ಪಂಚಾಂಗ:
- 03-01-2025, ಶುಕ್ರವಾರ
- ಸಂವತ್ಸರ:ಕ್ರೋಧಿ
- ಆಯನ: ಉತ್ತರಾಯಣ
- ಮಾಸ: ಮಾರ್ಗಶಿರ
- ಪಕ್ಷ: ಶುಕ್ಲ
- ತಿಥಿ: ಚತುರ್ಥಿ
- ನಕ್ಷತ್ರ: ಧನಿಷ್ಠ
- ಸೂರ್ಯೋದಯ:ಮುಂಜಾನೆ 06:42 ಗಂಟೆಗೆ
- ಅಮೃತಕಾಲ: ಬೆಳಗ್ಗೆ 08:07ರಿಂದ 09:32 ಗಂಟೆತನಕ
- ದುರ್ಮುಹೂರ್ತಂ: ಬೆಳಗ್ಗೆ 9:6ರಿಂದ 9:54 ಮತ್ತು 3:30ರಿಂದ 4:18 ಗಂಟೆವರೆಗೆ
- ರಾಹುಕಾಲ:ಬೆಳಗ್ಗೆ 10:57ರಿಂದ ಮಧ್ಯಾಹ್ನ 12:22 ಗಂಟೆತನಕ
- ಸೂರ್ಯಾಸ್ತ: ಸಂಜೆ 06:02 ಗಂಟೆಗೆ
ಮೇಷ: ನೀವು ಕೆಲಸದಲ್ಲಿ ಒತ್ತಡದಿಂದ ಮುಳುಗಿರುತ್ತೀರಿ. ಆದರೆ, ಇದು ನಿಮ್ಮ ವಿರೋಧಿಗಳು ಬಾಗಿಲು ತಟ್ಟುವುದನ್ನು ನಿಲ್ಲಿಸುವುದಿಲ್ಲ. ನೀವು ಉದಾರರು. ಆದರೆ ಅಗತ್ಯವಾದಾಗ ಕಿಲಾಡಿಗಳೂ ಆಗಿರುತ್ತೀರಿ. ಜನರು ಈ ವೇಳೆಗೆ ನಿಮ್ಮ ಕುರಿತು ತಿಳಿದಿರುತ್ತಾರೆ. ನೀವು ಮುನ್ನಡೆಯುವುದು ಸೂಕ್ತ.
ವೃಷಭ: ಒತ್ತಡಕ್ಕೆ ಇಂದು ಬೆಲೆ ತೆರಬೇಕು. ಕಠಿಣ ದಿನ ಮುಂದಿದೆ. ನಿಮ್ಮೊಂದಿಗೆ ಸಮಯ ಕಳೆಯಲು ಏಕಾಂತ ಬೇಕು. ಬಾಂಧವ್ಯಗಳಲ್ಲಿ, ಜೀವಿಸು ಮತ್ತು ಜೀವಿಸಲು ಬಿಡು ಎನ್ನುವುದು ನಿಮ್ಮ ಉದ್ದೇಶ.
ಮಿಥುನ: ಇಂದು ನೀವು ಇತರರ ಭಾವನೆಗಳಿಗೆ ಘಾಸಿಯುಂಟು ಮಾಡುವುದರ ಬಗ್ಗೆ ಎಚ್ಚರಿಕೆ ವಹಿಸಬೇಕು. ವಿಷಯದ ಮೇಲೆ ನಿಮ್ಮ ಅಭಿಪ್ರಾಯ ಹೇಳಿ ಸಮಸ್ಯೆಗಳ ನಿವಾರಣೆಗೆ ನೆರವಾಗಬೇಕು. ಸಂಜೆ ಧಾರ್ಮಿಕ ಮತ್ತು ಬೌದ್ಧಿಕ ಅನ್ವೇಷಣೆಗಳಲ್ಲಿ ತೊಡಗುವಿರಿ.
ಕರ್ಕಾಟಕ: ನಿಮಗೆ ಅತ್ಯಂತ ಸವಾಲಿನ ಮತ್ತು ಸಂಕೀರ್ಣ ದಿನವಾಗುವ ಸಾಧ್ಯತೆ ಇದೆ. ನೀವು ವಿಶ್ವಾಸದಲ್ಲಿ ಕೊರತೆ ಅನುಭವಿಸುವಿರಿ. ನಿಮ್ಮನ್ನು ನಿಗ್ರಹಿಸಿದ ಭಾವನೆ ಹೊಂದುತ್ತೀರಿ. ಕೆಲವೊಮ್ಮೆ ಅಗತ್ಯವಿರುವಂತೆ ನೀವು ಸಮರ್ಥನೀಯವಾಗಿರುವುದಿಲ್ಲ.
ಸಿಂಹ:ನಿಮ್ಮ ಪಾಲುದಾರರು ಅಥವಾ ಸಂಗಾತಿಯಿಂದ ನಿಮ್ಮ ನಿರೀಕ್ಷೆಗಳು ಈಡೇರುವ ಸಾಧ್ಯತೆ ಇಲ್ಲ. ಆದ್ದರಿಂದ ಅವುಗಳಿಗೆ ಆದ್ಯತೆ ಕಡಿಮೆ ಮಾಡಿ. ವ್ಯಾಪಾರಿಗಳು ಮತ್ತು ಕಮಿಷನ್ ಏಜೆಂಟರಿಗೆ ಕಠಿಣ ದಿನ. ಪ್ರಮುಖ ದಾಖಲೆಗಳನ್ನು ಎಚ್ಚರಿಕೆಯಿಂದ ಪರಿಶೀಲಿಸಿದ ನಂತರ ಸಹಿ ಹಾಕಬೇಕು.
ಕನ್ಯಾ: ನೀವು ನಿಮ್ಮ ಮಾನದಂಡವನ್ನು ಎತ್ತರಿಸಿಕೊಳ್ಳುತ್ತೀರಿ. ನಿಮಗೆ ಉನ್ನತ ಗುರಿಗಳನ್ನು ನಿಗದಿಪಡಿಸಿಕೊಳ್ಳುತ್ತೀರಿ ಮತ್ತು ಪ್ರಸ್ತುತವಿರುವ ಅಡೆತಡೆಗಳನ್ನು ನಿವಾರಿಸಲು ಬಯಸುತ್ತೀರಿ. ಮಧ್ಯಾಹ್ನ ನಿಮ್ಮ ಹಣಕಾಸಿನ ಕುರಿತು ಬಹಳ ಆತಂಕ ಪಡುತ್ತೀರಿ. ಸಣ್ಣ ವಿಷಯಗಳು ನಿಮ್ಮ ಉತ್ಸಾಹ ಕುಂದಿಸುತ್ತವೆ.