ಕರ್ನಾಟಕ

karnataka

ETV Bharat / international

ಪಾಕಿಸ್ತಾನದಲ್ಲಿ ಪತ್ರಕರ್ತನನ್ನು ಗುಂಡಿಕ್ಕಿ ಕೊಂದ ಅಪರಿಚಿತ ಬಂದೂಕುಧಾರಿಗಳು - Pakistani journalist shot dead - PAKISTANI JOURNALIST SHOT DEAD

ಪಾಕ್​​ನಲ್ಲಿ ಪತ್ರಕರ್ತರೊಬ್ಬರು ಅಪರಿಚಿತ ಬಂದೂಕುಧಾರಿಗಳಿಗೆ ಬಲಿಯಾಗಿದ್ದಾರೆ. ಪಾಕಿಸ್ತಾನದ ಪತ್ರಕರ್ತರ ಸಂಘಗಳು ಈ ಹತ್ಯೆಯನ್ನು ಖಂಡಿಸಿದ್ದು, ಪತ್ರಕರ್ತರ ಭದ್ರತೆಗೆ ಹಾಗೂ ರಕ್ಷಣೆಗೆ ಸೂಕ್ತ ಕ್ರಮವನ್ನು ತೆಗೆದುಕೊಳ್ಳುವಂತೆ ಒತ್ತಾಯಿಸಿದ್ದಾರೆ.

ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ (ETV Bharat)

By PTI

Published : Jun 19, 2024, 9:34 AM IST

ಪೇಶಾವರ: ಪಾಕಿಸ್ತಾನದ ವಾಯುವ್ಯದಲ್ಲಿರುವ ಖೈಬರ್ ಪಖ್ತುಂಖ್ವಾ ಪ್ರಾಂತ್ಯದಲ್ಲಿ ಪಾಕಿಸ್ತಾನಿ ಪತ್ರಕರ್ತರೊಬ್ಬರನ್ನು ಮಂಗಳವಾರ ಅಪರಿಚಿತ ಬಂದೂಕುಧಾರಿಗಳು ಗುಂಡಿಕ್ಕಿ ಹತ್ಯೆಗೈದಿದ್ದಾರೆ ಎಂದು ಬುಡಕಟ್ಟು ಪತ್ರಕರ್ತರ ಸಂಘ ತಿಳಿಸಿದೆ. ಪಾಷ್ಟೋ ನ್ಯೂಸ್ ಚಾನೆಲ್ "ಖೈಬರ್ ನ್ಯೂಸ್"ನಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ಪತ್ರಕರ್ತ ಖಲೀಲ್ ಜಿಬ್ರಾನ್ ಅವರನ್ನು ಖೈಬರ್ ಜಿಲ್ಲೆಯ ಮಜ್ರಿನಾ ಸುಲ್ತಾಂಖೇಲ್ ಪ್ರದೇಶದಲ್ಲಿ ಅವರ ಮನೆಯ ಸಮೀಪ ಶೂಟರ್‌ಗಳು ಗುಂಡಿಕ್ಕಿ ಕೊಂದಿದ್ದಾರೆ ಎಂದು ವರದಿಯಾಗಿದೆ.

ಗುಂಡಿನ ದಾಳಿಯಲ್ಲಿ ಸಾಜಿದ್​ ಎನ್ನುವ ಇನ್ನೊಬ್ಬ ವ್ಯಕ್ತಿಯೂ ಗಾಯಗೊಂಡಿದ್ದು, ಪತ್ರಕರ್ತನನ್ನು ಕೊಂದ ನಂತರ ದಾಳಿಕೋರರು ಸ್ಥಳದಿಂದ ಪರಾರಿಯಾಗಿದ್ದಾರೆ. ಮೂಲಗಳ ಪ್ರಕಾರ ಪೊಲೀಸ್​ ತುಕಡಿ ಸ್ಥಳಕ್ಕೆ ಭೇಟಿ ನೀಡಿ, ಪರಿಶೀಲನೆ ನಡೆಸಿದೆ. ಬುಡಕಟ್ಟು ಜಿಲ್ಲೆಯ ಮಜ್ರಿನಾ ಪ್ರದೇಶ ಉಗ್ರಗಾಮಿಗಳ ತಾಣವಾಗಿದೆ. ಜಿಬ್ರಾನ್​ ಹತ್ಯೆಯನ್ನು ಕುಟುಂಬದ ಮೂಲಗಳು ದೃಢಪಡಿಸಿದ್ದು, ಹಿರಿಯ ಪತ್ರಕರ್ತರೊಬ್ಬರು ಇದು ಉದ್ದೇಶಿತ ಹತ್ಯೆ ಎಂದು ಆರೋಪಿಸಿದ್ದಾರೆ.

ಖೈಬರ್ ಪಖ್ತುಂಖ್ವಾದ ಮುಖ್ಯಮಂತ್ರಿ ಅಲಿ ಅಮೀನ್​ ಗಂದಪುರ್​, ಬುಡಕಟ್ಟು ಜನಾಂಗಕ್ಕೆ ಸೇರಿದ ಪತ್ರಕರ್ತನ ಹತ್ಯೆಯನ್ನು ಕಂಡಿಸಿದ್ದು, ದಾಳಿಕೋರರನ್ನು ತಕ್ಷಣ ಬಂಧಿಸುವಂತೆ ಆದೇಶಿಸಿದ್ದಾರೆ. ವಿದ್ಯುನ್ಮಾನ ಮಾಧ್ಯಮ ಸಂಪಾದಕರ ಸಂಘವೂ ಈ ಹತ್ಯೆಯನ್ನು ಖಂಡಿಸಿದ್ದು, ದಾಳಿಕೋರರನ್ನು ಬಂಧಿಸುವಂತೆ ಒತ್ತಾಯಿಸಿದೆ. ಖೈಬರ್​ ಯೂನಿಯನ್​ ಆಫ್​ ಜರ್ನಲಿಸ್ಟ್​ ಮತ್ತು ಪೇಶಾವರ ಪ್ರೆಸ್​ಕ್ಲಬ್​ ಕೂಡ, ಪತ್ರಕರ್ತರ ರಕ್ಷಣೆ ಹಾಗೂ ಭದ್ರತೆಗೆ ಸೂಕ್ತ ಕ್ರಮಗಳನ್ನು ತೆಗೆದುಕೊಳ್ಳುವಂತೆ ಒತ್ತಾಯಿಸಿದೆ.

ಇದನ್ನೂ ಓದಿ:ಮದುವೆ ವಿಚಾರಕ್ಕೆ ಕೋಪ; ದಾರಿ ತಪ್ಪಿದ ಮಗಳಿಂದ ತಂದೆಯ ಬರ್ಬರ ಕೊಲೆ! - DAUGHTER KILLS FATHER

ABOUT THE AUTHOR

...view details