ಕೋಲ್ಕತ್ತಾ:ಟೂರ್ನಮೆಂಟ್‌ನಲ್ಲಿ ಭಾರತವು ಅಜೇಯವಾಗಿ ಮುನ್ನುಗ್ಗುವ ಮೂಲಕ 2024ರ ಟಿ20 ವಿಶ್ವಕಪ್ ಅನ್ನು ಗೆದ್ದಿದೆ. ಆದರೆ, ಅಂತಿಮವಾಗಿ ಪ್ರಶಸ್ತಿ ಗೆಲ್ಲಲು ಕಳೆದ ಶನಿವಾರ ಬ್ರಿಡ್ಜ್‌ಟೌನ್‌ನ ಬಾರ್ಬಡೋಸ್‌ನಲ್ಲಿ ನಡೆದ ಫೈನಲ್‌ನಲ್ಲಿ ಭಾರತ ಕೆಲವು ಆತಂಕದ ಕ್ಷಣಗಳನ್ನು ಎದುರಿಸಬೇಕಾಯಿತು. ವಿರಾಟ್ ಕೊಹ್ಲಿ ಹೆಚ್ಚು ಅಗತ್ಯವಿದ್ದಾಗ 59 ಎಸೆತಗಳಲ್ಲಿ 76 ರನ್ ಗಳಿಸಿ ಭಾರತ ತಂಡಕ್ಕೆ ನೆರವಾದರು.
ನಂತರ ಸ್ಪರ್ಧಾತ್ಮಕ ಮೊತ್ತವನ್ನು ರಕ್ಷಿಸಲು ಬೌಲರ್‌ಗಳು ಮುಂದಾದರು. ಡೇವಿಡ್ ಮಿಲ್ಲರ್ ಅವರನ್ನು ವಿಕೆಟ್ ಎತ್ತಲು ಸೂರ್ಯ ಕುಮಾರ್ ಯಾದವ್ ಅಸಾಧ್ಯವಾದ ಕ್ಯಾಚ್ ಹಿಡಿದರು. 1983ರ ವಿಶ್ವಕಪ್ ಫೈನಲ್‌ನಲ್ಲಿ ಸರ್ ವಿವ್ ರಿಚರ್ಡ್ಸ್ ಅವರನ್ನು ವಿಕೆಟ್ ಪಡೆಯಲು ಕಪಿಲ್ ದೇವ್ ಕಠಿಣವಾದ ಕ್ಯಾಚ್ ಹಿಡಿದಿದ್ದನ್ನು ನೆನಪಾಗುತ್ತದೆ. ಅಲ್ಲದೇ, ಬೌಲರಗಳಾದ ಹಾರ್ದಿಕ್ ಪಾಂಡ್ಯ, ಜಸ್ಪ್ರೀತ್ ಬುಮ್ರಾ ಮತ್ತು ಅರ್ಷದೀಪ್ ಸಿಂಗ್ ಅವರು ಭಾರತದ ಪರವಾಗಿ ಮಹತ್ವದ ವಿಕೆಟ್‌ಗಳನ್ನು ಪಡೆದರು. ಹಾಗಾದರೆ ಫೈನಲ್ ಪಂದ್ಯ ನಿಜವಾಗಿ ಟರ್ನ್ ಆಗಿದ್ದು ಯಾವುದು? ETV ಭಾರತ ಜೊತೆಗೆ ಸಂದರ್ಶನದಲ್ಲಿ 1983ರ ವಿಶ್ವಕಪ್ ವಿಜೇತ ತಂಡದ ನಿರ್ಣಾಯಕ ಸದಸ್ಯ ಮದನ್ ಲಾಲ್ ಅವರು ಭಾರತ ತಂಡದ ಗೆಲುವಿನ ಕುರಿತು ಅಭಿಪ್ರಾಯಗಳನ್ನು ಹಂಚಿಕೊಂಡಿದ್ದಾರೆ.
ಮದನ್ ಲಾಲ್ ಸಂದರ್ಶನದ ಆಯ್ದ ಭಾಗ: ಪ್ರಶ್ನೆ:1983ರ ವಿಶ್ವಕಪ್ ಫೈನಲ್‌ನಲ್ಲಿ ಕಪಿಲ್ ದೇವ್ ಕ್ಯಾಚ್ ಮತ್ತು 2024ರ ಟಿ20 ವಿಶ್ವಕಪ್ ಫೈನಲ್‌ನಲ್ಲಿ ಸೂರ್ಯ ಕುಮಾರ್ ಯಾದವ್ ಕ್ಯಾಚ್ ನೆನಪಿಸಿಕೊಂಡರೆ, ಈ ಎರಡು ಕ್ಯಾಚ್‌ಗಳನ್ನು ನೀವು ಹೇಗೆ ಹೋಲಿಸುತ್ತೀರಿ?
ಮದನ್ ಲಾಲ್: ಈ ಕ್ಯಾಚ್‌ಗಳನ್ನು ಹೋಲಿಸುವುದು ತುಂಬಾ ಕಷ್ಟ. ಸೂರ್ಯ ಕುಮಾರ್ ಅವರು ಕಪಿಲ್ ದೇವ್‌ಗಿಂತ ಉತ್ತಮ ಕ್ಯಾಚ್ ಹಿಡಿದಿದ್ದಾರೆ. ಬೌಂಡರಿ ಲೈನ್ ಸನಿಹದಲ್ಲೇ ಅವರು ಕ್ಯಾಚ್ ಪಡೆದರು. ಆದರೆ, ಈ ಕ್ಯಾಚ್‌ಗಳಿಂದ ಪಂದ್ಯಗಳು ಟರ್ನ್ ಆಗಿವೆ. ಎರಡು ಕ್ಯಾಚ್‌ಗಳನ್ನು ಹೇಗೆ ಹೋಲಿಸುವುದು ಎಂದು ನನಗೆ ತಿಳಿದಿಲ್ಲ. ಎರಡೂ ಕ್ಯಾಚ್‌ಗಳು ಫೈನಲ್ ಪಂದ್ಯಗಳನ್ನು ಟರ್ನ್ ಮಾಡಿವೆ ಎಂದು ನಾನು ಹೇಳಬಲ್ಲೆ.
ಪ್ರಶ್ನೆ: ಕಪಿಲ್ ದೇವ್ ಹಿಡದ ಆ ಕ್ಯಾಚ್ ಭಾರತಕ್ಕೆ ಮೊದಲ ವಿಶ್ವಕಪ್ ಗೆದ್ದರೆ, ಈಗ ಸೂರ್ಯಕುಮಾರ್ ಹಿಡಿದ ಕ್ಯಾಚ್ ಭಾರತಕ್ಕೆ ಮತ್ತೊಮ್ಮೆ ಗೆದ್ದುಕೊಟ್ಟಿದೆ ಎಂದು ನೀವು ಒಪ್ಪುತ್ತೀರಾ?
ಮದನ್ ಲಾಲ್: ಇಲ್ಲಿ, ಸೂರ್ಯಕುಮಾರ್ ಹಿಡಿದ ಆ ಕ್ಯಾಚ್ ಮಾತ್ರ ಭಾರತಕ್ಕೆ ಪ್ರಶಸ್ತಿಯನ್ನು ಗೆದ್ದುಕೊಟ್ಟಿತು ಎಂದು ನಾನು ಭಾವಿಸುವುದಿಲ್ಲ. ನನ್ನ ಅಭಿಪ್ರಾಯದಲ್ಲಿ, ಟಿ20 ವಿಶ್ವಕಪ್‌ನಲ್ಲಿ ಭಾರತದ ಬೌಲಿಂಗ್ ಘಟಕದಿಂದ ಗೆಲುವು ಲಭಿಸಿದೆ.
ಪ್ರಶ್ನೆ:2024ರ ಬೌಲಿಂಗ್ ಘಟಕಕ್ಕೆ 1983ರ ತಂಡದ ಬೌಲಿಂಗ್ ಘಟಕವನ್ನು ನೀವು ಹೇಗೆ ಹೋಲಿಸುತ್ತೀರಿ?
ಮದನ್ ಲಾಲ್: 2024 ರಲ್ಲಿ ಬೌಲರ್‌ಗಳು ಪಂದ್ಯವನ್ನು ಟರ್ನ್ ಮಾಡಿದರು. ಏಕೆಂದರೆ ಒಂದು ಹಂತದಲ್ಲಿ ದಕ್ಷಿಣ ಆಫ್ರಿಕಾ ಗೆದ್ದಿತು. ಆ ಹಂತದಲ್ಲಿಯೇ, ಜಸ್ಪ್ರೀತ್ ಬುಮ್ರಾ ಅವರು (ಹೆನ್ರಿಚ್) ಕ್ಲಾಸೆನ್ ವಿಕೆಟ್ ಪಡೆದರು. ಮತ್ತು ಪಂದ್ಯವನ್ನು ಭಾರತದತ್ತ ಟರ್ನ್ ಮಾಡಿದರು. ಅದಕ್ಕಾಗಿಯೇ ಬೌಲರ್‌ಗಳು ಫೈನಲ್ ಪಂದ್ಯದ ಗೆಲುವಿಗೆ ಮಹತ್ವ ಕೊಡುಗೆ ನೀಡಿದರು ಎಂದು ನಾನು ಭಾವಿಸುತ್ತೇನೆ.
ಪ್ರಶ್ನೆ: ವಿರಾಟ್ ಕೊಹ್ಲಿ ಅವರ ಇನ್ನಿಂಗ್ಸ್ ಬಗ್ಗೆ ಏನು ಹೇಳಿತ್ತೀರಿ?