ಹೈದರಾಬಾದ್: ರಾಯಲ್ ಚಾಲೆಂಜರ್ಸ್ ಬೆಂಗಳೂರು(ಆರ್‌ಸಿಬಿ) ತಂಡದ ಮಾಜಿ ಸ್ಪೋಟಕ ಬ್ಯಾಟರ್ ಎಬಿ ಡಿವಿಲಿಯರ್ಸ್, ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 2025ರ ಮೆಗಾ ಹರಾಜಿನಲ್ಲಿ ಆರ್‌ಸಿಬಿ ಯಾವ ಆಟಗಾರರನ್ನು ಖರೀದಿಸಬೇಕು ಎಂಬುದರ ಬಗ್ಗೆ ಸಲಹೆ ನೀಡಿದ್ದಾರೆ.
ಎಬಿಡಿ ಒಟ್ಟು 11 ಋತುಗಳಲ್ಲಿ ಆರ್‌ಸಿಬಿ ಪರ ಆಡಿದ್ದಾರೆ. ಇವರ ಅವಧಿಯಲ್ಲಿ ತಂಡ ಎರಡು ಬಾರಿ ಫೈನಲ್ ಪ್ರವೇಶಿಸಿದೆ. ಆದರೆ ಕಪ್ ಗೆಲ್ಲಲು ಸಾಧ್ಯವಾಗಿರಲಿಲ್ಲ. ಇದೀಗ ಮುಂದಿನ ಆವೃತ್ತಿಗೂ ಮೊದಲು ಮೆಗಾ ಹರಾಜು ನಡೆಯಲಿದ್ದು, ಆರ್‌ಸಿಬಿ ಮೂವರು ಆಟಗಾರರಾದ ವಿರಾಟ್ ಕೊಹ್ಲಿ, ರಜತ್ ಪಾಟೀದಾರ್, ಯಶ್ ದಯಾಳ್ ಅವರನ್ನು ಮಾತ್ರ ರಿಟೇನ್ ಮಾಡಿಕೊಂಡು ಪರ್ಸ್ನಲ್ಲಿ ₹83 ಕೋಟಿ ಉಳಿಸಿಕೊಂಡಿದೆ. ಈ ಹಿನ್ನೆಲೆಯಲ್ಲಿ ಎಬಿಡಿ, ಆರ್ಸಿಬಿಗೆ ಈ ನಾಲ್ವರು ಆಟಗಾರರನ್ನು ಸೇರಿಸಿಕೊಳ್ಳುವಂತೆ ಸೂಚಿಸಿದ್ದಾರೆ.
ಎಬಿಡಿ ಸೂಚಿಸಿದ ನಾಲ್ವರು ಆಟಗಾರರು:
ರಬಾಡ/ಮೊಹಮ್ಮದ್ ಶಮಿ:ಮೆಗಾ ಹರಾಜಿನಲ್ಲಿ ದಕ್ಷಿಣ ಆಫ್ರಿಕಾದ ಸ್ಟಾರ್ ಬೌಲರ್ ಕಗಿಸೋ ರಬಾಡ ಅಥವಾ ಏಕದಿನ ವಿಶ್ವಕಪ್ನಲ್ಲಿ ಹೆಚ್ಚು ವಿಕೆಟ್ ಪಡೆದ ಭಾರತೀಯ ವೇಗಿ ಮೊಹಮ್ಮದ್ ಶಮಿ ಇಬ್ಬರಲ್ಲಿ ಒಬ್ಬರನ್ನು ಖರೀದಿಸುವಂತೆ ಫ್ರಾಂಚೈಸಿಗೆ ಸೂಚಿಸಿದ್ದಾರೆ.
ಚಹಾಲ್:ಆರ್‌ಸಿಬಿ ಸ್ಪಿನ್ ಕಡೆಗೂ ಗಮನ ಹರಿಸಬೇಕೆಂದಿರುವ ಎಬಿಡಿ, ಯುಜುವೇಂದ್ರ ಚಹಾಲ್ ಅವರನ್ನು ತಂಡಕ್ಕೆ ಮರಳಿ ಪಡೆಯಲು ಸೂಚಿಸಿದ್ದಾರೆ. 2022ರಲ್ಲಿ RCB ಚಹಾಲ್ ಅವರನ್ನು ಕೈಬಿಟ್ಟಿತ್ತು. ಈ ವೇಳೆ ರಾಜಸ್ಥಾನ್ ರಾಯಲ್ಸ್ ಖರೀದಿಸಿತ್ತು. ಚಹಾಲ್ ಇಲ್ಲಿಯವರೆಗೂ ಒಟ್ಟು 160 ಐಪಿಎಲ್ ಪಂದ್ಯಗಳನ್ನಾಡಿದ್ದು 205 ವಿಕೆಟ್ ಉರುಳಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಚಹಾಲ್ ಅವರನ್ನು ತಂಡಕ್ಕೆ ಪಡೆದರೆ ಉತ್ತಮ ಫಲಿತಾಂಶ ಕಾಣಬಹುದು ಎಂದಿದ್ದಾರೆ.