ಮೇಷ: ಈ ರಾಶಿಯಲ್ಲಿ ಹುಟ್ಟಿದವರಿಗೆ ವಾರದಲ್ಲಿ ತಮ್ಮ ಪ್ರಯತ್ನಗಳಿಗೆ ಮಿಶ್ರಫಲ ದೊರೆಯಲಿದೆ. ವೃತ್ತಿ ಮತ್ತು ವ್ಯವಹಾರದಲ್ಲಿ ನೀವು ಕಠಿಣ ಶ್ರಮ ಪಟ್ಟರೆ ನಿಮಗೆ ಫಲ ದೊರೆಯಲಿದೆ. ಆದರೆ ನಿರೀಕ್ಷಿತ ಫಲ ದೊರೆಯದು. ದೊರೆಯುವ ಯಾವುದೇ ಅವಕಾಶವು ಕೈಚೆಲ್ಲಿ ಹೋಗದಂತೆ ನೋಡಿಕೊಳ್ಳಿ. ವ್ಯವಹಾರದಲ್ಲಿ, ತಾತ್ಕಾಲಿಕ ಲಾಭಕ್ಕಾಗಿ ದೀರ್ಘಕಾಲಿನ ಲಾಭವನ್ನು ಕೈಚೆಲ್ಲಿ ಕುಳಿತುಕೊಳ್ಳಬೇಡಿ. ಅಲ್ಲದೆ ಯಾವುದೇ ಅಪಾಯವನ್ನು ಮೈಗೆಳೆದುಕೊಳ್ಳಬೇಡಿ. ಹೊಟ್ಟೆಗೆ ಸಂಬಂಧಿಸಿದ ಸಮಸ್ಯೆಗಳು ಕಾಣಿಸಿಕೊಳ್ಳಬಹುದು. ಅಂತಹ ಸಂದರ್ಭದಲ್ಲಿ ನಿಮ್ಮ ಆಹಾರಕ್ರಮ ಮತ್ತು ದಿನಚರಿಗೆ ಗಮನ ನೀಡಿರಿ. ಕಷ್ಟದ ಸಂದರ್ಭದಲ್ಲಿ ನಿಮ್ಮ ಜೀವನ ಸಂಗಾತಿಯ ನೆರವು ಬಿರುಬಿಸಿಲಿನಲ್ಲಿ ದೊರೆಯುವ ಛಾಯೆಯಂತೆ ನಿಮಗೆ ಸಾಂತ್ವನ ಒದಗಿಸಲಿದೆ. ಈ ವಾರದಲ್ಲಿ ಎಲ್ಲಾ ಸಂಕೋಲೆಗಳಿಂದ ಮುಕ್ತರಾಗುವ ನಿಮ್ಮ ಇಚ್ಛೆಯು ನಿಮ್ಮನ್ನು ಕೌಟುಂಬಿಕ ಮತ್ತು ವೈಯಕ್ತಿಕ ಸಂಬಂಧಗಳಿಂದ ದೂರಗೊಳಿಸಲಿದೆ. ಯಾವುದೇ ಗೊಂದಲಗಳಿದ್ದಲ್ಲಿ ನಿಮ್ಮ ಹಿತೈಷಿಗಳ ಅಭಿಪ್ರಾಯವನ್ನು ತೆಗೆದುಕೊಳ್ಳಿ. ಅಲ್ಲದೆ ಯಾವುದೇ ಪ್ರಮುಖ ನಿರ್ಧಾರವನ್ನು ತೆಗೆದುಕೊಳ್ಳುವ ಮೊದಲು ಹತ್ತು ಬಾರಿ ಯೋಚಿಸಿ.
ವೃಷಭ: ಈ ರಾಶಿಯವರಿಗೆ ಈ ವಾರವು ಸಾಕಷ್ಟು ಮಂಗಳದಾಯಕ ಹಾಗೂ ಅದೃಷ್ಟಶಾಲಿ ಎನಿಸಲಿದೆ. ಈ ವಾರದಲ್ಲಿ ನೀವು ವೃತ್ತಿ ಮತ್ತು ವ್ಯವಹಾರದಲ್ಲಿ ಮಹತ್ತರ ಸಾಧನೆಯನ್ನು ಮಾಡಲಿದ್ದೀರಿ. ನಿಮ್ಮ ಹಿರಿಯರು ನಿಮಗೆ ಕೆಲಸದ ಸ್ಥಳದಲ್ಲಿ ಆಶೀರ್ವದಿಸಲಿದ್ದಾರೆ. ಇದರ ಪರಿಣಾಮವಾಗಿ ನಿಮ್ಮ ಆಯ್ಕೆಯ ಸ್ಥಳಕ್ಕೆ ನಿಮಗೆ ವರ್ಗಾವಣೆಯಾಗಬಹುದು ಅಥವಾ ಹೆಚ್ಚಿನ ಜವಾಬ್ದಾರಿಗಳು ದೊರೆಯಬಹುದು. ಪ್ರೇಮ ಸಂಬಂಧದಲ್ಲಿ ಅನುರಾಗ ನೆಲೆಸಲಿದೆ. ನಿಮ್ಮ ಪ್ರಣಯ ಸಂಗಾತಿಯೊಂದಿಗೆ ಸಮಯವನ್ನು ಚೆನ್ನಾಗಿ ಕಳೆಯಲಿದ್ದೀರಿ. ವೈವಾಹಿಕ ಬದುಕಿನಲ್ಲಿ ಸಂತಸ ನೆಲೆಸಲಿದೆ. ವಾರದ ನಡುವೆ ಯಾರಾದರೂ ಹಿರಿಯ ಅಥವಾ ಪ್ರಭಾವಿ ವ್ಯಕ್ತಿಗಳ ಜೊತೆಗೆ ನಡೆಯುವ ಸಭೆಯು ಭವಿಷ್ಯದಲ್ಲಿ ಲಾಭ ಗಳಿಸಿ ಕೊಡಲಿದೆ. ಆದಾಯದ ಹೊಸ ಮೂಲಗಳು ಸೃಷ್ಟಿಯಾಗಬಹುದು. ನಿಮ್ಮ ಅಲೋಚನೆಗಳು, ಹವ್ಯಾಸಗಳು ಮತ್ತು ಆಸಕ್ತಿಗಳು ಹಾಗೂ ಮಕ್ಕಳಿಗೆ ಸಂಬಂಧಿಸಿದ ವಿಚಾರಗಳು ನಿಮಗೆ ಸಾಕಷ್ಟು ತೃಪ್ತಿಯನ್ನು ನೀಡಲಿವೆ. ನಿಮ್ಮ ಚಟುವಟಿಕೆಗಳ ವ್ಯಾಪ್ತಿಯು ವಿಸ್ತರಣೆಯಾಗಲಿದೆ. ನಿಮ್ಮ ಸಾಮರ್ಥ್ಯ, ತಾಳ್ಮೆ ಮತ್ತು ಸಹಾಯ ಮಾಡುವ ಮನೋಭಾವವು ನಿಮಗೆ ಸಾಕಷ್ಟು ಲಾಭವನ್ನು ತಂದು ಕೊಡಲಿದೆ.
ಮಿಥುನ:ಮಿಥುನ ರಾಶಿಯಲ್ಲಿ ಹುಟ್ಟಿದವರು ಈ ವಾರದಲ್ಲಿ ಸಾಕಷ್ಟು ಕೆಲಸದ ಒತ್ತಡ ಮತ್ತು ಜವಾಬ್ದಾರಿಗಳನ್ನು ಹೊರಬೇಕಾಗುತ್ತದೆ. ಯಾವುದೇ ಗಂಭೀರ ಸಮಸ್ಯೆಯು ನಿಮ್ಮ ಬದುಕನ್ನು ಕಾಡುತ್ತಿದ್ದರೆ, ಈ ಬಗ್ಗೆ ಚಿಂತಿಸುವ ಬದಲಿಗೆ ಶಾಂತ ಚಿತ್ತದಿಂದ ಪರಿಹಾರವನ್ನು ಕಂಡುಹಿಡಿಯಲು ಯತ್ನಿಸಿ. ವ್ಯವಹಾರದಲ್ಲಿ ಸಾಧಾರಣ ಮಟ್ಟದ ಲಾಭವನ್ನು ಗಳಿಸುವ ಸಾಧ್ಯತೆ ಇದೆ. ಕೆಲಸದ ಸ್ಥಳದಲ್ಲಿ ಯಾವುದೇ ವ್ಯಕ್ತಿಯ ಜೊತೆಗೂ ವಿವಾದದ ಸುಳಿಯಲ್ಲಿ ಸಿಲುಕಿ ಹಾಕಿಕೊಳ್ಳುವ ಬದಲಿಗೆ ನಿಮ್ಮ ಕೆಲಸಕ್ಕೆ ಗಮನ ನೀಡಿರಿ. ವ್ಯವಹಾರವನ್ನು ಅಭಿವೃದ್ಧಿಪಡಿಸಲು ಅಥವಾ ಯಾವುದೇ ಯೋಜನೆಯಲ್ಲಿ ಕೈ ಹಾಕಲು ಮುಂದೆ ಹೋಗುವ ಮೊದಲು ಸರಿಯಾದ ಸಮಯಕ್ಕಾಗಿ ಕಾಯಿರಿ. ವಾರದ ಕೊನೆಯಲ್ಲಿ ನೀವು ಮತ್ತು ನಿಮ್ಮ ಜೀವನ ಸಂಗಾತಿಯು ಧಾರ್ಮಿಕ ಸ್ಥಳಕ್ಕೆ ಭೇಟಿ ನೀಡಲಿದ್ದೀರಿ. ಪ್ರೇಮ ಸಂಬಂಧದಲ್ಲಿ ನಿಮ್ಮ ಪ್ರೇಮಿಯ ಜೊತೆಗೆ ನೀವು ಯಾವುದೇ ಭಿನ್ನಾಭಿಪ್ರಾಯ ಅಥವಾ ತಪ್ಪು ಗ್ರಹಿಕೆಯನ್ನು ಹೊಂದಿದ್ದಲ್ಲಿ, ಯಾರಾದರೂ ಹಿತೈಷಿಗಳ ನೆರವಿನಿಂದ ಸಮಸ್ಯೆಯನ್ನು ಬಗೆಹರಿಸಲಿದ್ದೀರಿ.
ಕರ್ಕಾಟಕ: ಕರ್ಕಾಟಕ ರಾಶಿಯಲ್ಲಿ ಜನಿಸಿದವರಿಗೆ ಈ ವಾರದಲ್ಲಿ ತಮ್ಮ ಕನಸು ನನಸಾಗಲಿದೆ. ಇಡೀ ವಾರದಲ್ಲಿ ನಿಮಗೆ ಅದೃಷ್ಟದ ನೆರವು ದೊರೆಯಲಿದೆ. ಉದ್ಯೋಗದಲ್ಲಿರುವವರಿಗೆ ಸಮಯವು ಅನುಕೂಲಕರವಾಗಿದೆ. ಬಡ್ತಿ ಪಡೆಯುವ ಇಚ್ಛೆಯು ಈಡೇರಲಿದೆ. ಆದರೆ ಈ ವಾರದಲ್ಲಿ ನೀವು ಸಾಕಷ್ಟು ಸಮಯ ಮತ್ತು ಗಮನವನ್ನು ಕೌಟುಂಬಿಕ ವಿಚಾರಗಳಿಗೆ ಮೀಸಲಿಡಬೇಕಾಗುತ್ತದೆ. ವಿದೇಶದಲ್ಲಿ ವ್ಯವಹಾರವನ್ನು ನಡೆಸುವವರಿಗೆ ಹೆಚ್ಚುವರಿ ಲಾಭ ದೊರೆಯಲಿದೆ. ನಿಮ್ಮ ಜೀವನ ಸಂಗಾತಿಯ ಜೊತೆಗೆ ಉತ್ತಮ ಬಾಂಧವ್ಯವನ್ನು ರೂಪಿಸುವ ಕಾರಣ ನಿಮ್ಮ ಎಲ್ಲಾ ಸವಾಲುಗಳನ್ನು ಬಗೆಹರಿಸಲು ನಿಮಗೆ ಸಾಧ್ಯವಾಗಲಿದೆ. ಮಾತ್ರವಲ್ಲದೆ ನಿಮ್ಮ ಕುಟುಂಬದ ಸದಸ್ಯರ ಜೊತೆಗೆ ಅದ್ಭುತ ಕ್ಷಣಗಳನ್ನು ಕಳೆಯಲಿದ್ದೀರಿ. ಕುಟುಂಬದ ಸದಸ್ಯರ ಹಸಿರು ನಿಶಾನೆ ದೊರೆತಲ್ಲಿ, ಪ್ರೇಮ ಸಂಬಂಧವು ವಿವಾಹದಲ್ಲಿ ಪರ್ಯವಸನಗೊಳ್ಳಬಹುದು. ಆರೋಗ್ಯವು ಎಂದಿನಂತೆ ಇರಲಿದೆ. ಈ ವಾರದ ಉತ್ತರಾರ್ಧದಲ್ಲಿ ಉದ್ಯೋಗಸ್ಥ ಮಹಿಳೆಯರು ಮನೆ ಮತ್ತು ಕೆಲಸದ ನಡುವೆ ಸಂತುಲನವನ್ನು ಕಾಪಾಡಲು ಹೆಣಗಾಡಬಹುದು. ಕೆಲಸಕ್ಕೆ ಸಂಬಂಧಿಸಿದಂತೆ ವಿದೇಶಕ್ಕೆ ಹೋಗುವ ಅವಕಾಶ ಲಭಿಸಬಹುದು.
ಸಿಂಹ: ಸಿಂಹ ರಾಶಿಯಲ್ಲಿ ಹುಟ್ಟಿದವರು ಈ ವಾರದಲ್ಲಿ ಸಣ್ಣ ಪುಟ್ಟ ವಿಷಯಗಳಿಗೆ ಹೆಚ್ಚಿನ ಒತ್ತನ್ನು ನೀಡುವ ಬದಲಿಗೆ ಅದನ್ನು ನಿರ್ಲಕ್ಷಿಸಬೇಕು. ಇದರಿಂದ ಸಂತಸ ಮತ್ತು ಆತ್ಮತೃಪ್ತಿ ದೊರೆಯಲಿದೆ. ಈ ವಾರದಲ್ಲಿ ನಿಮ್ಮ ವೃತ್ತಿಯಲ್ಲಿ ನೀವು ಮುಂದಕ್ಕೆ ಸಾಗಲಿದ್ದೀರಿ. ಕೆಲಸದ ಸ್ಥಳದಲ್ಲಿ ನಿಮ್ಮ ಸಹೋದ್ಯೋಗಿಗಳು ಮತ್ತು ಹಿರಿಯರ ಬೆಂಬಲವನ್ನು ನೀವು ಪಡೆಯಲಿದ್ದೀರಿ. ಯಾರಿಗಾದರೂ ನಿಮ್ಮ ಪ್ರೇಮವನ್ನು ನಿವೇದಿಸಿಕೊಳ್ಳಲು ನೀವು ಇಚ್ಛಿಸುವುದಾದರೆ ಗೆಳೆಯರೊಬ್ಬರು ನಿಮಗೆ ಸಹಕರಿಸಲಿದ್ದಾರೆ. ಈಗಾಗಲೇ ಪ್ರೇಮ ಸಂಬಂಧದಲ್ಲಿರುವ ವ್ಯಕ್ತಿಗಳು ತಮ್ಮ ಸಂಗಾತಿಯ ಕುರಿತು ಅಭಿಮಾನ ಹೊಂದಲಿದ್ದಾರೆ. ವೈವಾಹಿಕ ಬದುಕಿನಲ್ಲಿ ತೃಪ್ತಿ ನೆಲೆಸಲಿದೆ. ವಾರದ ಕೊನೆಗೆ ನಿಮ್ಮ ಮಕ್ಕಳಿಂದ ಏನಾದರೂ ಶುಭ ಸುದ್ದಿ ಬರಲಿದೆ. ಹವಾಮಾನದಲ್ಲಿ ಬದಲಾವಣೆ ಉಂಟಾಗುವ ಕಾರಣ ನಿಮ್ಮ ಆರೋಗ್ಯವನ್ನು ರಕ್ಷಿಸುವುದಕ್ಕಾಗಿ ಮುಂಜಾಗರೂಕತೆಯನ್ನು ವಹಿಸಿ. ನಿಮ್ಮ ಸಂಬಂಧಿಗಳ ಭಾವನೆಗಳನ್ನು ನಿರ್ಲಕ್ಷಿಸಬೇಡಿ. ಇಲ್ಲದಿದ್ದರೆ ಸಮಸ್ಯೆಯನ್ನು ಬಗೆಹರಿಸಿದ್ದಕ್ಕೆ ಕೃತಜ್ಞತೆಗಳನ್ನು ಪಡೆಯುವ ಬದಲಿಗೆ ಟೀಕೆಯನ್ನು ಕೇಳಬೇಕಾದೀತು.
ಕನ್ಯಾ: ಕನ್ಯಾ ರಾಶಿಯಲ್ಲಿ ಹುಟ್ಟಿದವರಿಗೆ ಈ ವಾರದಲ್ಲಿ ಕೆಲವೊಂದು ವಾಗ್ವಾದಗಳು ಮಾನಸಿಕ ತೊಂದರೆಗಳನ್ನು ಉಂಟು ಮಾಡಬಹುದು. ವಾರದ ಆರಂಭದಲ್ಲಿ ನೀವು ಕೋಪಗೊಳ್ಳಬಹುದು ಮತ್ತು ಅಡಚಣೆಗಳು, ಭೀತಿಗಳಿಂದ ರೋಸಿ ಹೋಗಬಹುದು. ನಿಮ್ಮ ಆರೋಗ್ಯವನ್ನು ನಿರ್ಲಕ್ಷಿಸಿದರೆ ಗಂಭೀರ ಸಮಸ್ಯೆಗಳು ಎದುರಾಗಬಹುದು. ನಿಮ್ಮ ಹಣವನ್ನು ಜಾಣ್ಮೆಯಿಂದ ನಿಭಾಯಿಸಿ. ಇಲ್ಲದಿದ್ದಲ್ಲಿ ಹಣಕಾಸಿನ ಸಮಸ್ಯೆಯು ನಿಮ್ಮ ಸಮಸ್ಯೆಗಳಿಗೆ ಪ್ರಮುಖ ಕಾರಣವೆನಿಸಬಹುದು. ಬೇರೆಯವರ ಪ್ರಭಾವಕ್ಕೆ ಒಳಗಾಗಿ ಯಾವುದೇ ನಿರ್ಧಾರವನ್ನು ತೆಗೆದುಕೊಳ್ಳಬೇಡಿ. ವಾರದ ಉತ್ತರಾರ್ಧ ಪರಿಸ್ಥಿತಿಯಲ್ಲಿ ಸ್ವಲ್ಪ ಬದಲಾವಣೆ ಉಂಟಾಗಲಿದೆ. ಈ ಅವಧಿಯಲ್ಲಿ ನಿಮ್ಮ ಪ್ರೇಮಿ ಅಥವಾ ಜೀವನ ಸಂಗಾತಿಯ ಜೊತೆಗಿನ ಸಂಬಂಧದಲ್ಲಿ ಅನ್ಯೋನ್ಯತೆ ಅಥವಾ ಸುಖೋಷ್ಣತೆಯನ್ನು ಅನುಭವಿಸಲಿದ್ದೀರಿ. ನಿಮ್ಮ ಪ್ರೇಮಿ ಅಥವಾ ಜೀವನ ಸಂಗಾತಿಯು ಯಾವುದೇ ಕಷ್ಟಕರ ಸಮಸ್ಯೆಯನ್ನು ಬಗೆಹರಿಸಲು ನಿಮಗೆ ಸಹಾಯ ಮಾಡಲಿದ್ದಾರೆ. ಅಲ್ಲದೆ ಬದುಕಿನ ಕುರಿತ ನಿಮ್ಮ ಅರಿವನ್ನು ವಿಸ್ತರಿಸಲಿದ್ದಾರೆ. ತಾಯಿಯ ಆರೋಗ್ಯದ ಕುರಿತ ಚಿಂತೆಯು ನಿಮ್ಮನ್ನು ಕಾಡಬಹುದು. ಹವಾಮಾನವು ಬದಲಾಗುತ್ತಿರುವ ಸಂದರ್ಭದಲ್ಲಿ ಅಜಾಗರೂಕತೆಯಿಂದ ವರ್ತಿಸಬೇಡಿ. ನಿಮ್ಮ ಆಹಾರಕ್ರಮಕ್ಕೆ ಸಾಕಷ್ಟು ಗಮನವನ್ನು ನೀಡಿರಿ.