ಕರ್ನಾಟಕ

karnataka

ETV Bharat / sports

ನಾಟೌಟ್​ ಆಗಿದ್ದರೂ ಪೆವಿಲಿಯನ್​ ಸೇರಿದ ವಿರಾಟ್​ ಕೊಹ್ಲಿ: ಅಸಮಾಧಾನ ಹೊರಹಾಕಿದ ರೋಹಿತ್​! - Virat Kohli

ಬಾಂಗ್ಲಾದೇಶದ ವಿರುದ್ಧ ಮೊದಲ ಟೆಸ್ಟ್​ ಪಂದ್ಯದ ಎರಡನೇ ಇನ್ನಿಂಗ್ಸ್​ ವೇಳೆ ವಿರಾಟ್​ ಕೊಹ್ಲಿ ದೊಡ್ಡ ಎಡವಟ್ಟು ಮಾಡಿಕೊಂಡಿದ್ದು, ನಾಟ್​ಔಟ್​​ ಆಗಿದ್ದರು ಪೆವಿಲಿಯನ್​ ಸೇರಿದ್ದಾರೆ. ಅಸಲಿಗೆ ಏನಾಯ್ತೆಂದು ಈ ಸುದ್ದಿಯಲ್ಲಿ ತಿಳಿಯಿರಿ.

ವಿರಾಟ್​ ಕೊಹ್ಲಿ
ವಿರಾಟ್​ ಕೊಹ್ಲಿ (AP)

By ETV Bharat Sports Team

Published : Sep 20, 2024, 8:16 PM IST

ನವದೆಹಲಿ: ಚೆನ್ನೈನಲ್ಲಿ ನಡೆಯುತ್ತಿರುವ ಬಾಂಗ್ಲಾದೇಶ ವಿರುದ್ಧದ ಮೊದಲ ಟೆಸ್ಟ್‌ನ ಎರಡನೇ ದಿನದಲ್ಲಿ ಭಾರತ ಪ್ರಾಬಲ್ಯ ಸಾಧಿಸಿದೆ. ಸದ್ಯ 308 ರನ್‌ಗಳ ಮುನ್ನಡೆ ಸಾಧಿಸಿರುವ ಟೀಂ ಇಂಡಿಯಾ ಎರಡನೇ ದಿನದಾಟದ ಅಂತ್ಯಕ್ಕೆ 3 ವಿಕೆಟ್​ ನಷ್ಟಕ್ಕೆ 81 ರನ್​ಗಳನ್ನು ಕಲೆ ಹಾಕಿದೆ. ಶುಭಮನ್ ಗಿಲ್ (33*) ಮತ್ತು ರಿಷಬ್ ಪಂತ್ (12*) ಮೂರನೇ ದಿನದಾಟಕ್ಕೆ ಕ್ರೀಸ್​ ಕಾಯ್ದುಕೊಂಡಿದ್ದಾರೆ.

ಆದರೆ, ಎರಡನೇ ಇನ್ನಿಂಗ್ಸ್‌ನಲ್ಲಿ ಸ್ಟಾರ್​​ ಬ್ಯಾಟರ್​ ವಿರಾಟ್​ ಕೊಹ್ಲಿ ದೊಡ್ಡ ಎಡವಟ್ಟೊಂದನ್ನು ಮಾಡಿಕೊಂಡಿದ್ದು, ರೋಹಿತ್​ ಶರ್ಮಾ ಅವರ ಕೆಂಗಣ್ಣಿಗೂ ಗುರಿಯಾಗಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆಗಿದೆ. ಹೌದು, ಎರಡನೇ ಇನ್ನಿಂಗ್ಸ್‌ನಲ್ಲಿ ವಿರಾಟ್ ಕೊಹ್ಲಿ 37 ಎಸೆತಗಳಲ್ಲಿ 2 ಬೌಂಡರಿಗಳ ಸಹಾಯದಿಂದ 17 ರನ್ ಗಳಿಸಿ ಉತ್ತಮ ಫಾರ್ಮ್​​​​ನಲ್ಲಿ ಕಾಣಿಸಿಕೊಂಡಿದ್ದರು. ಆದರೆ, ಮೆಹದಿ ಹಸನ್​ ಎಸೆತದಲ್ಲಿ ನಾಟ್​ಔಟ್​ ಆಗಿದ್ದರೂ ಪೆವಿಲಿಯನ್​ಗೆ ಸೇರಿದ್ದಾರೆ. ಇದರಿಂದ ತಂಡದ ನಾಯಕ ರೋಹಿತ್​ ಶರ್ಮಾ ಅಸಮಾಧಾನ ಹೊರ ಹಾಕಿದ್ದಾರೆ.

ವಾಸ್ತವವಾಗಿ, 18ನೇ ಓವರ್‌ನ ಎರಡನೇ ಎಸೆತದ ವೇಳೆ ಕೊಹ್ಲಿ ಲೆಗ್ ಸೈಡ್ ಕಡೆಗೆ ಸ್ಟ್ರೋಕ್ ಮಾಡುವುದಕ್ಕಾಗಿ ಚೆಂಡನ್ನು ಹೊಡೆಯಲು ಯತ್ನಿಸಿದ್ದರು. ಆದರೆ, ಚೆಂಡು ಅವರ ಪ್ಯಾಡ್‌ಗೆ ತಗುಲಿತ್ತು. ಬಳಿಕ ಮೆಹದಿ ಹಸನ್​ ಅಪೀಲ್​​ ಮಾಡಿದ್ದರು. ಅಂಪೈರ್ ತಕ್ಷಣವೇ ಔಟ್ ನೀಡಿದ್ದರು​. ಇದಾದ ನಂತರ ಕೊಹ್ಲಿ, ಗಿಲ್ ಜೊತೆ ಚರ್ಚಿಸಿ ರಿವಿವ್ಯೂ ತೆಗೆದುಕೊಳ್ಳದೇ ಪೆವಿಲಿಯನ್​ಗೆ ಸೇರಿದರು. ಆದರೆ, ಬಳಿಕ ವಿಕೆಟ್​ ರಿಪ್ಲೇ ವೇಳೆ ಇದು ನಾಟೌಟ್​ ಎಂದು ತಿಳಿದು ಬಂದಿತ್ತು. ಕೊಹ್ಲಿ ಡಿಆರ್​ಎಸ್​ ತೆಗೆದುಕೊಳ್ಳದೇ ಪೆವಿಲಿಯನ್​ಗೆ ಸೇರಿರುವುದರಿಂದ ನಾಯಕ ರೋಹಿತ್​ ಶರ್ಮಾ ಕೂಡ ಅಸಮಾಧಾನ ಹೊರ ಹಾಕಿದ್ದಾರೆ. ಸದ್ಯ ಈ ವಿಡಿಯೋ ಭಾರೀ ವೈರಲ್​ ಆಗಿದೆ.

ಇದನ್ನೂ ಓದಿ:ಕ್ರಿಕೆಟ್​ ಪಂದ್ಯದ ನಡವೆಯೇ ಬ್ಯಾಟ್​​ನಿಂದ ಹಿಗ್ಗಾಮುಗ್ಗಾ ಹೊಡೆದಾಡಿಕೊಂಡ ಆಟಗಾರರು: ವಿಡಿಯೋ ವೈರಲ್​ - Cricket Players Fight

ABOUT THE AUTHOR

...view details