನ ಮಾಡಿದೆ. ಮೂರನೇ ದಿನ ಭಾರತ ಮೊದಲ ಇನ್ನಿಂಗ್ಸ್‌ನಲ್ಲಿ ಇಂಗ್ಲೆಂಡ್ 319 ರನ್‌ಗಳಿಗೆ ಆಲೌಟ್ ಆಗಿದೆ. ಭಾರತದ ಪರ ಮೊಹಮ್ಮದ್ ಸಿರಾಜ್ ಈ ಇನ್ನಿಂಗ್ಸ್‌ನಲ್ಲಿ ಗರಿಷ್ಠ 4 ವಿಕೆಟ್ ಪಡೆದರು. ಅದೇ ಸಮಯದಲ್ಲಿ ಕುಲದೀಪ್ ಯಾದವ್ ಮತ್ತು ರವೀಂದ್ರ ಜಡೇಜಾ ಕೂಡ ಪ್ರಮುಖ ವಿಕೆಟ್ ಪಡೆದು ಮಿಂಚಿದರು. ಬೆನ್ ಡಕೆಟ್ ಅವರು 153 ರನ್‌ಗಳ ಅದ್ಭುತ ಶತಕದ ಇನ್ನಿಂಗ್ಸ್ ಆಡಿದರು.
ಭಾರತದ 445 ರನ್‌ಗಳಿಗೆ ಉತ್ತರವಾಗಿ ಬ್ಯಾಟಿಂಗ್‌ಗೆ ಇಳಿದ ಇಂಗ್ಲೆಂಡ್ ತಂಡವನ್ನು 319 ರನ್‌ಗಳಿಗೆ ಸರ್ವಪತನ ಕಂಡಿತು. ಈ ಮೂಲಕ ಭಾರತ ಎರಡನೇ ಇನ್ನಿಂಗ್ಸ್‌ನಲ್ಲಿ 126 ರನ್‌ಗಳ ಮುನ್ನಡೆ ಸಾಧಿಸಿದೆ. ಪಂದ್ಯದ ಎರಡನೇ ದಿನದಂತ್ಯಕ್ಕೆ ಇಂಗ್ಲೆಂಡ್ ಮೊದಲ 2 ವಿಕೆಟ್ ಕಳೆದುಕೊಂಡು 207 ರನ್ ಗಳಿಸಿತ್ತು. ಎರಡನೇ ದಿನದಾಟದ ಅಂತ್ಯದವರೆಗೂ ಬೆನ್ ಡಕೆಟ್ ಶತಕ ಗಳಿಸಿ ಕ್ರೀಸ್ನಲ್ಲಿ ನಿಂತಿದ್ದರು. ಮೂರನೇ ದಿನದಾಟದಲ್ಲಿ ಬುಮ್ರಾ ಮೊದಲ ವಿಕೆಟ್ ಪಡೆದರು.
ಇನಿಂಗ್ಸ್‌ನ 40ನೇ ಓವರ್‌ನಲ್ಲಿ ಜಸ್ಪ್ರೀತ್ ಬುಮ್ರಾ ಎಸೆತವನ್ನು ಸ್ಲಿಪ್ ಓವರ್‌ನಲ್ಲಿ ಹೊಡೆದು ಔಟಾದ ಜೋ ರೂಟ್ 18 ರನ್ ಗಳಿಸಿದ್ದರು. ಬಳಿಕ ಬ್ಯಾಟಿಂಗ್ ಗೆ ಬಂದ ಜಾನಿ ಬೈರ್ ಸ್ಟೋ ರನ್ ಗಳಿಸದೇ ಕುಲದೀಪ್ ಯಾದವ್ಗೆ ಬಲಿಯಾದರು. ಇಂಗ್ಲೆಂಡ್‌ನ ವಿಕೆಟ್‌ಗಳು ಒಂದರ ಹಿಂದೆ ಒಂದರಂತೆ ಬೀಳುತ್ತಲೇ ಇದ್ದವು. ಕುಲದೀಪ್ ಯಾದವ್ ಎಸೆತದಲ್ಲಿ ಶಾಟ್ ಹೊಡೆಯಲು ಯತ್ನಿಸಿದ ಸೆಂಚುರಿಯನ್ ಬೆನ್ ಡಕೆಟ್ ಕೂಡ ಶುಬ್ಮನ್ ಗಿಲ;್ಗೆ ಕ್ಯಾಚ್ ನೀಡಿದರು. ಅವರು 153 ರನ್ ಗಳಿಸಿ ಮೈದಾನದಿಂದ ನಿರ್ಗಮಿಸಿದರು.