ಕರ್ನಾಟಕ

karnataka

ETV Bharat / spiritual

ವಾರ ಭವಿಷ್ಯ: ಪ್ರೇಮಿಗಳಿಗೆ ಎದುರಾಗಲಿದೆ ಸವಾಲು; ಹಣ ಹೂಡಿಕೆ ಮಾಡುವವರು ಎಚ್ಚರದಿಂದಿರಿ! - WEEKLY HOROSCOPE

ಈ ವಾರದ ರಾಶಿ ಭವಿಷ್ಯ ಹೀಗಿದೆ.

Weekly Horoscope
ವಾರದ ರಾಶಿ ಭವಿಷ್ಯ (ETV Bharat)

By ETV Bharat Karnataka Team

Published : Jan 5, 2025, 5:16 AM IST

ಮೇಷ :ಪ್ರಣಯ ಸಂಬಂಧಕ್ಕೆ ಸಂಬಂಧಿಸಿದಂತೆ ಈ ವಾರವು ಮೇಷ ರಾಶಿಯವರ ಪಾಲಿಗೆ ವಿಶೇಷವೆನಿಸಲಿದೆ. ನಿಮ್ಮ ವೈವಾಹಿಕ ಸಂಬಂಧದಲ್ಲಿ ಸ್ವಲ್ಪ ಒತ್ತಡ ಕಾಣಿಸಿಕೊಳ್ಳಬಹುದು. ಆದರೆ ಪಕ್ವತೆಯನ್ನು ತೋರಿಸುವ ಮೂಲಕ ನೀವು ಪರಿಸ್ಥಿತಿಯನ್ನು ಚೆನ್ನಾಗಿ ನಿಭಾಯಿಸಲಿದ್ದೀರಿ. ಈ ವಾರದಲ್ಲಿ ಹಣವನ್ನು ಪೋಲು ಮಾಡದೆ ಎಚ್ಚರಿಕೆಯಿಂದ ಖರ್ಚು ಮಾಡಿರಿ. ಉದ್ಯೋಗಸ್ಥರ ಕುರಿತು ಹೇಳುವುದಾದರೆ, ನಿಮ್ಮ ಹುದ್ದೆಯಲ್ಲಿ ನೀವು ಬದಲಾವಣೆಯನ್ನು ಬಯಸುವುದಾದರೆ ಈಗ ಈ ನಿಟ್ಟಿನಲ್ಲಿ ಕೈ ಹಾಕಬೇಡಿ. ವಿದ್ಯಾರ್ಥಿಗಳ ಕುರಿತು ಮಾತನಾಡುವುದಾದರೆ, ಈ ವಾರದಲ್ಲಿ ನೀವು ಕಠಿಣ ಅಧ್ಯಯನ ಮಾಡದಿದ್ದರೆ, ನಿಮ್ಮ ನಿರೀಕ್ಷೆಗೆ ತಕ್ಕುದಾದ ಫಲಿತಾಂಶ ದೊರೆಯದು. ನಿಮ್ಮ ಆರೋಗ್ಯದ ಕುರಿತು ಹೇಳುವುದಾದರೆ, ಈ ವಾರದಲ್ಲಿ ಮಾನಸಿಕ ಒತ್ತಡಕ್ಕೆ ಒಳಗಾಗಬೇಡಿ. ಏಕೆಂದರೆ ಇದು ಋಣಾತ್ಮಕ ಪರಿಣಾಮವನ್ನು ಬೀರಬಹುದು. ನೀವು ತಂಪು ಆಹಾರವನ್ನು ಸೇವಿಸಿದರೆ ಶೀತ, ಕೆಮ್ಮ ಅಥವಾ ಇತರ ಕಾಯಿಲೆಗಳಿಗೆ ಒಳಗಾಗಬಹುದು.

ವೃಷಭ :ಪ್ರಣಯ ಸಂಬಂಧಕ್ಕೆ ಸಂಬಂಧಿಸಿದಂತೆ ವೃಷಭ ರಾಶಿಯವರಿಗೆ ಈ ವಾರವು ಅನುಕೂಲಕರವಾಗಿದೆ. ನಿಮ್ಮ ಸಂಗಾತಿ ಮತ್ತು ನೀವು ಒಟ್ಟಿಗೆ ಪ್ರಣಯಭರಿತ ಸಮಯವನ್ನು ಕಳೆಯಲಿದ್ದೀರಿ. ಕೌಟುಂಬಿಕ ವಾತಾರವಣವು ಈ ವಾರದಲ್ಲಿ ಸ್ವಲ್ಪ ದಾರಿ ತಪ್ಪಬಹುದು. ಹಣಕಾಸಿನ ವಿಚಾರಕ್ಕೆ ಸಂಬಂಧಿಸಿದಂತೆ ನಿಮಗೆ ಸಮೃದ್ಧಿ ಉಂಟಾಗಲಿದೆ. ನಿಮ್ಮ ಹಿಂದಿನ ಹೂಡಿಕೆಗೆ ಫಲಿತಾಂಶವನ್ನು ಪಡೆಯಲು ಈ ವಾರವು ಸಕಾಲ. ವ್ಯವಹಾರದಲ್ಲಿ ತೊಡಗಿಸಿಕೊಂಡಿರುವವರು ಈ ವಾರದಲ್ಲಿ ಸ್ವಲ್ಪ ಎಚ್ಚರಿಕೆಯಿಂದ ಇರಬೇಕು. ನಿಮ್ಮ ವ್ಯವಹಾರದಲ್ಲಿ ಏರುಪೇರು ಉಂಟಾಗಬಹುದು. ಉದ್ಯೋಗದಲ್ಲಿರುವವರು ಈ ವಾರದಲ್ಲಿ ಕೆಲಸಕ್ಕಾಗಿ ಪ್ರಯಾಣಿಸಬೇಕಾದೀತು. ಎಳೆಯ ವ್ಯಕ್ತಿಗಳು ಉನ್ನತ ಶಿಕ್ಷಣವನ್ನು ಮುಂದುವರಿಸುವುದಕ್ಕಾಗಿ ಪ್ರಯತ್ನ ಪಟ್ಟರೆ ಮಾತ್ರವೇ ಯಶಸ್ಸು ಲಭಿಸಲಿದೆ. ಆರೋಗ್ಯದ ಕುರಿತು ಹೇಳುವುದಾದರೆ, ನೀವು ಕಿಬ್ಬೊಟ್ಟೆ ಅಥವಾ ಹೊಟ್ಟೆ ನೋವಿಗೆ ಈಡಾಗಬಹುದು. ಹೀಗಾಗಿ ಎಚ್ಚರಿಕೆ ವಹಿಸಿ.

ಮಿಥುನ :ಮಿಥುನ ರಾಶಿಯಲ್ಲಿ ಜನಿಸಿದವರಿಗೆ ಈ ವಾರವು ಅನುಕೂಲಕರವಾಗಿದೆ. ನಿಮ್ಮ ವೈವಾಹಿಕ ಬದುಕಿನ ಕುರಿತು ಹೇಳುವುದಾದರೆ, ನಿಮ್ಮ ಜೀವನ ಸಂಗಾತಿಗೆ ನಿಮಗಾಗಿ ಸಮಯವನ್ನು ಮೀಸಲಿಡಲು ಸಾಧ್ಯವಾಗದಿದ್ದರೆ, ಅವರ ಬಿಡುವಿಲ್ಲದ ವೇಳಾಪಟ್ಟಿಯ ಕುರಿತು ನೀವು ಅರಿತುಕೊಳ್ಳಬೇಕು. ಅಲ್ಲದೆ, ಹಣಕಾಸಿನ ಸ್ಥಿತಿಗತಿಯ ಕುರಿತು ನಾವು ಮಾತನಾಡುವುದಾದರೆ, ಈ ವಾರದಲ್ಲಿ ನಿಮಗೆ ಸ್ವಲ್ಪ ನಷ್ಟ ಉಂಟಾಗಬಹುದು. ಹೀಗಾಗಿ ನೀವು ಎಚ್ಚರಿಕೆ ವಹಿಸಬೇಕು. ಉದ್ಯೋಗದಲ್ಲಿರುವ ವ್ಯಕ್ತಿಗಳ ಕುರಿತು ಮಾತನಾಡುವುದಾದರೆ, ಕೆಲಸದಲ್ಲಿ ಬದಲಾವಣೆ ಕಾಣಲು ನೀವು ಇಚ್ಛಿಸುವುದಾದರೆ ನೀವು ಈ ನಿಟ್ಟಿನಲ್ಲಿ ಹೆಜ್ಜೆ ಇಡಬಹುದು. ಏಕೆಂದರೆ ಈ ಕ್ರಮ ತೆಗೆದುಕೊಳ್ಳಲು ಇದು ಸಕಾಲ. ಟೂರ್ನಮೆಂಟ್‌ ಗೆ ನೀವು ಸಿದ್ಧತೆ ನಡೆಸುತ್ತಿದ್ದರೆ ನೀವು ಸಾಕಷ್ಟು ಪ್ರಯತ್ನ ಪಡಬೇಕು. ನೀವು ಇದರಲ್ಲಿ ಯಶಸ್ಸನ್ನು ಸಾಧಿಸಲಿದ್ದೀರಿ. ಆರೋಗ್ಯದ ಕುರಿತು ಹೇಳುವುದಾದರೆ, ನಿಮ್ಮ ಹಿಂದಿನ ಕಾಯಿಲೆಗಳು ಈ ವಾರದಲ್ಲಿ ಮರುಕಳಿಸಬಹುದು. ಹೀಗಾಗಿ ನೀವು ವೈದ್ಯರನ್ನು ಭೇಟಿಯಾಗಿ ಸರಿಯಾದ ಚಿಕಿತ್ಸೆಯನ್ನು ಪಡೆದುಕೊಳ್ಳಬೇಕು.

ಕರ್ಕಾಟಕ :ಕರ್ಕಾಟಕ ರಾಶಿಯಲ್ಲಿ ಜನಿಸಿದವರಿಗೆ ಈ ವಾರವು ಅನುಕೂಲಕರವಾಗಿದೆ. ನಿಮ್ಮ ಹಳೆಯ ಗೆಳೆಯರನ್ನು ನೀವು ಭೇಟಿಯಾಗಲಿದ್ದೀರಿ. ವಿವಾಹಿತ ವ್ಯಕ್ತಿಗಳು ತಮ್ಮ ಬದುಕಿನಲ್ಲಿ ಏನಾದರೂ ಹೊಸತನ್ನು ಹಾಗೂ ಭಿನ್ನವಾಗಿರುವುದನ್ನು ಮಾಡಲಿದ್ದಾರೆ. ಅಗತ್ಯವಿದ್ದಲ್ಲಿ ನಿಮ್ಮ ಗೆಳೆಯರು ನಿಮಗೆ ಸಹಾಯ ಮಾಡಲಿದ್ದಾರೆ. ಆರ್ಥಿಕವಾಗಿ ಅವರಿಂದ ನಿಮಗೆ ನೆರವು ದೊರೆಯಲಿದೆ. ಉದ್ಯೋಗಸ್ಥರ ಕುರಿತು ಹೇಳುವುದಾದರೆ, ಈ ವಾರದಲ್ಲಿ ಕೆಲಸದ ಸ್ಥಳದ ರಾಜಕೀಯದಲ್ಲಿ ಪಾಲ್ಗೊಳ್ಳಬೇಡಿ. ಇದರಿಂದ ಕೆಲಸದ ಸ್ಥಳದಲ್ಲಿ ಸಮಸ್ಯೆ ಉಂಟಾಗಬಹುದು. ಒಂದು ವೇಳೆ ನೀವು ಸ್ಪರ್ಧೆಗಾಗಿ ಸಿದ್ಧತೆ ನಡೆಸುತ್ತಿದ್ದರೆ, ನೀವು ಇದನ್ನು ಆನಂದಿಸಲಿದ್ದು ಯಶಸ್ಸನ್ನು ಗಳಿಸಲಿದ್ದೀರಿ. ಕಠಿಣ ಶ್ರಮ ಪಟ್ಟು ನಿಮ್ಮ ಗುರಿಯನ್ನು ಸಾಧಿಸಿ. ನಿಮ್ಮ ಆರೋಗ್ಯದ ಕುರಿತು ಹೇಳುವುದಾದರೆ, ನಿಮ್ಮ ಆಹಾರ ಕ್ರಮದ ಕುರಿತು ಗಮನ ವಹಿಸಿ. ಮುಖ್ಯವಾಗಿ ಯೋಗ ಮತ್ತು ಬೆಳಗ್ಗಿನ ನಡಿಗೆಗೆ ಒತ್ತು ನೀಡಿರಿ.

ಸಿಂಹ :ಸಿಂಹ ರಾಶಿಯವರು ಈ ವಾರವನ್ನು ಚೆನ್ನಾಗಿ ಕಳೆಯಲಿದ್ದಾರೆ. ಪ್ರಣಯ ಸಂಬಂಧಕ್ಕೆ ಸಂಬಂಧಿಸಿದಂತೆ, ನಿಮ್ಮ ಸಂಗಾತಿಯ ಜೊತೆಗಿನ ಸಂಬಂಧದಲ್ಲಿ ಯಾರಿಗೂ ಸಂದೇಹ ವ್ಯಕ್ತಪಡಿಸಲು ಅವಕಾಶ ನೀಡಬೇಡಿ. ವೈವಾಹಿಕ ಜೀವನವನ್ನು ಇನ್ನಷ್ಟು ಆನಂದಿಸಬೇಕಾದರೆ ನಿಮ್ಮ ಕೋಪವನ್ನು ನಿಯಂತ್ರಿಸಿ. ಈ ವಾರದಲ್ಲಿ ರಿಯಲ್‌ ಎಸ್ಟೇಟ್‌ ಅಥವಾ ಜಮೀನಿನ ಖರೀದಿಯಲ್ಲಿ ನೀವು ಹಣವನ್ನು ಖರ್ಚು ಮಾಡಬಹುದು. ಈ ವಾರದಲ್ಲಿ ಪ್ರಸಿದ್ಧ ವ್ಯಕ್ತಿಗಳನ್ನು ನೀವು ಭೇಟಿಯಾಗಲಿದ್ದೀರಿ. ಉದ್ಯೋಗದಲ್ಲಿರುವವರು ತಮ್ಮ ಕೆಲಸವನ್ನು ಬದಲಾಯಿಸಬಾರದು. ಏಕೆಂದರೆ ಈಗಾಗಲೇ ಇರುವ ಕೆಲಸದಲ್ಲಿಯೇ ಪ್ರಗತಿ ಸಾಧಿಸಲು ಅವಕಾಶ ಲಭಿಸಲಿದೆ. ನೀವು ಸ್ಪರ್ಧೆ ಅಥವಾ ಕಾಲೇಜು ಶಿಕ್ಷಣಕ್ಕೆ ಸಿದ್ಧತೆ ನಡೆಸುತ್ತಿದ್ದರೆ ನಿಮ್ಮ ಅಧ್ಯಯನದಲ್ಲಿ ಎಲ್ಲಾ ಪ್ರಯತ್ನವನ್ನು ಕೇಂದ್ರೀಕರಿಸಿ. ಆರೋಗ್ಯದ ಕುರಿತು ಹೇಳುವುದಾದರೆ, ತಂಪಗಿನ ಮತ್ತು ಹುಳಿ ಆಹಾರವನ್ನು ಸೇವಿಸುವುದನ್ನು ನೀವು ಕಡಿಮೆ ಮಾಡದಿದ್ದರೆ ಈ ವಾರದಲ್ಲಿ ನಿಮಗೆ ಗಂಟಲು ನೋವು ಉಂಟಾಗಬಹುದು.

ಕನ್ಯಾಕನ್ಯಾ ರಾಶಿಯವರಿಗೆ ಈ ವಾರದಲ್ಲಿ ಬೇರೆ ಬೇರೆ ಫಲಿತಾಂಶಗಳು ಲಭಿಸಬಹುದು. ನಿಮ್ಮ ಪ್ರಣಯ ಸಂಬಂಧದ ಕುರಿತು ನಿಮ್ಮ ಸಂಗಾತಿಯೊಂದಿಗೆ ನೀವು ಪ್ರಾಮಾಣಿಕತೆಯಿಂದ ಮಾತನಾಡಿದರೆ ಒಳ್ಳೆಯದು. ಏಕೆಂದರೆ ನೀವು ಪ್ರೀತಿಸುತ್ತಿರುವ ವ್ಯಕ್ತಿಯ ಕುರಿತು ತಪ್ಪು ಗ್ರಹಿಕೆ ಉಂಟಾಗುವ ಕಾರಣ ಸಂಘರ್ಷ ಕಾಣಿಸಿಕೊಳ್ಳಬಹುದು. ನಿಮ್ಮ ಆರ್ಥಿಕ ಸ್ಥಿತಿಯ ಕುರಿತು ಹೇಳುವುದಾದರೆ, ಈ ವಾರದಲ್ಲಿ ನಿಮ್ಮ ಆದಾಐದಲ್ಲಿ ಹೆಚ್ಚಳ ಉಂಟಾಗಬಹುದು. ಆದರೆ ನಿಮ್ಮ ಖರ್ಚುವೆಚ್ಚದಲ್ಲೂ ಹೆಚ್ಚಳ ಉಂಟಾಗಬಹುದು. ಈ ವಾರದಲ್ಲಿ ಅನುಭವಿ ವ್ಯಕ್ತಿಯೊಬ್ಬರನ್ನು ನೀವು ಭೇಟಿಯಾಗಲಿದ್ದು, ನಿಮ್ಮ ಸಂಸ್ಥೆಯನ್ನು ಬೆಳೆಸಲು ಅವರು ಸಹಾಯ ಮಾಡಲಿದ್ದಾರೆ. ಈ ವಾರದಲ್ಲಿ ನಿಮ್ಮ ಆರೋಗ್ಯವು ದುರ್ಬಲವಾಗಿರಲಿದೆ. ಋತುಮಾನಕ್ಕೆ ಸಂಬಂಧಿಸಿದ ಕಾಯಿಲೆಗಳು ನಿಮಗೆ ಸಮಸ್ಯೆಯನ್ನುಂಟು ಮಾಡಬಹುದು. ನಿಮ್ಮ ದೈಹಿಕ ಯೋಗಕ್ಷೇಮವನ್ನು ಕಾಪಾಡುವುದಕ್ಕಾಗಿ ಪ್ರತಿ ನಿತ್ಯವೂ ಯೋಗವನ್ನು ಅಭ್ಯಸಿಸಿ. ನಿಮ್ಮ ದೇಹಕ್ಕೆ ಜೀವಸತ್ವಗಳ ಅಗತ್ಯವಿದೆಯೇ ಎಂಬುದನ್ನು ಪರಿಶೀಲಿಸಿ. ಅಗತ್ಯವಿದ್ದಲ್ಲಿ ಪೂರಕ ಜೀವಸತ್ವಗಳನ್ನು ಪಡೆಯಿರಿ.

ತುಲಾ :ತುಲಾ ರಾಶಿಯಲ್ಲಿ ಜನಿಸಿದವರಿಗೆ ಈ ವಾರವು ಅನುಕೂಲಕರವಾಗಿದೆ. ಈ ವಾರದಲ್ಲಿ ನಿಮ್ಮ ಪ್ರಣಯ ಸಂಗಾತಿಯೊಂದಿಗೆ ನೀವು ಎಚ್ಚರಿಕೆಯಿಂದ ಮಾತನಾಡಬೇಕು. ಈ ರೀತಿ ಮಾಡುವ ಮೂಲಕ ನಿಮ್ಮ ಸಂಬಂಧವು ಗಟ್ಟಿಗೊಳ್ಳಲಿದ್ದು ಯಾವುದೇ ಸಂಘರ್ಷವು ಉಂಟಾಗದು. ನಿಮ್ಮ ಆರ್ಥಿಕ ಸ್ಥಿತಿಯ ಕುರಿತು ಮಾತನಾಡುವುದಾದರೆ, ನೀವು ಸಾಕಷ್ಟು ಹಣವನ್ನು ಗಳಿಸಲಿದ್ದೀರಿ. ಆದರೆ ಈ ಸಂದರ್ಭದಲ್ಲಿ ನೀವು ಸಾಕಷ್ಟು ಹಣವನ್ನು ಖರ್ಚು ಮಾಡಲಿದ್ದೀರಿ. ಇಂತಹ ಸಂದರ್ಭದಲ್ಲಿ ಸಾಕಷ್ಟು ಎಚ್ಚರಿಕೆಯಿಂದ ಹಣ ಖರ್ಚು ಮಾಡಿರಿ. ಇಲ್ಲದಿದ್ದರೆ ಹಣ ಎಲ್ಲಿಂದ ಬಂತು ಮತ್ತು ಎಲ್ಲಿಗೆ ಹೋಯಿತು ಎಂಬ ಕುರಿತು ನಿಮಗೆ ಅರಿವೇ ಇರದು. ಉದ್ಯೋಗದಲ್ಲಿ ಬದಲಾವಣೆಯನ್ನು ಇಚ್ಛಿಸುತ್ತಿದ್ದರೆ ಇನ್ನಷ್ಟು ಒಳ್ಳೆಯ ಸಮಯಕ್ಕಾಗಿ ಕಾಯಿರಿ. ಈಗಾಗಲೇ ಯಾವುದೇ ಬದಲಾವಣೆಯನ್ನು ಮಾಡಬೇಡಿ ಹಾಗೂ ಈಗ ಇರುವಲ್ಲಿಯೇ ಕೆಲಸವನ್ನು ಮುಂದುವರಿಸಿ.

ವೃಶ್ಚಿಕ :ವೃಶ್ಚಿಕ ರಾಶಿಯಲ್ಲಿ ಜನಿಸಿದವರು ಈ ವಾರದಲ್ಲಿ ಸಾಕಷ್ಟು ಕಾರ್ಯಚಟುವಟಿಕೆಯಿಂದ ಕೂಡಿರಲಿದ್ದಾರೆ. ಇಂತಹ ಸಂದರ್ಭದಲ್ಲಿ ನಿಮ್ಮ ಸಂಗಾತಿಯೊಂದಿಗೆ ಸಮಯವನ್ನು ಕಳೆಯಲು ನಿಮಗೆ ಸಾಧ್ಯವಾಗದು. ಇದರ ಪರಿಣಾಮವಾಗಿ ನೀವು ಮತ್ತು ನಿಮ್ಮ ಸಂಗಾತಿಯ ನಡುವೆ ಅಂತರ ಉಂಟಾಗಬಹುದು. ನಿಮ್ಮ ಆರ್ಥಿಕ ಸ್ಥಿತಿಯ ಕುರಿತು ಹೇಳುವುದಾದರೆ, ನಿಮ್ಮ ಹಣವನ್ನು ನೀವು ವಾಪಾಸ್‌ ಪಡೆಯಲಿದ್ದು ಇದರಿಂದ ನಿಮಗೆ ಸಂತಸ ದೊರೆಯಲಿದೆ. ಉನ್ನತ ಶಿಕ್ಷಣ ಪಡೆಯುತ್ತಿರುವವರಿಗೆ ಈ ವಾರವು ಅನುಕೂಲಕರವಾಗಿದೆ. ನೀವು ಸ್ಪರ್ಧೆಗಳಿಗೆ ಸಿದ್ಧತೆ ನಡೆಸುತ್ತಿದ್ದರೆ ನಿಮಗೆ ಯಶಸ್ಸು ಲಭಿಸಲಿದೆ. ನಿಮ್ಮ ಆರೋಗ್ಯಕ್ಕೆ ಸಂಬಂಧಿಸಿದಂತೆ ಹೇಳುವುದಾದರೆ, ನೀವು ತಂಪು ಪಾನೀಯ ಮತ್ತು ಮೊಸರನ್ನು ಸೇವಿಸಬಾರದು. ಏಕೆಂದರೆ ಇವುಗಳಿಂದಾಗಿ ಗಂಟಲಿನಲ್ಲಿ ಕಿರಿಕಿರಿ ಉಂಟಾಗಬಹುದು.

ಧನು :ಜೋಡಿಗಳಿಗೆ ಸಂಬಂಧಿಸಿದಂತೆ ಈ ವಾರವು ಸ್ವಲ್ಪ ಸವಾಲಿನಿಂದ ಕೂಡಿದೆ. ಹೀಗಾಗಿ ಅವರು ತಮ್ಮ ಪ್ರಣಯ ಸಂಬಂಧದ ಕುರಿತು ಸಾಕಷ್ಟು ಕಾಳಜಿ ವಹಿಸಬೇಕು. ಈ ವಾರದಲ್ಲಿ ಹಣದ ಕುರಿತು ನಿಮಗೆ ಚಿಂತೆ ಕಾಡಬಹುದು. ಈ ವಾರದಲ್ಲಿ ನಿಮ್ಮ ಬಳಿ ಸಾಕಷ್ಟು ಹಣ ಇಲ್ಲದಿರುವ ಕಾರಣ ನಿಮ್ಮ ವೆಚ್ಚದ ಮೇಲೆ ಸ್ವಲ್ಪ ನಿಯಂತ್ರಣ ಇಡುವುದು ಒಳ್ಳೆಯದು. ನಿಮ್ಮ ವ್ಯವಹಾರದ ಕುರಿತು ಮಾತನಾಡುವುದಾದರೆ, ವಿದೇಶಿ ಸಂಸ್ಥೆಯೊಂದಿಗೆ ನೀವು ಪ್ರಮುಖ ಒಪ್ಪಂದವೊಂದನ್ನು ಮಾಡಲಿದ್ದು, ಇದರಿಂದಾಗಿ ಸಾಕಷ್ಟು ಸಂಪರ್ಕವು ನಿಮಗೆ ಲಭಿಸಲಿದೆ. ಇದೇ ವೇಳೆ, ಅಧ್ಯಯನದಿಂದ ಗಮನವು ಬೇರೆಡೆ ಹೋಗುವ ಕಾರಣ ಸಮಸ್ಯೆಗಳು ಉಂಟಾಗಬಹುದು. ಅಲ್ಲದೆ ನೀವು ಸ್ಪರ್ಧಾತ್ಮಕ ಪರೀಕ್ಷೆಗಾಗಿ ಸಿದ್ಧತೆ ನಡೆಸುತ್ತಿದ್ದರೆ, ಈ ವಾರದಲ್ಲಿ ನಿಮಗೆ ಯಶಸ್ಸು ಲಭಿಸಲಿದೆ. ಈ ವಾರದಲ್ಲಿ ನಿಮ್ಮ ಆರೋಗ್ಯಕ್ಕೆ ಹೆಚ್ಚಿನ ಗಮನ ನೀಡಿರಿ. ಈ ವಾರದಲ್ಲಿ ನಿಮ್ಮ ಆರೋಗ್ಯಕ್ಕೆ ಹೆಚ್ಚಿನ ಗಮನ ನೀಡಿರಿ. ನಿಮ್ಮನ್ನು ದೌರ್ಬಲ್ಯ ಕಾಡುತ್ತಿದ್ದರೆ ವಿಟಮಿನ್‌ ಡಿ ಸಂಬಂಧಿತ ಔಷಧಿಯನ್ನು ತೆಗೆದುಕೊಳ್ಳುವುದನ್ನು ಮುಂದುವರಿಸಿ. ಇದನ್ನು ಸೇವಿಸಿದ ನಂತರವೂ ನೀವು ಚೇತರಿಕೆಯನ್ನು ಕಾಣದಿದ್ದರೆ ನೀವು ಖಂಡಿತವಾಗಿಯೂ ವೈದ್ಯರನ್ನು ಭೇಟಿಯಾಗಬೇಕು.

ಮಕರ :ಮಕರ ರಾಶಿಯವರಿಗೆ ಈ ವಾರದಲ್ಲಿ ಉತ್ತಮ ಫಲ ದೊರೆಯಲಿದೆ. ಬಾಕಿ ಉಳಿದಿರುವ ನಿಮ್ಮ ಹಳೆಯ ವ್ಯವಹಾರವನ್ನು ಪೂರ್ಣಗೊಳಿಸುವ ಮೂಲಕ ನೀವು ಹಣವನ್ನು ಪಡೆಯಲಿದ್ದೀರಿ. ವ್ಯಾಪಾರೋದ್ಯಮಿಗಳ ಕುರಿತು ಮಾತನಾಡುವುದಾದರೆ, ದೀರ್ಘ ಕಾಲದಿಂದ ಹಿನ್ನಡೆ ಅನುಭವಿಸುತ್ತಿದ್ದ ಉದ್ಯಮಕ್ಕೆ ಪುನಶ್ಚೇತನ ಒದಗಿಸಿ ಇದನ್ನು ಲಾಭದತ್ತ ಕೊಂಡೊಯ್ಯಲಿದ್ದೀರಿ. ನಿಮ್ಮ ಶಿಕ್ಷಣ ಮತ್ತು ಜ್ಞಾನದ ಕುರಿತು ಹೇಳುವುದಾದರೆ, ನಿಮ್ಮ ಅಧ್ಯಯನದ ಬದಲಿಗೆ ಬೇರೆ ವಿಷಯಗಳ ಕುರಿತು ನೀವು ಹೆಚ್ಚಿನ ಗಮನವನ್ನು ನೀಡಲಿದ್ದೀರಿ. ಇದರಿಂದಾಗಿ ಅಗತ್ಯ ವಿಷಯದತ್ತ ಗಮನ ನೀಡಲು ನಿಮಗೆ ಸಾಧ್ಯವಾಗದು. ಈ ವಾರದಲ್ಲಿ ನಿಮ್ಮ ಆರೋಗ್ಯದಲ್ಲಿ ಕುಸಿತ ಉಂಟಾಗಬಹುದು. ಮುಖ್ಯವಾಗಿ ಹಲ್ಲು ನೋವಿನ ಕುರಿತು ನಿಮಗೆ ಚಿಂತೆ ಕಾಡಬಹುದು. ಇಂತಹ ಸಂದರ್ಭದಲ್ಲಿ ನೀವು ಎಚ್ಚರ ವಹಿಸಬೇಕು.

ಕುಂಭ :ಈ ವಾರದಲ್ಲಿ ಕುಂಭ ರಾಶಿಯವರು ತಮ್ಮ ಪ್ರಣಯ ಸಂಬಂಧದ ಕುರಿತು ಸಂಪೂರ್ಣವಾಗಿ ತೃಪ್ತಿ ಅನುಭವಿಸಲಿದ್ದಾರೆ. ಆದರೆ ಏನಾದರೂ ವಿಷಯದ ಕುರಿತು ನಿಮ್ಮ ಸಂಗಾತಿಯ ಜೊತೆಗೆ ನೀವು ವಾದ ಮಾಡಬಹುದು. ನಿಮ್ಮ ವೈವಾಹಿಕ ಸಂಬಂಧದಲ್ಲಿ ಸಾಮರಸ್ಯ ಕಾಪಾಡಬೇಕಾದರೆ ನೀವು ಪರಿಣಾಮಕಾರಿಯಾಗಿ ಕೆಲಸ ಮಾಡಬೇಕು. ಈ ವಾರದಲ್ಲಿ ರಿಯಲ್‌ ಎಸ್ಟೇಟ್​​ಗೆ ಸಂಬಂಧಿಸಿದ ಹೂಡಿಕೆ ಮಾಡುವ ಮೊದಲು ಸಲಹೆಗಾರರ ಸಲಹೆಯನ್ನು ಪಡೆಯುವುದು ಒಳ್ಳೆಯದು. ಉದ್ಯೋಗದಲ್ಲಿರುವವರು ಈ ವಾರದಲ್ಲಿ ಲಾಭ ಗಳಿಸಲಿದ್ದಾರೆ. ನಿಮ್ಮ ಉದ್ಯೋಗದಲ್ಲಿ ನೀವು ಗಣನೀಯ ಪ್ರಗತಿಯನ್ನು ಸಾಧಿಸಲಿದ್ದೀರಿ. ಬದುಕಿನಲ್ಲಿ ಯಶಸ್ಸನ್ನು ಸಾಧಿಸಬೇಕಾದರೆ ಉನ್ನತ ಶಿಕ್ಷಣ ಪಡೆಯುತ್ತಿರುವವರು ತಮ್ಮ ಅಧ್ಯಯನಕ್ಕೆ ಗಮನ ನೀಡಬೇಕು. ಈ ವಾರದಲ್ಲಿ ನಿಮ್ಮ ಆರೋಗ್ಯದಲ್ಲಿ ಹಿನ್ನಡೆ ಉಂಟಾಗಬಹುದು. ಆದರೆ ನೀವು ವೈದ್ಯರನ್ನು ಭೇಟಿಯಾದರೆ ತಕ್ಷಣವೇ ಚೇತರಿಕೆ ಕಾಣಲಿದ್ದೀರಿ. ಅಲ್ಲದೆ ನಿಮ್ಮ ಪ್ರತಿನಿತ್ಯದ ವೇಳಾಪಟ್ಟಿಯನ್ನು ಬದಲಾಯಿಸಲು ಯತ್ನಿಸಿ.

ಮೀನ :ಮೀನ ರಾಶಿಯವರು ತಮ್ಮ ಪ್ರಣಯ ಸಂಬಂಧಕ್ಕೆ ಸಂಬಂಧಿಸಿದಂತೆ ಧನಾತ್ಮಕ ಫಲಿತಾಂಶವನ್ನು ಪಡೆಯಲಿದ್ದಾರೆ. ನಿಮ್ಮ ಸಂಗಾತಿಯು ನಿಮ್ಮನ್ನು ತೃಪ್ತಿಪಡಿಸಲಿದ್ದಾರೆ. ನಿಮ್ಮ ವೈವಾಹಿಕ ಬದುಕಿನ ಕುರಿತು ಮಾತನಾಡುವುದಾದರೆ, ಉತ್ತಮ ಅನುರಾಗದೊಂದಿಗೆ ಇದು ಬಲವಾಗಿ ಮುಂದುವರಿಯಲಿದೆ. ಈ ವಾರದಲ್ಲಿ ಉದ್ಯಮಿಗಳು ಲಾಭ ಗಳಿಸಲಿದ್ದಾರೆ. ಅಲ್ಲದೆ ನಿಮ್ಮ ಕೆಲಸಕ್ಕೆ ಸಂಬಂಧಿಸಿದಂತೆ ಈ ವಾರವು ಅತ್ಯುತ್ತಮವಾಗಿದೆ. ನೀವು ಕೆಲಸವನ್ನು ಬದಲಾಯಿಸಲು ಇಚ್ಛಿಸುವುದಾದರೆ ಈ ವಾರವು ನಿಮಗೆ ಒಳ್ಳೆಯದು. ಯಾವುದೇ ಸರ್ಕಾರಿ ಪರೀಕ್ಷೆಗಾಗಿ ನೀವು ಅಧ್ಯಯನ ನಡೆಸುತ್ತಿದ್ದರೆ ಈ ವಾರವು ನಿಮಗೆ ಒಳ್ಳೆಯದು. ಆರೋಗ್ಯಕ್ಕೆ ಸಂಬಂಧಿಸಿದಂತೆ ನಿಮ್ಮ ಆಹಾರಕ್ರಮದ ಮೇಲೆ ಗಮನ ನೀಡಿರಿ. ಏಕೆಂದರೆ ಜೀರ್ಣಾಂಗವ್ಯೂಹದ ಸಮಸ್ಯೆಗಳು ಎದುರಾಗಬಹುದು.

ABOUT THE AUTHOR

...view details