ಕರ್ನಾಟಕ

karnataka

ETV Bharat / sports

ವಿಚ್ಛೇದನ ವದಂತಿಯಲ್ಲಿರುವ ವೀರೇಂದ್ರ ಸೆಹ್ವಾಗ್, ರೋಹಿತ್​ ಶರ್ಮಾಗಿಂತಲೂ ಅತ್ಯಂತ ಶ್ರೀಮಂತ! ​ - VIRENDER SEHWAG NET WORTH

ವಿಚ್ಚೇದನ ವದಂತಿಯಲ್ಲಿರುವ ವಿರೇಂದ್ರ ಸೆಹ್ವಾಗ್​ ಟೀಂ ಇಂಡಿಯಾದ ನಾಯಕ ರೋಹಿತ್​ ಶರ್ಮಾಗಿಂತಲೂ ಶ್ರೀಮಂತ ಕ್ರಿಕೆಟರ್​ ಎನಿಸಿಕೊಂಡಿದ್ದಾರೆ.

VIRENDER SEHWAG  VIRENDER SEHWAG DIVORCE  SEHWAG NET WORTH  VIRENDER SEHWAG ASSETS
Virender Sehwag and Rohit Sharma (IANS)

By ETV Bharat Sports Team

Published : Jan 24, 2025, 3:33 PM IST

Virendra Sehwag NetWorth:ಟೀಂ ಇಂಡಿಯಾದ ಡ್ಯಾಶಿಂಗ್​ ಓಪನರ್ ಎಂದರೆ ಥಟ್​ ಅಂತ ನೆನಪಿಗೆ ಬರುವ ಏಕೈಕ ಹೆಸರು ವೀರೇಂದ್ರ ಸೆಹ್ವಾಗ್​. ವಿಶ್ವ ಕ್ರಿಕೆಟ್​​ ಕಂಡ ಬೆಸ್ಟ್​ ಓಪನರ್​​ಗಳಲ್ಲಿ ವೀರೂ ಕೂಡ ಒಬ್ಬರು. ನಿರ್ಭೀತವಾಗಿ ಬ್ಯಾಟ್​ ಬೀಸುತ್ತಿದ್ದ ಸೆಹ್ವಾಗ್​ ಎದುರಾಳಿ ಬೌಲರ್​​ಗಳಿಗೆ ನಡುಕ ಹುಟ್ಟಿಸುತ್ತಿದ್ದರು.

ತಮ್ಮ ಸ್ಪೋಟಕ ಬ್ಯಾಟಿಂಗ್​ನಿಂದಲೇ ಅಪಾರ ಅಭಿಮಾನಿಗಳನ್ನು ಹೊಂದಿದ್ದಾರೆ. ಆದರೆ ಸೆಹ್ವಾಗ ದಾಂಪತ್ಯದ ಕುರಿತು ಆಘಾತಕಾರಿ ವಿಷಯವೊಂದು ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್​ ಆಗುತ್ತಿದೆ. ವೀರೇಂದ್ರ ಸೆಹ್ವಾಗ್ ಮತ್ತು ಆರತಿ ದಾಂಪತ್ಯದಲ್ಲಿ ಬಿರುಕು ಮೂಡಿದ್ದು ಇಬ್ಬರು ವಿಚ್ಛೇದನ ಪಡೆದುಕೊಳ್ಳಲು ಮುಂದಾಗಿದ್ದಾರೆ ಎಂಬ ಸುದ್ದಿಗಳು ಹರಿದಾಡುತ್ತಿವೆ. ಇದಕ್ಕೆ ಪುಷ್ಠಿ ಎಂಬಂತೆ ಈ ಇಬ್ಬರೂ ಇನ್​​ಸ್ಟಾದಲ್ಲಿ ಪರಸ್ಪರ ಅನ್​ಫಾಲೋ ಮಾಡಿಕೊಂಡಿದ್ದಾರೆ.

ಸೆಹ್ವಾಗ್​ ಮತ್ತು ಆರತಿ ಅಹ್ಲಾವತ್​ 2004ರಲ್ಲಿ ಮದುವೆ ಆಗಿದ್ದರು. ಮಾಜಿ ಹಣಕಾಸು ಸಚಿವ ಅರುಣ್​ ಜೇಟ್ಲಿ ನಿವಾಸದಲ್ಲಿ ಈ ಇಬ್ಬರೂ ಸಪ್ತಪದಿ ತುಳಿದಿದ್ದರು. ಆರ್ಯವೀರ್​ ಮತ್ತು ವೇದಾಂತ್​ ಎಂಬ ಇಬ್ಬರು ಗಂಡು ಮಕ್ಕಳಿಗೆ ವೀರೂ ದಂಪತಿ ಜನ್ಮನೀಡಿದ್ದಾರೆ. ಮಕ್ಕಳು ಕೂಡ ಅಪ್ಪನ ಹಾದಿ ಅನುಸರಿಸುತ್ತಿದ್ದು ಕ್ರಿಕೆಟ್​ನಲ್ಲಿ ಭವಿಷ್ಯ ಕಟ್ಟಿಕೊಳ್ಳಲು ಈಗಿನಿಂದಲೇ ಅಭ್ಯಾಸ ಶುರು ಮಾಡಿದ್ದಾರೆ.

20 ವರ್ಷಗಳ ಕಾಲ ಕೂಡಿ ಬಾಳಿದ್ದ ಸೆಹ್ವಾಗ್ - ಆರತಿ ಸಂಬಂಧದಲ್ಲಿ ಬಿರುಕು ಮೂಡಿದ್ದು ಕೆಲ ದಿನಗಳಿಂದ ಇಬ್ಬರೂ ಪ್ರತ್ಯೇಕವಾಗಿ ವಾಸಿಸುತ್ತಿದ್ದಾರೆ ಎಂದು ವರದಿಯಾಗಿದೆ. ಅಲ್ಲದೇ ವೀರೂ ಇನ್​ಸ್ಟಾ ಖಾತೆಯಲ್ಲೂ ಪತ್ನಿ ಆರತಿ ಫೋಟೋಗಳು ಮಾಯವಾಗಿದ್ದು ವಿಚ್ಛೇದನ ಗಾಸಿಪ್​ಗೆ ಪುಷ್ಠಿ ನೀಡಿದೆ. ಇದರ ನಡುವೆಯೆ ಸೆಹ್ವಾಗ್​ ಹೊಂದಿರುವ ಆಸ್ತಿ ವಿಚಾರವೂ ಬಯಲಿಗೆ ಬಂದಿದೆ.

ರೋಹಿತ್​ ಶರ್ಮಾಗಿಂತ ಸೆಹ್ವಾಗ್​ ಅತ್ಯಂತ ಶ್ರೀಮಂತ:ವರದಿಗಳ ಪ್ರಕಾರ, 2015ರಲ್ಲಿ ಕ್ರಿಕೆಟ್​ನಿಂದ ನಿವೃತ್ತಿ ಪಡೆದಿದ್ದರೂ ಆಸ್ತಿ ವಿಚಾರದಲ್ಲಿ ವೀರೇಂದ್ರ ಸೆಹ್ವಾಗ್​ ಅವರು ರೋಹಿತ್​ ಶರ್ಮಾಗಿಂತ ಮುಂದಿದ್ದಾರೆ ಎಂದು ವರದಿಯಾಗಿದೆ. ಕ್ರಿಕೆಟ್​ ಬಳಿಕ ಕಾಮೆಂಟರಿ ಮತ್ತು ಇತರ ಉದ್ಯಮಗಳಲ್ಲಿ ತೊಡಗಿಸಿಕೊಂಡಿರುವ ಸೆಹ್ವಾಗ್​ ವಾರ್ಷಿಕ ಉತ್ತಮ ಸಂಪಾದನೆ ಹೊಂದಿದ್ದಾರೆ.

2024ರಲ್ಲಿ ವೀರೂ 30 ಕೋಟಿ ರೂಪಾಯಿಗೂ ಹೆಚ್ಚು ಹಣ ಗಳಿಸಿದ್ದಾರೆ. ವಾರ್ಷಿಕ ಗಳಿಕೆಯಲ್ಲಿ ರೋಹಿತ್​ ಶರ್ಮಾ ಮುಂದಿದ್ದು ಕಳೆದ ವರ್ಷ ₹35 ಕೋಟಿಗೂ ಅಧಿಕ ಹಣ ಸಂಪಾದಿಸಿದ್ದರು. ಆದರೆ ಒಟ್ಟು ಸಂಪತ್ತಿನ ವಿಚಾರದಲ್ಲಿ ರೋಹಿತ್​ ಗಿಂತಲೂ ಮುಂದಿದ್ದಾರೆ.

ರೋಹಿತ್​ ಅವರ ಒಟ್ಟು ಸಂಪತ್ತು 214 ಕೋಟಿ ರೂ ಆಗಿದ್ದು, ವೀರೇಂದ್ರ ಸೇಹ್ವಾಗ್​ ಅವರು 370 ಕೋಟಿ ರೂ ಆಸ್ತಿಗೆ ಒಡೆಯನಾಗಿದ್ದಾರೆ. ಸೆಹ್ವಾಗ್​ ಕ್ರಿಕೆಟ್​ನಿಂದ ದೂರ ಉಳಿದು 9 ವರ್ಷಗಳ ಕಳೆದರೂ ಉದ್ಯಮ ಮತ್ತು ಕಾಮೆಂಟರಿ ಇವರ ಮೂಲ ಆದಾಯವಾಗಿದೆ.

ಇದನ್ನೂ ಓದಿ:ಪ್ರೀತಿಸಿ ವಿವಾಹವಾಗಿದ್ದ ಭಾರತದ ಸ್ಪೋಟಕ ಬ್ಯಾಟರ್ ದಾಂಪತ್ಯದಲ್ಲಿ ಬಿರುಕು: ಇನ್ಸ್ಟಾದಲ್ಲಿ ಪರಸ್ಪರ ಅನ್​ಫಾಲೋ!

ABOUT THE AUTHOR

...view details