ಕರ್ನಾಟಕ

karnataka

ETV Bharat / health

ನೀವು ಅಡುಗೆಗೆ ಯಾವ ಎಣ್ಣೆ ಬಳಸುತ್ತೀರಿ? ಉತ್ತಮ ಆರೋಗ್ಯಕ್ಕೆ ಈ ಅಡುಗೆ ಎಣ್ಣೆ ಉಪಯೋಗಿಸುವುದೇ ಒಳ್ಳೆಯದು! - Which Oil is Best for Cooking - WHICH OIL IS BEST FOR COOKING

Rice Bran Oil: ಎಣ್ಣೆ ಇಲ್ಲದೇ ಅಡುಗೆ ಸಾಧ್ಯವಿಲ್ಲ. ಆದರೆ, ನಮ್ಮ ಆರೋಗ್ಯವು ಈ ಅಡುಗೆ ಎಣ್ಣೆಯೊಂದಿಗೆ ಸಂಬಂಧ ಹೊಂದಿದೆ. ಅದಕ್ಕಾಗಿಯೇ ಅಡುಗೆ ಎಣ್ಣೆಗಳ ಆಯ್ಕೆಯು ತುಂಬಾ ಮುಖ್ಯವಾಗಿದೆ ಎಂದು ತಜ್ಞರು ಸಲಹೆ ನೀಡುತ್ತಾರೆ. ಅಡುಗೆಗೆ ಯಾವ ಎಣ್ಣೆ ಬಳಸಿದರೆ ಉತ್ತಮ? ಈ ಕುರಿತು ಸ್ಟೋರಿ ಇಲ್ಲಿದೆ ನೋಡಿ.

WHICH OIL IS BEST FOR COOKING  BEST COOKING OIL FOR HEALTH  GOOD COOKING OIL FOR HEALTH  COOKING OIL BEST FOR FRYING
ಸಾಂದರ್ಭಿಕ ಚಿತ್ರ (ETV Bharat)

By ETV Bharat Health Team

Published : Sep 10, 2024, 6:38 AM IST

Which Oil is Best for Cooking: ವಿವಿಧ ಪ್ರಕಾರದ ಅಡುಗೆ ಸಿದ್ಧಪಡಿಸಲು ನಾನಾ ರೀತಿಯ ಎಣ್ಣೆ ಬಳಸಲಾಗುತ್ತದೆ. ಆಯಾ ಪ್ರದೇಶ ಮತ್ತು ಕುಟುಂಬಗಳು ಬಳಸುವ ಅಡುಗೆ ತೈಲಗಳು ಬೇರೆ ಬೇರೆಯಾಗಿರುತ್ತವೆ. ಸಾಮಾನ್ಯವಾಗಿ, ಹೆಚ್ಚಿನ ಜನರು ಸೂರ್ಯಕಾಂತಿ ಎಣ್ಣೆ, ಕಡಲೆಕಾಯಿ ಎಣ್ಣೆ, ರೈಸ್ ಬ್ರಾನ್ ಆಯಿಲ್ (Rice Bran Oil) ವಿವಿಧ ಪ್ರಕಾರದ ಅಡುಗೆ ಎಣ್ಣೆಗಳನ್ನು ಬಳಸುತ್ತಾರೆ. ಆದರೆ, ಕೋಲ್ಡ್ ಪ್ರೆಸ್ ಆಯಿಲ್ (ಗಾಣದ ಎಣ್ಣೆ) ಆರೋಗ್ಯಕ್ಕೆ ಒಳ್ಳೆಯದು ಎನ್ನುತ್ತಾರೆ ಖ್ಯಾತ ಪೌಷ್ಟಿಕತಜ್ಞ ಡಾ.ಲಹರಿ ಸುರಪಾನೆ. ಕಡಿಮೆ ತಾಪಮಾನದಲ್ಲಿ ಅವುಗಳನ್ನು ತಯಾರಿಸುವುದರಿಂದ, ಅವುಗಳ ಪರಿಮಳ, ಪೋಷಕಾಂಶಗಳು ಮತ್ತು ರುಚಿಗೆ ಯಾವುದೇ ಪರಿಣಾಮ ಬೀರುವುದಿಲ್ಲ. ಹೆಚ್ಚಿನ ಉತ್ಕರ್ಷಣ ನಿರೋಧಕ ಮತ್ತು ಉರಿಯೂತದ ಗುಣಲಕ್ಷಣಗಳನ್ನು ದೂರ ಮಾಡಲು ಈ ಎಣ್ಣೆಯಿಂದ ಮಾಡಿದ ಆಹಾರವನ್ನು ಸೇವಿಸಲು ಶಿಫಾರಸು ಮಾಡುತ್ತಾರೆ ತಜ್ಞರು.

"ಹೆಚ್ಚು ಸ್ಮೋಕ್ ಪಾಯಿಂಟ್ ಹೊಂದಿರುವ ತೈಲಗಳನ್ನು ಆಯ್ಕೆ ಮಾಡಬೇಕು. ಅವು ಸ್ವಲ್ಪ ದುಬಾರಿಯಾಗಿದ್ದರೂ ತುಂಬಾ ಆರೋಗ್ಯಕರವೂ ಆಗಿರುತ್ತವೆ. ಅವಕಾಡೊ ಎಣ್ಣೆಯು ಡೀಪ್ ಫ್ರೈಗೆ ಅತ್ಯುತ್ತಮ ಆಯ್ಕೆಯಾಗಿದೆ. ಅದು ಲಭ್ಯವಿಲ್ಲದಿದ್ದಾಗ, ಸೂರ್ಯಕಾಂತಿ, ಸೋಯಾಬೀನ್ ಎಣ್ಣೆಯನ್ನು ಡೀಪ್ ಫ್ರೈಗೆ ಬಳಸಬಹುದು. ದಿನನಿತ್ಯದ ಅಡುಗೆಗೆ ತಾಳೆ ಎಣ್ಣೆ, ಎಳ್ಳೆಣ್ಣೆ, ರೈಸ್ ಬ್ರಾನ್ ಆಯಿಲ್ ಅನ್ನು ಎಣ್ಣೆಯನ್ನು ಬಳಸಬೇಕು. ತೆಂಗಿನ ಎಣ್ಣೆ, ತುಪ್ಪ ಮತ್ತು ಕ್ಯಾಸ್ಟರ್ ಆಯಿಲ್ ಅನ್ನು ಸಲಾಡ್‌ಗಳನ್ನು ತಯಾರಿಸಲು ಮತ್ತು ರೈಸ್​ನ ಮೇಲೆ ತುಪ್ಪದಂತಹ ಕೋಲ್ಡ್ ಟಾಪಿಂಗ್‌ಗಳನ್ನು ಮಾಡುಲು ಬಳಸಬಹುದು.

ಅಪರ್ಯಾಪ್ತ ಕೊಬ್ಬುಗಳಲ್ಲಿ, ಮೊನೊ ಸ್ಯಾಚುರೇಟೆಡ್, ಪಾಲಿ ಅನ್‌ಸ್ಯಾಚುರೇಟೆಡ್, ಕೊಬ್ಬಿನಾಮ್ಲಗಳು ಹೃದಯಕ್ಕೆ ತುಂಬಾ ಒಳ್ಳೆಯದು. ಸೋಯಾ, ಆಲಿವ್, ಎಳ್ಳು ಮತ್ತು ಪಲ್ಲಿ ಎಣ್ಣೆಗಳು ಹೆಚ್ಚಾಗಿ ಲಭ್ಯವಿದೆ. ಸ್ಯಾಚುರೇಟೆಡ್ ಕೊಬ್ಬಿನಂಶ ಹೆಚ್ಚಿರುವ ಅಡುಗೆ ಎಣ್ಣೆಯನ್ನು ತಿಂದರೆ ಅನಾರೋಗ್ಯ ಕಾಡುತ್ತದೆ. ಅಪರ್ಯಾಪ್ತ ಕೊಬ್ಬಿನಾಮ್ಲಗಳಲ್ಲಿ, ಒಮೆಗಾ 6 ಕೊಬ್ಬಿನಾಮ್ಲಗಳು ಅಡುಗೆ ಎಣ್ಣೆಗಳಲ್ಲಿ ಹೆಚ್ಚು ಹೇರಳವಾಗಿವೆ. ಆದ್ದರಿಂದ ಇವುಗಳನ್ನು ಅತಿಯಾಗಿ ಸೇವಿಸುವುದರಿಂದ ನಮ್ಮ ದೇಹದಲ್ಲಿ ಉರಿಯೂತ ಹೆಚ್ಚಾಗಬಹುದು"

-ಡಾ.ಲಹರಿ ಸೂರಪನೇನಿ, ಪೌಷ್ಟಿಕ ತಜ್ಞರು

ಬಾದಾಮಿ ಎಣ್ಣೆ: ಬಾದಾಮಿ ಎಣ್ಣೆಯಲ್ಲಿ ವಿಟಮಿನ್ ಇ ಸಮೃದ್ಧವಾಗಿದೆ. ಇದು ಒಮೆಗಾ 3 ಕೊಬ್ಬಿನಾಮ್ಲಗಳಲ್ಲಿ ಸಮೃದ್ಧವಾಗಿದೆ. ಮತ್ತು ಚರ್ಮದ ಆರೋಗ್ಯಕ್ಕೆ ಒಳ್ಳೆಯದು ಎಂದು ಹೇಳಲಾಗುತ್ತದೆ.

ಆಲಿವ್ ಎಣ್ಣೆ: ಆಲಿವ್ ಎಣ್ಣೆ ಆರೋಗ್ಯಕ್ಕೆ ತುಂಬಾ ಒಳ್ಳೆಯದು ಮತ್ತು ಇದನ್ನು ಅಡುಗೆಯಲ್ಲಿ ಬಳಸುವುದರಿಂದ ಮಧುಮೇಹ ಮತ್ತು ಹೃದಯ ಸಂಬಂಧಿ ಕಾಯಿಲೆಗಳನ್ನು ತಡೆಯಬಹುದು. ಇದು ಕ್ಯಾನ್ಸರ್ ಮತ್ತು ಮಧುಮೇಹ ಕಾಯಿಲೆಗಳಿಗೆ ಔಷಧವಾಗಿ ಕಾರ್ಯನಿರ್ವಹಿಸುತ್ತದೆ ಎಂದು ತಜ್ಞರು ಹೇಳುತ್ತಾರೆ.

ಆವಕಾಡೊ ಎಣ್ಣೆ: ಅವಕಾಡೊ ಎಣ್ಣೆಯಲ್ಲಿ ಮೊನೊಸಾಚುರೇಟೆಡ್ ಕೊಬ್ಬಿನಾಮ್ಲಗಳು ಅಧಿಕವಾಗಿದ್ದು, ಇದು ಹೃದಯದ ಆರೋಗ್ಯಕ್ಕೆ ಒಳ್ಳೆಯದು ಎಂದು ತಜ್ಞರು ಸೂಚಿಸುತ್ತಾರೆ.

ರೈಸ್ ಬ್ರಾನ್ ಆಯಿಲ್: ರೈಸ್ ಬ್ರಾನ್ ಆಯಿಲ್ ಒರಿಜಾನಾಲ್ ಅನ್ನು ಹೊಂದಿರುತ್ತದೆ. ಇದು ಆ್ಯಂಟಿಆಕ್ಸಿಡೆಂಟ್ ಹೃದಯದ ಆರೋಗ್ಯಕ್ಕೆ ಪ್ರಯೋಜನಕಾರಿ ಎಂದು ಹೇಳಲಾಗುತ್ತದೆ.

ತೆಂಗಿನ ಎಣ್ಣೆ: ತೆಂಗಿನ ಎಣ್ಣೆಯು ಕೊಲೆಸ್ಟ್ರಾಲ್ ಹೊಂದಿರುವುದಿಲ್ಲ. ಇದು ಆರೋಗ್ಯಕರ ಜೀರ್ಣಕ್ರಿಯೆಗೆ ಉಪಯುಕ್ತವಾಗಿದೆ. ತೆಂಗಿನ ಎಣ್ಣೆಯನ್ನು ಸೇವಿಸುವುದರಿಂದ ನಮ್ಮ ದೇಹದಲ್ಲಿರುವ ಕೊಬ್ಬನ್ನು ಶಕ್ತಿಯನ್ನಾಗಿ ಪರಿವರ್ತಿಸಬಹುದು ಎಂದು ವೈದ್ಯರು ಹೇಳುತ್ತಾರೆ. ಇದನ್ನು ಸೂಪ್, ಸ್ಟ್ಯೂ, ಕರಿಗಳಲ್ಲಿ ಬಳಸಬಹುದು ಎಂದು ತಜ್ಞರು ತಿಳಿಸುತ್ತಾರೆ.

ಶೇಂಗಾ ಎಣ್ಣೆ: ಶೇಂಗಾ ಎಣ್ಣೆ ಕೂಡ ಆರೋಗ್ಯಕ್ಕೆ ಒಳ್ಳೆಯದು ಎಂದು ಹೇಳಲಾಗುತ್ತದೆ. ಶಿಲೀಂಧ್ರ ಮತ್ತು ವೈರಲ್ ಸೋಂಕುಗಳಿಂದ ದೂರ ಇರುವುದಲ್ಲದೆ, ಮೆದುಳಿನ ಕಾರ್ಯವನ್ನು ಸುಧಾರಿಸುತ್ತದೆ.

ಸಾಸಿವೆ ಎಣ್ಣೆ: ಸಾಸಿವೆ ಎಣ್ಣೆಯ ಬಳಕೆ ಹೃದಯ ಸಂಬಂಧಿ ಸಮಸ್ಯೆಗಳನ್ನು ತಡೆಯುತ್ತದೆ. ಸಾಸಿವೆ ಎಣ್ಣೆಯಲ್ಲಿ ಆರೋಗ್ಯಕರ ಕೊಬ್ಬುಗಳ ಇರುವುದರಿಂದ ಯಕೃತ್ತಿನ ಕೊಬ್ಬುಗಳು ಮತ್ತು ಪಾರ್ಶ್ವವಾಯು ತಡೆಯಬಹುದು ಎಂದು ತಜ್ಞರು ಹೇಳುತ್ತಾರೆ.

ಅಡುಗೆ ಎಣ್ಣೆ ಎಷ್ಟೇ ಉತ್ತಮವಾಗಿದ್ದರೂ, ಯಾವಾಗಲೂ ಒಂದೇ ರೀತಿಯ ಎಣ್ಣೆಯನ್ನು ಬಳಸುವುದರಿಂದ ಅವುಗಳಲ್ಲಿರುವ ಪೋಷಕಾಂಶಗಳು ದೊರೆಯುತ್ತವೆ. ಎಲ್ಲ ರೀತಿಯ ಪೋಷಕಾಂಶಗಳನ್ನು ಪಡೆಯಲು ವೈದ್ಯರು ಎಲ್ಲ ರೀತಿಯ ತೈಲಗಳನ್ನು ಆಗಾಗ್ಗೆ ಬಳಸಬೇಕೆಂದು ಸಲಹೆ ನೀಡಿದ್ದಾರೆ. ಸಂಸ್ಕರಿಸಿದ ತೈಲಗಳು ಆರೋಗ್ಯಕ್ಕೆ ಹಾನಿಕಾರಕರ ಎಂದು ಅನೇಕ ಸಂಶೋಧನೆಗಳು ತೋರಿಸಿವೆ. ಅದಕ್ಕಾಗಿಯೇ ಮೂಲ ಎಣ್ಣೆಗಳನ್ನು ಬಳಸಿದರೆ ಮಾತ್ರ ನೀವು ಆರೋಗ್ಯವಾಗಿರಬಹುದು ಎಂಬುದನ್ನು ನೆನಪಿನಲ್ಲಿಡಿ ಎಂದು ಹೇಳಲಾಗುತ್ತದೆ.

ಓದುಗರಿಗೆ ವಿಶೇಷ ಸೂಚನೆ: ಇಲ್ಲಿ ನಿಮಗೆ ನೀಡಿರುವ ಎಲ್ಲ ಆರೋಗ್ಯ ಮಾಹಿತಿ ಮತ್ತು ಸಲಹೆಗಳು ನಿಮ್ಮ ತಿಳಿವಳಿಕೆಗಾಗಿ ಮಾತ್ರ. ವೈಜ್ಞಾನಿಕ ಸಂಶೋಧನೆ, ಅಧ್ಯಯನಗಳು, ವೈದ್ಯಕೀಯ ಮತ್ತು ಆರೋಗ್ಯ ವೃತ್ತಿಪರ ಸಲಹೆಯನ್ನು ಆಧರಿಸಿ ನಾವು ಈ ಮಾಹಿತಿ ನಿಮಗೆ ನೀಡಿದ್ದೇವೆ. ಆದರೆ, ಇವುಗಳನ್ನು ಅನುಸರಿಸುವ ಮೊದಲು ಪರಿಣತ ವೈದ್ಯರ ಸಲಹೆಯನ್ನು ತೆಗೆದುಕೊಳ್ಳುವುದು ಉತ್ತಮ.

ಇದನ್ನೂ ಓದಿ:

ABOUT THE AUTHOR

...view details