Weight Loss Without Dieting:ನಮ್ಮಲ್ಲಿ ಹಲವರು ತೂಕ ಇಳಿಸಿಕೊಳ್ಳಲು ತುಂಬಾ ಪ್ರಯತ್ನಿಸುತ್ತಾರೆ. ಕೆಲವರು ಕಠಿಣ ವ್ಯಾಯಾಮಗಳನ್ನು ಮಾಡಲು ಪ್ರಾರಂಭಿಸುತ್ತಾರೆ. ಇತರರು ತಮ್ಮ ಆಹಾರ ಪದ್ಧತಿಯನ್ನು ಬದಲಾಯಿಸುತ್ತಾರೆ. ಇನ್ನು ಕೆಲವರು ಡಯಟ್ ಹೆಸರಿನಲ್ಲಿ ತಿನ್ನುವುದನ್ನು ಸಂಪೂರ್ಣವಾಗಿ ನಿಲ್ಲಿಸಿಬಿಡುತ್ತಾರೆ. ಇದು ಅನೇಕ ಆರೋಗ್ಯ ಸಮಸ್ಯೆಗಳನ್ನು ಉಂಟುಮಾಡುತ್ತದೆ ಎಂದು ತಜ್ಞರು ತಿಳಿಸುತ್ತಾರೆ. ಈ ಹಿನ್ನೆಲೆಯಲ್ಲಿ ಡಯಟ್ ಮಾಡದೇ ತೂಕ ಇಳಿಸಿಕೊಂಡು ಆರೋಗ್ಯವಾಗಿರಬಹುದು ಎಂದು ಅವರು ಸಲಹೆ ನೀಡಿದ್ದಾರೆ.
ಶುಗರ್ ಕಡಿಮೆ ಮಾಡಲು ಬಯಸುವವರು ಹಾಗೂ ತೂಕ ಇಳಿಸಿಕೊಳ್ಳಲು ಬಯಸುವವರು ಆದಷ್ಟು ಸಕ್ಕರೆಯ ಅಂಶವಿರುವ ಪಾನೀಯಗಳು ಹಾಗೂ ಆಹಾರಗಳಿಂದ ದೂರವಿರಬೇಕಾಗುತ್ತದೆ. ಏಕೆಂದರೆ ಇದರಲ್ಲಿರುವ ಸಕ್ಕರೆ ದೇಹಕ್ಕೆ ಸೇರಿಕೊಳ್ಳುತ್ತದೆ. ಹೆಚ್ಚು ನಿಂಬೆ ರಸ, ಹಣ್ಣಿನ ರಸ ಮತ್ತು ಸಕ್ಕರೆ ಸೇರಿಸದೆ ಈ ಹಣ್ಣಿನ ರಸಗಳನ್ನು ಕುಡಿಯಲು ಸಲಹೆ ನೀಡಲಾಗುತ್ತದೆ. ಇದರಿಂದ ತೂಕ ಕಡಿಮೆಯಾಗುವುದರ ಜೊತೆಗೆ ಆರೋಗ್ಯವಾಗಿರಬಹುದು ಎಂದು ಆರೋಗ್ಯ ತಜ್ಞರು ತಿಳಿಸುತ್ತಾರೆ.
ತರಕಾರಿಗಳನ್ನು ಹೆಚ್ಚು ಸೇವಿಸಿ: ಡಯಟ್ ಮಾಡದೆ ತೂಕ ಇಳಿಸಿಕೊಳ್ಳಲು ಬಯಸುವವರು ಪ್ರತಿದಿನದ ಆಹಾರದಲ್ಲಿ ಹೆಚ್ಚು ತರಕಾರಿಗಳನ್ನು ಸೇರಿಸಿಕೊಳ್ಳಬೇಕು. ತರಕಾರಿಗಳ ಸಲಾಡ್ ರೂಪದಲ್ಲಿ ತೆಗೆದುಕೊಳ್ಳಬಹುದು. ಜೊತೆಗೆ ಬೇಯಿಸಿ ಕೂಡ ಸೇವಿಸಬಹುದು. ಇವುಗಳನ್ನು ತಿನ್ನಲು ಮನಸ್ಸಾಗದಿದ್ದರೆ ಸ್ವಲ್ಪ ನಿಂಬೆರಸವನ್ನು ಹಿಂಡಿದರೆ ರುಚಿಯಾಗುವುದಲ್ಲದೆ ತೂಕ ಕಡಿಮೆಯಾಗಲು ಸಾಧ್ಯವಾಗುತ್ತದೆ.
ವಿಶ್ರಾಂತಿ ತೆಗೆದುಕೊಳ್ಳಿ:ನಿದ್ರೆಯ ಕೊರತೆಯಿಂದ ಉಂಟಾಗುವ ಸಾಮಾನ್ಯ ಸಮಸ್ಯೆ ಅಂದ್ರೆ ಅದು ತೂಕ ಹೆಚ್ಚಾಗುವುದು. ರಾತ್ರಿ ಕನಿಷ್ಠ ಏಳರಿಂದ ಎಂಟು ಗಂಟೆಗಳ ಕಾಲ ಯಾವುದೇ ಒತ್ತಡವಿಲ್ಲದೆ ಆರಾಮವಾಗಿ ನಿದ್ರೆ ಮಾಡಬೇಕಾಗುತ್ತದೆ. ಈ ರೀತಿ ಮಾಡುವುದರಿಂದ ತೂಕವನ್ನು ಸುಲಭವಾಗಿ ಕಳೆದುಕೊಳ್ಳಬಹುದು ಎಂದು ವಿವಿಧ ಅಧ್ಯಯನಗಳು ಸ್ಪಷ್ಟಪಡಿಸಿವೆ. ಬಿಡುವಿನ ವೇಳೆ ಅನಗತ್ಯ ಚಟುವಟಿಕೆಗಳೊಂದಿಗೆ ಸಮಯ ವ್ಯರ್ಥ ಮಾಡದೆ ಶಾಂತಿಯುತವಾಗಿ ಮಲಗಬೇಕಾಗುತ್ತದೆ. ಇದರಿಂದ ದೇಹ ಮತ್ತು ಮನಸ್ಸು ವಿಶ್ರಾಂತಿ ಪಡೆಯುತ್ತದೆ ಜೊತೆಗೆ ತೂಕವೂ ನಿಯಂತ್ರಣದಲ್ಲಿ ಇರುತ್ತದೆ.
ಗ್ರೀನ್ ಟೀ:ತೂಕ ನಷ್ಟಕ್ಕೆ ಗ್ರೀನ್ ಟೀ ಕುಡಿಯಲು ಅನೇಕ ತಜ್ಞರು ಸಲಹೆ ನೀಡುತ್ತಾರೆ. ಇದರಲ್ಲಿರುವ ಫೈಟೊಕೆಮಿಕಲ್‌ಗಳು ದೇಹವು ಹೆಚ್ಚುವರಿ ಕ್ಯಾಲೊರಿಗಳನ್ನು ವೇಗವಾಗಿ ಸುಡಲು ಸಹಾಯ ಮಾಡುತ್ತದೆ ಎಂದು ಕೆಲವು ಅಧ್ಯಯನಗಳು ಬಹಿರಂಗಪಡಿಸಿವೆ. 2018ರಲ್ಲಿ 'ಅಪೆಟೈಟ್' ಜರ್ನಲ್‌ನಲ್ಲಿ ಪ್ರಕಟವಾದ ಅಧ್ಯಯನವು ಗ್ರೀನ್ ಟೀ ಕುಡಿಯುವುದರಿಂದ ತೂಕ ನಷ್ಟಕ್ಕೆ ಸಹಾಯ ಮಾಡುತ್ತದೆ ಎಂದು ಕಂಡುಹಿಡಿದಿದೆ. ಈ ಸಂಶೋಧನೆಯಲ್ಲಿ UKಯ ಕೇಂಬ್ರಿಡ್ಜ್ ವಿಶ್ವವಿದ್ಯಾಲಯದ ಡಾ.ಅಕಿರ ಇಮಾಮುರ (Dr. Akira Imamura) ಭಾಗವಹಿಸಿದ್ದರು. ಇದರಿಂದ ಡಯಟ್ ಮಾಡದೆ ತೂಕ ಇಳಿಸಿಕೊಳ್ಳಲು ಬಯಸುವವರು ಗ್ರೀನ್ ಟೀಯನ್ನು ತಮ್ಮ ದೈನಂದಿನ ಆಹಾರದ ಭಾಗವಾಗಿ ಮಾಡಿಕೊಳ್ಳಲು ಸಂಶೋಧಕರು ಸಲಹೆ ನೀಡುತ್ತಾರೆ. (ವರದಿಗಾಗಿ ಇಲ್ಲಿ ಕ್ಲಿಕ್ ಮಾಡಿ)