ಮೇಷ:ಮೇಷ ರಾಶಿಯವರಿಗೆ ಈ ವಾರದಲ್ಲಿ ಮಿಶ್ರಫಲ ದೊರೆಯಲಿದೆ. ಕೌಟುಂಬಿಕ ಬದುಕಿನಲ್ಲಿ ಶಾಂತಿ ಮತ್ತು ಸಂತಸ ನೆಲೆಸಲಿದೆ. ಆದರೆ ಯಾರಾದರೂ ಹೊರಗಿನ ವ್ಯಕ್ತಿಯ ಕಾರಣ ಬದುಕಿನಲ್ಲಿ ಒತ್ತಡ ಕಾಣಿಸಿಕೊಳ್ಳಲಿದೆ. ಪ್ರೇಮ ಸಂಬಂಧದಲ್ಲಿ ಏರುಪೇರು ಉಂಟಾಗಬಹುದು. ಆಸ್ತಿಯಲ್ಲಿ ಹೂಡಿಕೆ ಮಾಡಲು ಇಚ್ಛಿಸುವವರಿಗೆ ಸಮಯವು ಚೆನ್ನಾಗಿದೆ. ಶೇರು ಮಾರುಕಟ್ಟೆಯಲ್ಲಿ ಎಚ್ಚರಿಕೆಯಿಂದ ಹಣ ಹೂಡಿಕೆ ಮಾಡಿ. ಕೆಲಸವನ್ನು ಬದಲಾಯಿಸಲು ಇದು ಸಕಾಲವಲ್ಲ. ಅತಿಯಾದ ಆತ್ಮವಿಶ್ವಾಸವನ್ನು ತೋರಬೇಡಿ. ಶಿಕ್ಷಣ ಕ್ಷೇತ್ರದಲ್ಲಿ ನೀವು ಯಶಸ್ಸನ್ನು ಗಳಿಸಲಿದ್ದೀರಿ. ವಿದ್ಯಾರ್ಥಿಗಳು ಸ್ಪರ್ಧೆಯಲ್ಲಿ ಯಶಸ್ಸು ಸಾಧಿಸಲಿದ್ದಾರೆ. ಚಟುವಟಿಕೆಯಿಂದ ಕೂಡಿದ ದಿನದ ನಡುವೆಯೂ ನಿಮ್ಮ ಕುಟುಂಬದ ಸದಸ್ಯರಿಗಾಗಿ ಒಂದಷ್ಟು ಸಮಯವನ್ನು ಮೀಸಲಿಡಲಿದ್ದೀರಿ. ಈ ಮೂಲಕ ಎಲ್ಲರೊಂದಿಗೆ ಸುಖ ದುಃಖವನ್ನು ಹಂಚಿಕೊಳ್ಳಲಿದ್ದೀರಿ. ನಿಮಗಾಗಿ ಮತ್ತು ನಿಮ್ಮ ಕುಟುಂಬಕ್ಕಾಗಿ ಒಂದಷ್ಟು ಖರೀದಿಯನ್ನು ಮಾಡಲಿದ್ದೀರಿ. ಆದರೆ ಬಜೆಟ್ ತಯಾರಿಸಿದ ನಂತರವೇ ಎಲ್ಲಾ ಖರೀದಿಗಳನ್ನು ಮಾಡಿದರೆ ಒಳ್ಳೆಯದು. ನಿಮ್ಮ ಗೆಳೆಯರ ಬೆಂಬಲವನ್ನು ಪಡೆಯಲಿದ್ದೀರಿ.
ವೃಷಭ:ವೃಷಭ ರಾಶಿಯವರಿಗೆ ಈ ವಾರದಲ್ಲಿ ಒಳ್ಳೆಯ ಫಲ ದೊರೆಯಲಿದೆ. ನಿಮ್ಮ ಮನೆಯಲ್ಲಿ ಶಾಂತಿ ಮತ್ತು ಸಂತೃಪ್ತಿಯ ವಾತಾವರಣ ಇರಲಿದೆ. ಎಲ್ಲರೂ ಒಟ್ಟಿಗೆ ಕೆಲಸ ಮಾಡಲಿದ್ದಾರೆ. ಕುಟುಂಬದ ಸದಸ್ಯರು ಸಹೋದರನ ಮದುವೆಯ ಪ್ರಸ್ತಾವನೆಯನ್ನು ಅಂಗೀಕರಿಸಲಿದ್ದಾರೆ. ಹೀಗಾಗಿ ಮಂಗಳದಾಯಕ ಕಾರ್ಯಕ್ರಮಗಳು ನಡೆಯಲಿವೆ. ಸಾಕಷ್ಟು ಜನರು ಬಂದು ಹೋಗಲಿದ್ದಾರೆ. ಏನಾದರೂ ಕಾರಣದಿಂದಾಗಿ ಪ್ರೇಮ ಸಂಬಂಧದಲ್ಲಿ ಒಂದಷ್ಟು ಒತ್ತಡ ಕಾಣಿಸಿಕೊಳ್ಳಬಹುದು. ಶಿಕ್ಷಣ ಕ್ಷೇತ್ರದಲ್ಲಿ ನೀವು ಯಶಸ್ಸನ್ನು ಗಳಿಸಲಿದ್ದೀರಿ. ಉನ್ನತ ಶಿಕ್ಷಣಕ್ಕೆ ಈ ವಾರವು ಒಳ್ಳೆಯದು. ಸ್ಪರ್ಧೆಯಲ್ಲಿ ಯಶಸ್ಸು ಸಾಧಿಸಲಿದ್ದೀರಿ. ಮಕ್ಕಳ ಶಿಕ್ಷಣಕ್ಕಾಗಿ ಸಾಕಷ್ಟು ಹಣವನ್ನು ಖರ್ಚು ಮಾಡಲಿದ್ದೀರಿ. ಉದ್ಯೋಗದಲ್ಲಿರುವ ಜನರು ಕಚೇರಿಯ ಕೆಲಸಕ್ಕಾಗಿ ಪ್ರಯಾಣಿಸಬಹುದು. ವ್ಯವಹಾರವನ್ನು ಮುಂದಕ್ಕೆ ಕೊಂಡೊಯ್ಯುವ ವಿಚಾರದಲ್ಲಿ ನೀವು ಯಶಸ್ಸನ್ನು ಗಳಿಸಲಿದ್ದೀರಿ. ಆರೋಗ್ಯದಲ್ಲಿ ಕಾಲಕ್ರಮೇಣ ಸುಧಾರಣೆ ಉಂಟಾಗಲಿದೆ. ಏನಾದರೂ ವ್ಯತ್ಯಯ ಉಂಟಾದಲ್ಲಿ ಒಳ್ಳೆಯ ವೈದ್ಯರೊಂದಿಗೆ ಸಮಾಲೋಚನೆ ನಡೆಸಿ. ಈ ವಾರದಲ್ಲಿ ನಿಮ್ಮ ಜೀವನ ಸಂಗಾತಿಯ ಜೊತೆ ಅನುರಾಗದ ಕ್ಷಣಗಳನ್ನು ಕಳೆಯಲಿದ್ದೀರಿ. ನಿಮ್ಮ ಮಕ್ಕಳ ಸಂಪೂರ್ಣ ಸಹಕಾರ ಪಡೆಯಲಿದ್ದೀರಿ.
ಮಿಥುನ:ವೃಷಭ ರಾಶಿಯವರಿಗೆ ಈ ವಾರದಲ್ಲಿ ಒಳ್ಳೆಯ ಫಲ ದೊರೆಯಲಿದೆ. ನಿಮ್ಮ ಮನೆಯಲ್ಲಿ ಶಾಂತಿ ಮತ್ತು ಸಂತೃಪ್ತಿಯ ವಾತಾವರಣ ಇರಲಿದೆ. ಕುಟುಂಬದ ಸದಸ್ಯರ ನೆರವನ್ನು ಪಡೆಯಲಿದ್ದೀರಿ. ಇನ್ನಷ್ಟು ಕೌಟುಂಬಿಕ ಜವಾಬ್ದಾರಿಗಳು ನಿಮ್ಮ ಹೆಗಲ ಮೇಲೆ ಬರಲಿವೆ. ಇದರಿಂದಾಗಿ ನೀವು ಸ್ವಲ್ಪ ಚಿಂತೆಗೊಳಗಾಗಬಹುದು. ಮನೆಯ ಅಲಂಕಾರ ಮತ್ತು ದುರಸ್ತಿಗಾಗಿ ಒಂದಷ್ಟು ಹಣವನ್ನು ನೀವು ಖರ್ಚು ಮಾಡಬಹುದು. ಆದರೆ ಬಜೆಟ್ ಅನ್ನು ಗಮನದಲ್ಲಿಟ್ಟುಕೊಂಡು ಎಲ್ಲಾ ವೆಚ್ಚಗಳನ್ನು ಖರ್ಚು ಮಾಡಿದರೆ ಒಳ್ಳೆಯದು. ಉದ್ಯೋಗದಲ್ಲಿ ಬದಲಾವಣೆ ಉಂಟಾಗಲಿದೆ. ವ್ಯವಹಾರವನ್ನು ಮುಂದಕ್ಕೆ ಕೊಂಡೊಯ್ಯುವಲ್ಲಿ ಯಶಸ್ವಿಯಾಗಲಿದ್ದೀರಿ. ಶಿಕ್ಷಣ ಕ್ಷೇತ್ರದಲ್ಲಿ ನೀವು ಯಶಸ್ಸನ್ನು ಸಾಧಿಸಲಿದ್ದೀರಿ. ಆದರೆ ಮನಸ್ಸು ಅತ್ತಿತ್ತ ಹೊರಳಾಡದಂತೆ ನೋಡಿಕೊಳ್ಳಿ. ಉನ್ನತ ಶಿಕ್ಷಣಕ್ಕೆ ಸಮಯವು ಚೆನ್ನಾಗಿದೆ. ಆರೋಗ್ಯದಲ್ಲಿ ಸುಧಾರಣೆ ಉಂಟಾಗಲಿದೆ. ನೀವು ಆನಂದ ಮತ್ತು ತಾಜಾತನ ಗಳಿಸಲಿದ್ದೀರಿ. ಸಹೋದರಿಯ ವಿವಾಹದ ಪ್ರಸ್ತಾಪಕ್ಕೆ ಮಂಜೂರಾತಿ ದೊರೆಯಲಿದ್ದು ಕುಟುಂಬದಲ್ಲಿ ಮಂಗಳದಾಯಕ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತದೆ.
ಕರ್ಕಾಟಕ:ಕರ್ಕಾಟಕ ರಾಶಿಯ ಜನರ ಕುರಿತು ನಾವು ಮಾತನಾಡುವುದಾದರೆ, ಈ ವಾರವು ನಿಮ್ಮ ಪಾಲಿಗೆ ಉತ್ತಮ ಫಲವನ್ನು ನೀಡಲಿದೆ. ಕೌಟುಂಬಿಕ ಜೀವನದಲ್ಲಿ ಸಂತಸ ಮತ್ತು ಶಾಂತಿ ಕಾಣಿಸಿಕೊಳ್ಳಲಿದೆ. ನಿಮ್ಮ ಜೀವನ ಸಂಗಾತಿಯ ಜೊತೆ ಅನುರಾಗದ ಕ್ಷಣಗಳನ್ನು ಕಳೆಯಲಿದ್ದೀರಿ. ಇಂದು ನೀವು ನಿಮ್ಮ ಪ್ರೇಮ ಜೀವನದಲ್ಲಿ ಸಂಗಾತಿಯನ್ನು ಗಳಿಸಲಿದ್ದು ಬದುಕಿನಲ್ಲಿ ಸಂತಸ ನೆಲೆಸಲಿದೆ. ಆದಾಯದಲ್ಲಿ ಹೆಚ್ಚಳ ಉಂಟಾಗಲಿದೆ. ಮಕ್ಕಳ ಭವಿಷ್ಯಕ್ಕಾಗಿ ಹಣ ಹೂಡಿಕೆ ಮಾಡಲಿದ್ದೀರಿ. ನಿಮ್ಮ ಹಣವನ್ನು ನೀವು ಎಲ್ಲಾದರೂ ಸುರಕ್ಷಿತವಾಗಿ ಹೂಡಿಕೆ ಮಾಡಲಿದ್ದೀರಿ. ಇದು ಭವಿಷ್ಯದಲ್ಲಿ ನಿಮಗೆ ಉಪಯುಕ್ತ ಎನಿಸಲಿದೆ. ನೀವು ಉದ್ಯೋಗದಲ್ಲಿ ನಿಮಗೆ ನೀಡಿರುವ ಕೆಲಸಗಳನ್ನು ಸಕಾಲದಲ್ಲಿ ಮುಗಿಸುವಲ್ಲಿ ನೀವು ಯಶಸ್ವಿಯಾಗಲಿದ್ದೀರಿ. ವ್ಯವಹಾರದಲ್ಲಿ ತೊಡಗಿಸಿಕೊಂಡವರು ತಮ್ಮ ವ್ಯವಹಾರವನ್ನು ಮುಂದಕ್ಕೆ ಒಯ್ಯಲು ಸಾಕಷ್ಟು ಯತ್ನವನ್ನು ಮಾಡಲಿದ್ದಾರೆ. ಶಿಕ್ಷಣ ಕ್ಷೇತ್ರದಲ್ಲಿ ನೀವು ಯಶಸ್ಸನ್ನು ಗಳಿಸಲಿದ್ದೀರಿ. ಸ್ಪರ್ಧೆಗಳಿಗಾಗಿ ಸಿದ್ಧತೆ ನಡೆಸುತ್ತಿರುವ ವಿದ್ಯಾರ್ಥಿಗಳು ಕಠಿಣ ಶ್ರಮ ಪಡಬೇಕು. ಮನೆಯಲ್ಲಿ ಆರಾಧನೆ ಮತ್ತು ಪ್ರವಚನವನ್ನು ಅಯೋಜಿಸಬಹುದು.
ಸಿಂಹ:ಸಿಂಹ ರಾಶಿಯವರ ಕುರಿತು ಹೇಳುವುದಾದರೆ ನಿಮಗೆ ಈ ವಾರವು ಒಳ್ಳೆಯದು. ನಿಮ್ಮ ಮನೆಯಲ್ಲಿ ಶಾಂತಿ ಮತ್ತು ಸಂತೃಪ್ತಿಯ ವಾತಾವರಣ ಇರಲಿದೆ. ನಿಮ್ಮ ಜೀವನ ಸಂಗಾತಿಯ ಸಂಪೂರ್ಣ ಸಹಕಾರ ಪಡೆಯಲಿದ್ದೀರಿ. ನಿಮ್ಮ ಪ್ರೇಮ ಬದುಕು ಚೆನ್ನಾಗಿರಲಿದೆ. ವ್ಯವಹಾರದ ಕ್ಷೇತ್ರದಲ್ಲಿ ನೀವು ಹಾಕುವ ಶ್ರಮವು ಯಶಸ್ವಿಯಾಗಲಿದೆ. ಉದ್ಯೋಗದಲ್ಲಿ ಭಡ್ತಿ ಪಡೆಯಲು ಅವಕಾಶ ದೊರೆಯಲಿದೆ. ಉದ್ಯೋಗದಲ್ಲಿ ಬದಲಾವಣೆ ಉಂಟಾಗುವ ಸಾಧ್ಯತೆ ಇದೆ. ಸಂಪತ್ತನ್ನು ಹೇಗೆ ಗಳಿಸಬೇಕು ಎಂಬುದನ್ನು ನಿಮ್ಮ ಹಿರಿಯ ಸದಸ್ಯರಿಂದ ನೀವು ಕಲಿಯಲಿದ್ದೀರಿ. ಪಿತ್ರಾರ್ಜಿತ ವ್ಯವಹಾರದಲ್ಲಿ ಕೆಲವು ಬದಲಾವಣೆಗಳು ಉಂಟಾಗಬಹುದು. ಇದರಿಂದ ವ್ಯವಹಾರದಲ್ಲಿ ಪ್ರಗತಿ ಉಂಟಾಗಲಿದೆ. ಶಿಕ್ಷಣ ಕ್ಷೇತ್ರದಲ್ಲಿ ನೀವು ಯಶಸ್ಸನ್ನು ಗಳಿಸಲಿದ್ದೀರಿ. ಉನ್ನತ ಶಿಕ್ಷಣಕ್ಕೆ ಸಮಯವು ಚೆನ್ನಾಗಿದೆ. ಸ್ಪರ್ಧೆಗಳಿಗಾಗಿ ಸಿದ್ಧತೆ ನಡೆಸುತ್ತಿರುವ ಯುವಕರು ಕಠಿಣ ಶ್ರಮ ಪಡಬೇಕು. ಅರೋಗ್ಯದಲ್ಲಿ ಕಾಲಕ್ರಮೇಣ ಸುಧಾರಣೆ ಉಂಟಾಗಲಿದೆ. ನಿಮ್ಮ ಒಡಹುಟ್ಟಿದವರ ಉನ್ನತ ಶಿಕ್ಷಣಕ್ಕಾಗಿ ನಿಮ್ಮ ಪರಿಚಯದ ವ್ಯಕ್ತಿಯೊಂದಿಗೆ ಮಾತನಾಡಲಿದ್ದೀರಿ. ಅವಿವಾಹಿತರ ವಿಚಾರದಲ್ಲಿ ವಿವಾಹದ ಪ್ರಸ್ತಾವನೆಯ ಮಾತುಕತೆ ಉಂಟಾಗಬಹುದು.
ಕನ್ಯಾ:ಬದುಕಿನಲ್ಲಿ ಸಂತಸ ಮತ್ತು ಶಾಂತಿ ನೆಲೆಸಲಿದೆ. ಅಲ್ಲದೆ ಕುಟುಂಬದ ಸದಸ್ಯರಿಂದ ನೆರವನ್ನು ಪಡೆಯಲಿದ್ದೀರಿ. ನಿಮ್ಮ ಕುಟುಂಬದ ಸದಸ್ಯರೊಂದಿಗೆ ನೀವು ಒಂದಷ್ಟು ಸಮಯವನ್ನು ಕಳೆಯಲಿದ್ದೀರಿ. ಇದರಿಂದ ನಾವು ಸಾಕಷ್ಟು ಕಲಿಯಲಿದ್ದು ಇದು ಭವಿಷ್ಯದಲ್ಲಿ ನಿಮಗೆ ಸಾಕಷ್ಟು ಉಪಯುಕ್ತ ಎನಿಸಲಿದೆ. ಮಕ್ಕಳ ಭವಿಷ್ಯಕ್ಕಾಗಿ ಹಣ ಹೂಡಿಕೆ ಮಾಡಲಿದ್ದೀರಿ. ನಿಮ್ಮ ಪ್ರೇಮ ಬದುಕು ಚೆನ್ನಾಗಿರಲಿದೆ. ಉದ್ಯೋಗದಲ್ಲಿರುವವರಿಗೆ ಕೆಲಸದಲ್ಲಿ ಪ್ರಗತಿ ಪಡೆಯುವುದಕ್ಕಾಗಿ ಅವಕಾಶ ದೊರೆಯಬಹುದು. ನೀವು ವ್ಯವಹಾರದಲ್ಲಿ ಲಾಭ ಗಳಿಸಲಿದ್ದೀರಿ. ಒಳ್ಳೆಯ ವ್ಯಕ್ತಿಯ ಸಹಾಯದಿಂದ ಬಾಕಿ ಉಳಿದಿರುವ ನಿಮ್ಮ ಕೆಲಸವು ಪೂರ್ಣಗೊಳ್ಳಲಿದೆ. ಹಣ ಬರುವ ಸಾಧ್ಯತೆ ಇದೆ. ನಿಮ್ಮ ಮಗುವಿನಿಂದ ಶುಭ ಸುದ್ದಿಯನ್ನು ಪಡೆಯಲಿದ್ದೀರಿ. ಮನೆಯ ಅಗತ್ಯತೆಗಳಿಗಾಗಿ ನೀವು ಒಂದಷ್ಟು ಶಾಪಿಂಗ್ ಮಾಡಲಿದ್ದೀರಿ. ಆದರೆ ಎಲ್ಲಾ ವೆಚ್ಚಗಳನ್ನು ಮನಸ್ಸಿನಲ್ಲಿಟ್ಟುಕೊಂಡರೆ ಒಳ್ಳೆಯದು. ಸಹೋದರನ ಮದುವೆಯಲ್ಲಿ ಎದುರಾಗಿರುವ ಅಡಚಣೆಗಳು ದೂರಗೊಳ್ಳಲಿವೆ. ನೀವು ನಿಮ್ಮ ಜೀವನ ಸಂಗಾತಿಯೊಂದಿಗೆ ಪ್ರಣಯಭರಿತ ಡಿನ್ನರ್ ಅನ್ನು ಮಾಡಬಹುದು.