ನವದೆಹಲಿ:ನಮ್ಮ ದೇಹದ ಬಹು ಪ್ರಮುಖ ಅಂಗಗಳಲ್ಲಿ ಕಣ್ಣುಗಳಿಗೆ ಮೊದಲ ಪ್ರಾಶಸ್ತ್ಯ. ಇದರಿಂದಲೇ ಪ್ರತಿಯೊಬ್ಬರು ಕಣ್ಣಿನ ಕಾಳಜಿಗೆ ಹೆಚ್ಚಿನ ಪ್ರಾಮುಖ್ಯತೆ ನೀಡಬೇಕು. ವಯಸ್ಸಾದಂತೆ ಕಣ್ಣುಗಳು ಸಾಮರ್ಥ್ಯ ಕ್ಷೀಣಿಸುತ್ತಾ ಹೋಗುತ್ತದೆ. ಆದರೆ, ಆಧುನಿಕ ಜೀವನಶೈಲಿಯಲ್ಲಿ ಇಂದು ಬಹುತೇಕರು ಮೊಬೈಲ್ ಮತ್ತು ಕಂಪ್ಯೂಟರ್ ಬಳಕೆ ಯಥೇಚ್ಛವಾಗಿ ಮಾಡುತ್ತಿದ್ದು, ಇದು ದೃಷ್ಟಿಯ ಮೇಲೆ ಅಕಾಲಿಕ ಪರಿಣಾಮ ಬೀರುತ್ತಿದೆ. ಇದರ ಜೊತೆಗೆ ಅನಾರೋಗ್ಯಕರ ತಿನ್ನುವ ಅಭ್ಯಾಸ ಮತ್ತು ಒತ್ತಡಗಳು ಕೂಡಾ ಕಣ್ಣಿನ ದೃಷ್ಟಿಯನ್ನು ದುರ್ಬಲಗೊಳಿಸುತ್ತವೆ.
ಪ್ರಸ್ತುತ, ಇಂದು ಕೇವಲ ವಯಸ್ಕರು ಮಾತ್ರವಲ್ಲ, ಮಕ್ಕಳು ಕೂಡ ಕನ್ನಡಕದ ಮೊರೆ ಹೋಗುತ್ತಿದ್ದಾರೆ. ಸಣ್ಣ ವಯಸ್ಸಿನಲ್ಲಿ ಕಣ್ಣಿನ ದೃಷ್ಟಿ ದುರ್ಬಲವಾಗುತ್ತಿರುವುದು ಕಾಳಜಿದಾಯಕ ವಿಷಯವಾಗಿದೆ. ಕಳಪೆ ದೃಷ್ಟಿಯುಂದಾಗಿ ಹತ್ತಿರದ ಮತ್ತು ದೂರದ ವಸ್ತುಗಳನ್ನು ಬರೀಗಣ್ಣಿನಿಂದ ನೋಡುವ ಸಾಮರ್ಥ್ಯ ಕಳೆದುಕೊಳ್ಳುತ್ತಿದ್ದಾರೆ. ಇಂದು ಬಹುತೇಕ ಮಂದಿ ಈ ಕಣ್ಣಿನ ಸಮಸ್ಯೆಯಿಂದ ಬಳಲುತ್ತಿದ್ದಾರೆ.
ಅದೆಲ್ಲದರ ನಡುವೆಯೂ ಕಣ್ಣಿನ ದೃಷ್ಟಿ ಹೆಚ್ಚಿಸುವ ಸುಲಭ ವಿಧಾನವನ್ನು ಮನೆ ಮದ್ದುಗಳಾಗಿ ಪಡೆಯಬಹುದು. ನಿಮ್ಮ ಕಣ್ಣಿನ ದೃಷ್ಟಿ ಕ್ಷೀಣಿಸುತ್ತಿದೆ ಎಂದು ಭಾಸವಾದಲ್ಲಿ ಇಂದಿನಿಂದಲೇ ಈ ಮನೆ ಮದ್ದುಗಳನ್ನು ಬಳಕೆ ಮಾಡಬಹುದು.
ಕಣ್ಣುಗಳ ದೃಷ್ಟಿಗೆ ತ್ರಿಫಲಾ: ಕಣ್ಣುದೃಷ್ಟಿ ಸುಧಾರಣೆಗೆ ತ್ರಿಫಲಾ ಪೌಡರ್ ಬಳಕೆ ಮಾಡಬಹುದು. ತ್ರಿಫಲಾ ಎಂಬುದು ಪ್ರಾಚೀನಾ ಆಯುರ್ವೇದ ಔಷಧಿಯಾಗಿದೆ. ನೆಲ್ಲಿಕಾಯಿ, ಹರೀತಕಿ, ಬಿಭೀತಕದ ಮಿಶ್ರಣವಾಗಿದೆ. ಇದು ದೇಹ ಡಿಟಾಕ್ಸಿಫೈಯಿಂದ ಮಾಡಲು ಪರಿಣಾಮಕಾರಿಯಾಗಿದೆ. ಜೊತೆಗೆ ಇದು ಜೀರ್ಣಕ್ರಿಯೆ ಮತ್ತು ಕಣ್ಣಿನ ದೃಷ್ಟಿಯನ್ನು ಸುಧಾರಣೆ ಮಾಡುತ್ತದೆ.