ಮುಂದುವರಿದ 'ದೆಹಲಿ ಚಲೋ' ಪ್ರತಿಭಟನೆ.. ಶಂಭುಗಡಿಯಲ್ಲಿ ಬೀಡುಬಿಟ್ಟ ರೈತರ ಮೇಲೆ ಅಶ್ರುವಾಯು ಪ್ರಯೋಗ.. ನವದೆಹಲಿಗೆ ಸಾಗುತ್ತಿರುವ ರೈತ ಪ್ರತಿಭಟನಾಕಾರರು ಪಂಜಾಬ್-ಹರಿಯಾಣ ಗಡಿ ಶಂಭು ಬಳಿ ಬಂದು ಸೇರಿದ್ದಾರೆ.. ಪ್ರತಿಭಟನಾಕಾರರನ್ನು ತಡೆಯೋ ಪ್ರಯತ್ನವನ್ನು ಪೊಲೀಸರು ಮುಂದುವರಿಸಿದ್ದಾರೆ.. ನವದೆಹಲಿಗೆ ಮೆರವಣಿಗೆ ಕೈಗೊಂಡಿರುವ ಪ್ರತಿಭಟನಾನಿರತ ರೈತರನ್ನು ಚದುರಿಸಲು ಪೊಲೀಸರು ಅಶ್ರುವಾಯು ಪ್ರಯೋಗಿಸಿದ ಕ್ಷಣವಿದು.. ರೈಲು ಹಳಿ ಮೇಲೆ ಕುಳಿತು ಪ್ರತಿಭಟನೆ.. ರೈತರನ್ನು ತಡೆಯಲು ಹಲವೆಡೆ ಬ್ಯಾರಿಕೇಡ್‌ಗಳ ಮೇಲೆ ತಂತಿಯನ್ನು ಹಾಕಲಾಗಿದೆ.. ಪ್ರತಿಭಟನಾನಿರತ ರೈತರು ಶಂಭು ಗಡಿಯ ಬಳಿ ಸಶಸ್ತ್ರ ಪೊಲೀಸ್ ಸಿಬ್ಬಂದಿಯನ್ನು ಎದುರಿಸಿದ ಕ್ಷಣ.. ಅಶ್ರುವಾಯು ಪ್ರಯೋಗ ಹಿನ್ನೆಲೆ ಮುನ್ನೆಚ್ಚರಿಕೆಯಾಗಿ ಸಹ ಪ್ರತಿಭಟನಾಕಾರರಿಗೆ ರೈತರೊಬ್ಬರು ಐ ಡ್ರಾಪ್ಸ್ ಹಾಕಿದ ಕ್ಷಣ.. ಸಾವಿರಾರು ಪ್ರತಿಭಟನಾನಿರತ ರೈತರನ್ನು ತಡೆಯಲು ಪೊಲೀಸರು ನಿರ್ಮಿಸಿದ್ದ ಬ್ಯಾರಿಕೇಡ್ ಮೇಲೆ ಪಕ್ಷವೊಂದರ ಪೋಸ್ಟರ್ ಕಾಣಿಸಿಕೊಂಡಿದೆ.. ಇಂದು. ಪೊಲೀಸ್ ಸಬ್ ಇನ್ಸ್ಪೆಕ್ಟರ್ ಹೀರಾ ಲಾಲ್ (52) ನಿತ್ರಾಣಗೊಂಡು ಕೊನೆಯುಸಿರೆಳೆದಿದ್ದಾರೆ. ಮತ್ತೊಂದು ಕಡೆ 63ರ ಹರೆಯದ ರೈತ ಹೃದಯಾಘಾತದಿಂದ ಸಾವಿಗೀಡಾಗಿದ್ದಾರೆ.. ಪ್ರತಿಭಟನಾನಿರತರೊಂದಿಗೆ ಸರ್ಕಾರ ನಡೆಸಿದ ಮೂರು ಸಭೆಗಳು ಫಲ ನೀಡಿಲ್ಲ.. ಭಾನುವಾರ ನಾಲ್ಕನೇ ಸಭೆ ನಡೆಯಲಿದೆ.. ರೈತರ ಬೇಡಿಕೆ ಈಡೇರಿಸಲು ಕೇಂದ್ರ ಒಪ್ಪಿದರೆ. ಹೋರಾಟ ಸ್ಥಗಿತವಾಗಲಿದೆ.. ಇಲ್ಲವಾದರೆ ಮತ್ತಷ್ಟು ದಿನ ಪ್ರತಿಭಟನೆಯ ಕಾವು ಇರಲಿದೆ.. ಪ್ರತಿಭಟನೆ ವೇಳೆ ಹಲವು ರೈತರು ಗಾಯಗೊಂಡಿದ್ದಾರೆ.. ಗಾಯಗೊಂಡ ರೈತರಿಗೆ ಸೂಕ್ತ ಚಿಕಿತ್ಸೆ ನೀಡಲಾಗುತ್ತಿದೆ.. 'ದೆಹಲಿ ಚಲೋ'...