ಕರ್ನಾಟಕ

karnataka

ETV Bharat / lifestyle

90ರ ದಶಕದ ಮಕ್ಕಳ ಅಚ್ಚುಮೆಚ್ಚಿನ ರಸಭರಿತ 'ಡ್ರೈ ರಸಗುಲ್ಲಾ': ಮನೆಯಲ್ಲೇ ಮಾಡೋದು ಹೇಗೆ? - HOW TO MAKE DRY RASGULLA

How To Make Dry Rasgulla: 90ರ ದಶಕದ ಮಕ್ಕಳ ಮೆಚ್ಚಿನ ಡ್ರೈ ರಸಗುಲ್ಲಾ ಮಾಡುವುದು ಹೇಗೆ ಎಂಬುದನ್ನು ತಿಳಿಯೋಣ.

How to Make Dry Rasgulla  HOW TO MAKE DRY RASGULLA AT HOME  EASY DRY RASGULLA RECIPE  DRY RASGULLA
ಡ್ರೈ ರಸಗುಲ್ಲಾ (ETV Bharat)

By ETV Bharat Lifestyle Team

Published : Oct 22, 2024, 3:23 PM IST

Dry Rasgulla:ನಮ್ಮಲ್ಲಿ ಹಲವರು ಬಾಲ್ಯದಲ್ಲಿ ಡ್ರೈ ರಸಗುಲ್ಲಾ ಸಿಹಿತಿಂಡಿ ತಿನ್ನುತ್ತಿದ್ದರು. ಮೇಲ್ಭಾಗದಲ್ಲಿ ಗರಿಗರಿಯಾಗಿದ್ದು ಒಳಗೆ ರಸಭರಿತವಾಗಿಯೂ ತುಂಬಾ ರುಚಿಯಾಗಿರುತ್ತವೆ. ಬಾಯಲ್ಲಿ ಕರಗುವ ಈ ಸಿಹಿತಿಂಡಿಗಳು 90ರ ದಶಕದ ಮಕ್ಕಳಿಗೆ ಅಚ್ಚುಮೆಚ್ಚಿನವು. ಆದರೆ, ಇಂದಿನ ದಿನಗಳಲ್ಲಿ ಇವು ಮಾರುಕಟ್ಟೆಯಲ್ಲಿ ಲಭ್ಯವಿಲ್ಲ. ಸರಳ ಡ್ರೈ ರಸಗುಲ್ಲಾವನ್ನು ಮನೆಯಲ್ಲಿಯೇ ತಯಾರಿಸುವುದು ಸುಲಭ.

ಡ್ರೈ ರಸಗುಲ್ಲಾ ಸಿದ್ಧಪಡಿಸಲು ಬೇಕಾಗುವ ಸಾಮಗ್ರಿ:

  • ಮೈದಾ ಹಿಟ್ಟು- ಒಂದು ಕಪ್
  • ಕಾರ್ನ್​ ಫ್ಲೋರ್ (ಕಾರ್ಸ್​ ಹಿಟ್ಟು) - ಟೀ ಸ್ಪೂನ್
  • ಬೇಕಿಂಗ್ ಪೌಡರ್ - ಅರ್ಧ ಟೀಸ್ಪೂನ್
  • ಸಕ್ಕರೆ- 1 ಕಪ್
  • ನೀರು- 3/4 ಕಪ್
  • ಫುಡ್ ಕಲರ್​- ಕಾಲು ಟೀ ಸ್ಪೂನ್
  • ನಿಂಬೆ ರಸ - 2 ಟೀ ಸ್ಪೂನ್
  • ಎಣ್ಣೆ - ಡೀಪ್​ ಪ್ರೈ ಮಾಡಲು ಬೇಕಾಗುವಷ್ಟು
  • ಏಲಕ್ಕಿ ಪುಡಿ - 1 ಟೀ ಸ್ಪೂನ್

ತಯಾರಿಸುವ ವಿಧಾನ:

  • ಮೊದಲು, ಮಿಕ್ಸಿಂಗ್ ಬಟ್ಟಲಿನಲ್ಲಿ ಕಾರ್ನ್ ಫ್ಲೋರ್ ಹಿಟ್ಟು ಹಾಕಿಕೊಳ್ಳಿ. ಚಿಟಿಕೆ ಉಪ್ಪು ಮತ್ತು ಬೇಕಿಂಗ್ ಪೌಡರ್ ಅದರೊಳಗೆ ಸಿಂಪಡಿಸಿ. (ಬೇಕಿಂಗ್ ಪೌಡರ್ ಬದಲಿಗೆ ಬೇಕಿಂಗ್ ಸೋಡಾ ಬಳಸಬಹುದು)
  • ಇದಕ್ಕೆ ಫುಡ್​ ಕಲರ್​ ಸೇರಿಸಿ ಮತ್ತು ಹಿಟ್ಟನ್ನು ಚೆನ್ನಾಗಿ ಮಿಶ್ರಣ ಮಾಡಿ. ಹಿಟ್ಟಿಗೆ ಸ್ವಲ್ಪ ನಿಂಬೆ ರಸ ಸೇರಿಸಿ ಮತ್ತು ಚೆನ್ನಾಗಿ ಮಿಶ್ರಣ ಮಾಡಿ. ನಂತರ ಮೃದುವಾದ ಹಿಟ್ಟಿನೊಳಗೆ ಸ್ವಲ್ಪ ಸ್ವಲ್ಪ ನೀರು ಸೇರಿಸಿ.
  • ನಂತರ ಸ್ವಲ್ಪ ಎಣ್ಣೆ ಹಾಕಿ. ಹಿಟ್ಟನ್ನು ಕಲಸಿ ಮುಚ್ಚಿಡಿ.
  • ಈಗ ಪಾಕಕ್ಕಾಗಿ, ಬಾಣಲೆಯನ್ನು ಒಲೆಯ ಮೇಲಿರಿಸಿ. ನೀರು ಸೇರಿಸಿ ಮತ್ತು ಅದರಲ್ಲಿ ಸಕ್ಕರೆ ಕರಗಿಸಿ.
  • ಸಕ್ಕರೆ ಪಾಕ ಸಿದ್ಧವಾದ ನಂತರ, ಅದಕ್ಕೆ ಏಲಕ್ಕಿ ಪುಡಿ ಮತ್ತು ನಿಂಬೆ ರಸ ಸೇರಿಸಿ, ಸ್ಟವ್ ಆಫ್ ಮಾಡಿ ಮತ್ತು ಮುಚ್ಚಿ.
  • ಈಗ ರಸಗುಲ್ಲಾಗಳನ್ನು ಮಾಡಲು ಹಿಟ್ಟನ್ನು ಮತ್ತೆ ಮಿಶ್ರಣ ಮಾಡಿ.
  • ಸ್ವಲ್ಪ ಒಣ ಹಿಟ್ಟು ಸಿಂಪಡಿಸಿ ಮತ್ತು ಚಪಾತಿ ಕಡ್ಡಿಯಿಂದ ಸ್ವಲ್ಪ ದಪ್ಪ ಚಪಾತಿ ಮಾಡಿ.
  • ಗುಲಾಬ್ ಜಾಮೂನ್‌ಗಿಂತಲೂ ಚಿಕ್ಕ ಗಾತ್ರದಲ್ಲಿ ಕಲಸಿದ ಹಿಟ್ಟಿನಿಂದ ಉಂಡೆಗಳನ್ನು ಮಾಡಿ ಇಟ್ಟುಕೊಳ್ಳಿ. ಸಣ್ಣ ರಸಗುಲ್ಲಾಗಳನ್ನು ಮಾಡಿ.
  • ರಸಗುಲ್ಲಾಗಳನ್ನು ಹುರಿಯಲು ಒಲೆಯ ಮೇಲೆ ಪ್ಯಾನ್ ಇರಿಸಿ. ಅದಕ್ಕೆ ಬೇಕಾದಷ್ಟು ಎಣ್ಣೆ ಹಾಕಿ ಬಿಸಿ ಮಾಡಿ.
  • ಎಣ್ಣೆ ಬಿಸಿಯಾದ ನಂತರ ರಸಗುಲ್ಲಾಗಳನ್ನು ಒಂದೊಂದಾಗಿ ಹಾಕಿ ಚೆನ್ನಾಗಿ ಹುರಿಯಿರಿ. ರಸಗುಲ್ಲಾ ಬೆಂದ ನಂತರ ಬೆಚ್ಚಗಿನ ಸಕ್ಕರೆ ಪಾಕದಲ್ಲಿ ಹಾಕಿ 10 ನಿಮಿಷ ಬಿಡಿ.
  • ನಂತರ ಅದನ್ನು ತಟ್ಟೆಯಲ್ಲಿ ತೆಗೆದುಕೊಳ್ಳಿ. ಸಂಪೂರ್ಣವಾಗಿ ತಣ್ಣಗಾದ ನಂತರ ಅವುಗಳನ್ನು ತಿನ್ನಿರಿ. ಈ ಡ್ರೈ ರಸಗುಲ್ಲಾ ಸಖತ್​ ಟೇಸ್ಟಿಯಾಗಿರುತ್ತವೆ.
  • ಈ ರೆಸಿಪಿ ನಿಮಗೆ ಇಷ್ಟವಾದಲ್ಲಿ ಮಕ್ಕಳಿಗಾಗಿ ಈ ರೀತಿಯ ಡ್ರೈ ರಸಗುಲ್ಲಾಗಳನ್ನು ಟ್ರೈ ಮಾಡಿ ನೋಡಿ.

ಇದನ್ನೂ ಓದಿ:

ABOUT THE AUTHOR

...view details