ಮೇಷ:ಮೇಷ ರಾಶಿಯಲ್ಲಿ ಹುಟ್ಟಿದವರಿಗೆ ಈ ವಾರದಲ್ಲಿ ವಿವಿಧ ಫಲಿತಾಂಶಗಳು ದೊರೆಯಲಿವೆ. ವಾರದ ಆರಂಭದಲ್ಲಿ ನೀವು ಕೆಲಸದಲ್ಲಿ ಮುಳುಗಿ ಹೋಗುವಿರಿ. ಹೆಚ್ಚಿನ ಶ್ರಮ ಮತ್ತು ಸಮರ್ಪಣಾ ಭಾವದ ಅಗತ್ಯವಿದೆ. ದುಡಿಯುತ್ತಿರುವ ಮಹಿಳೆಯರಿಗೆ ಈ ಅವಧಿಯು ಸವಾಲಿನಿಂದ ಕೂಡಿದೆ. ವ್ಯವಹಾರದಲ್ಲಿ ತೊಡಗಿಸಿಕೊಂಡಿರುವ ವ್ಯಕ್ತಿಗಳಿಗೆ ತಮ್ಮ ಕಂಪ್ಯೂಟರ್ ವ್ಯವಸ್ಥೆಗೆ ಸಂಬಂಧಿಸಿದಂತೆ ಸಮಸ್ಯೆಗಳು ಎದುರಾಗಬಹುದು. ಅಲ್ಲದೆ, ಒಳ್ಳೆಯ ಆರೋಗ್ಯವನ್ನು ಕಾಪಾಡಲು ನೀವು ಹೆಣಗಾಡಬೇಕಾದೀತು. ಈ ಉದ್ದೇಶಕ್ಕಾಗಿ ನಿಮ್ಮ ದಿನಚರಿ ಮತ್ತು ಆಹಾರಕ್ರಮಕ್ಕೆ ಒತ್ತು ನೀಡಬೇಕಾಗುತ್ತದೆ. ವಿದೇಶದಲ್ಲಿ ವೃತ್ತಿ ಅಥವಾ ವ್ಯವಹಾರ ನಡೆಸಲು ಇಚ್ಛಿಸುವವರು ಕೆಲವೊಂದು ಅಡಚಣೆಗಳನ್ನು ಎದುರಿಸಬೇಕಾದೀತು. ಪ್ರಣಯ ಸಂಬಂಧದಲ್ಲಿ ಹಠಾತ್ ಅಥವಾ ಉದ್ವೇಗದಿಂದ ಕೂಡಿದ ನಿರ್ಧಾರವನ್ನು ತೆಗೆದುಕೊಂಡರೆ ಸಂಕೀರ್ಣತೆಗಳು ಎದುರಾಗಬಹುದು. ವೈವಾಹಿಕ ಬದುಕಿನಲ್ಲಿ ಸಂತಸ ಕಾಣಬೇಕಾದರೆ ನಿಮ್ಮ ಸಂಗಾತಿಯ ಭಾವನೆಗಳನ್ನು ಪರಿಗಣಿಸುವುದು ಅಗತ್ಯ.
ವೃಷಭ:ವೃಷಭ ರಾಶಿಯಲ್ಲಿ ಹುಟ್ಟಿದವರಿಗೆ ಈ ವಾರದಲ್ಲಿ ಕೆಲವೊಂದು ಅನಿರೀಕ್ಷಿತ ಸವಾಲುಗಳು ಎದುರಾಗಬಹುದು. ವೃತ್ತಿಪರ ಬದುಕಿನಲ್ಲಿ ಏರುಪೇರು ಉಂಟಾಗಲಿದ್ದು, ಎಚ್ಚರಿಕೆಯಿಂದ ಹೆಜ್ಜೆ ಇಡಬೇಕು. ನೀವು ಅನಿರೀಕ್ಷಿತ ಪ್ರಯಾಣವನ್ನು ಮಾಡಬೇಕಾದ ಅನಿವಾರ್ಯತೆ ಉಂಟಾಗಲಿದ್ದು, ನಿಮ್ಮ ಪ್ರಯಾಣದ ಅವಧಿಯಲ್ಲೂ ಹೆಚ್ಚಳವಾಗಲಿದೆ. ತಮ್ಮ ವೃತ್ತಿಜೀವನದಲ್ಲಿ ಪ್ರಗತಿಯನ್ನು ಸಾಧಿಸಲು ಇಚ್ಛಿಸುವವರಿಗೆ ತಮ್ಮ ಗುರಿಯನ್ನು ಈಡೇರಿಸಲು ಹೆಚ್ಚಿನ ಪ್ರಯತ್ನ ಮಾಡಬೇಕಾದ ಅನಿವಾರ್ಯತೆ ಇರಲಿದೆ. ಉದ್ಯೋಗದಲ್ಲಿರುವವರು ವಾರದ ಕೊನೆಯ ತನಕ ತಮ್ಮ ಸಹೋದ್ಯೋಗಿಗಳು ಮತ್ತು ಹಿರಿಯರೊಂದಿಗೆ ನಿಕಟವಾಗಿ ಕೆಲಸ ಮಾಡಬೇಕು. ಈ ಅವಧಿಯಲ್ಲಿ ನಿಮ್ಮಲ್ಲಿರುವ ಬೆಲೆಬಾಳುವ ವಸ್ತುಗಳ ಸುರಕ್ಷತೆಗೆ ಹೆಚ್ಚಿನ ಗಮನ ನೀಡಿ. ಅಲ್ಲದೆ ನಿಮ್ಮ ಯೋಗಕ್ಷೇಮಕ್ಕೂ ಗಮನ ನೀಡಿರಿ. ಸ್ಪರ್ಧಾತ್ಮಕ ಪರೀಕ್ಷೆಗಳಿಗಾಗಿ ಸಿದ್ಧತೆ ನಡೆಸುತ್ತಿರುವ ವಿದ್ಯಾರ್ಥಿಗಳು ಯಶಸ್ಸು ಪಡೆಯಬೇಕಾದರೆ ಹೆಚ್ಚಿನ ಪ್ರಯತ್ನ ಮಾಡಬೇಕು. ಸ್ನೇಹಿತೆಯೊಬ್ಬರ ನೆರವಿನಿಂದ ಪ್ರಣಯ ಸಂಬಂಧದಲ್ಲಿ ಎದುರಾಗಿರುವ ಸಂಘರ್ಷವನ್ನು ಬಗೆಹರಿಸಬಹುದು. ಆದರೆ ನಂಬಿಕೆಯನ್ನು ಮತ್ತೆ ಗಳಿಸಬೇಕಾದರೆ ಇನ್ನಷ್ಟು ಸಮಯ ಬೇಕು.
ಮಿಥುನ: ವಾರದ ಆರಂಭದಲ್ಲಿ ಪ್ರಮುಖ ವ್ಯಕ್ತಿಯೊಬ್ಬರ ನೆರವು ನಿಮಗೆ ಲಭಿಸಲಿದ್ದು, ಬಾಕಿ ಉಳಿದಿರುವ ನಿಮ್ಮ ಕೆಲಸವು ಪೂರ್ಣಗೊಳ್ಳಲಿದೆ. ಅಧಿಕಾರ ಅಥವಾ ಆಡಳಿತದಲ್ಲಿರುವ ಪ್ರಭಾವಿ ವ್ಯಕ್ತಿಗಳು ನಿಮಗೆ ಸಂಪೂರ್ಣ ಬೆಂಬಲ ನೀಡಲಿದ್ದಾರೆ. ವಾರದ ನಡುವೆ, ಕೆಲಸದ ಸ್ಥಳದಲ್ಲಿ ಎಚ್ಚರಿಕೆ ವಹಿಸಿ. ಏಕೆಂದರೆ ಜನರು ನಿಮ್ಮ ಕುರಿತು ಹೊಟ್ಟೆಕಿಚ್ಚು ತೋರಬಹುದು. ಆಸ್ತಿ ಅಥವಾ ಕಟ್ಟಡಕ್ಕೆ ಸಂಬಂಧಿಸಿದ ಸಂಘರ್ಷ ಬಗೆಹರಿಯಲಿದೆ. ನೀವು ವ್ಯವಹಾರದಲ್ಲಿ ತೊಡಗಿಸಿಕೊಂಡಿದ್ದರೆ, ನಿಮ್ಮ ಆರ್ಥಿಕ ಸಮಸ್ಯೆಯನ್ನು ಬಗೆಹರಿಸಿ ಮುಂದುವರಿಯುವುದು ಒಳ್ಳೆಯದು. ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸಿದ್ಧತೆ ನಡೆಸುತ್ತಿರುವ ವ್ಯಕ್ತಿಗಳು ಧನಾತ್ಮಕ ಫಲಿತಾಂಶ ಪಡೆಯುಲರಿ. ಯಾವುದೇ ವ್ಯವಹಾರದಲ್ಲಿ ಹೂಡಿಕೆ ಮಾಡುವ ಮೊದಲು ನಿಮ್ಮ ಹಿತೈಷಿಗಳ ಮಾರ್ಗದರ್ಶನ ಪಡೆಯಿರಿ. ಪ್ರೇಮ ಸಂಬಂಧಕ್ಕೆ ಈ ವಾರವು ಅನುಕೂಲಕರವಾಗಿದ್ದು, ನಿಮ್ಮ ಸಂಗಾತಿಯೊಂದಿಗೆ ಸಮಯವನ್ನು ಚೆನ್ನಾಗಿ ಕಳೆಯಲಿದ್ದೀರಿ. ಅಲ್ಲದೆ ವೈವಾಹಿಕ ಜೀವನ ಸುಖಕರವಾಗಿರುತ್ತದೆ.
ಕರ್ಕಾಟಕ: ವಾರದ ಆರಂಭದಲ್ಲಿ ನೀವು ಗಣನೀಯ ಪ್ರಗತಿಯನ್ನು ಗಮನಿಸಲಿದ್ದೀರಿ. ಆದರೆ ಈ ಸಂದರ್ಭದಲ್ಲಿ ಕಾಣಿಸಿಕೊಳ್ಳಬಹುದಾದ ಆತುರತೆಯ ಕುರಿತು ಎಚ್ಚರಿಕೆ ವಹಿಸುವುದು ಅಗತ್ಯ. ಅಧಿಕ ಅಪಾಯವನ್ನು ಹೊಂದಿರುವ ಯಾವುದೇ ಹೂಡಿಕೆಯಿಂದ ದೂರವಿರುವುದು ಒಳ್ಳೆಯದು. ಏಕೆಂದರೆ ನಂತರ ಇದರಲ್ಲಿ ಆರ್ಥಿಕ ಹಿನ್ನಡೆ ಉಂಟಾಗಬಹುದು. ಈ ವಾರದಲ್ಲಿ ಬಡ್ತಿ ಪಡೆಯುವ ಅಥವಾ ನಿಮ್ಮ ಇಷ್ಟದ ತಾಣಕ್ಕೆ ವರ್ಗಾವಣೆಯನ್ನು ಪಡೆಯುವ ನಿಮ್ಮ ಕನಸು ನನಸಾಗಲಿದೆ. ಕೆಲಸದ ಸ್ಥಳದಲ್ಲಿ ನಿಮ್ಮ ಹಿರಿಯರು ಹಾಗೂ ಸಹೋದ್ಯೋಗಿಗಳು ನಿಮ್ಮನ್ನು ಪ್ರಶಂಸಿಸಲಿದ್ದಾರೆ. ಆಸ್ತಿ ಖರೀದಿ ಮತ್ತು ಮಾರಾಟದ ಮೂಲಕ ನೀವು ಲಾಭಗಳಿಸಲಿದ್ದೀರಿ. ಕುಟುಂಬಕ್ಕೆ ಸಂಬಂಧಿಸಿದ ಪ್ರಮುಖ ನಿರ್ಧಾರವನ್ನು ತೆಗೆದುಕೊಳ್ಳುವಾಗ ನಿಮ್ಮ ಪೋಷಕರು ನಿಮ್ಮನ್ನು ಸಂಪೂರ್ಣವಾಗಿ ಬೆಂಬಲಿಸಲಿದ್ದಾರೆ. ವಿದೇಶದಲ್ಲಿ ವೃತ್ತಿ ಅಥವಾ ವ್ಯವಹಾರವನ್ನು ನೀವು ಪರಿಗಣಿಸುತ್ತಿದ್ದರೆ, ಈ ನಿಟ್ಟಿನಲ್ಲಿ ಎದುರಾಗಿರುವ ಎಲ್ಲಾ ಅಡಚಣೆಗಳು ದೂರಗೊಳ್ಳಲಿವೆ. ವಾರದ ಅಂತ್ಯದಲ್ಲಿ, ನಿಮ್ಮ ಗೆಳೆಯರು ಅಥವಾ ಕುಟುಂಬದ ಸದಸ್ಯರೊಂದಿಗೆ ಪಿಕ್ನಿಕ್ ಅಥವಾ ವಿಹಾರವನ್ನು ಆಯೋಜಿಸಬಹುದು. ನಿಮ್ಮ ಪ್ರಣಯ ಸಂಬಂಧವು ಇನ್ನಷ್ಟು ಗಟ್ಟಿಯಾಗಿ ಬೆಳೆಯಲಿದೆ. ವೈವಾಹಿಕ ಬದುಕಿನಲ್ಲಿ ಸಂತಸ ನೆಲೆಸಲಿದೆ.
ಸಿಂಹ:ಸಿಂಹ ರಾಶಿಯಲ್ಲಿ ಹುಟ್ಟಿದವರು ಈ ವಾರದಲ್ಲಿ ತಮ್ಮ ಯೋಗಕ್ಷೇಮ ಮತ್ತು ಸಂಬಂಧಕ್ಕೆ ಆದ್ಯತೆ ನೀಡಬೇಕು. ಆರೋಗ್ಯಕ್ಕೆ ಸಂಬಂಧಿಸಿದ ಸಮಸ್ಯೆಯಿಂದಾಗಿ ನಿಮ್ಮ ವೃತ್ತಿ ಬದುಕಿಗೆ ಅಡಚಣೆ ಉಂಟಾಗಬಹುದು. ಪ್ರಮುಖ ಅವಕಾಶವೊಂದನ್ನು ಕಳೆದುಕೊಳ್ಳುವ ಕಾರಣ ನಿಮಗೆ ನಷ್ಟವಾಗಬಹುದು. ಸಣ್ಣ ಅಚಾತುರ್ಯವೂ ಸಹ ದೊಡ್ಡ ಮಟ್ಟದಲ್ಲಿ ನಷ್ಟ ಮಾಡಲಿದೆ. ಈ ಅವಧಿಯಲ್ಲಿ ನಿಮ್ಮ ಎದುರಾಳಿಗಳ ಕುರಿತು ಎಚ್ಚರಿಕೆ ವಹಿಸುವುದು ಅಗತ್ಯ. ವಾರದ ಕೊನೆಗೆ, ನಿಮ್ಮ ಆಸ್ತಿ ಅಥವಾ ಭೂಮಿಗೆ ಸಂಬಂಧಿಸಿದಂತೆ ನಿಮಗೆ ಪ್ರಮುಖ ಸಮಸ್ಯೆ ಎದುರಾಗಬಹುದು. ಉದ್ಯೋಗದಲ್ಲಿರುವವರು ತಮ್ಮ ಕೆಲಸದಲ್ಲಿ ಎಚ್ಚರಿಕೆ ವಹಿಸಬೇಕು. ಪ್ರಣಯ ಸಂಬಂಧದಲ್ಲಿ ನಿಮ್ಮ ಸಂಗಾತಿಯ ಭಾವನೆಗಳನ್ನು ಗೌರವಿಸಿರಿ. ನಿಮ್ಮ ಸಂಗಾತಿಯ ಖಾಸಗಿ ವಿಷಯಗಳಿಗೆ ಸಂಬಂಧಿಸಿದಂತೆ ಅವಸರದಲ್ಲಿ ನಿರ್ಧಾರ ತೆಗೆದುಕೊಳ್ಳಬೇಡಿ ಅಥವಾ ವಿಪರೀತ ಅನುರಾಗ ಬೇಡ.
ಕನ್ಯಾ:ಕನ್ಯಾ ರಾಶಿಯಲ್ಲಿ ಹುಟ್ಟಿದವರಿಗೆ ಈ ವಾರದ ಆರಂಭವು ಮಂಗಳಕರವಾಗಿರುತ್ತದೆ. ಹಾಗೂ ನಿರೀಕ್ಷಿತ ಯಶಸ್ಸು ದೊರೆಯಲಿದೆ. ವಾರದ ಆರಂಭದಲ್ಲಿ ನಿಮ್ಮ ಹಿಂದಿನ ಸಾಧನೆಗಳಿಗೆ ಮನ್ನಣೆ ದೊರೆಯಲಿದೆ. ನಿಮಗೆ ಪ್ರಮುಖ ಜವಾಬ್ದಾರಿಗಳು ದೊರೆಯುವ ಸಾಧ್ಯತೆ ಇದೆ. ಮಾರುಕಟ್ಟೆಯಲ್ಲಿ ಏರಿಕೆ ಉಂಟಾಗುವ ಕಾರಣ ನಿಮಗೆ ಲಾಭ ಉಂಟಾಗಲಿದೆ. ಅಲ್ಲದೆ ನಿಮ್ಮ ವರ್ಚಸ್ಸಿನಲ್ಲಿ ವೃದ್ಧಿ ಉಂಟಾಗಲಿದೆ. ವ್ಯವಹಾರದ ದೃಷ್ಟಿಯಿಂದ ಈ ವಾರವು ತುಂಬಾ ಒಳ್ಳೆಯದು. ವೃತ್ತಿಯನ್ನು ಬದಲಾಯಿಸಲು ಇಚ್ಛಿಸುವವರಿಗೆ ಈ ವಾರದ ಕೊನೆಯಲ್ಲಿ ಪ್ರತಿಷ್ಠಿತ ಸಂಸ್ಥೆಯೊಂದರಿಂದ ಕೆಲಸದ ಕೊಡುಗೆ ದೊರೆಯಬಹುದು. ನೀವು ನಿಮ್ಮ ವ್ಯವಹಾರವನ್ನು ವಿಸ್ತರಿಸುವ ಕನಸು ಕಾಣುತ್ತಿದ್ದರೆ, ನಿಮ್ಮ ಇಚ್ಛೆಯು ನೆರವೇರಲಿದೆ. ವಾರದ ಉತ್ತರಾರ್ಧದಲ್ಲಿ, ಕೆಲವೊಂದು ಐಷಾರಾಮಿ ವಸ್ತುಗಳನ್ನು ನೀವು ಖರೀದಿಸಲಿದ್ದು, ಇದು ನಿಮ್ಮ ಮನೆಯಲ್ಲಿ ಸಂತಸವನ್ನುಂಟು ಮಾಡಲಿದೆ. ನಿಮ್ಮ ವೈವಾಹಿಕ ಬದುಕಿನಲ್ಲಿ ಸಂತಸ ನೆಲೆಸಲಿದೆ. ಅಲ್ಲದೆ ನಿಮ್ಮ ಪ್ರಣಯ ಸಂಬಂಧವು ಇನ್ನಷ್ಟು ಗಟ್ಟಿಗೊಳ್ಳಲಿದೆ. ನಿಮ್ಮ ಸಂಗಾತಿಯೊಂದಿಗೆ ಸಮಯವನ್ನು ಚೆನ್ನಾಗಿ ಆನಂದಿಸಲು ನಿಮಗೆ ಅವಕಾಶ ದೊರೆಯಲಿದೆ.