ಹೈದರಾಬಾದ್: ಹ್ಯೂಮನ್ ಪ್ಯಾಪಿಲೋಮವೈರಸ್ ಹೊಂದಿರುವ ಮಹಿಳೆಯರು ಹೃದಯ ರೋಗ ಸಮಸ್ಯೆಯಿಂದ ಸಾಯುವ ಅಪಾಯ ನಾಲ್ಕು ಪಟ್ಟು ಹೆಚ್ಚಿರುತ್ತದೆ ಎಂದು ಅಧ್ಯಯನ ತಿಳಿಸಿದೆ. ಎಚ್ಪಿವಿ ಎಂಬುದು ಸಾಮಾನ್ಯ ಸೋಂಕು ಆಗಿದ್ದು, ಇದು ಗರ್ಭ ಕಂಠ ಕ್ಯಾನ್ಸರ್ಗೆ ಕಾರಣವಾಗಿದೆ. ಹಿಂದಿನ ಸಂಶೋಧನೆಯಲ್ಲಿ ಎಚ್ಪಿವಿ ಅಪಧಮನಿಗೆ ಅಪಾಯಕಾರಿಯಾಗಿದೆ ಎಂದು ತೋರಿಸಿದೆ. ಆದಾಗ್ಯೂ ಎಚ್ಪಿವಿ ಹೃದಯರಕ್ತನಾಳದ ಕಾಯಿಲೆ ನಡವಿನ ಸಂಬಂಧವನ್ನು ತೋರಿಸುವ ಮೊದಲ ಅಧ್ಯಯನ ಇದಾಗಿದೆ.
ಈ ಅಧ್ಯಯನವನ್ನು ಯುರೋಪಿಯನ್ ಹಾರ್ಟ್ ಜರ್ನಲ್ನಲ್ಲಿ ಪ್ರಕಟಿಸಲಾಗಿದೆ. ಅಧ್ಯಯನದಲ್ಲಿ ಎಚ್ಪಿವಿ ಅಪಾಯ ಹೊಂದಿರುವ ಮಹಿಳೆಯರನ್ನು ಸೋಂಕು ಹೊಂದಿಲ್ಲದವರೊಂದಿಗೆ ಹೋಲಿಕೆ ಮಾಡಿದಾಗ, ಇವರಲ್ಲಿ ಅಪಧಮನಿ ಬ್ಲಾಕ್ ಆಗುವ ಸಾಧ್ಯತೆ 3.15ರಷ್ಟು ಹೆಚ್ಚಿದೆ. ಹೃದಯ ಕಾಯಿಲೆಯಿಂದ ಸಾಯುವ ಅಪಾಯ 5.86ರಷ್ಟು ಇದೆ ಎಂದು ತೋರಿಸಿದೆ.
ಹೃದಯ ರೋಗಕ್ಕೆ ಕಾರಣವಾಗುವ ಧೂಮಪಾನ, ಅಧಿಕ ಕೊಲೆಸ್ಟ್ರಾಲ್, ಅಧಿಕ ರಕ್ತದೊತ್ತಡ ಮತ್ತು ಮಧುಮೇಹ ಅಂಶಗಳನ್ನು ನಿಯಂತ್ರಿಸಿದರೂ ಸೋಂಕು ಸಾವಿಗೆ ಪ್ರಮುಖ ಕಾರಣವಾಗಿದೆ. ಎಲ್ಲ ಹೃದಯ ಸಮಸ್ಯೆಗಳಲ್ಲಿ ಸಾಂಪ್ರದಾಯಿಕ ಅಪಾಯಕಾರಿ ಅಂಶಗಳನ್ನು ತಿಳಿಸುವುದಿಲ್ಲ. ಯಾವುದೇ ಸಮಸ್ಯೆ ಹೊಂದಿರದವರಲ್ಲಿ ಶೇ 20ರಷ್ಟು ಸಾವು ಸಂಭಿಸುತ್ತದೆ. ಈ ಅಧ್ಯಯನದ ಮೂಲಕ ಬದಲಾಯಿಸಬಹುದಾದ ಅಪಾಯಕಾರಿ ಅಂಶಗಳನ್ನು ತನಿಖೆ ಮಾಡುವುದಾಗಿದೆ ಎಂದು ದಕ್ಷಿಣ ಕೊರಿಯಾದ ಸುಂಗ್‌ಕ್ಯುಂಕ್ವಾನ್ ಯೂನಿವರ್ಸಿಟಿ ಸ್ಕೂಲ್ ಆಫ್ ಮೆಡಿಸಿನ್‌ನ ಪ್ರೊ ಸೆಯುಂಘೋ ರ್ಯು ತಿಳಿಸಿದ್ದಾರೆ.
ತಂಡವು ಯುವ ಅಥವಾ ಮಧ್ಯವಯಸ್ಸಿನ 163,250 ಕೊರಿಯನ್ ಮಹಿಳೆಯರನ್ನು ತನಿಖೆಗೆ ಒಳಪಡಿಸಿತು. ಅಧ್ಯಯನದ ಆರಂಭದಲ್ಲಿ ಇವರಲ್ಲಿ ಯಾವುದೇ ಹೃದಯರೋಗ ಕಾಯಿಲೆ ಇರಲಿಲ್ಲ. ಅಲ್ಲದೇ ಇವರಲ್ಲಿ ಅಧಿಕ ಅಪಾಯದ 13 ತಳಿಯ ಗರ್ಭಕಂಠದ ಸ್ಕ್ರೀನಿಂಗ್ ಸೇರಿದಂತೆ ವಿವಿಧ ಆರೋಗ್ಯ ತಪಾಸಣೆ ಪರೀಕ್ಷೆಗೆ ಒಳಪಡಿಸಲಾಗಿದೆ.