IND vs ENG, 3rd ODI: ಭಾರತ ಮತ್ತು ಇಂಗ್ಲೆಂಡ್ ನಡುವಿನ ಮೂರನೇ ಮತ್ತು ಅಂತಿಮ ಏಕದಿನ ಕ್ರಿಕೆಟ್ ಪಂದ್ಯ ಬುಧವಾರ (ನಾಳೆ) ಅಹಮದಾಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆಯಲಿದೆ.
ರೋಹಿತ್ ಶರ್ಮಾ ನಾಯಕತ್ವದಲ್ಲಿ ಟೀಂ ಇಂಡಿಯಾ 2 ಪಂದ್ಯಗಳನ್ನು ಗೆದ್ದುಕೊಂಡಿದ್ದು 1 ಪಂದ್ಯಕ್ಕೂ ಮೊದಲೇ ಸರಣಿ ಕೈವಶಪಡಿಸಿಕೊಂಡಿದೆ. ಎರಡನೇ ಏಕದಿನ ಪಂದ್ಯದಲ್ಲಿ ರೋಹಿತ್ ಶರ್ಮಾ ಶತಕದ ನೆರವಿನಿಂದ ಭಾರತ ಆಂಗ್ಲರನ್ನು 4 ವಿಕೆಟ್‌ಗಳಿಂದ ಸೋಲಿಸಿದೆ. ಇದೀಗ ಮೂರನೇ ಪಂದ್ಯವನ್ನೂ ಗೆದ್ದು ಇಂಗ್ಲೆಂಡ್ ವಿರುದ್ಧ ಹಳೆಯ ಸೇಡು ತೀರಿಸಿಕೊಳ್ಳಲು ರೋಹಿತ್ ಪಡೆ ತವಕಿಸುತ್ತಿದೆ.
ಮೋದಿ ಮೈದಾನದ ದಾಖಲೆ:ಈ ಮೈದಾನದಲ್ಲಿ ಎರಡೂ ತಂಡಗಳು ಒಮ್ಮೆ ಮಾತ್ರ ಮುಖಾಮುಖಿಯಾಗಿವೆ. ಇಲ್ಲಿ ಭಾರತ 20 ಏಕದಿನ ಪಂದ್ಯಗಳನ್ನು ಆಡಿದ್ದು ಅದರಲ್ಲಿ 11 ಪಂದ್ಯಗಳನ್ನು ಗೆದ್ದು 9 ಪಂದ್ಯಗಳಲ್ಲಿ ಸೋತಿದೆ. ಇಂಗ್ಲೆಂಡ್ 4 ಪಂದ್ಯಗಳನ್ನು ಆಡಿದ್ದು, ಕೇವಲ ಒಂದು ಪಂದ್ಯ ಗೆದ್ದು ಮೂರು ಪಂದ್ಯಗಳಲ್ಲಿ ಸೋತಿದೆ.
ಹೆಡ್ ಟು ಹೆಡ್:ಉಭಯ ತಂಡಗಳು ಈವರೆಗೆ ಒಟ್ಟು 108 ಏಕದಿನ ಪಂದ್ಯಗಳನ್ನಾಡಿವೆ. ಇವುಗಳಲ್ಲಿ ಭಾರತ 58 ಪಂದ್ಯಗಳನ್ನು ಗೆದ್ದುಕೊಂಡಿದ್ದರೆ, ಇಂಗ್ಲೆಂಡ್ 44 ಬಾರಿ ಗೆಲುವು ಸಾಧಿಸಿದೆ. ಉಳಿದಂತೆ 3 ಪಂದ್ಯಗಳು ಡ್ರಾದಲ್ಲಿ ಕೊನೆಗೊಂಡು, 2 ಪಂದ್ಯ ರದ್ದಾಗಿವೆ.