ಕರ್ನಾಟಕ

karnataka

ETV Bharat / photos

ಮೃಗಶಿರ ಕಾರ್ತಿಕಗೂ ಮೀನಿಗೂ ಏನು ಸಂಬಂಧ?: ಹೈದರಾಬಾದ್‌ನಲ್ಲಿ ಖರೀದಿಗೆ ಜನಜಂಗುಳಿ - Mrigasira Karthi 2024

ಇಂದು ಮೃಗಶಿರ ಕಾರ್ತಿಕ. ಈ ದಿನವೆಂದರೆ ಮೀನುಪ್ರಿಯರಿಗೆ ಬಲು ಇಷ್ಟ. ತೆಲಂಗಾಣದ ರಾಜಧಾನಿ ಹೈದರಾಬಾದ್‌ನ ಹಲವು ಮೀನು ಮಾರುಕಟ್ಟೆಗಳಲ್ಲಿ ಜನರು ಮೀನು ಖರೀದಿಗೆ ಮುಗಿಬಿದ್ದರು. (ETV Bharat)

By ETV Bharat Karnataka Team

Published : Jun 7, 2024, 3:04 PM IST

ಮೃಗಶಿರ ಕಾರ್ತಿಕದಂದು ಮೀನು ತಿನ್ನುವುದು ಪದ್ಧತಿ. (ETV Bharat)
ಬೇಸಿಗೆ ಮುಗಿಯುತ್ತಿದ್ದಂತೆ ತೆಲುಗು ರಾಜ್ಯಗಳನ್ನು ನೈರುತ್ಯ ಮುಂಗಾರು ಪ್ರವೇಶಿಸುತ್ತದೆ ಎಂಬ ಕಾರಣಕ್ಕೆ ಮೀನು ತಿನ್ನುತ್ತಾರೆ. (ETV Bharat)
ಹವಾಮಾನ ಬದಲಾವಣೆಯಿಂದ ಉಂಟಾಗುವ ಉಸಿರಾಟದ ಸಮಸ್ಯೆಗಳನ್ನು ತಪ್ಪಿಸಲು ಮೀನು ಸೇವನೆ ಒಳ್ಳೆಯದೆಂಬ ನಂಬುಗೆ. (ETV Bharat)
ಹವಾಮಾನ ಬದಲಾವಣೆಯಿಂದ ದೇಹದ ಉಷ್ಣತೆ ಕಡಿಮೆಯಾಗುವ, ರೋಗಗಳು ಹರಡುವ ಸಾಧ್ಯತೆಗಳಿರುತ್ತವೆ. (ETV Bharat)
ಇಂತಹ ರೋಗಗಳಿಂದ ಮುಕ್ತಿ ಹೊಂದಲು ಮೀನು ತಿನ್ನಬೇಕೆಂಬ ಪದ್ಧತಿ ಹಿಂದಿನಿಂದಲೂ ನಡೆದುಕೊಂಡು ಬಂದಿದೆ. (ETV Bharat)
ಮೃಗಶಿರ ಕಾರ್ತಿಕದ ಮೊದಲ ದಿನ ಮೀನು ತಿಂದರೆ ಯಾವುದೇ ರೋಗಗಳು ಬರುವುದಿಲ್ಲ ಎಂದು ಹೇಳಲಾಗುತ್ತದೆ. (ETV Bharat)
ವಿಶೇಷವಾಗಿ ಹೃದ್ರೋಗ, ಅಸ್ತಮಾ ರೋಗಿಗಳು ಈ ದಿನ ಮೀನು ತಿನ್ನುವುದು ಒಳ್ಳೆಯದಂತೆ. (ETV Bharat)
ಇಂದು ಹೈದರಾಬಾದ್‌ನ ಮೀನು ಮಾರುಕಟ್ಟೆಗಳತ್ತ ಜನಜಂಗುಳಿ ಕಂಡುಬಂತು. (ETV Bharat)
ಮೀನು ವ್ಯಾಪಾರದಲ್ಲಿ ಬ್ಯುಸಿಯಾಗಿರುವ ಜನತೆ. (ETV Bharat)
ಹೈದರಾಬಾದ್‌ನ​ ಮೀನು ಮಾರುಕಟ್ಟೆ. (ETV Bharat)

ABOUT THE AUTHOR

...view details