ಹೈದರಾಬಾದ್:ಹಿರಿಯರಷ್ಟೇ ಅಲ್ಲದೇ ಅನೇಕ ಯುವ ಮಹಿಳೆಯರು ಇಂದು ಫೈಲ್ಸ್ ಸಮಸ್ಯೆಗೆ ಒಳಗಾಗುತ್ತಿದ್ದಾರೆ. ಶೌಚದ ಕಾರ್ಯಗಳು ಅವರಿಗೆ ಬಲು ತ್ರಾಸದಾಯಕವಾಗಿದ್ದು, ಇದಕ್ಕಾಗಿ ಹೆಚ್ಚು ಸಮಯಗಳನ್ನು ಕಳೆಯುತ್ತಾರೆ. ಈ ಸಮಸ್ಯೆ ದೀರ್ಘಕಾಲ ಕಾಡಿದರೆ, ಅದು ದೈಹಿಕ ಸಮಸ್ಯೆಗೂ ನಮ್ಮನ್ನು ತಳ್ಳುತ್ತದೆ. ಆರಂಭದಲ್ಲೇ ಮೂಲವ್ಯಾಧಿ ಸಮಸ್ಯೆಗಳ ಕುರಿತು ಸಮಾಲೋಚನೆಗೆ ಒಳಗಾಗುವುದು ಅಗತ್ಯವಾಗಿದೆ.
ಏನಿದು ಮೂಲವ್ಯಾಧಿ?: ಪೈಲ್ಸ್ ಎನ್ನುವುದು ಗುದದ್ವಾರದ ಒಳಗೆ ಮತ್ತು ಹೊರಗೆ ಊತವನ್ನು ಉಂಟುಮಾಡುತ್ತದೆ. ಗುದದ್ವಾರದ ಒಳ ಅಥವಾ ಹೊರ ಭಾಗದಲ್ಲಿ ಚರ್ಮವು ಸಂಗ್ರಹವಾಗಿ ನಾರುಲಿಯಂತೆ ಮಾಡುತ್ತದೆ. ಇದರ ಪರಿಣಾಮವಾಗಿ ಶೌಚ ಕ್ರಿಯೆ ತ್ರಾಸದಾಯಕವಾಗಿ ಮಾರ್ಪಡುತ್ತದೆ. ದೀರ್ಘಕಾಲದವರೆಗೆ ಈ ಚಿಕಿತ್ಸೆಗೆ ಪರಿಹಾರ ಕಂಡುಕೊಳ್ಳದೇ ಇದ್ದರೆ ಪರಿಸ್ಥಿತಿ ಮತ್ತಷ್ಟು ಕೆಟ್ಟದಾಗಲು ಕಾರಣವಾಗುತ್ತದೆ ಎಂದು ಹೈದರಾಬಾದ್ನಲ್ಲಿನ ಲಂಡನ್ ಗ್ಯಾಸ್ಟ್ರೊ ಆಸ್ಪತ್ರೆಯ ವೈದ್ಯರಾದ ಡಾ ಚಂದ್ರಶೇಖರ್ ಪುಲಿ ತಿಳಿಸಿದ್ದಾರೆ.
ಮಹಿಳೆಯರಲ್ಲಿ ಈ ಸಮಸ್ಯೆಗೆ ಕಾರಣಗಳೇನು?: ಮಹಿಳೆಯರಲ್ಲಿ ಗರ್ಭಾವಸ್ಥೆಯಲ್ಲಿ ಈ ಸಮಸ್ಯೆ ಕಾಣಿಸಿಕೊಂಡು ನಿಧಾನವಾಗಿ ಹೆಚ್ಚಾಗುತ್ತಾ ಸಾಗುತ್ತದೆ. ಕಾರಣ ಪ್ರಸವ ಸಮಯದಲ್ಲಿ ಹೊಟ್ಟೆ ಮೇಲೆ ನೀಡುವ ಒತ್ತಡವೂ ರಕ್ತ ನಾಳದ ಮೇಲೂ ಅಧಿಕ ಒತ್ತಡಕ್ಕೆ ಗುರಿಯಾಗುವಂತೆ ಮಾಡುತ್ತದೆ. ಇದರಿಂದ ಅವರಲ್ಲಿ ಪೈಲ್ಸ್ ಅಭಿವೃದ್ಧಿಯಾಗುವ ಅಪಾಯ ಹೆಚ್ಚಿದೆ.