ಲಂಡನ್: ಹೆಚ್ಚುತ್ತಿರುವ ಭೂಮಿ ತಾಪಮಾನ, ನೌಕಾಯಾನ, ಗಣಿಗಾರಿಕೆ ಕೂಡ ಹೆಚ್ಚುತ್ತಿದೆ. ಇದರಿಂದ ಸೈಬೀರಿಯಾದ ಹಿಮಹಾಸಿನಿಂದ ಆವೃತ್ತವಾಗಿರುವ ಪ್ರಾಚೀನಾ ಝೊಂಬಿ ವೈರಸ್ ಬಿಡುಗಡೆಯಾಗಬಹುದು. ಇದು ಹೊಸ ಸಾಂಕ್ರಾಮಿಕತೆ ಆರಂಭವಾಗಬಹುದು ಎಂದು ವಿಜ್ಞಾನಿಗಳು ಎಚ್ಚರಿಸಿದ್ದಾರೆ.
10 ಸಾವಿರ ವರ್ಷಗಳಿಂದ ಸೈಬೀರಿಯಾದಲ್ಲಿ ಹಿಮದ ಹೊದಿಕೆಯಲ್ಲಿ ಹೆಪ್ಪುಗಟ್ಟಿರುವ ವೈರಸ್ ಮೆಥುಸೆಲಾ ಸೂಕ್ಷ್ಮಜೀವಿಗಳು ಎಂದು ಪರಿಚಿತವಾಗಿದೆ. ಇದು ಮನುಕುಲಕ್ಕೆ ಹೆಚ್ಚಿನ ಅಪಾಯ ತರಬಹುದು ಮತ್ತು ರೋಗದ ಹರಡುವಿಕೆಗೆ ಕಾರಣವಾಗಬಹುದು. ಭೂಮಿಯಲ್ಲಿ 2023 ಅತ್ಯಂತ ಶಾಖದ ವರ್ಷವಾಗಿ ದಾಖಲಾಗಿದೆ. ಈ ಹವಾಮಾನ ಹಿಂದೆಂದಿಗಿಂತಲೂ ಈಗ ಝೊಂಬಿ ವೈರಸ್ ಬಿಡುಗಡೆಗೆ ಕಾರಣವಾಗಬಹುದು ಎಂದು ದಕ್ಷಿಣ ಫ್ರಾನ್ಸ್ನ ಐಕ್ಸಿ ಮರ್ಸೈಲೆ ಯುನಿವರ್ಸಿಟಿ ಸಂಶೋಧಕರು ತಿಳಿಸಿದ್ದಾರೆ.
ಈ ಸಂದರ್ಭದಲ್ಲಿ ದಕ್ಷಿಣ ಪ್ರದೇಶದಿಂದ ಸಾಂಕ್ರಾಮಿಕದ ಬೆದರಿಕೆಯಿದ್ದು ಇದು ರೋಗದ ಉಲ್ಬಣತೆಗೆ ಕಾರಣವಾಗಲಿದೆ. ಇದು ಉತ್ತರಕ್ಕೆ ಹರಡಲಿದೆ ಎಂದು ವಿಶ್ಲೇಷಿಸಲಾಗಿದೆ ಎಂದು ಜೆನೆಸಿಸ್ಟ್ ಜೀನ್ ಮಿಷೆಲ್ ಗ್ಲಾವೆರಿಯಾ ತಿಳಿಸಿದ್ದಾರೆ. ಇದಕ್ಕೆ ವಿರುದ್ಧವಾಗಿ ಉತ್ತರದಲ್ಲಿ ಇದು ಉಗಮವಾಗಿ ಬಳಿಕ ದಕ್ಷಿಣಕ್ಕೆ ಪ್ರಯಾಣಿಸಬಹುದು. ಈ ನಿಟ್ಟಿನಲ್ಲಿ ಕೊಂಚ ಹೆಚ್ಚಿನ ಎಚ್ಚರಿಕೆ ನೀಡಬೇಕಿದೆ. ಮಾನವರಿಗೆ ಸೋಂಕು ತಗುಲಿಸುವ ಸಾಮರ್ಥ್ಯವನ್ನು ಹೊಂದಿರುವ ಅನೇಕ ವೈರಸ್ಗಳಿದ್ದು, ಹೊಸ ರೋಗಕ್ಕೆ ಇವು ಕಾರಣವಾಗಬಹುದು.
ಇದಕ್ಕೆ ಸಹಮತ ವ್ಯಕ್ತಪಡಿಸಿರುವ ರೊಟ್ಟೆರ್ಡಮ್ನ ಎರ್ಸ್ಮಸ್ ಮೆಡಿಕಲ್ ಸೆಂಟರ್ನ ವೈರಾಲಾಜಿಸ್ಟ್ ಮರಿಯನ್ ಕೂಪ್ಮನ್ಸ್, ಹಿಮಹಾಸಿನಲ್ಲಿ ಮಲಗಿರುವ ವೈರಸ್ಗಳು ಯಾವುದು ಎಂಬುದು ನಮಗೆ ತಿಳಿದಿಲ್ಲ. ಆದರೆ, ನಿಜವಾಗಿಯೂ ಅಪಾಯವಿದೆ. ಪೊಲಿಯೋದಂತಹ ಪ್ರಾಚೀನ ರೀತಿಯ ರೋಗವೂ ಹರಡುವ ಅಪಾಯವೂ ಇದೆ ಎಂದಿದ್ದಾರೆ. ಈ ರೀತಿ ಆಗಬಹುದು ಎಂದು ನಾವು ಅಂದಾಜಿಸುತ್ತಿದ್ದೇವೆ ಎಂದಿದ್ದಾರೆ.