ಮೇಷ: ವಾರದ ಆರಂಭದಲ್ಲಿ ನಿಮ್ಮ ವೃತ್ತಿ ಮತ್ತು ವ್ಯವಹಾರದಲ್ಲಿ ಪ್ರಗತಿ ಸಾಧಿಸುವುದಕ್ಕಾಗಿ ನಿಮಗೆ ಅದ್ಭುತ ಅವಕಾಶಗಳು ದೊರೆಯಲಿವೆ. ನೀವು ಖರ್ಚು ಮಾಡುವ ಸಮಯ ಮತ್ತು ಶಕ್ತಿಯ ಮೇಲೆ ನಿಮಗೆ ನಿಯಂತ್ರಣವಿದ್ದರೆ ಯಶಸ್ಸು ನಿಮ್ಮದಾಗಲಿದೆ. ನೀವು ರಾಜಕೀಯದಲ್ಲಿ ತೊಡಗಿಸಿಕೊಂಡಿದ್ದೃ ಈ ವಾರದ ಕೊನೆಗೆ ನಿಮಗೆ ಕೆಲವೊಂದು ಪ್ರಮುಖ ಹುದ್ದೆ ಅಥವಾ ಜವಾಬ್ದಾರಿಗಳು ಲಭಿಸಲಿವೆ. ವ್ಯವಹಾರದಲ್ಲಿ ತೊಡಗಿಸಿಕೊಂಡಿರುವ ಜನರು ಈ ವಾರದ ದ್ವಿತೀಯಾರ್ಧದಲ್ಲಿ ನಿರೀಕ್ಷಿತ ಲಾಭವನ್ನು ಪಡೆಯಲಿದ್ದಾರೆ ಮಾತ್ರವಲ್ಲದೆ ತಮ್ಮ ಸಂಸ್ಥೆಯನ್ನು ಬೆಳೆಸಲು ಅವರಿಗೆ ಅವಕಾಶಗಳು ಲಭಿಸಲಿವೆ. ಸ್ಪರ್ಧಾತ್ಮಕ ಪರೀಕ್ಷೇಗಳನ್ನು ಎದುರಿಸುವವರಿಗೆ ಶುಭ ಸುದ್ದಿ ದೊರೆಯಲಿದೆ. ಪ್ರಣಯಭರಿತ ಸಂಬಂಧದಲ್ಲಿ ಭಾವ ತೀವ್ರತೆ ಇರಲಿದೆ. ನಿಮ್ಮ ಕುಟುಂಬದೊಂದಿಗೆ ಸಂತಸದ ಕ್ಷಣಗಳನ್ನು ಕಳೆಯಲು ನಿಮಗೆ ಅವಕಾಶಗಳು ಲಭಿಸಲಿದ್ದು, ಸಂತಸದ ವೈವಾಹಿಕ ಜೀವನವನ್ನು ಸಾಗಿಸಲಿದ್ದೀರಿ. ಆರೋಗ್ಯದ ವಿಚಾರದಲ್ಲಿ ಎಲ್ಲವೂ ಸುಗಮವಾಗಿರಲಿದೆ.
ವೃಷಭ:ಕೆಲಸದ ಸ್ಥಳದಲ್ಲಿರುವ ಎದುರಾಳಿಗಳು ನಿಮ್ಮ ಗಮನಭಂಗ ಮಾಡಲು ಯತ್ನಿಸಲಿದ್ದಾರೆ. ನಿಮಗೆ ಇಷ್ಟವಿಲ್ಲದಿದ್ದರೂ ದೂರದ ಊರಿಗೆ ಅಥವಾ ಸಮೀಪದ ಸ್ಥಳಗಳಿಗೆ ನೀವು ಪ್ರಯಾಣಿಸಬೇಕಾದ ಅನಿವಾರ್ಯತೆ ಉಂಟಾದೀತು. ವಾರದ ನಡುವೆ ಮನೆಯ ದುರಸ್ತಿ ಅಥವಾ ಇತರ ವೆಚ್ಚಗಳಿಗಾಗಿ ನೀವು ಹಣವನ್ನು ಪಾವತಿಸಬೇಕಾದ ಅಗತ್ಯತೆ ಉಂಟಾದಲ್ಲಿ ನಿಮ್ಮ ಬಜೆಟ್ ಕೈತಪ್ಪಿ ಹೋಗಬಹುದು. ಈ ವಾರದ ಮೊದಲಾರ್ಧಕ್ಕೆ ಹೋಲಿಸಿದರೆ, ದ್ವಿತೀಯಾರ್ಧದಲ್ಲಿ ನೀವು ಹೆಚ್ಚು ಜಾಗರೂಕರಾಗಿರಬೇಕು. ನಿಮ್ಮ ಪ್ರಣಯ ಸಂಬಂಧಕ್ಕೆ ಕುರಿತಂತೆ ಈ ವಾರವು ಸವಾಲಿನಿಂದ ಕೂಡಿರಲಿದೆ. ವಾರದ ಮೊದಲಾರ್ಧದಲ್ಲಿ ನೀವು ಒಂದಷ್ಟು ಶುಭ ಸುದ್ದಿಯನ್ನು ಪಡೆಯುವ ಸಾಧ್ಯತೆ ಇದೆ. ಕೆಲಸದ ಸ್ಥಳದಲ್ಲಿರುವ ಎದುರಾಳಿಗಳು ನಿಮ್ಮ ಗಮನಭಂಗ ಮಾಡಲು ಯತ್ನಿಸಲಿದ್ದಾರೆ. ಈ ವಾರದಿಂದ ವಿದ್ಯಾರ್ಥಿಗಳಿಗೆ ಪ್ರಯೋಜನ ಉಂಟಾಗಲಿದೆ. ಆರೋಗ್ಯದ ವಿಚಾರದಲ್ಲಿ ಹೇಳುವುದಾದರೆ, ಈ ವಾರವು ನಿಮ್ಮ ಪಾಲಿಗೆ ಚೆನ್ನಾಗಿರಲಿದೆ.
ಮಿಥುನ: ಮಿಥುನ ರಾಶಿಯವರು ಈ ವಾರದಲ್ಲಿ ಯಾವುದೇ ಕೆಲಸದಲ್ಲಿ ಯಶಸ್ಸನ್ನು ಗಳಿಸಬೇಕಾದರೆ ಕಠಿಣ ಶ್ರಮ ಮತ್ತು ಹೆಚ್ಚಿನ ಪ್ರಯತ್ನವನ್ನು ಮಾಡಬೇಕು. ಈ ಸಮಯದಲ್ಲಿ ನಿಮ್ಮ ಆರೋಗ್ಯದ ಕುರಿತು ಹೆಚ್ಚಿನ ಕಾಳಜಿ ವಹಿಸಿ. ಏಕೆಂದರೆ ಋತುಮಾನಕ್ಕೆ ಸಂಬಂಧಿಸಿದ ಅಥವಾ ಇತರ ಯಾವುದೇ ದೀರ್ಘಕಾಲೀನ ಸಮಸ್ಯೆಯು ನಿಮ್ಮನ್ನು ಕಾಡಬಹುದು. ಉದ್ಯೋಗದಲ್ಲಿರುವವರು ಇಷ್ಟವಿಲ್ಲದ ಸ್ಥಳಕ್ಕೆ ವರ್ಗಾವಣೆಯಾಗುವ ಕಾರಣ ಅಥವಾ ಹೆಚ್ಚಿನ ಜವಾಬ್ದಾರಿಯನ್ನು ಪಡೆಯುವ ಕಾರಣ ಬೇಸರಕ್ಕೆ ಒಳಗಾಗಬಹುದು. ವಾರದ ಕೊನೆಗೆ ಕೆಲಸ ಅಥವಾ ವ್ಯವಹಾರಕ್ಕೆ ಸಂಬಂಧಿಸಿದಂತೆ ದೂರದ ಅಥವಾ ಹತ್ತಿರದ ಸ್ಥಳಕ್ಕೆ ಪ್ರಯಾಣಿಸುವ ಸಾಧ್ಯತೆ ಇದೆ. ನೀವು ಈಗಾಗಲೇ ಪ್ರಣಯ ಸಂಬಂಧದಲ್ಲಿದ್ದರೆ ವೈವಾಹಿಕ ಜೀವನಕ್ಕೆ ಕಾಲಿಡುವ ಅವಕಾಶ ದೊರೆಯಬಹುದು. ನಿಮ್ಮ ಮಕ್ಕಳಿಗೆ ಸಂಬಂಧಿಸಿದಂತೆ ನಿಮಗೆ ಶುಭ ಸುದ್ದಿ ದೊರೆಯುವ ಕಾರಣ ವಾರದ ಕೊನೆಗೆ ಮನೆಯಲ್ಲಿ ಸಂತಸದ ವಾತಾವರಣ ನೆಲೆಸಲಿದೆ. ಆರೋಗ್ಯದ ದೃಷ್ಟಿಯಿಂದ ನಿಮ್ಮ ದಿನಚರಿ ಮತ್ತು ಆಹಾರಕ್ರಮದಲ್ಲಿ ಹೊಂದಾಣಿಕೆ ಮಾಡಿಕೊಳ್ಳಬೇಕು.
ಕರ್ಕಾಟಕ: ಹಣವು ಮಾರುಕಟ್ಟೆಯಲ್ಲಿ ಬಾಕಿ ಉಳಿದಿದ್ದರೆ ನಿಮ್ಮ ಚಿಂತೆಯು ಹೆಚ್ಚಲಿದೆ. ಉದ್ಯೋಗದಲ್ಲಿರುವವರು ಕೆಲಸದ ಸ್ಥಳದಲ್ಲಿ ಕೆಲವೊಂದು ಸಮಸ್ಯೆಗಳು ಮತ್ತು ಸವಾಲುಗಳನ್ನು ಎದುರಿಸಬಹುದು. ಆದಾಯಕ್ಕಿಂತಲೂ ಹೆಚ್ಚಿನ ಖರ್ಚು ಉಂಟಾಗಬಹುದು. ನಿಮ್ಮ ಆರೋಗ್ಯದ ಕುರಿತು ಎಚ್ಚರಿಕೆ ವಹಿಸಿ. ಅಲ್ಲದೆ ವಾಹನ ಚಲಾಯಿಸುವಾಗ ಜಾಗರೂಕರಾಗಿರಿ. ಈ ಸಮಯದಲ್ಲಿ ಕಾಯಿಲೆ, ಅಗಲಿಕೆ, ಗಾಯ ಇತ್ಯಾದಿಗಳು ನಿಮ್ಮನ್ನು ಕಾಡಬಹುದು. ದೀರ್ಘಕಾಲದಿಂದ ಕಾಡುತ್ತಿರುವ ಕಾಯಿಲೆಯು ಮತ್ತೆ ಕಾಣಿಸಿಕೊಳ್ಳಬಹುದು. ಪ್ರಣಯ ಸಂಬಂಧದಲ್ಲಿ ಎಚ್ಚರಿಕೆಯಿಂದ ಹೆಜ್ಜೆ ಇಡಿ. ನಿಮ್ಮ ಪ್ರೇಮಿಯ ಭಾವನೆಗಳಿಗೆ ಧಕ್ಕೆಯಾಗದಂತೆ ನೋಡಿಕೊಳ್ಳಿ. ಮುಖ್ಯವಾಗಿ ನಿಮ್ಮ ಸಂಬಂಧದ ಕುರಿತು ಜಂಭ ಕೊಚ್ಚಿಕೊಳ್ಳಬೇಡಿ. ಇದರಿಂದಾಗಿ ಸಾಕಷ್ಟು ಸಮಸ್ಯೆಗಳು ಕಾಣಿಸಿಕೊಳ್ಳಬಹುದು. ಮಕ್ಕಳಿಗೆ ಸಂಬಂಧಿಸಿದ ವಿಚಾರದಲ್ಲಿ ಚಿಂತೆ ಕಾಡಬಹುದು. ಸವಾಲಿನ ಕ್ಷಣಗಳನ್ನು ಎದುರಿಸುವಾಗ ನಿಮ್ಮ ಜೀವನ ಸಂಗಾತಿಯು ನಿಮಗೆ ನೆರವನ್ನು ಒದಗಿಸಲಿದ್ದಾರೆ.
ಸಿಂಹ:ಸಿಂಹ ರಾಶಿಯಲ್ಲಿ ಹುಟ್ಟಿದವರು ಈ ವಾರದಲ್ಲಿ ಯಾವುದೇ ನಿರ್ದಿಷ್ಟ ಕೆಲಸದಲ್ಲಿ ಯಶಸ್ಸನ್ನು ಸಾಧಿಸಬೇಕಾದರೆ ಹೆಚ್ಚಿನ ಪ್ರಯತ್ನವನ್ನು ಪಡಬೇಕು. ವಾರದ ನಡುವಿನ ದಿನಗಳಲ್ಲಿ ಕುಟುಂಬದ ಸದಸ್ಯರ ಜೊತೆಗೆ ವಿವಾದ ಉಂಟಾಗಬಹುದು. ಕೌಟುಂಬಿಕ ಸಮಸ್ಯೆಗಳನ್ನು ಬಗೆಹರಿಸುವಾಗ ಭಿನ್ನಾಭಿಪ್ರಾಯಗಳು ಸಂಘರ್ಷಕ್ಕೆ ಪರಿವರ್ತನೆಯಾಗದಂತೆ ನೋಡಿಕೊಳ್ಳಿ. ಕೆಲಸಕ್ಕೆ ಸಂಬಂಧಿಸಿದಂತೆ ಮಾಡುವ ಯಾವುದೇ ಪ್ರಯಾಣವು ಯಶಸ್ಸನ್ನು ತರಲಿದೆ ಮಾತ್ರವಲ್ಲದೆ ಈ ಪ್ರಯಾಣವನ್ನು ನೀವು ಆನಂದಿಸಲಿದ್ದೀರಿ ಕೂಡಾ. ಒಟ್ಟಾರೆಯಾಗಿ ಈ ಪ್ರಯಾಣವು ಕಾಲಕ್ರಮೇಣ ಲಾಭದಾಯಕ ಉದ್ಯಮದಲ್ಲಿ ಪಾಲ್ಗೊಳ್ಳಲು ನಿಮಗೆ ಅವಕಾಶ ದೊರೆಯಲಿದೆ. ಈ ವಾರದಲ್ಲಿ ನಿಮ್ಮ ಜೀವನ ಸಂಗಾತಿಯೊಂದಿಗೆ ಒಂದಷ್ಟು ಭಿನ್ನಾಭಿಪ್ರಾಯ ಉಂಟಾಗಬಹುದು. ನಿಮ್ಮ ಸಂಬಂಧದಲ್ಲಿ ಒಡಕುಂಟಾಗದಂತೆ ನೋಡಿಕೊಳ್ಳುವುದಕ್ಕಾಗಿ ಸಂಘರ್ಷದ ಬದಲಿಗೆ ಸಂವಾದದಲ್ಲಿ ತೊಡಗಿಸಿಕೊಳ್ಳಿ. ನಿಮ್ಮ ಜೀವನ ಸಂಗಾತಿಯ ಭಾವನೆಗಳನ್ನು ನೀವು ಗೌರವಿಸದೆ ಇದ್ದರೆ ವೈವಾಹಿಕ ಜೀವನದಲ್ಲಿ ಸಂತಸ ಇರದು.
ಕನ್ಯಾ:ನಿಮ್ಮ ಕುಟುಂಬ, ಮನೆ ಅಥವಾ ವ್ಯವಹಾರದ ವಿಚಾರಕ್ಕೆ ಬಂದಾಗ ನಿಮ್ಮ ಭಾವನೆಗಳನ್ನು ಆಧರಿಸಿ ನಿರ್ಧಾರವನ್ನು ತೆಗೆದುಕೊಳ್ಳಬೇಡಿ. ಈ ವಾರದಲ್ಲಿ ಕೆಲಸಕ್ಕೆ ಸಂಬಂಧಿಸಿದಂತೆ ದೂರದ ಅಥವಾ ಹತ್ತಿರದ ಸ್ಥಳಕ್ಕೆ ಪ್ರಯಾಣಿಸುವ ಸಾಧ್ಯತೆ ಇರುತ್ತದೆ. ಈ ಪ್ರಯಾಣದ ಸಂದರ್ಭದಲ್ಲಿ ನಿಮ್ಮ ವಸ್ತುಗಳು ಮತ್ತು ಆರೋಗ್ಯದ ಕುರಿತು ಕಾಳಜಿ ವಹಿಸಿ. ಈ ಸಮಯದಲ್ಲಿ ಪಿತ್ರಾರ್ಜಿತ ಆಸ್ತಿಗೆ ಸಂಬಂಧಿಸಿದಂತೆ ಕುಟುಂಬದ ಸದಸ್ಯರ ನಡುವೆ ಭಿನ್ನಾಭಿಪ್ರಾಯ ಉಂಟಾಗಬಹುದು. ವ್ಯಾಪಾರೋದ್ಯಮಿಗಳಿಗೆ ಸವಾಲಿನ ಕ್ಷಣಗಳು ಎದುರಾಗಬಹುದು. ಉದ್ಯೋಗದಲ್ಲಿರುವವರು ತಮ್ಮ ಕೆಲಸವನ್ನು ಪೂರ್ಣಗೊಳಿಸುವುದಕ್ಕಾಗಿ ಹೆಚ್ಚಿನ ಪ್ರಯತ್ನ ಪಡಬೇಕು. ಖರ್ಚು ಆದಾಯವನ್ನು ಮೀರುವ ಸಾಧ್ಯತೆ ಇದೆ. ಐಷಾರಾಮಿ ವಸ್ತುಗಳಿಗಾಗಿ ವಿಪರೀತ ಹಣ ಖರ್ಚಾಗುವ ಕಾರಣ ನಿಮಗೆ ಬೇಸರ ಉಂಟಾಗಬಹುದು. ನಿಮ್ಮ ಪ್ರಣಯ ಸಂಗಾತಿಯ ಜೊತೆಗೆ ಪ್ರಾಮಾಣಿಕತೆಯನ್ನು ತೋರಿರಿ ಮತ್ತು ಯಾವುದೇ ಹೆಜ್ಜೆ ಇಡುವ ಮೊದಲು ಸ್ವಲ್ಪ ಯೋಚಿಸಿ. ಇಲ್ಲದಿದ್ದರೆ ನಿಮ್ಮ ಸಂಬಂಧವು ಹಳಸಬಹುದು. ನಿಮ್ಮ ಮಕ್ಕಳ ಭವಿಷ್ಯ ಮತ್ತು ಜೀವನ ಸಂಗಾತಿಯ ಆರೋಗ್ಯದ ಕುರಿತು ಸ್ವಲ್ಪ ಚಿಂತೆಯು ನಿಮ್ಮನ್ನು ಕಾಡಬಹುದು.