Gandhi Jayanti 2024:ದೇಶದಲ್ಲಿ ಮಾತ್ರವಲ್ಲದೆ ವಿದೇಶಗಳಲ್ಲೂ ಪ್ರತಿಮೆಗಳನ್ನು ಸ್ಥಾಪಿಸುವ ಮೂಲಕ ಗಾಂಧೀಜಿಗೆ ವಿಶೇಷ ಗೌರವ ನೀಡಲಾಗುತ್ತಿದೆ. 70ಕ್ಕೂ ಹೆಚ್ಚು ದೇಶಗಳು ಗಾಂಧೀಜಿಯವರ ಪ್ರತಿಮೆಗಳನ್ನು ಸ್ಥಾಪಿಸಿವೆ. ಇಂದು ಗಾಂಧಿ ಜಯಂತಿಯಂದು ಗಾಂಧೀಜಿಯವರ ಪ್ರತಿಮೆಯನ್ನು ಯಾವೆಲ್ಲಾ ದೇಶಗಳಲ್ಲಿ ಸ್ಥಾಪಿಸಲಾಗಿದೆ ಎಂಬುದನ್ನು ತಿಳಿಯೋಣ. ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ಜನ್ಮದಿನವಾದ ಅಕ್ಟೋಬರ್ 2 ರಂದು ಪ್ರತಿವರ್ಷ ಗಾಂಧೀಜಿ ಜಯಂತಿಯನ್ನು ಆಚರಿಸಲಾಗುತ್ತದೆ. ಈ ದಿನ ನಾವು ಗಾಂಧಿಯವರ ಅಹಿಂಸೆ ಮತ್ತು ಸತ್ಯ ಸಂದೇಶವನ್ನು ನೆನಪಿಸಿಕೊಳ್ಳುತ್ತಿದ್ದೇವೆ. ಈ ವರ್ಷ ಭಾರತವು ಗಾಂಧೀಜಿ ಅವರ 155 ನೇ ಜಯಂತಿಯನ್ನು ಆಚರಿಸುತ್ತಿದೆ. ಪ್ರಪಂಚದಾದ್ಯಂತ ಈ ದಿನವನ್ನು ಅಂತರರಾಷ್ಟ್ರೀಯ ಅಹಿಂಸಾ ದಿನ ಎಂದು ಆಚರಿಸಲಾಗುತ್ತದೆ.
ಗಾಂಧಿ ಜಯಂತಿ ಇತಿಹಾಸ ಮತ್ತು ಮಹತ್ವ:ಮಹಾತ್ಮ ಗಾಂಧೀಜಿಯವರು ಅಕ್ಟೋಬರ್ 2, 1869 ರಂದು ಗುಜರಾತ್‌ನ ಪೋರಬಂದರ್‌ನಲ್ಲಿ ಜನಿಸಿದರು. ಅವರು ದೇಶದ ಸ್ವಾತಂತ್ರ್ಯ ಹೋರಾಟದಲ್ಲಿ ಪ್ರಮುಖ ಪಾತ್ರ ವಹಿಸಿದರು. ಮತ್ತು ಬ್ರಿಟಿಷ್ ಆಡಳಿತದ ವಿರುದ್ಧ ಅಹಿಂಸಾತ್ಮಕ ಹೋರಾಟಗಳನ್ನು ನಡೆಸುವ ಮೂಲಕ ಭಾರತಕ್ಕೆ ಸ್ವಾತಂತ್ರ್ಯವನ್ನು ತಂದುಕೊಡುವಲ್ಲಿ ಪ್ರಮುಖ ಪಾತ್ರವಹಿಸಿದರು. ಗಾಂಧೀಜಿ ಸೇರಿದಂತೆ ಅಸಂಖ್ಯಾತ ಸ್ವಾತಂತ್ರ್ಯ ಹೋರಾಟಗಾರರ ಪ್ರಯತ್ನದಿಂದಾಗಿ ಭಾರತವು 1947ರಲ್ಲಿ ಸ್ವಾತಂತ್ರ್ಯವನ್ನು ಗಳಿಸಿತು. ಗಾಂಧೀಜಿಯವರ ಸತ್ಯ ಮತ್ತು ಅಹಿಂಸೆ ತತ್ವವು ಪ್ರಪಂಚದಾದ್ಯಂತ ಅನೇಕ ಜನರಿಗೆ ಸ್ಫೂರ್ತಿ ನೀಡಿದೆ.
ಅಕ್ಟೋಬರ್ 2 ವಿಶೇಷ ದಿನ:1948ರಲ್ಲಿ ಮಹಾತ್ಮ ಗಾಂಧಿಯವರ ಮರಣದ ನಂತರ, ಗಾಂಧಿ ಜಯಂತಿ ರಾಷ್ಟ್ರೀಯ ರಜಾದಿನವಾಯಿತು. ಈ ದಿನವನ್ನು ಅವರ ಜೀವನವನ್ನು ಗೌರವಿಸಲು ಮಾತ್ರವಲ್ಲದೆ ಶಾಂತಿ ಮತ್ತು ಸಾಮರಸ್ಯದ ವಿಚಾರಗಳನ್ನು ಉತ್ತೇಜಿಸಲು ಆಚರಿಸಲಾಗುತ್ತದೆ. ಗಾಂಧಿ ಜಯಂತಿ ಭಾರತೀಯರಿಗೆ ಹೆಚ್ಚಿನ ಮಹತ್ವವನ್ನು ಹೊಂದಿದೆ. ಬಾಪು ಅವರ ಬೋಧನೆಗಳನ್ನು ಗೌರವಿಸುವುದು, ಅದನ್ನು ಜೀವನದಲ್ಲಿ ಅಳವಡಿಸಿಕೊಳ್ಳುವ ಮತ್ತು ರಾಷ್ಟ್ರವನ್ನು ರಕ್ಷಿಸುವ ಮತ್ತು ಉಳಿಸಿಕೊಳ್ಳುವ ದಿನವಾಗಿ ಆಚರಿಸಲಾಗುತ್ತದೆ. ಗಾಂಧಿಯವರ ಬೋಧನೆಗಳು ಶಾಂತಿಯುತ ಪ್ರತಿರೋಧದ ಶಕ್ತಿಯನ್ನು ನಮಗೆ ನೆನಪಿಸುತ್ತವೆ. ಯಾವುದೇ ಹಿಂಸಾತ್ಮಕ ವಿಧಾನಗಳಿಲ್ಲದೆ ಪ್ರತಿಯೊಂದು ಹಂತದಲ್ಲೂ ನ್ಯಾಯಕ್ಕಾಗಿ ನಿಲ್ಲುತ್ತವೆ. ಇದು ನಮಗೆಲ್ಲರಿಗೂ ಮುಖ್ಯವಾದ ಪಾಠವಾಗಿದೆ.
ಹಲವು ದೇಶಗಳಲ್ಲಿ ಗಾಂಧೀಜಿ ಸ್ಮಾರಕ ಸ್ಥಾಪನೆ:ಮಹಾತ್ಮ ಗಾಂಧೀಜಿಯವರು ಬ್ರಿಟಿಷರ ವಸಾಹತುಶಾಹಿಯಿಂದ ಭಾರತದ ಸ್ವಾತಂತ್ರ್ಯಕ್ಕಾಗಿ ಹೋರಾಡಿದ್ದಲ್ಲದೆ, ಜಗತ್ತಿಗೆ ಅಹಿಂಸೆಯ ಪಾಠವನ್ನೂ ಕಲಿಸಿದರು. ಪ್ರಪಂಚದಾದ್ಯಂತ ಜನರು ಇಂದಿಗೂ ಗಾಂಧಿಯನ್ನು ಶಾಂತಿಯ ಸಂಕೇತವೆಂದು ಸ್ಮರಿಸುತ್ತಾರೆ. ಪ್ರಪಂಚದಾದ್ಯಂತದ ವಿವಿಧ ದೇಶಗಳು ಮಹಾತ್ಮ ಗಾಂಧಿಯವರ ಸ್ಮರಣಾರ್ಥವಾಗಿ ಸ್ಮಾರಕಗಳು ಮತ್ತು ಮೂರ್ತಿಗಳನ್ನು ಅರ್ಪಿಸಿವೆ. ಜನರು ಅವರನ್ನು ಶಾಂತಿ, ಮಾನವೀಯತೆ ಮತ್ತು ಅಹಿಂಸೆಯ ಸಂಕೇತವೆಂದು ಗೌರವಿಸುತ್ತಾರೆ. ಬಾಪು ಅವರ ಸ್ಮಾರಕವನ್ನು ಯಾವ ದೇಶಗಳಲ್ಲಿ ಸ್ಥಾಪಿಸಲಾಗಿದೆ ಎಂಬುದನ್ನು ಇಲ್ಲಿ ತಿಳಿಯಿರಿ.
ವಿದೇಶಗಳಲ್ಲಿ ಮಹಾತ್ಮ ಗಾಂಧಿಗೆ ಸಮರ್ಪಿತವಾಗಿರುವ ಪ್ರಮುಖ 10 ಸ್ಮಾರಕಗಳು:
ಅಮರಿಕದ ಕ್ಯಾಲಿಫೋರ್ನಿಯಾದ ಲೇಕ್ ಶ್ರೈನ್: ಇದು ಗಾಂಧಿ ವಿಶ್ವ ಶಾಂತಿ ಸ್ಮಾರಕವಾಗಿ. ಇದು ಸಾವಿರ ವರ್ಷಗಳಷ್ಟು ಹಳೆಯದಾದ ಚೀನೀ ಶವಪೆಟ್ಟಿಗೆಯನ್ನು ಹೊಂದಿದೆ. ಇದರಲ್ಲಿ ಗಾಂಧಿಯವರ ಚಿತಾಭಸ್ಮದ ಒಂದು ಭಾಗವನ್ನು ಹಿತ್ತಾಳೆ-ಬೆಳ್ಳಿಯ ಶವಪೆಟ್ಟಿಗೆಯಲ್ಲಿ ಇರಿಸಲಾಗಿದೆ. ಸ್ಮಾರಕವನ್ನು 1950ರಲ್ಲಿ ನಿರ್ಮಿಸಲಾಯಿತು.
ಯುನೈಟೆಡ್ ಕಿಂಗ್‌ಡಮ್:ಯುನೈಟೆಡ್ ಕಿಂಗ್ಡಮ್ನ ವೆಸ್ಟ್‌ಮಿನಿಸ್ಟರ್‌ನ ಪಾರ್ಲಿಮೆಂಟ್ ಸ್ಕ್ವೇರ್‌ನಲ್ಲಿ ಗಾಂಧಿಯವರ 9 ಅಡಿ ಎತ್ತರದ ಕಂಚಿನ ಪ್ರತಿಮೆಯನ್ನು ಸ್ಥಾಪಿಸಲಾಗಿದೆ. ಇದನ್ನು ಫಿಲಿಪ್ ಜಾಕ್ಸನ್ ರಚಿಸಿದ್ದಾರೆ. 1931 ರ ಗಾಂಧಿಯವರ ಛಾಯಾಚಿತ್ರದಿಂದ ಸ್ಫೂರ್ತಿ ಪಡೆದಿದ್ದಾರೆ.
ಲಂಡನ್ನ ಪಾರ್ಲಿಮೆಂಟ್ ಸ್ಕ್ವೇರ್: ಇತ್ತೀಚೆಗೆ ಮಹಾತ್ಮ ಗಾಂಧಿಯವರ ಪ್ರತಿಮೆಯನ್ನು ಮಾರ್ಚ್ 14, 2015 ರಂದು ಲಂಡನ್‌ನಲ್ಲಿ ಸ್ಥಾಪಿಸಲಾಯಿತು. ಕಲಾವಿದ ಫಿಲಿಪ್ ಜಾಕ್ಸನ್ ಈ ಪ್ರತಿಮೆಯನ್ನು ರಚಿಸಿದ್ದಾರೆ. ಅಂದಿನ ಬ್ರಿಟನ್ ಪ್ರಧಾನಿ ಡೇವಿಡ್ ಕ್ಯಾಮರೂನ್, ಕೇಂದ್ರ ಹಣಕಾಸು ಸಚಿವ ಅರುಣ್ ಜೇಟ್ಲಿ, ಗಾಂಧಿ ಮೊಮ್ಮಗ ಮತ್ತು ಪಶ್ಚಿಮ ಬಂಗಾಳದ ಮಾಜಿ ರಾಜ್ಯಪಾಲ ಗೋಪಾಲಕೃಷ್ಣ ಗಾಂಧಿ ಮತ್ತು ನಟ ಅಮಿತಾಬ್ ಬಚ್ಚನ್ ಅನಾವರಣ ಸಮಾರಂಭದಲ್ಲಿ ಉಪಸ್ಥಿತರಿದ್ದರು.