ವಾಷಿಂಗ್ಟನ್:ಡೊನಾಲ್ಡ್ ಟ್ರಂಪ್ ಎನ್ನುವ ಅಧ್ಯಾಯದ ಪುಟವನ್ನು ತಿರುವಿ ಹಾಕಲು ಹಾಗೂ ದೇಶಕ್ಕಾಗಿ ಹೊಸ ಹಾದಿಯನ್ನು ಸ್ವೀಕರಿಸಲು ಅಮೆರಿಕನ್ನರು ತಯಾರಾಗಿದ್ದಾರೆ ಎಂದು ಅಮೇರಿಕ ಉಪಾಧ್ಯಕ್ಷೆ ಹಾಗೂ ಅಧ್ಯಕ್ಷೀಯ ಚುನಾವಣೆಯ ಅಭ್ಯರ್ಥಿ ಕಮಲಾ ಹ್ಯಾರಿಸ್ ಹೇಳಿದ್ದಾರೆ.
ಅಮೆರಿಕ ಅಧ್ಯಕ್ಷೀಯ ಚುನಾವಣೆಯಲ್ಲಿ ಡೆಮಾಕ್ರಟಿಕ್ ಪಕ್ಷದ ಅಭ್ಯರ್ಥಿಯಾಗಿ ಆಯ್ಕೆಯಾದ ನಂತರ ಗುರುವಾರ ನೀಡಿದ ಮೊದಲ ಸಂದರ್ಶನದಲ್ಲಿ ಮಾತನಾಡಿದ ಅವರು, "ಡೊನಾಲ್ಡ್ ಟ್ರಂಪ್ ದೇಶವನ್ನು ವಿಭಜಿಸುವ ಹಾಗೂ ಜನರ ಗುಣವನ್ನು ಕುಗ್ಗಿಸುವ ಕಾರ್ಯಸೂಚಿಯನ್ನು ಮುಂದಿಡುತ್ತಿದ್ದಾರೆ" ಎಂದು ಪ್ರತಿಪಾದಿಸಿದ್ದಾರೆ.
ಆಡಳಿತದ ಪುಟ ತಿರುವಿ ಹಾಕಲು ಸನ್ನದ್ಧ:"ಟ್ರಂಪ್ ಅವರ ಹಿಂದಿನ ಆಡಳಿತದಿಂದ ರೋಸಿ ಹೋಗಿರುವ ಅಮೆರಿಕನ್ನರು, ಅವರ ಆಡಳಿತದ ಪುಟವನ್ನು ತಿರುವಿ ಹಾಕಲು ಸಿದ್ಧರಾಗಿದ್ದಾರೆ ಎಂದು ನಾನು ಭಾವಿಸುತ್ತೇನೆ. ರಾಷ್ಟ್ರವನ್ನು ವಿಭಜಿಸುವಂತಹ, ದೇಶದ ಜನರ ಶಕ್ತಿಯನ್ನು ಕುಗ್ಗಿಸುವ ಕಾರ್ಯಸೂಚಿ ಹೊಂದಿದ್ದ ವ್ಯಕ್ತಿಯನ್ನು ಅಧ್ಯಕ್ಷರಾಗಿ ಹೊಂದಿದ್ದ ಕಳೆದ ದಶಕದ ಬಗ್ಗೆ ನನಗೆ ಬಹಳ ದುಃಖವಿದೆ" ಎಂದು ಹೇಳಿದ್ದಾರೆ.
ಭಾರತೀಯ ಮತ್ತು ಆಫ್ರಿಕನ್ ಪರಂಪರೆಯನ್ನು ಹೊಂದಿರುವ ಹ್ಯಾರಿಸ್ ಅವರು ಸಂದರ್ಶನದಲ್ಲಿ ತನ್ನ ಜನಾಂಗೀಯ ಗುರುತಿನ ಬಗ್ಗೆ ಟ್ರಂಪ್ ಮಾಡಿದ್ದ ಹೇಳಿಕೆಗಳ ಬಗೆಗಿನ ಪ್ರಶ್ನೆಗಳನ್ನು ನಿರಾಕರಿಸಿದ ಹ್ಯಾರಿಸ್ "ಅದೇ ಹಳೆಯ ದಣಿದ ಪ್ಲೇಬುಕ್‌ನ ಭಾಗ" ಹೇಳಿದರು. ಕಳೆದ ತಿಂಗಳು, ಚಿಕಾಗೋದಲ್ಲಿ ನಡೆದ ನ್ಯಾಷನಲ್ ಅಸೋಸಿಯೇಷನ್ ಆಫ್ ಬ್ಲ್ಯಾಕ್ ಜರ್ನಲಿಸ್ಟ್ಸ್ ಕಾನ್ಫರೆನ್ಸ್‌ನಲ್ಲಿ ಹ್ಯಾರಿಸ್ ಅವರ ಜನಾಂಗೀಯ ಗುರುತಿನ ಬಗ್ಗೆ ಟ್ರಂಪ್ ಪ್ರಶ್ನಿಸಿದ್ದರು.
ಬೈಡನ್ ಬಗ್ಗೆ ಹ್ಯಾರಿಸ್ ಗುಣಗಾನ:ಬೈಡನ್ ಬಗ್ಗೆ ಮಾತನಾಡುತ್ತಾ, "ಸುಮಾರು ನಾಲ್ಕು ವರ್ಷಗಳ ಕಾಲ ಅವರೊಂದಿಗೆ ಸೇವೆ ಸಲ್ಲಿಸಿದ್ದು, ನನ್ನ ವೃತ್ತಿಜೀವನದ ಶ್ರೇಷ್ಠ ಗೌರವಗಳಲ್ಲಿ ಒಂದಾಗಿದೆ. ಬುದ್ಧಿವಂತಿಕೆ, ಬದ್ಧತೆ ಮತ್ತು ತೀರ್ಪಿನ ಇತ್ಯರ್ಥ ಹೊಂದಿರುವಂತಹ ವ್ಯಕ್ತಿ ಅವರು. ಅಮೆರಿಕಾದ ಜನರು ಸರಿಯಾದ ಅಧ್ಯಕ್ಷನನ್ನು ಹೊಂದಿದ್ದರು ಎಂದು ನಾನು ಭಾವಿಸುತ್ತೇನೆ" ಎಂದು ಹೇಳಿದರು.
ಅಧಿಕಾರಕ್ಕೆ ಬಂದರೆ ಏನೇನು ಮಾಡ್ತೇನಿ ಎಂದು ಹೇಳಿದ ಹ್ಯಾರಿಸ್:"ನೀತಿ ಹಾಗೂ ದೃಷ್ಟಿಕೋನದಲ್ಲಿ ನನ್ನ ಮೌಲ್ಯಗಳು ಬದಲಾಗಿಲ್ಲ. ನಮ್ಮ ಕಾನೂನುಗಳನ್ನು ಜಾರಿಗೊಳಿಸಲು ಗಡಿ ರಾಜ್ಯಕ್ಕೆ ಅಟಾರ್ನಿ ಜನರಲ್ ಆಗಿ ಸೇವೆ ಸಲ್ಲಿಸಿದ ಈ ಜನಾಂಗದ ಏಕೈಕ ವ್ಯಕ್ತಿ ನಾನು. ನಾನು ಅಧ್ಯಕ್ಷೆಯಾದರೆ ಮುಂದೆ ನಮ್ಮ ಕಾನೂನುಗಳನ್ನು ಜಾರಿಗೊಳಿಸುತ್ತೇನೆ. ಸಮಸ್ಯೆಗಳನ್ನು ಗುರುತಿಸುವ ಕೆಲಸವನ್ನು ನಾನು ಮಾಡುತ್ತೇನೆ. ಜೊತೆಗೆ ನವೆಂಬರ್ ಚುನಾವಣೆಯಲ್ಲಿ ಒಂದು ವೇಳೆ ನಾನು ಗೆದ್ದರೆ ರಿಪಬ್ಲಿಕನ್ ಪಕ್ಷದ ಓರ್ವರನ್ನು ಕ್ಯಾಬಿನೆಟ್ನಲ್ಲಿ ಸೇವೆ ಸಲ್ಲಿಸಲು ಅವಕಾಶ ನೀಡುತ್ತೇನೆ" ಹ್ಯಾರಿಸ್ ತಿಳಿಸಿದ್ದಾರೆ.
ಈ ಬಗ್ಗೆ ಸಾಮಾಜಿಕ ಜಾಲತಾಣ ಎಕ್ಸ್ನಲ್ಲಿ ಪೋಸ್ಟ್ ಮಾಡಿರುವ ಕಮಲಾ ಹ್ಯಾರಿಸ್, ಸಂದರ್ಶನದ ತುಣುಕುಗಳನ್ನೂ ಹಂಚಿಕೊಂಡಿದ್ದಾರೆ. ಅಧ್ಯಕ್ಷೀಯ ಚುನಾವಣಾ ಸ್ಪರ್ಧೆಯಿಂದ ಜೋ ಬೈಡನ್ ಹಿಂದೆ ಸರಿದ ಬಳಿಕ, ಕಮಲಾ ಹ್ಯಾರಿಸ್ ಅವರು ಡೆಮಾಕ್ರಟಿಕ್ ಪಕ್ಷದ ಅಭ್ಯರ್ಥಿಯಾಗಿ ಆಯ್ಕೆಯಾದರು. ರಿಪಬ್ಲಿಕನ್ ಪಕ್ಷದಿಂದ ಡೊನಾಲ್ಡ್ ಟ್ರಂಪ್ ಕಣಕ್ಕಿಳಿದಿದ್ದಾರೆ. ನವೆಂಬರ್ 5 ರಂದು ನಡೆಯಲಿರುವ ಅಮೇರಿಕದ ಅಧ್ಯಕ್ಷೀಯ ಚುನಾವಣೆಯಲ್ಲಿ ಕಮಲಾ ಹ್ಯಾರಿಸ್, ಡೊನಾಲ್ಡ್ ಟ್ರಂಪ್ ವಿರುದ್ಧ ಸೆಣಸಲಿದ್ದಾರೆ.
ಇದನ್ನೂ ಓದಿ:ಟ್ರಂಪ್ ಅಧ್ಯಕ್ಷೀಯ ಚರ್ಚೆಯ ಆಹ್ವಾನ ತಿರಸ್ಕರಿಸಿದ ಕಮಲಾ ಹ್ಯಾರಿಸ್ - US Presidential Election