ಹೈದರಾಬಾದ್:ನಡಿಗೆಯು ಆರೋಗ್ಯಕ್ಕೆ ಅತ್ಯುತ್ತಮ. ಯಾವುದೇ ಗೋಜಲು ಇಲ್ಲದೇ, ಲೋಕಾಭಿರಾಮವಾಗಿ ತಮ್ಮ ಪ್ರೀತಿ ಪಾತ್ರರೊಂದಿಗೆ ಮಾತನಾಡುತ್ತಾ ಸಾಗುವುದರಲ್ಲಿ ಅದೇನೋ ಖುಷಿ. ಅಂತದ ನಡಿಗೆಗೇ ಅಂತಾರಾಷ್ಟ್ರೀಯ ದಿನಾಚರಣೆ ಇದೆ. ಅದನ್ನು ಸೌಂಟರಿಂಗ್ ದಿನ ಎಂದು ಕರೆಯುತ್ತಾರೆ. ಜೂನ್ 19 ರಂದು ವಿಶ್ವ ಸೌಂಟರಿಂಗ್ ದಿನವನ್ನು ಆಚರಿಸಲಾಗುತ್ತದೆ.
ವಿಶ್ವ ಸೌಂಟರಿಂಗ್ ದಿನದ ಮಹತ್ವ:ಸೌಂಟರ್ ಎಂದರೆ ನಿಧಾನ ಮತ್ತು ಹರ್ಷಚಿತ್ತದಿಂದ ನಡೆಯುವುದು. ಈ ದಿನದ ಗುರಿಯು ಎಲ್ಲವನ್ನೂ ನಿಧಾನಗೊಳಿಸಲು ಮತ್ತು ಜೀವನವನ್ನು ಆನಂದಿಸುವುದು. ಒತ್ತಡದ ಕೆಲಸದ ವೇಳಾಪಟ್ಟಿ ಜನರ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತದೆ. ಒತ್ತಡವು ವಿವಿಧ ರೋಗಗಳಿಗೆ ಕಾರಣವಾಗುತ್ತದೆ. ಇದನ್ನು ತಪ್ಪಿಸಲು ಎಲ್ಲದ್ದಕ್ಕೂ ವಿಶ್ರಾಂತಿ ನೀಡಲು ನಿಧಾನ ನಡಿಗೆಯು ಉಪಯೋಗಕಾಗಿ.
ವಿಶ್ವ ಸಾಂಟರಿಂಗ್ ದಿನದ ಹಿನ್ನೆಲೆ:1979 ರಲ್ಲಿ ಈ ನಿಧಾನ ನಡಿಗೆಯು ಪ್ರಚಲಿತಕ್ಕೆ ಬಂದಿತು. ಈ ದಿನವನ್ನು ಸ್ಮರಿಸುವ ಉದ್ದೇಶ ಜನರು ತಮ್ಮ ಕೆಲಸಗಳಿಂದ ವಿರಾಮ ತೆಗೆದುಕೊಂಡು ಜೀವನವನ್ನು ಆನಂದಿಸಲು ಬಳಸಲಾಯಿತು. ಡಬ್ಲ್ಯೂಟಿ ರಾಚೆ ಎಂಬಾತ ಮಿಚಿಗನ್‌ನ ಮ್ಯಾಕಿನಾಕ್ ಐಲ್ಯಾಂಡ್‌ನಲ್ಲಿರುವ ಗ್ರ್ಯಾಂಡ್ ಹೋಟೆಲ್‌ನಲ್ಲಿ ವಿಹಾರಕ್ಕೆ ಹೋಗುತ್ತಿದ್ದಾಗ ಇಂಥದ್ದೊಂದು ಆಲೋಚನೆ ಬಂದಿತು. 660 ಅಡಿಗಳಷ್ಟು ದೂರದಲ್ಲಿದ್ದ ಹೋಟೆಲ್ ತಲುಪಲು ಆತ ನಿಧಾನಗತಿ ನಡಿಗೆ ತೆಗೆದುಕೊಂಡಿದ್ದ.
ಸೌಂಟರಿಂಗ್ ವಾಕಿಂಗ್‌ಗಿಂತ ತುಸು ಕಡಿಮೆ ವೇಗ. ಅಲೆದಾಡುವುದು ಎಂಬರ್ಥದ ಫ್ರೆಂಚ್ ಪದ saventurer" ನಿಂದ ಹುಟ್ಟಿಕೊಂಡಿದೆ. sauntering ನಮ್ಮ ಸುತ್ತಲಿನ ಪ್ರಪಂಚವನ್ನು ಗಮನಿಸುವ ಮತ್ತು ಶ್ಲಾಘಿಸುವ ಉದ್ದೇಶವಾಗಿದೆ. ಸೌಂಟರಿಂಗ್ ಮತ್ತು ಸೌಂಟಿಂಗ್ ಒಂದೇ ಅರ್ಥವನ್ನು ಹೊಂದಿದೆ. ಅಂದರೆ 'ವಿರಾಮದಲ್ಲಿ ನಡೆಯುವುದು'. ಇದು ನಮ್ಮ ಪರಿಸರದೊಂದಿಗೆ ಪ್ರಜ್ಞಾಪೂರ್ವಕ ಬಂಧವನ್ನು ಉತ್ತೇಜಿಸುತ್ತದೆ. ಪ್ರಸ್ತುತ ಕ್ಷಣಗಳಲ್ಲಿ ತೊಡಗಿಸಿಕೊಳ್ಳಲು ಅನುವು ಮಾಡಿಕೊಡುತ್ತದೆ.
ಸೌಂಟರಿಂಗ್ನ ಪ್ರಯೋಜನಗಳು:
- ನಿಧಾನವಾಗಿ ನಡೆಯುವ ಮೂಲಕ ನಾವು ಪ್ರತಿದಿನ ನಮ್ಮನ್ನು ಸುತ್ತುವರೆದಿರುವ ವಿಚಾರಗಳು ಮತ್ತು ಸೌಂದರ್ಯಕ್ಕೆ ನಮ್ಮ ಕಣ್ಣುಗಳನ್ನು ಹಾಯುಸುತ್ತೇವೆ.
- ಆತುರವಿಲ್ಲದಿದ್ದಾಗ, ಸ್ವಾಭಾವಿಕವಾಗಿ ಉತ್ತಮ ನಿದ್ರೆಯನ್ನು ಪಡೆಯುತ್ತೀರಿ ಮತ್ತು ಅದು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ
- ವೇಗದ ಆಧುನಿಕ ಜೀವನಶೈಲಿಯು ಒತ್ತಡಕ್ಕೆ ದೊಡ್ಡ ಕಾರಣಗಳಲ್ಲಿ ಒಂದು. ಅದನ್ನು ನಿಧಾನಗೊಳಿಸಿದಾಗ ಒತ್ತಡದ ಮಟ್ಟವನ್ನು ಕಡಿಮೆಗೊಳ್ಳುತ್ತದೆ
- ಸೌಂಟರಿಂಗ್ ನಮ್ಮ ಬಿಡುವಿಲ್ಲದ ಜೀವನದ ಇಕ್ಕಟ್ಟಿನಿಂದ ತಪ್ಪಿಸಿಕೊಳ್ಳಲು ಮತ್ತು ಪ್ರಕೃತಿಯ ಸೌಂದರ್ಯ ಸವಿಯಲು ಸಹಕಾರಿ.
- ಕಸರತ್ತಿನ ದೈಹಿಕ ಚಟುವಟಿಕೆಯಿಲ್ಲದೇ, ಸ್ಯಾಂಟರಿಂಗ್ ಮೂಲಕ ಮೆದುಳಿಗೆ ರಕ್ತದ ಹರಿವನ್ನು ಹೆಚ್ಚಿಸುತ್ತದೆ.
- ಅಗತ್ಯ ಆಮ್ಲಜನಕ ಮತ್ತು ಪೋಷಕಾಂಶಗಳನ್ನು ನೀಡುತ್ತದೆ. ಇದು ಸ್ಮರಣೆ ಮತ್ತು ಸೃಜನಶೀಲತೆಯನ್ನು ಹೆಚ್ಚಿಸುತ್ತದೆ.
- ಇದು ಸೆರೆಬ್ರಲ್ ರಕ್ತ ಪರಿಚಲನೆಯನ್ನು ಹೆಚ್ಚಿಸಲು ಸಹ ಸಹಾಯ ಮಾಡುತ್ತದೆ.
- ವಾಕಿಂಗ್ ಕ್ಯಾನ್ಸರ್ ರೋಗವನ್ನು ತಡೆಯುವ ಮತ್ತು ಕಡಿಮೆ ಮಾಡುವುದು ಸೇರಿದಂತೆ ಹಲವಾರು ಪ್ರಯೋಜನಗಳನ್ನು ನೀಡುತ್ತದೆ.
ವಿಶ್ವ ಸೌಂಟರಿಂಗ್ ದಿನವನ್ನು ಹೇಗೆ ಆಚರಿಸುವುದು?
- ಪ್ರಕೃತಿಯ ಮಡಿಲಲ್ಲಿ ನಡಿಗೆಗೆ ಹೋಗಿ
- ಛಾಯಾಗ್ರಹಣ ಮಾಡುತ್ತಾ ವಾಕ್ ಮಾಡಿ
- ನಿಮ್ಮ ಫೋನ್ ಅನ್ನು ಆಫ್ ಮಾಡಿ
- ಎಲ್ಲ ಕೆಲಸಗಳಿಂದ ಕೆಲ ಗಂಟೆಗಳ ಕಾಲ ವಿರಾಮ ತೆಗೆದುಕೊಳ್ಳಿ
- ಸ್ನೇಹಿತರು ಅಥವಾ ಕುಟುಂಬದೊಂದಿಗೆ ಗುಂಪಾಗಿ ನಿಧಾನ ನಡಿಗೆಯಲ್ಲಿ ಪಾಲ್ಗೊಳ್ಳಿ
ಇದನ್ನೂ ಓದಿ:ವಾಕಿಂಗ್ ಪ್ರಿಯರೇ, ಒಂದು ನಿಮಿಷಕ್ಕೆ ಎಷ್ಟು ಹೆಜ್ಜೆಗಳನ್ನು ಇಡಬೇಕು ಗೊತ್ತಾ? - 10000 Steps Walk for a day