Walking 20000 Steps a Day Benefits:ನೀವು ನಿತ್ಯ ವಾಕಿಂಗ್ ಮಾಡುತ್ತೀರಾ? ಈಗಾಗಲೇ ನಿಮಗೆ ದಿನಕ್ಕೆ 10 ಸಾವಿರ ಸ್ಟೆಪ್ಸ್ ಅಥವಾ ಹೆಜ್ಜೆಗಳನ್ನು ನಡೆಯಬೇಕು ಎಂಬುದು ತಿಳಿದಿದೆ. ಪ್ರತಿದಿನ ವಾಕಿಂಗ್ ಮಾಡುವುದರಿಂದ ಹಲವು ಪ್ರಯೋಜನಗಳು ಲಭಿಸುತ್ತವೆ ಎಂದು ಆರೋಗ್ಯ ತಜ್ಞರು ಬಹಿರಂಗಪಡಿಸಿದ್ದಾರೆ. ಇತ್ತೀಚಿನ ಸಂಶೋಧನೆಯೊಂದು ದಿನಕ್ಕೆ 20 ಸಾವಿರ ಸ್ಟೆಪ್ಸ್ ನಡೆದರೆ, ನಿಮ್ಮ ದೇಹದಲ್ಲಿ ಆಗುವ ಬದಲಾವಣೆಗಳು ಆಗುತ್ತವೆ ಎಂಬುದರ ಕುರಿತು ಮಹತ್ವ ಮಾಹಿತಿ ಬಹಿರಂಗಪಡಿಸಿದೆ. ವೇಟ್ ಲಾಸ್ ಆಗುವುದು ಸೇರಿದಂತೆ ನಿದ್ರೆಯವರೆಗೂ ವಾಕಿಂಗ್ನಿಂದ ಹಲವು ಉಪಯೋಗಗಳು ಲಭಿಸುತ್ತವೆ ಎಂದು ಸಂಶೋಧನೆಯು ಹೇಳಿದೆ.
European Journal of Preventive Cardiology ಅಧ್ಯಯನದ ಪ್ರಕಾರ, ಹೃದಯ ಸಮಸ್ಯೆಗಳಿಂದ ಸಾಯುವ ಸಾಧ್ಯತೆಯು ತುಂಬಾ ಕಡಿಮೆ ಇರುತ್ತದೆ. ಪೋಲೆಂಡ್‌ನ ಲೋಡ್ಜ್ ವೈದ್ಯಕೀಯ ವಿಶ್ವವಿದ್ಯಾನಿಲಯದ ಪ್ರೊ. ಮಾಸಿಜ್ ಬನಾಚ್ (Maciej Banach) ಅವರು, The association between daily step count and all - cause and cardiovascular mortality: a meta-analysis ಎಂಬ ಅಧ್ಯಯನದಲ್ಲಿ ಭಾಗವಹಿಸಿದರು. ವಯಸ್ಸು, ಜನಾಂಗ, ಲಿಂಗ ಭೇದವಿಲ್ಲದೇ ಯಾರು ಬೇಕಾದರೂ 20 ಸಾವಿರ ಸ್ಟೆಪ್ಸ್ ವಾಕಿಂಗ್ ಮಾಡಿದರೆ ಸಾಕು ಆರೋಗ್ಯಕ್ಕೆ ಅನೇಕ ಪ್ರಯೋಜನಗಳನ್ನು ಪಡೆಯಬಹುದು ಎಂದು ಸಂಶೋಧನೆಯು ವಿವರಿಸುತ್ತದೆ. (ವರದಿಗಾಗಿ ಇಲ್ಲಿ ಕ್ಲಿಕ್ ಮಾಡಿ)
ಹೃದಯದ ಆರೋಗ್ಯ:ವಾಕಿಂಗ್, ಏರೋಬಿಕ್ ವ್ಯಾಯಾಮ ಅತ್ಯುತ್ತಮವಾಗಿದೆ. ಇದು ಹೃದಯದ ಆರೋಗ್ಯವನ್ನು ಸುಧಾರಿಸುತ್ತದೆ ಮತ್ತು ಕೊಲೆಸ್ಟ್ರಾಲ್ ಮಟ್ಟವನ್ನು ಕಡಿಮೆ ಮಾಡುತ್ತದೆ. ಇದು ಅಧಿಕ ರಕ್ತದೊತ್ತಡ ಕಡಿಮೆ ಮಾಡುತ್ತದೆ ಮತ್ತು ರಕ್ತ ಪೂರೈಕೆ ಸುಧಾರಿಸುತ್ತದೆ ಎಂದು ತಜ್ಞರು ಹೇಳುತ್ತಾರೆ.
ತೂಕ ನಷ್ಟ:20,000 ಸ್ಟೆಪ್ಸ್ ವಾಕಿಂಗ್ ಮಾಡುವುದರಿಂದ 500 ರಿಂದ 1000 ಕ್ಯಾಲೊರಿಗಳನ್ನು ಬರ್ನ್ ಮಾಡಲು ಸಾಧ್ಯವಿದೆ. ತೂಕ ಇಳಿಸಲು ಹಾಗೂ ನಿಯಂತ್ರಣಕ್ಕೆ ವಾಕಿಂಗ್ ತುಂಬಾ ಉಪಯುಕ್ತವಾಗಿದೆ. ವಾಕಿಂಗ್ ವೇಗ, ಪ್ರದೇಶ ಹಾಗೂ ದೂರ ಅವಲಂಬಿಸಿ ಕ್ಯಾಲೊರಿಗಳ ಬರ್ನ್ ಮಾಡುವಲ್ಲಿ ವ್ಯತ್ಯಾಸ ಇರುತ್ತದೆ ಎಂದು ಸಂಶೋಧನೆಯಲ್ಲಿ ಉಲ್ಲೇಖಿಸಲಾಗಿದೆ.
ಸಕ್ಕರೆ ಮಟ್ಟ ನಿರ್ವಹಣೆ:ವಾಕಿಂಗ್‌ನಂತಹ ನಿಯಮಿತ ವ್ಯಾಯಾಮವು ಇನ್ಸುಲಿನ್ ಪ್ರತಿರೋಧ ಸುಧಾರಿಸುತ್ತದೆ. ಇದು ರಕ್ತದಲ್ಲಿನ ಸಕ್ಕರೆ ಮಟ್ಟ ನಿಯಂತ್ರಣದಲ್ಲಿಡುತ್ತದೆ ಎಂದು ಸಂಶೋಧಕರು ಬಹಿರಂಗಪಡಿಸುತ್ತಾರೆ. ಇದು ಟೈಪ್ 2 ಡಯಾಬಿಟಿಸ್ ಅಪಾಯ ಕಡಿಮೆ ಮಾಡುತ್ತದೆ. ಆಹಾರ ಸೇವಿಸಿದ ನಂತರ ಸ್ವಲ್ಪ ಹೊತ್ತು ವಾಕಿಂಗ್ ಮಾಡುವುದರಿಂದ ಗ್ಲೂಕೋಸ್ ಮಟ್ಟ ನಿಯಂತ್ರಣದಲ್ಲಿ ಇರಿಸಲು ಸಾಧ್ಯವಾಗುತ್ತದೆ ಎಂದು ಸಂಶೋಧಕರು ವಿವರಿಸುತ್ತಾರೆ.
ಏಕಾಗ್ರತೆ ಹೆಚ್ಚುತ್ತೆ:ವಾಕಿಂಗ್ ಮಾಡುವುದರಿಂದ ಒತ್ತಡ ಕಡಿಮೆಯಾಗುವುದಲ್ಲದೇ ಮಾನಸಿಕ ನೆಮ್ಮದಿ ನೀಡುವ ಸಹಾಯವಾಗುವ ಎಂಡಾರ್ಫಿನ್ ಹಾರ್ಮೋನ್ಗಳು ಬಿಡುಗಡೆ ಆಗುತ್ತದೆ. ಇದರಿಂದ ಒತ್ತಡ ಕಡಿಮೆಯಾಗಿ ಕೆಲಸದ ಮೇಲೆ ಏಕಾಗ್ರತೆ ಹೆಚ್ಚಲು ಸಾಧ್ಯವಾಗುತ್ತದೆ ಎನ್ನುತ್ತಾರೆ ತಜ್ಞರು.